ಮುರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಿಗೆ ಚಿತ್ರಕಲಾ ಶಿಕ್ಷಕರು ( ಪದವೀಧರರಿಗೆ 230 ಹುದ್ದೆಗಳು ) ನೇರ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಬಿ.ಎಫ್.ಎ. / ಬಿ.ವಿ.ಎ . ಪದವಿಯ ಅಂಕಗಳ ಸ್ಪಷ್ಟಿಕರಣವನ್ನು ಹಾಗೂ ವಿಶ್ವವಿದ್ಯಾಲಯದ ಪಟ್ಟಿಯನ್ನು “ ಉನ್ನತ ಶಿಕ್ಷಣ ಇಲಾಖೆ ” ಯಿಂದ ತರಿಸಿಕೊಂಡು ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರು ಇವರಿಗೆ ಅತಿ ತುರ್ತಾಗಿ ಕಳುಹಿಸಿಕೊಡುವ ಬಗ್ಗೆ ಮನವಿ

ಉಲ್ಲೇಖ : ಕರ್ನಾಟಕ ಲೋಕಸೇವಾ ಆಯೋಗ ಉದ್ಯೋಗಸೌಧ , ಬೆಂಗಳೂರು . ಇವರ ಅಧಿಸೂಚನೆ ಸಂಖ್ಯೆ : ಪಿ.ಎಸ್.ಸಿ .01 ಆರ್.ಟಿ. ( 4 ) ಬಿ -3 / 2016

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ರಾಜ್ಯ ಸರ್ಕಾರದ ಒಂದು ಅಂಗಸಂಸ್ಥೆಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಮುರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ 2016 ರಲ್ಲಿ ಚಿತ್ರಕಲಾ ಶಿಕ್ಷಕರು ಪದವೀಧರರಿಗೆ 230 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ( ಕೆ.ಪಿ.ಎಸ್.ಸಿ. ) ಮೂಲಕ ಕರೆಯಲಾಗಿತ್ತು . ಆರ್ಜಿಗಳನ್ನು ಸ್ವೀಕರಿಸಿದ ನಂತರ ಅರ್ಹತಾ ಪಟ್ಟಿಯನ್ನು ಪ್ರಕಟಿಸಿ ಅರ್ಹ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ಮಾಡಿದ್ದು ತದನಂತರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ದಪಡಿಸಲು ಬಿ.ಎಫ್.ಎ. / ಬಿ.ವಿ.ಎ . ಪದವಿಯ ಅಂಕಗಳ ಸ್ಪಷ್ಟಿಕರಣ ಮತ್ತು ವಿಶ್ವವಿದ್ಯಾಲಯದ ಪಟ್ಟಿಯು ಕರ್ನಾಟಕ ಲೋಕಸೇವಾ ಆಯೋಗ ( ಕೆ.ಪಿ.ಎಸ್.ಸಿ. ) ಬೆಂಗಳೂರು . ಇವರಿಗೆ ಅತಿ ತುರ್ತಾಗಿ ಅವಶ್ಯಕತೆ ಇರುವುದರಿಂದ ಪದವಿಯ ಅಂಕಗಳ ಸ್ಪಷ್ಟಿಕರಣವನ್ನು ಮತ್ತು ವಿಶ್ವವಿದ್ಯಾಲಯದ ಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆ ” ಯಿಂದ ತರಿಸಿಕೊಂಡು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳುಹಿಸಿಕೊಡುವುದರ ಮೂಲಕ ಅರ್ಹ ಬಿ.ಎಫ್.ಎ. / ಬಿ.ವಿ.ಎ . ಪದವೀಧರರಿಗೆ ಉದ್ಯೋಗವಕಾಶಕ್ಕೆ ಅನುವು ಮಾಡಿಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ .

ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘ, ತುಮಕೂರು

ASSOCIATION OF PROFESSIONAL STREAM STUDENTS IN VISUAL ART ( R ) , KARNATAKA

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.