17 ತಿಂಗಳ ಗಂಡು ಮಗುವಿಗೆ ಸೋನಲ್ ಮಸ್ಕಲರ್ ಅಟ್ರೋಪಿ ಚಿಕಿತ್ಸೆಗೆ ಹಣ ಸಹಾಯಕ್ಕೆ ಮನವಿ

ಪತ್ರಿಕಾ ಹೇಳಿಕೆ

ಪವನ್ ಮತ್ತು ವೈಷ್ಣವಿ ದಂಪತಿಗಳಾದ ನಾವು ನಂ . 1646 , 5 ನೇ ಬ್ಲಾಕ್ , ಸರ್ . ಎಂ.ವಿ. ಲೇಔಟ್ , ಮಂಗನಹಳ್ಳಿ ಕ್ರಾಸ್ ವೇದಾಲ್ ಬಳಿ , ಉಲ್ಲಾಳ ಮುಖ್ಯ ರಸ್ತೆ , ಬೆಂಗಳೂರು -560010 ಇಲ್ಲಿ ವಾಸವಾಗಿದ್ದು ನಮ್ಮ 17 ತಿಂಗಳ ಗಂಡು ಮಗು ಸೋನಲ್ ಮಸ್ಕಲರ್ ಅಟ್ರೋಪಿ ಎಂಬ ವಿರಳವಾದ ಕಾಯಿಲೆಯಿಂದ ಬಳಲುತ್ತಿದ್ದು , ಬ್ಯಾಪ್ಟಿಸ್ಟ್ ಆಸ್ಪತ್ರೆಯ ಡಾ . ಆನ್ ಆಗ್ನಿಸ್ ಮ್ಯಾಥಿವ್ ಎಂಬ ವೈದ್ಯರು ಚಿಕಿತ್ಸೆ ನೀಡುತ್ತಿದ್ದು , ಮಗು ಸಂಪೂರ್ಣವಾಗಿ ಗುಣಮುಖ ಹೊಂದಲು ಸುಮಾರು ಕೋಟಿಯಷ್ಟು ಹಣ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿರುತ್ತಾರೆ . ಸದರಿ ಆಸ್ಪತ್ರೆಯ ದಾಖಲೆಗಳನ್ನು ಈ ಮನವಿಯೊಂದಿಗೆ ಲಗತ್ತಿಸುತ್ತಿದ್ದೇವೆ .

ಸೈನಲ್ ಮಸ್ಕುಲರ್ ಆಟ್ರೋಫಿ ಟೈಪ್ -2 ಎಂಬ ವಿಚಿತ್ರವಾದ ಕಾಯಿಲೆಯಿಂದ ಬಳಲುತ್ತಿದ್ದು , ಬೆಂಗಳೂರಿನ ಬ್ಯಾಪ್ಟಿಸ್ಟ ಆಸ್ಪತ್ರೆಯಲ್ಲಿ ಡಾ . ಆನ್ ಆಗ್ನೆಸ್ ಮ್ಯಾಥೀವ್ ಇವರು ಚಿಕಿತ್ಸೆ ನೀಡುತ್ತಿದ್ದಾರೆ . ಇದು ಹತ್ತು ಲಕ್ಷದಲ್ಲಿ ಒಬ್ಬರಿಗೆ ಕಾಣಿಸಬಹುದಾದ ವಿರಳ ಕಾಯಿಲೆ ಎಂದು ವೈದ್ಯರು ದೃಢಪಡಿಸಿದ್ದಾರೆ .

ಈ ಕಾಯಿಲೆಯು ಎಸ್‌ಎಂಎನ್ 1 ಜೀನ್ ಕೊರತೆಯಿಂದ ಮಗುವಿಗೆ ಕೈ ಕಾಲುಗಳಲ್ಲಿ ಸ್ವಾಧೀನವಿರುವುದಿಲ್ಲ . ಮತ್ತು ಸೈನಲ್ ಮೂಳೆಯು ತನ್ನ ಶಕ್ತಿಯನ್ನು ಕಳೆದುಕೊಳ್ಳಲಾರಂಭಿಸುತ್ತದೆ . ಈ ಜೇನನ್ನು ನಾಲ್ಕು ತಿಂಗಳ ಒಳಗೆ ಮಗುವಿನ ದೇಹಕ್ಕೆ ಸೇರಿಸುವ ಅವಶ್ಯಕತೆ ಇದೆ . ಇದೊಂದು ಪ್ರೊಗ್ರೆಸ್ಸಿವ್ ಕಾಯಿಲೆಯಾಗಿದ್ದು ಕಾಲಕ್ರಮೇಣ ಮಗುವು ತನ್ನ ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಾ ಸಾಗುತ್ತದೆ . ಇದು ಮಗುವಿನ ಜೀವಕ್ಕೂ ಕಂಟಕವಾಗಬಹುದು , ಮಗುವಿಗೆ ಎಸ್ ಎಂಎನ್ ಜೀನ್ ನೀಡುವುದರಿಂದ ಮಗುವು ರೋಗ ನಿರೋಧಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ ಎಂದು ವೈದ್ಯರು ತಿಳಿಸಿರುತ್ತಾರೆ .

ಸದರಿ ಜೀನ್ ಕೇವಲ ಅಮೇರಿಕದಲ್ಲಿ ಮಾತ್ರ ಲಭ್ಯವದ್ದು ಇದನ್ನು ಭಾರತಕ್ಕೆ ತಂದು ಮಗುವಿಗೆ ನೀಡಬೇಕಾಗಿದೆ . ಆದಷ್ಟು ಬೇಗ ಈ ಜೀನನ್ನು ಮಗುವಿನ ದೇಹಕ್ಕೆ ಸೇರಿಸುವ ಅವಶ್ಯಕತೆ ಇರುತ್ತದೆ . ಹಾಗಾಗಿ ಪ್ರತಿ ಕ್ಷಣ ಪ್ರತಿ ನಿತ್ಯ ಮಗುವಿಗೆ ಕಾಲಚಕ್ರದಲ್ಲಿ ಬಹಳ ಮುಖ್ಯವಾಗಿದೆ .

ಸಾಧಾರಣ ಬಡ ಕುಟುಂಬದ ನಾವು ಅಷ್ಟೊಂದು ಹಣ ಹೊಂದಿಸಲು ಶಕ್ತರಿಲ್ಲದ ಕಾರಣದಿಂದ ಮಗುವಿಗೆ ಚಿಕಿತ್ಸೆ ಕೊಡಿಸುವುದು ದುಸ್ಥರವಾಗಿದೆ .

ಸಾರ್ವಜನಿಕರಲ್ಲಿ ನಾವು ಮನವಿ ಮಾಡುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿ ನಮ್ಮ ಮಗುವಿನ ಚಿಕಿತ್ಸೆಗೆ ಸ್ಪಂದಿಸಿ ಸಹಕರಿಸಬೇಕೆಂದು ಕೋರುತ್ತೇವೆ ,

– Vaishnavi S.N

KARNATAKA BANK Account number – 9342500100792801 IFSC Code – Karb0000934 ಮೊ : 9964519752 – 7892345148.

ವೈಷ್ಣವಿ . ಎಸ್.ಎನ್ . ಕರ್ನಾಟಕ ಬ್ಯಾಂಕ್ ಖಾತೆ ಸಂಖ್ಯೆ : 9342500100792801 – ಐಎಫ್‌ಎಸ್ ಸಿ : KARB000934

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.