ಮರೆಯಾದ ಮಾಣಿಕ್ಯಗಳು

ದಿವಂಗತ ಮಾನ್ಯ ಶ್ರೀ ಕೆ.ಡಿ. ಪಾಟೀಲ (ಮಿಣಜಗಿ) ಗೌಡರು, ಉತ್ತರ ಕರ್ನಾಟಕ ಭಾಗದ ವಿಜಯಪುರ ಜಿಲ್ಲೆಯ ತಾಳೀಕೋಟಿ ತಾಲೂಕಿನ ಮಿಣಜಗಿ ಗ್ರಾಮದ ಗೌಡರು. ತಂದೆ ಶ್ರೀ ದ್ಯಾಮನಗೌಡ ಪಾಟೀಲ ಹಾಗೂ ತಾಯಿ ಶ್ರೀಮತಿ ಅವ್ವಮ್ಮಗೌಡತಿ ದ್ಯಾಮನಗೌಡ ಪಾಟೀಲ ಸಾಕೀನ ಮಿಣಜಗಿ ದಂಪತಿಗಳ ಜೇಷ್ಠ ಸುಪುತ್ರನಾಗಿ ಜನಿಸಿ, ಬಾಲ್ಯದ ಜೀವನವನ್ನು ದೇವರಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದಲ್ಲಿ ಅಜ್ಜ (ತಾಯಿಯ ತಂದೆ) ಗಡೇದ ಗೌಡರು ಹಾಗೂ ಜಮೀನುದಾರ ಮನೆತನದ ದಿವಂಗತ ಶ್ರೀ ಭೀಮನಗೌಡ ಮಹಾಂತಪ್ಪಗೌಡ ಬಿರಾದಾರ ಹಾಗೂ ಅಜ್ಜಿ (ತಾಯಿಯ ತಾಯಿ) ದಿವಂಗತ ಶ್ರೀಮತಿ ನೀಲಮ್ಮಗೌಡತಿ ಭೀಮನಗೌಡ ಬಿರಾದಾರ ಸಾಕೀನ ಕೋರವಾರ ಇವರ ಪ್ರೀತಿ ವಾತ್ಸಲ್ಯದಲ್ಲಿ ಬೆಳೆದರು.
ನಂತರ ಬೆಳೆದು ದೊಡ್ಡವರಾದ ಮೇಲೆ ತಮ್ಮ ಸ್ವಗ್ರಾಮ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮಕ್ಕೆ ತೆರಳಿದರು. ದಿವಂಗತ ಶ್ರೀ ಭೀಮನಗೌಡ ಮಹಾಂತಪ್ಪಗೌಡ ಬಿರಾದಾರ ಸಾಕೀನ ಕೋರವಾರ, ಇವರ ಮೊಮ್ಮಗಳಾದ ಶ್ರೀಮತಿ ಗೌರಾಬಾಯಿಗೌಡತಿ ರಾಮನಗೌಡ ಬಿರಾದಾರ ಸಾಕೀನ ಕೋರವಾರ ಇವರೊಂದಿಗೆ ವಿವಾಹವಾಯಿತು. ನಂತರ ತಮ್ಮ ಸಾಮಾಜಿಕ ಹಾಗೂ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಅಖಂಡ ವಿಜಯಪುರ ಜಿಲ್ಲೆಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ನಿಸ್ವಾರ್ಥ ಸಾಮಾಜಿಕ ಹಾಗೂ ರಾಜಕೀಯ ಸೇವೆಯನ್ನು ಮಾಡಿ, ಬಹಳ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಅವರೆಂದೂ ಯಾವುದಕ್ಕೂ ಆಶೆಪಟ್ಟವರಲ್ಲ. ದಾನ ಧರ್ಮಕ್ಕೆ ಹೆಸರಾದವರು. ಜಿಲ್ಲೆಯ ಹಲವಾರು ಮಠ ಮಾನ್ಯಗಳಿಗೆ ತಮ್ಮ ಒಡೆತನದಲ್ಲಿರುವ ಕಲ್ಲು ಗಣಿಗಾರಿಕೆಗಳಿಂದ, ಲಾರಿ ಹಾಗೂ ಟ್ರ್ಯಾಕ್ಟರುಗಳ ಗಟ್ಟಲೆ ಕಲ್ಲಿನ ಪಸಿ೯ಗಳನ್ನು, ಕಬ್ಬಿಣವನ್ನು ಹಾಗೂ ಆಥಿ೯ಕ ಸಹಾಯವನ್ನೂ ಮಾಡಿದ್ದಾರೆ. ಎಲ್ಲ ವಗ೯ದ ಬಡಬಗ್ಗರಿಗೂ ಸಹಾಯ ಸಹಕಾರವನ್ನು ಮಾಡಿ ಸ್ಫಂಧಿಸಿದ್ದಾರೆ. ಇದರ ಹಿಂದೆ ಯಾವುದೇ ಸ್ವಾಥ೯ ಹಾಗೂ ರಾಜಕೀಯ ಸ್ಥಾನಮಾನಗಳನ್ನು ಪಡೆಯುವ ಉದ್ದೇಶವಿಲ್ಲದೇ, ತ್ಯಾಗದ, ಉದಾರ ಮನಸ್ಸಿನ ಹ್ರೃದಯಶಾಲಿಗಳಾಗಿದ್ದರು. ವಿಶಾಲ ಮನೋಭಾವನೆಯನ್ನು ಹೊಂದಿದವರು. ಅವರ ವ್ಯಕ್ತಿತ್ವವೇ ಹಾಗಿತ್ತು. ಎಷ್ಟೋ ಭಾರಿ ರಾಜಕೀಯ ಅವಕಾಶಗಳು(ಶಾಸಕ, ಸಂಸದ ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನಗಳು) ತಾನಾಗಿಯೇ ಇವರನ್ನು ಅರಸಿ ಬಂದರೂ ನೇರವಾಗಿ ತಿರಸ್ಕರಿಸಿ, ತ್ಯಾಗದ ಮನೋಭಾವನೆಯನ್ನು ಮೆರೆದವರು. ಅಖಂಡ ವಿಜಯಪುರ ಜಿಲ್ಲೆಯಲ್ಲಿ ಇವರ ಜನಪ್ರೀಯತೆ ಇತ್ತು. ಎಲ್ಲಾ ಸಮಾಜದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಎಲ್ಲ ಸಮಾಜದ ಜನಸಾಮಾನ್ಯರ ನ್ಯಾಯ ಪಂಚಾಯತಿಗಳು ಇವರ ಮನೆಯಲ್ಲಿಯೇ ಬಗಹರಿಸುತ್ತಿದ್ದರು. ಎಲ್ಲಾ ಇಲಾಖೆಗಳ ಅಧಿಕಾರಿಗಳೂ ನೇರವಾಗಿ ಮನೆಗೆ ಬಂದು ಗೌರವದಿಂದ ಜನಸಾಮಾನ್ಯರ ಕೆಲಸ ಮಾಡಿಕೊಡುತ್ತಿದ್ದರು. ತುಂಬಾ ಧೈರ್ಯವಂತ, ಹಠವಾದಿ, ಪ್ರಾಮಾಣಿಕ ವ್ಯಕ್ತಿತ್ವವುಳ್ಳ ಧೀಮಂತ ಜನಾನುರಾಗಿಯಾಗಿ ಹೆಸರು ಮಾಡಿದ್ದರು. ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ, ಎಪಿಎಂಸಿ ಅಧ್ಯಕ್ಷರಾಗಿ, ಬ್ಯಾಂಕ್ ಅಧ್ಯಕ್ಷರಾಗಿ ಯಾವುದೇ ಆಶೆ ಆಮಿಷಕ್ಕೆ ಬಲಿಯಾಗದೇ ತಕ್ಕಡಿ ತೂಗಿದಂತೆ ಕಾಯ೯ನಿವ೯ಸುತ್ತಿದ್ದರು.

ಅಖಂಡ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವೀ ರಾಜಕಾರಣಿಗಳಲ್ಲೊಬ್ಬರಾದ ನಲವತವಾಡ ದೇಶಮುಖ ಮನೆತನದ ಹಿರಿಯ ನಾಯಕ ಮಾಜೀ ಸಚಿವರಾದ ದಿವಂಗತ ಮಾನ್ಯ ಶ್ರೀ ಜೆ.ಎಸ್. ದೇಶಮುಖ ಧನೇರ ಗರಡಿಯಲ್ಲಿ ಬೆಳೆದು, ನಂತರ ಮಾನ್ಯ ಶ್ರೀ ಕೆ.ಡಿ. ಪಾಟೀಲರು ಅಖಂಡ ವಿಜಯಪುರ ಜಿಲ್ಲೆಯಲ್ಲಿ ಮನೆಮಾತಾಗಿದ್ದರು.

ನಂತರ ನಲವತವಾಡ ದೇಶಮುಖ ಮನೆತನದ ಮಾಜೀ ಸಚಿವರಾದ ದಿವಂಗತ ಮಾನ್ಯ ಶ್ರೀಮತಿ ವಿಮಲಾಬಾಯಿ. ಜೆ. ದೇಶಮುಖ ಅಮ್ಮನವರೂ ದೈವಾಧೀನರಾದರು. ಈ ಮೂರು ವ್ಯಕ್ತಿಗಳು ದೈವಾಧೀನರಾದ ಮೇಲೆ ಮುದ್ದೇಬಿಹಾಳ ತಾಲೂಕು ಇಂತಹ ಮೇರು ವ್ಯಕ್ತಿತ್ವದ ಜನನಾಯಕರನ್ನು ನೋಡಲೇ ಇಲ್ಲ. ಮಾನ್ಯ ಶ್ರೀ ಕೆ.ಡಿ. ಪಾಟೀಲ (ಮಿಣಜಗಿ) ಗೌಡರು ದೈವಾಧೀನರಾದ ಮೇಲೆ ಅವರ ಹೆಸರು ಇನ್ನೂ ಅಜರಾಮರವಾಗಿದೆ. ಇಂದಿಗೂ ಕೆ.ಡಿ. ಪಾಟೀಲ ಮಿಣಜಗಿ ಗೌಡರು ಮಾಡಿದ ಕೆಲಸಗಳ ಬಗ್ಗೆ ಹಾಗೂ ಅವರ ಧೈರ್ಯ, ದಿಟ್ಟ ನಿಲುವು ಹಾಗೂ ಹಠವಾದಿತನದ ಬಗ್ಗೆ ಜನ ಮಾತನಾಡುತ್ತಾರೆ. ಎಕೆಂದರೆ ಇವರ ಮಾಡಿದ ಕಾಯ೯ಗಳು ಸತ್ಯ, ನ್ಯಾಯ, ನೀತಿ, ಧರ್ಮ ಮತ್ತು ನಿಸ್ವಾರ್ಥದಿಂದ ಕೂಡಿದವುಗಳಾಗಿದ್ದವು‌. ಎಲ್ಲ ಸಮಾಜದವರನ್ನೂ ವಿಶ್ವಾಸ ದಿಂದ ಪ್ರೀತಿಯಿಂದ ಕಾಣುತ್ತಿದ್ದರು. ಇವೆಲ್ಲ ಅಂಶಗಳು ಅವರ ಜನಪ್ರೀಯತೆಯನ್ನು ಹೆಚ್ಚಿಸಿದ್ದವು.

ವಿಶೇಷವಾಗಿ ಪೋಲಿಸ್ ಇಲಾಖೆ ಹಾಗೂ ಅಧಿಕಾರಿಗಳು ಮಿಣಜಗಿ ಗೌಡರೆಂದರೆ ತುಂಬಾ ಇಷ್ಟ ಪಡುತ್ತಿದ್ದರು ಹಾಗೂ ಗೌರವಿಸುತ್ತಿದ್ದರು. ಇದಲ್ಲದೇ ದಿವಂಗತ ಮಾನ್ಯ ಶ್ರೀ ಜೆ.ಎಸ್. ದೇಶಮುಖ ಧನೇರಿಗೂ ಮಿಣಜಗಿ ಕೆ.ಡಿ. ಪಾಟೀಲರೆಂದರೆ ಅಪಾರ ಪ್ರೀತಿ ವಾತ್ಸಲ್ಯವಿತ್ತು.
ಪ್ರಸ್ತುತ ಈ ನಾಯಕರುಗಳು ಇಹಲೋಕ ತ್ಯಜಿಸಿದ್ದರೂ ಇವರ ನೆನಪುಗಳು ಇನ್ನೂ ಹಚ್ಚುಹಸುರಾಗಿ ಉಳಿದಿವೆ.
ಈ ನಾಯಕರುಗಳು ಅಕಾಲಿಕ ಮರಣ ಹೊಂದದೆ ಇನ್ನೂ ಹಲವಾರು ವರ್ಷಗಳ ಕಾಲ ಬದುಕಿದ್ದರೆ ವಿಜಯಪುರ ಜಿಲ್ಲೆ ಹಾಗೂ ಉತ್ತರ ಕರ್ನಾಟಕ ಭಾಗದ ಜನರಿಗೆ ಹೆಚ್ಚಿನ ಅನೂಕೂಲವಾಗುವ ಸಾಧ್ಯತೆಗಳಿದ್ದವು ಎಂದು ಜನಸಾಮಾನ್ಯರು ಮಾತನಾಡುತ್ತಿದ್ದಾರೆ.

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.