
ದಿನಾಂಕ 25.02.2021 ರಿಂದ 01.03.2021 ರ ವರೆಗೆ, ಸತತವಾಗಿ 5 ದಿನಗಳ ಕಾಲ ಕಾರವಾರದ ಮಯೂರ ವಮಾ೯ ಸ್ಟೇಜ್ ರವೀಂದ್ರನಾಥ ಠ್ಯಾಗೋರ್ ಬೀಚ್ ನಲ್ಲಿ 12ನೇ ಕರಾವಳಿ ಸಂಗಮೋತ್ಸವವನ್ನು ಅದ್ದೂರಿಯಾಗಿ ವಿಜ್ರಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅಥಿತಿಯಾಗಿ ಮಲ್ಲನಗೌಡ ಎಸ್ ಪಾಟೀಲ ಕೋರವಾರ ಇವರು, ಕಾರವಾರ ಜಿಲ್ಲಾ ವಿಧ್ಯಾರ್ಥಿಗಳ ಒಕ್ಕೂಟವನ್ನು ಉದ್ದೇಶಿಸಿ, ಮಾದಕ ವಸ್ತು ಜಾಗ್ರೃತಿ ಕಾಯ೯ಕ್ರಮವನ್ನು ಕುರಿತು ಸುಧೀಘ೯ವಾಗಿ ಮಾತನಾಡಿದರು.
ಕಾರವಾರ ವಿಧ್ಯಾರ್ಥಿ ಒಕ್ಕೂಟದದಿಂದ ಮಲ್ಲನಗೌಡರಿಗೆ ಗೌರವಪೂವ೯ಕವಾಗಿ ಸನ್ಮಾನಿಸಲಾಯಿತು.
ಎರಡನೇ ಹಂತದಲ್ಲಿ ಮಲ್ಲನಗೌಡರು ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷ ಭಾಷಣ ಮಾಡಿದರು.
5 ದಿನಗಳ ಕಾಲ ಈ.ಸಭೆಯಲ್ಲಿ, ರಾಜ್ಯಾದ್ಯಂತ ವಿವಿಧ ಭಾಗಗಳಿಂದ ಗಣ್ಯಾತಿಗಣ್ಯರು ಆಗಮಿಸಿ ಕಾಯ೯ಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಿ ಯಶಸ್ವೀಗೊಳಿಸಿದರು.

ಮುಖ್ಯವಾಗಿ ಕಾರವಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾಮಿ೯ಕ ಸಚಿವರಾದ ಮಾನ್ಯ ಶ್ರೀ ಶಿವರಾಮ ಹೆಬ್ಬಾರ, ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕಿಯಾದ ಶ್ರೀಮತಿ ರೂಪಾಲಿ ನಾಯ್ಕ್, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಐಟಿಬಿಟಿ ಘಟಕದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡರಾದ ಮಲ್ಲನಗೌಡ ಎಸ್ ಪಾಟೀಲ ಕೋರವಾರ, ಕರಾವಳಿ ಮುಂಜಾವು ಪತ್ರಿಕೆಯ ಸಂಪಾದಕರಾದ ಶ್ರೀ ಗಂಗಾಧರ ಹಿರೇಗುತ್ತಿ, ಶ್ರೀ ಶ್ರೀನಿವಾಸ ರೆಡ್ಡಿ ಖ್ಯಾತ ನ್ಯಾಯ ವಾದಿಗಳು ಹೈಕೋರ್ಟ್ ಬೆಂಗಳೂರು, ಶ್ರೀ ಶ್ರೀಕಾಂತ ಉಪಾಧ್ಯ ಭಾಗ೯ವಿ ಎಂಟರ್ಪ್ರೈಜಿಸ್, ಉಡುಪಿ, ರಾಜ್ಯ & ರಾಷ್ಟ್ರೀಯ ಮಟ್ಟದ ಡಾನ್ಸ್ ಚಾಂಪಿಯನ್, ಮಹಾಂತೇಶ ತಾರಾಪೂರ, ಪ್ರಧಾನ ಕಾರ್ಯದರ್ಶಿಗಳು ಬೆಂಗಳೂರು ನಗರ ಕನ್ನಡ ಸೇನೆ, ಹಾಗೂ ಬಿಜೆಪಿ ಉಪಾಧ್ಯಕ್ಷರು ರೈತ ಮೋಚಾ೯ ಮಹಾಲಕ್ಷ್ಮಿ ಲೇಔಟ್, ಶ್ರೀ ಜಾಜ೯ಫನಾ೯ಂಡೀಸ್ ಶ್ರೀ ವಿನಯ ಎಮ್ Head of Creativity and Alaap Events Entertainer ಹಾಗೂ ಶ್ರೀ ರಾಜಣ್ಣ ಕೆ. ಖ್ಯಾತ ವಕೀಲರು ಹೈಕೋಟ೯ ಬೆಂಗಳೂರು ಹಾಗೂ ರಾಘು ನಾಯ್ಕ್ ವಿಧ್ಯಾರ್ಥಿ ಒಕ್ಕೂಟದ ರೂವಾರಿ ಹಾಗೂ ಅನೇಕ ಗಣ್ಯರು, ಸ್ಥಳೀಯ ಜನಪ್ರತಿನಿಧಿಗಳು, ವಿಧ್ಯಾರ್ಥಿಗಳು ಹಾಗೂ ಸಾವ೯ಜನಿಕರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
City Today News
9341997936