ಶ್ರೀಶೈಲ ಜಗದ್ಗುರುಗಳ ವಿರುದ್ದ ವೀರಶೈವದ ಮಹಾಸಭಾದ ವಿರುದ್ದ ದರಣೆ ಸತ್ಯಾಗ್ರಹ , ಉಪವಾಸ ಸತ್ಯಾಗ್ರಹದಂತಹ ಹೋರಾಟ

ಬೆಂಗಳೂರು ನಗರ ಜಿಲ್ಲೆ , ಯಲಹಂಕ ತಾಲ್ಲೂಕು , ಜಾಲ ಹೋಬಳಿ , ಹುಣಸಮಾರನಹಳ್ಳಿ ಗ್ರಾಮದಲ್ಲಿರುವ ಸುಮಾರು 1506 ರಲ್ಲಿ ಸ್ಥಾಪನೆಗೊಂಡಿರುವ ಐತಿಹಾಸಿಕ ಶ್ರೀ . ಮದ್ದೇವಣಾಪುರ ದೇವ ಸಿಂಹಾಸನ ಸಂಸ್ಥಾನ ಮಠವು ಶ್ರೀಶೈಲ ಪೀಠದ ಶಾಖಾ ಮಠವಾಗಿರುತ್ತದೆ . ಇದು ಗುರುಪರಂಪರೆಯ ವೀರಶೈವ ಲಿಂಗಾಯಿತ ಸಮುದಾಯದ ಮಠವಾಗಿರುತ್ತದೆ . ಇಲ್ಲಿ ವೇಧ ಪಾಠಶಾಲೆ , ಸಂಸ್ಕೃತ ಪಾಠಶಾಲೆ , ವಿದ್ಯಾರ್ಥಿ ನಿಲಯಗಳು ಮತ್ತು ಶಿಕ್ಷಣ ವಿದ್ಯಾ ಸಂಸ್ಥೆಗಳನ್ನು ಹೊಂದಿರುತ್ತದೆ . ಈ ಪೀಠಕ್ಕೆ 13 ಜನ ಪೀಠಾಧ್ಯಕ್ಷರಾಗಿ ಆಡಳಿತ ನಡೆಸಿರುತ್ತಾರೆ . 1957 ರಿಂದ ಇಚೆ 13 ನೇಯ ಪಟ್ಟಾಧ್ಯಕ್ಷರಾದ ಶ್ರೀ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮಿಗಳು ಪಟ್ಟ ವಹಿಸಿಕೊಂಡು ಕೆಲವು ವರ್ಷಗಳು ತುಂಬಾ ಚೆನ್ನಾಗಿ ಸ್ಕೂಲ್ , ಹಾಸ್ಟೆಲ್ , ವಿದ್ಯಾಸಂಸ್ಥೆಗಳು , ದಿನವೂ ದಾಸೋಹ ನಡೆಸಿಕೊಂಡು ಬಂದು ಗುರುಪರಂಪರೆಯನ್ನು ಎತ್ತಿ ಹಿಡಿದಿರುತ್ತಾರೆ . ತದನಂತರ ಇದೇ ಪೀಠಾಧ್ಯಕ್ಷರು ಇದೇ ಹೋಬಳಿಯ ಕೋಳಿಪುರ ಗ್ರಾಮದಿಂದ ಅಡುಗೆ ಕೆಲಸಕ್ಕೆ ಎಂದು ಬಂದ ಕೆಲವು ಮಹಿಳೆಯರಾದ ದಿವಂಗತ ರೇವಮ್ಮ ತಂಗಿಯಾದ ಪಟ್ಟಮ್ಮನ್ನು ಅನೈತಿಕವಾಗಿ ಸಂಬಂಧವನ್ನು ಬೆಳೆಸಿ ಗುರುಪರಂಪರೆಯ ಮಠದ ನಿಯಮಗಳನ್ನು , ಆಚಾರ – ವಿಚಾರಗಳನ್ನು ಗಾಳಿಗೆ ತೂರಿ 6 ಜನ ಮಕ್ಕಳನ್ನು ಪಡೆದು ಅವರ ವೈಭೋಗ ಜೀವನಕ್ಕೆ ಮಠದ ಆಸ್ತಿಗಳನ್ನು ಕಬಳಿಸಿ ಕಾನೂನು ಬಾಹಿರವಾಗಿ ಪರಭಾರೆ ಮಾಡಿ ಪಟ್ಟಭದ್ರ ಹಿತಾಸಕ್ತಿಗಳ ಜನರನ್ನು ಅಕ್ಕ ಪಕ್ಕದಲ್ಲಿಟ್ಟುಕೊಂಡು ಗ್ರಾಮದ ಜನರನ್ನು ಕಾಲಿನ ಕಸದಂತೆ ಕಂಡಿದ್ದಲ್ಲದೆ ಅವರ ವಿರುದ್ಧ ಮಾತನಾಡಿದರೆ ಅವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಅವರ ಜಮೀನುಗಳ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಕೋರ್ಟು ಕಛೇರಿಗಳನ್ನು ಅಲೆದಾಡುವಂತೆ ಮಾಡಿ ದಬ್ಬಾಳಿಕೆ ಮಾಡಿರುವುದು ನಮಗೆ ನಿಮಗೆ ಎಲ್ಲರಿಗೂ ತಿಳಿದ ವಿಷಯವಾಗಿರುತ್ತದೆ . ಹಾಗೇಯೇ 2011 ರಲ್ಲಿ ಅನೈತಿಕ ಸಂಬಂಧದಲ್ಲಿ ಹುಟ್ಟಿರುವಂತಹ ದಯಾನಂದನನ್ನು ಪಟ್ಟಾಧಿಕಾರ ಮಾಡಲು ಹೊರಟಾಗ ಗ್ರಾಮದ ಎಲ್ಲಾ ಭಕ್ತಾಧಿಗಳು ಆ ಒಂದು ಪಟ್ಟಾಧಿಕಾರವನ್ನು ತಡೆದಿರುತ್ತಾರೆ . ಆದರೂ ತನ್ನ ಹಠ ಬಿಡದೆ ಅವನೇ ಮುಂದಿನ ಪೀಠಾಧಿಪತಿ ಎಂದು ಹೇಳಿಕೊಂಡು ಬಂದಿರುತ್ತಾನೆ . ಹಾಗೆ ಮುಂದುವರೆದ ದಯಾನಂದನು 2017 ರಲ್ಲಿ ಆತನೂ ಕೂಡ ಅನೈತಿಕವಾಗಿ ಸಂಬಂಧ ಬೆಳೆಸಿ ಅದು ಸಿ.ಡಿ. ರೂಪದಲ್ಲಿ ಪ್ರಚಾರವಾಗಿ ಇಡೀ ರಾಜ್ಯವು ದಯಾನಂದ ರಾಸಲೀಲೆ ಎಂದು ಮಠದ ಮರ್ಯಾದೆ ಮತ್ತು ವೀರಶೈವ ಲಿಂಗಾಯಿತ ಸಮಾಜದ ಮರ್ಯಾದೆಯನ್ನು ಹಾಳು ಮಾಡಿರುವುದು ತಮಗೆ ತಿಳಿದಿರುವ ವಿಷಯವಾಗಿರುತ್ತದೆ .

2017 ರಲ್ಲಿಯೇ ಈ ಒಂದು ಘಟನೆಯನ್ನು ಖಂಡಿಸಿ ಭಕ್ತಾಧಿಗಳು ಮತ್ತು ಟ್ರಸ್ಟಿನವರಾದ ನಾವುಗಳು ಅಹೋ ರಾತ್ರಿ ಧರಣಿ ಮತ್ತು ಉಪವಾಸ ಸತ್ಯಾಗ್ರಹವನ್ನು ಮಾಡಲಾಗಿ ಮಧ್ಯೆ ಪ್ರವೇಶಿಸಿದ ಮೂಲ ಪೀಠಾಧ್ಯಕ್ಷರಾದ ಶ್ರೀಶೈಲ ಪೀಠದ ಅಧ್ಯಕ್ಷರಾದ ಜಗದ್ಗುರು ಡಾ . ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಅಂದು 5 ಜನರ ಕಮಿಟಿಯನ್ನು ರಚಿಸಿ ಸಮಸ್ಯೆಯನ್ನು ಬಗೆಹರಿಸಲು ನೇಮಕ ಮಾಡಿದ್ದಲ್ಲದೆ ದಯಾನಂದ ಅಲಿಯಾಸ್ ಗುರುನಂಜೇಶ್ವರ ಸ್ವಾಮಿಯನ್ನು ಉತ್ತರಾಧಿಕಾರಿಯ ಪದವಿಯಿಂದ ನಿವೃತ್ತಿಗೊಳಿಸಿರುತ್ತಾರೆ . ಹಾಗೆ ಮುಂದುವರೆದು ದಯಾನಂದ ಅಲಿಯಾಸ್ ಗುರುನಂಜೇಶ್ವರ ಸ್ವಾಮಿ ಮತ್ತು ಅವನ ತಂಡ ಇದನ್ನು ಒಪ್ಪದೆ ಹಾಗೆ ಮುಂದುವರೆದು ಟ್ರಸ್ಟಿನವರಿಗೆ ಮತ್ತು ಭಕ್ತಾಧಿಗಳಿಗೆ ತೊಂದರೆ ನೀಡುತ್ತಿದ್ದಾನೆ . ಮಠದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ಮಠದ ಆಸ್ತಿಗಳನ್ನು ಕಾನೂನು ಬಾಹಿರವಾಗಿ ಮತ್ತು ನ್ಯಾಯಾಲಯಗಳಲ್ಲಿರುವ ಮೊಕದ್ದಮೆಗಳನ್ನು ನಾನೇ ಸ್ವಾಮಿ ಎಂದು ರೈತರನ್ನು ನಂಬಿಸಿ ಕಾಂಪ್ರಮೈಸ್ ಪಿಟಿಷನ್‌ಗಳನ್ನು ಹಾಕಿಕೊಂಡು ಲಕ್ಷಾಂತರ ರೂಪಾಯಿಗಳನ್ನು ದೋಚಿರುತ್ತಾನೆ . ಇದೇ ಏಚಾರವಾಗಿ ಈ ಒಂದು ಲೂಟಿಕೋರ ಅನೈತಿಕ ಜನರಿಂದ ಮಠವನ್ನು ಕಾಪಾಡಲು ಮಠದ ಆಸ್ತಿಗಳನ್ನು ಕಾಪಾಡಲು ಟ್ರಸ್ಟಿನ ವತಿಯಿಂದ ಓ.ಎಸ್ .246 / 2012-13 ಮತ್ತು ಓ.ಎಸ್ . ನಂ.ಎಲ್.ಎ.ಸಿ .2 / 13 ರಂತೆ ನ್ಯಾಯಾಲಯಗಳಲ್ಲಿ ದಾವೆ ಹೂಡಿ ಕೋಟಿ ಕೋಟಿ ಬೆಲೆಬಾಳುವ ಆಸ್ತಿಗಳನ್ನು ಟ್ರಸ್ಟಿನ ವತಿನಿಂದ ಕಾಪಾಡಿಕೊಂಡು ಬಂದಿರುತ್ತೇವೆ . ಮೇಲಿನ ವಿಷಯಗಳನ್ನೆಲ್ಲಾ ಪಂಚ ಪೀಠಾಧ್ಯಕ್ಷರುಗಳಿಗೆ , ಮೂಲ ಪೀಠಾಧ್ಯಕ್ಷರಾದ ಶ್ರೀಶೈಲ ಪೀಠದ * ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿಗೆ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾಗೆ ತಿಳಿಸಲಾಗಿ ನಮ್ಮ ಟ್ರಸ್ಟಿನ ವತಿಯಿಂದ ಸುಮಾರು ಸಭೆಗಳನ್ನು ಮಾಡಲಾಗಿ ಯಾವುದೇ ಪ್ರಯೋಜನವಾಗಿರುವುದಿಲ್ಲ . ಸದರಿ ಮಠದ 13 ನೇ ಪೀಠಾಧ್ಯಕ್ಷರಾಗಿದ್ದ ಶ್ರೀ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮಿಗಳು 2018 ರಲ್ಲಿ ಲಿಂಗಾಯಿತರಾದ ನಂತರ ಸುಮಾರು ಬಾರಿ ವೀರಶೈವ ಮಹಾಸಭೆ ರವರಿಗೆ ಮತ್ತು ಶ್ರೀಶೈಲ ಪೀಠಾಧ್ಯಕ್ಷರುಗಳಿಗೆ ನಮ್ಮ ಮಠಕ್ಕೆ ಉತ್ತಮ ಸುಸಂಸ್ಕೃತ ಪೀಠಾಧ್ಯಕ್ಷರನ್ನು ನೇಮಕ ಮಾಡುವಂತೆ ಮನವಿ ಮಾಡಿಕೊಂಡರೂ ಕೂಡ ಯಾವುದೇ ಪ್ರಯೋಜನವಾಗಿರುವುದಿಲ್ಲ . ಇದನ್ನು ನಾವು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತೇವೆ . ಕಾಮಿಸ್ವಾಮಿ ರಾಸಲೀಲೆಯ ಗುರುವಾಗಿರುವ ದಯಾನಂದ ಅಲಿಯಾಸ್ ಗುರುನಂಜೇಶ್ವರ ಸ್ವಾಮಿ ಈಗಲೂ ಕೂಡ ನಾನೇ ಸ್ವಾಮಿ ಎಂದು ಹೇಳಿಕೊಂಡು ಪ್ರತಿವರ್ಷದ ಪ್ರತೀತಿಯಂತೆ ಹೋಳಿ ಹುಣ್ಣಿಮೆಯ ದಿನದಂದು ನಮ್ಮ ಮಠದ ಅಧೀನ ದೇವಸ್ಥಾನವಾಗಿರುವ ಶ್ರೀ ಚಕ್ರ ರಾಜರಾಜೇಶ್ವರಿ ಸಮೇತ ಚಂದ್ರಮೌಳೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವನ್ನು ಆಚರಿಸುವುದಾಗಿ ಕ್ರಯಪತ್ರಗಳನ್ನು ಹೊರಡಿಸಿ ಕಾನೂನು ಬಾಹಿರವಾಗಿ ಭಕ್ತರ ಮೇಲೆ ದಬ್ಬಾಳಿಕೆ ಮಾಡಿ ಟ್ರಸ್ಟಿನವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಮಠದ ಆಸ್ತಿಯನ್ನು ಒಡೆಯುವ ದೊಡ್ಡ ಷಡ್ಯಂತ್ರವನ್ನು ರಚಿಸಿರುತ್ತಾನೆ ,

ದಯಮಾಡಿ ಶ್ರೀಶೈಲ ಪೀಠಾಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ರವರಿಗೆ ಮನವಿ ಮಾಡುವುದೇನೆಂದರೆ ಆದಷ್ಟೂ ಬೇಗ ನಮ್ಮ ಮಠಕ್ಕೆ ಪೀಠಾಧ್ಯಕ್ಷರನ್ನು ನೇಮಕ ಮಾಡುವಂತೆ ಕೋರಿಕೊಳ್ಳುತ್ತೇವೆ . ಮುಂದುವರೆದು ಹಾಗೆಯೇ ವಿಳಂಬ ದೋರಣೆ ಅನುಸರಿಸಿದರೆ ನಾವು ಶ್ರೀಶೈಲ ಜಗದ್ಗುರುಗಳ ವಿರುದ್ದ ವೀರಶೈವದ ಮಹಾಸಭಾದ ವಿರುದ್ದ ದರಣೆ ಸತ್ಯಾಗ್ರಹ , ಉಪವಾಸ ಸತ್ಯಾಗ್ರಹದಂತಹ ಹೋರಾಟಗಳನ್ನು ಮಾಡಬೇಕಾಗುತ್ತದೆ ಎಂದು ತಮಗೆ ಎಚ್ಚರಿಸುತ್ತಿದ್ದೇವೆ .

ಅಧ್ಯಕ್ಷರು : ಎಸ್.ಎ.ರುದ್ರಾರಾಧ್ಯ, ಕಾರ್ಯದರ್ಶಿ : ಪಿ.ಶಿವಕುಮಾರ್

ಟ್ರಸ್ಟಿ : ಬಸವರಾಜು , ಟ್ರಸ್ಟಿ : ಮಹೇಶ್.ಬಿ . ಟ್ರಸ್ಟಿ : ಮಲ್ಲೆಶ್.ಸಿ .

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.