
ಪ್ರಸ್ತುತ ಘನ ಸರ್ಕಾರ 100 ಕನ್ನಡ ಚಿತ್ರಗಳಿಗೆ ಸಹಾಯಧನವನ್ನು ನೀಡುತ್ತಿರುವುದು ಸ್ವಾಗತಾರ್ಹ . ಕನ್ನಡ ನಾಡು ನುಡಿ ಕನ್ನಡದ ಸ್ವಚ್ಛ ಸಂಭಾಷಣೆ ಹಾಗೂ ಶುದ್ಧ ಸಾಹಿತ್ಯದ ಚಿತ್ರಗೀತೆಗಳಿಂದ ಕನ್ನಡ ನಾಡಿನ ಹಿರಿಮೆಯನ್ನು ಕನ್ನಡ ಭಾಷೆಯ ಮಹತ್ವವನ್ನು ಚಿತ್ರೀಕರಿಸಿ ಕರ್ನಾಟಕದ ಶಿಲ್ಪಕಲಾ ಪ್ರಪೂರ್ಣ ದೇವಾಲಯಗಳ ಹಾಗೂ ಕೋಟೆ ಕೊತ್ತಲುಗಳ ಹಾಗೂ ಜಲಪಾತ ನದಿ ಸಮುದ್ರ ಸುಂದರ ವನಸಿರಿಗಳ ಪರಿಸರದಲ್ಲಿ ಚಿತ್ರೀಕರಿಸಲಾದ ಕವಿಗಳ ಹಾಗೂ ನಾಡಿನ ಹಿರಿಮೆಯ ಕುರಿತಾದ ಕನ್ನಡದ ಶುದ್ಧ ಸಂಭಾಷಣೆಯ ಚಿತ್ರಗಳಿಗೆ ಘನ ಸರ್ಕಾರ 50 ಲಕ್ಷ ರೂ.ಗಳ ಸಹಾಯಧನವನ್ನು ನೀಡುವುದು ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಕನ್ನಡ ಇತಿಹಾಸದ ಕನ್ನಡ ಸಂಸ್ಕೃತಿಯ ಹಿರಿಮೆಯನ್ನು ಮೆರೆಸುವ ಮಹಾನ್ ಸಾಧನೆಯಾಗುವುದು . ದೊಡ್ಡ ದೊಡ್ಡ ತಾರಾಮೌಲ್ಯದ ಚಿತ್ರಗಳು ವೈಭವೀಕರಿಸುವ ವಿದೇಶೀ ಸಂಸ್ಕಾರವನ್ನು ಮೆರೆಸುತ್ತಾ ಕೇವಲ ಮನರಂಜನೆಯನ್ನೇ ಆಕರ್ಷಣೆಯನ್ನಾಗಿ ಭಾವಿಸಿ ನಾಲ್ಕಾರು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು , ಕನ್ನಡ ಮಾರುಕಟ್ಟೆಯನ್ನು ವಿಸ್ತರಿಸುತ್ತಾ ಹಣ ಗಳಿಸುತ್ತಿರುವುದು ಸ್ವಾಗತಾರ್ಹ . ಅಂತಹ ತಾರಾ ಮೌಲ್ಯದ ಚಿತ್ರಗಳಿಗೆ ಟಿ.ವಿ. ಮಾಧ್ಯಮದವರು ಕೋಟಿ ಕೋಟಿ ಹಣ ಕೊಟ್ಟು ಕೊಂಡುಕೊಳ್ಳುತ್ತಾರೆ . ಹಂಚಿಕೆದಾರರು ಸಹ ಅವುಗಳನ್ನು ಕೊಂಡು ನೂರಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡುತ್ತಾರೆ . ಚಿತ್ರಮಂದಿರಗಳೂ ಸಹ ಅಂತಹ ಚಿತ್ರಗಳಿಗೇ ಮೀಸಲಾಗಿರುತ್ತವೆ . ಚಿಕ್ಕ ಬಂಡವಾಳದ ತಾರಾಮೌಲ್ಯವಿಲ್ಲದ ಹೊಸ ಕಲಾವಿದರ ಅಭಿನಯದ ಕನ್ನಡ ನಾಡು , ನುಡಿ , ಭಾಷೆಯ ಹಿರಿಮೆ ನಾಡಿನ ಸಂಸ್ಕೃತಿ ಮೆರೆಸುವ ಕನ್ನಡದ ಸ್ವಚ್ಛ ಚಿತ್ರಗಳನ್ನು ಹಂಚಿಕೆದಾರರೂ ಕೊಳ್ಳುವುದಿಲ್ಲ . ಚಿತ್ರಮಂದಿರಗಳವರೂ ಪ್ರೋತ್ಸಾಹಿಸುತ್ತಿಲ್ಲ . ಟಿ.ವಿ. ಮಾಧ್ಯಮದವರು ಕೊಳ್ಳುವುದಿಲ್ಲ . ಹೀಗಾಗಿ ಶುದ್ಧ ಕನ್ನಡ ಭಾಷೆಯ ನಾಡು , ನುಡಿ ಹಿರಿಮೆಯ ಶುದ್ಧ ಕನ್ನಡ ಚಿತ್ರಗೀತೆಗಳ ಚಿತ್ರ ನೀತಿ ಬೋಧಕ ಚಿತ್ರಗಳ ನಿರ್ಮಾಪಕರು ಕನ್ನಡ ಭಾಷೆಯ ಹಿರಿಮೆ ಮೆರೆಸುವ ಚಿತ್ರ ತೆಗೆದು ಅವುಗಳು ಪ್ರದರ್ಶನವನ್ನೇ ಕಾಣದೆ ನಿರ್ಮಾಪಕ ಶೋಚನೀಯ ಪರಿಸ್ಥಿತಿಯಲ್ಲಿ ಸಾಲಗಾರನಾಗುತ್ತಿದ್ದಾನೆ . ಆದ್ದರಿಂದ ಘನ ಸರ್ಕಾರ ಕನ್ನಡ ಭಾಷೆಯ ಪರವಾಗಿಯೇ ಇರುವ ಸರ್ಕಾರವಾದ್ದರಿಂದ ಶುದ್ಧ ಕನ್ನಡ ಸಂಭಾಷಣಿಯ ಕನ್ನಡ ಭಾಷೆಯ ಹಿರಿಮೆಯ ಚಿತ್ರಗಳಿಗೆ 50 ಲಕ್ಷ ಸಹಾಯಧನವನ್ನು ತಪ್ಪದೆ ನೀಡಲು ಮನಸ್ಸು ಮಾಡಬೇಕೆಂದು ಪ್ರಾರ್ಥನೆ . ಕನ್ನಡ ನಮ್ಮ ಜೀವಭಾಷೆ . ಅದನ್ನು ಬೆಳೆಸುವ ಹಾಗೂ ಬಳಸುವ , ಉಳಿಸುವ ಕಾರ್ಯ ಎಲ್ಲರಿಂದಲೂ ಆಗಬೇಕೆಂದು ಪ್ರಾರ್ಥಿಸುತ್ತೇನೆ . ಸಿರಿಗನ್ನಡಂ ಗೆಲ್ಗೆ .
City Today News
9341997936