ಸಂಶೋಧನೆಗಳು ವರ್ತಮಾನದ ಸಂಗತಿಗಳೊಂದಿಗೆ ಮುಖಾಮುಖಿಯಾಗಲಿ-ಡಾ.ಸಿದ್ಧಲಿಂಗಯ್ಯ

ಸಂಶೋಧನೆ ಎನ್ನುವುದು ನಮ್ಮ ಅರಿವಿನ ವಿಸ್ತಾರಕ್ಕೆ ದಾರಿ ತೋರಿಸಬೇಕು.ಆದರೆ ಇತ್ತೀಚಿಗೆ ನಡೆಯುತ್ತಿರುವ ಸಂಶೋಧನೆಗಳು ಅಕಾಡೆಮಿಕ್ ವಲಯಕ್ಕೆ ಸೀಮಿತವಾಗಿ ಇದರಿಂದ ಸಮಾಜಕ್ಕೆ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಸಂಶೋಧನೆಯು ವರ್ತಮಾನದ ವಿಚಾರಗಳಿಗೆ ಹೆಚ್ಚು ಮುಖಾಮುಖಿಯಾಗಬೇಕೆಂದು ಖ್ಯಾತ ಸಾಹಿತಿಗಳಾದ ಡಾ.ಸಿದ್ಧಲಿಂಗಯ್ಯ ಅವರು ತಿಳಿಸಿದರು.
ನಗರದ ಲೊಯೋಲ ಪದವಿ ಕಾಲೇಜು ಹಾಗೂ ಕೇಂದ್ರ ಸಾಹಿತ್ಯ ಅಕಾದೆಮಿ ಸಹಯೋಗದಲ್ಲಿ ನಡೆದ ‘ ಕನ್ನಡ ಸಂಶೋಧನೆ : ಸಮಕಾಲೀನ ಸವಾಲುಗಳು ‘ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ ಅವರ ‘ಪ್ರಭುತ್ವ,ಧರ್ಮ ಮತ್ತು ಜನತೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತ ಬೀದಿ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ಮತ್ತು ಅದಿವಾಸಿ ಜನರ ಬಗ್ಗೆ ಕ್ಷೇತ್ರಕಾರ್ಯದಿಂದ ಮಾಡುವ ಸಂಶೋಧನೆಯಿಂದ ನಾವು ಸರ್ಕಾರದ ಗಮನವನ್ನು ಸೆಳೆದು ಈ ನೆಲೆಯಲ್ಲಿ ಅವರಿಗೆ ಪರಿಹಾರ ಸೂಚಿಸಬಹುದಾಗಿದೆ ಎಂದರು. ಲೇಖಕ ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ ಅವರು ಸಮಕಾಲೀನ ತಲ್ಲಣಗಳಿಗೆ ಮಿಡಿಯದ ಯಾವುದೇ ಸಂಶೋಧನೆ ಪ್ರಯೋಜನಕ್ಕೆ ಬರುವುದಿಲ್ಲ. ಸಂಶೋಧಕನಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕಾಗುತ್ತದೆ ಎಂದು ನುಡಿದರು. ಹಾಗೆಯೇ ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರವಾದುದಾಗಿದೆ. ಇಂತಹ ವಿಚಾರಗಳ ಸಂಶೋಧನೆಯಿಂದ ಕನ್ನಡ ಸಾಹಿತ್ಯದ ಅನನ್ಯತೆಯನ್ನು ತಿಳಿಯಬಹುದು.ಇತ್ತೀಚಿನ ದಿನಗಳಲ್ಲಿ ಸಂಶೋಧಕರು ಸಂಶೋಧನೆಯ ಸಂದರ್ಭದಲ್ಲಿ ವಿಷಯದ ಆಯ್ಕೆಯಲ್ಲಿಯೇ ಎಡವುತ್ತಾರೆ.ಇದರಿಂದ ಅವರ ಸಂಶೋಧನೆಯು ಚಲನಶೀಲತೆಯಿಂದ ಕೊಡಿರದೆ ಜಡತ್ವಕ್ಕೆ ಮುಖಮಾಡುತ್ತದೆ.ಮ ಎಂದರು‌. ಆಶಯ ಭಾಷಣವನ್ನು ವಿಶ್ರಾಂತ ಕುಲಪತಿಗಳಾದ ಡಾ.ಹಿ.ಚಿ.ಬೋರಲಿಂಗಯ್ಯ ಮಾಡಿದರು.ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸುಮಾರು ಎಂಭತ್ತಕ್ಕೂ ಹೆಚ್ಚು ಪ್ರಬಂಧ ಮಂಡನಕಾರರು ತಮ್ಮ ಸಂಶೋಧನ ಲೇಖನಗಳನ್ನು ಮಂಡಿಸಿದರು.ಈ ಕಾರ್ಯಕ್ರಮದಲ್ಲಿ ವಾಗ್ಮಿಗಳಾದ ಡಾ.ಬೈರಮಂಗಲ ರಾಮೇಗೌಡ ,ಡಾ.ವಡ್ಡಗೆರೆ ನಾಗರಾಜಯ್ಯ ಮತ್ತು ಜಿ.ಟಿ. ನರೇಂದ್ರಕುಮಾರ್ ಉಪಸ್ಥಿತರಿದ್ದರು. ರವಿಕುಮಾರ್ ಪಿ.ಜಿ. ನಿರೂಪಿಸಿದರು‌.

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.