ಧರ್ಮಸ್ಥಳ ಧರ್ಮಾಧಿಕಾರಿ ಡಾ . ವೀರೇಂದ್ರ ಹೆಗಡೆ ಅವರ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರ

ಬೆಂಗಳೂರು – ಧರ್ಮಸ್ಥಳ ಪುಣ್ಯಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಯವರು ಸಾವಿರಾರು ಎಕರೆ ಜಮೀನು ಕಬಳಿಸುವ ಹುನ್ನಾರ ಮಾಡಿದ್ದಾರೆ ಎಂದು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ . ಈ ಹೇಳಿಕೆಯನ್ನು ಜಾಗೃತ ಭಕ್ತ ಸಮುದಾಯ ವ್ಯಾಪಕವಾಗಿ ಖಂಡಿಸುತ್ತದೆ . ಗುರುವಾಯನಕೆರೆಯ ಸೋಮನಾಥ ನಾಯಕ್ ಎನ್ನುವ ವ್ಯಕ್ತಿ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣ ಮತ್ತು ಕೆಲವು ಪತ್ರಿಕೆಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಜಮೀನಿನ ಕುರಿತು ಅನಗತ್ಯ ಹಾಗೂ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ . ಆದರೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ . ವೀರೇಂದ್ರ ಹೆಗಡೆಯವರು ಇಂತಹ ಯಾವುದೇ ಹುನ್ನಾರ ಮಾಡಿಲ್ಲ ಎಂದು ಸದ್ಭಾವನ ಜ್ಯೋತಿ ರಥಯಾತ್ರೆ ಸಮಿತಿ ರಾಜ್ಯಾಧ್ಯಕ್ಷ ಎಂ . ಕೃಷ್ಣಮೂರ್ತಿ , ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಕತ್ತಲ್‌ ಸಾರ್‌ , ಕರವೇ ನಗರ ಅಧ್ಯಕ್ಷ ಶಿವಾನಂದ ಶೆಟ್ಟಿ ಹಾಗೂ ಹೋರಾಟಗಾರ ಎನ್.ವಿ. ಲಕ್ಷ್ಮಿನ ನಾರಾಯಣ ಆದ ನಾವುಗಳು ಹೇಳುತ್ತಿದ್ದೇವೆ . ಅಪಪ್ರಚಾರ ಮಾಡುವ ಗುರುವಾಯನಕೆರೆಯ ಸೊಮನಾಥ್ ನಾಯಕ್ ಅಂತಹ ವ್ಯಕ್ತಿಗಳಿಗೆ ಸತ್ಯಾಂಶವನ್ನು ತಿಳಿಸಿಕೊಡುವುದೇ ನಮ್ಮ ಉದ್ದೇಶ . ಈ ಹಿನ್ನೆಲೆಯಲ್ಲಿ ಸ್ಪಷ್ಟಪಡಿಸುವುದೇನೆಂದರೆ ಕ್ಷೇತ್ರಕ್ಕೆ ಸಂಬಂಧಿಸಿದ ಜಮೀನುಗಳ ಪಹಣಿ ಪತ್ರಿಕೆಗಳನ್ನು ಪರಿಶೀಲಿಸಿದಾಗ 1970 ರ ದಶಕದಿಂದ 2021 ರ ವರೆಗೆ ದಸ್ತಾವೇಜ್ ನಲ್ಲಿ ದಾಖಲಾಗಿರುವ ಅಂದರೆ 51 ವರ್ಷದ RTC / ಪಹಣಿ ಪತ್ರಿಕೆಗಳನ್ನು ಕೂಲಂಕುಷವಾವಾಗಿ ಪರಿಶೀಲಿಸಿ ನೋಡಿದಾಗ ಎಲ್ಲಿಯೂ ದೇವರ ಹೆಸರಿನ ಆಸ್ತಿಯನ್ನು ಹೆಗ್ಗಡೆಯವರು ತಮ್ಮ ಹೆಸರಿಗೆ ಬರೆಸಿಕೊಂಡಿರುವುದು ಕಂಡು ಬಂದಿಲ್ಲ . ಬೆಳ್ತಂಗಡಿ ಭೂ – ನ್ಯಾಯ ಮಂಡಳಿಯ ಆದೇಶದ ಪ್ರತಿಯನ್ನು ಪಡೆದುಕೊಂಡು ಅವಲೋಕಿಸಿದಾಗ ಅದರಲ್ಲಿಯೂ ಕೂಡ ದೇವರ ಹೆಸರಿನಲ್ಲಿರುವ ಆಸ್ತಿಯನ್ನು ಹೆಗ್ಗಡೆಯವರು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿರುವಂತಹ ಯಾವುದೇ ಕೃತ್ಯದ ಉಲ್ಲೇಖ ಇರುವುದಿಲ್ಲ . ಬದಲಾಗಿ ಹೆಗ್ಗಡೆಯವರಲ್ಲಿ ಹೆಚ್ಚುವರಿ ಜಮೀನು ಇಲ್ಲ ಅಂದರೆ ಮಿತಿಗಿಂತ ಜಾಸ್ತಿ ಜಮೀನು ಹೆಗ್ಗಡೆಯವರಲ್ಲಿ ಇಲ್ಲ . ಎಲ್ಲವೂ ಪಾರದರ್ಶಕವಾಗಿದ್ದು ಸದರಿ ಸರ್ಕಾರದ ದಸ್ತಾವೇಜಿನ ದಾಖಲೆಯಲ್ಲಿ ಮಿತಿಗಿಂತ ಜಾಸ್ತಿ ಜಮೀನು ಹೆಗ್ಗಡೆಯವರಲ್ಲಿ ಇಲ್ಲ ಎನ್ನುವ ಆದೇಶ ಮಾತ್ರ ಇದೆ . ವಾಸ್ತವಿಕತೆ ಹೀಗೆ ‘ ಮಿತಿಗಿಂತ ಜಾಸ್ತಿ ಇಲ್ಲ ಎಂಬ ಅಂಶ ಕಂಡು ಬಂದಿದೆ . ಆದರೆ ಸೋಮನಾಥ ನಾಯಕ್ ಎನ್ನುವವರು ನಿರಾಧಾರ ರಹಿತ ಆರೋಪ ಮಾಡಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ . ಸತ್ಯದ ತಲೆ ಮೇಲೆ ಹೊಡೆಯಲು ಹೋಗಿರುವುದು ಅಕ್ಷಮ್ಯ ಅಪರಾಧವಾಗಿದೆ ಇದನ್ನು ಬಿಟ್ಟು ಕೊಟ್ಟು ಸತ್ಯದ ದರ್ಶನ ಮಾಡಿಕೊಳ್ಳುವುದು ಅಗತ್ಯವಾಗಿದೆ ಅಲ್ಲವೇ . ಭಾರತದ ಸರ್ವೋಚ್ಛ ನ್ಯಾಯಾಲಯ ಹಾಗೂ ಮೈಸೂರು ಹೈಕೋರ್ಟ್ ಆದೇಶದಲ್ಲಿಯೂ ಕೂಡ ಹೆಗ್ಗಡೆಯವರು ಪರಂಪರಾಗತವಾಗಿ ಸಾವಿರಾರು ಎಕರೆ ಜಮೀನು ಹೊಂದಿದವರಾಗಿದ್ದಾರೆ ಎನ್ನುವ ಉಲ್ಲೇಖ ಕೂಡ ಇದೆ ಈ ಮೂರ್ಖ ಶಿಖಾಮಣಿಗಳು ಇದನ್ನು ಅವಲೋಕಿಸಿದಂತೆ ಕಾಣುವುದಿಲ್ಲ ಎಂಬ ಸಂಶಯ ಮೂಡುತ್ತದೆ . ರಾಜ್ಯದ ಯಾವುದೇ ದಾಖಲೆ ನೋಡಿದರೂ ದೇವರ ಆಸ್ತಿಯನ್ನು ಹೆಗ್ಗಡೆಯವರು ಬರೆಸಿಕೊಂಡಿದ್ದಾರೆ ಎಂಬ ಅಂಶ ಕಂಡು ಬರುವುದಿಲ್ಲ . ಅಲ್ಲದೇ ತಮ್ಮ ಹತ್ತಿರ ಇರುವ ಸಾವಿರಾರು ಎಕರೆ ಭೂಮಿಯನ್ನು ಈಗಾಗಲೇ ಬಡವರಿಗೆ ಹಂಚಿರುವ ಹೆಗ್ಗಡೆಯವರು ಜಾತ್ಯಾತೀತ ಮನೋಧರ್ಮಭಾವ ವುಳ್ಳವರಾಗಿರುವ ಪೂಜ್ಯರು ಇಂದಿಗೂ ಕೂಡ ಮಾನವ ಧರ್ಮೋದ್ದಾರಕ ರಾಗಿದ್ದಾರೆ ನೇತ್ರಾವತಿ ತಟದಲ್ಲಿರುವ ಧರ್ಮಸ್ಥಳದ ಶ್ರೀ ಕ್ಷೇತ್ರ ಸಾರಿ ಸಾರಿ ಹೇಳುತ್ತ ಬಂದಿದೆ . ಆರೋಪ ಮಾಡುವವರ ಚರಿತ್ರೆಯನ್ನು ಜಾಲಾಡಿದಾಗ ಇದರ ಹಿಂದೆ ಕಾಣದ ಕೈಗಳ ನಿಗೂಢವಾದ ರಹಸ್ಯವೇ ಇದೆ . ಆರೋಪ ಮಾಡಿದವರ ಚರಿತ್ರೆ ಕೆದಕುತ್ತ ಸಾಗಿದಂತೆ ಅವರ ಕರ್ಮಕಾಂಡ ಹೇಳತೀರದು . ಬಡವರನ್ನು ವಂಚಿಸಿ ಸರಕಾರವನ್ನೂ ವಂಚಿಸಿ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ ಎನ್ನುವ ಆರೋಪಗಳಿವೆ . ಧರ್ಮಸ್ಥಳ ಧರ್ಮಾಧಿಕಾರಿ ಡಾ . ವಿರೇಂದ್ರ ಹೆಗಡೆಯವರ ಮೇಲೆ ಅನಗತ್ಯ ಆರೋಪ ಮಾಡುತ್ತಿರುವ ಇವರ ಉದ್ದೇಶ ಬೇರೆಯದೇ ಇದೆ . ಮತ್ತೊಮ್ಮೆ ಇಂತಹ ಆಧಾರ ರಹಿತ ಹಾಗೂ ಸತ್ಯಕ್ಕೆ ದೂರವಾದ ಆರೋಪ ಮಾಡಬಾರದೆಂದು ಈ ಮೂಲಕ ಅವರಿಗೆ ಎಚ್ಚರಿಕೆ ನೀಡುತ್ತಿದ್ದೇವೆ .

ಜಾಗೃತ ಭಕ್ತ ಸಮುದಾಯ

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.