
ಈಗಿನ ಕರೋನ ಮಹಾಮಾರಿಯಿಂದ ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು, ಸಣ್ಣ ವ್ಯಾಪಾರಿಗಳು,ಸಂಕಷ್ಟಕ್ಕೆ ಸಿಲುಕಿ ದಿನ ನಿತ್ಯದ ಜೀವನಕ್ಕಾಗಿ ಹರಸಾಹಸ ಪಡುತ್ತಿದ್ದಾರೆ.
ಕರೋನ ಮಹಮಾರಿಯಂತೆ ದಿನ ನಿತ್ಯ ವಸ್ತುಗಳು ದುಬಾರಿಯಾಗಿರುವುದು ಬೆಲೆ ಏರಿಕೆಯೆ ಮತ್ತೊಂದು ಮಹಮ್ಮಾರಿ ಎಂದರೆ ತಪ್ಪಿಲ್ಲ.
ಪ್ರತಿಯೊಬ್ಬರಿಗೂ ಆದಾಯ ಇಲ್ಲದಿರುವುದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಕಣ್ಣಿಗೆ ಕಾಣದಾಗಿದೆ. ರೇಷನ್ ಅಂಗಡಿಗಳಲ್ಲಿ ಕೇವಲ ಅಕ್ಕಿ, ಗೋಧಿ ಕೆಲವುಕಡೆ ರಾಗಿಯೂ ನೀಡುತ್ತಿರುವುದು ಸಂತೋಷದ ವಿಷಯವೆ. ಅದರಲ್ಲೂ ಕೇವಲ ಸೊಸೈಟಿ ಗಳಲ್ಲಿ ನೀಡುವ ಆಹಾರ ಧಾನ್ಯಗಳು ಕುಟುಂಬದ ನಿರ್ವಹಣೆ ಸಾಧ್ಯವಾಗುತ್ತಿಲ್ಲವೆಂದು ಬಡವರ ಗೋಗೆರೆಯುತ್ತಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಅಡುಗೆ ಅನಿಲ ಮತ್ತು ಅಡಿಗೆ ಎಣ್ಣಿಯ ಮೇಲಿ ದರವನ್ನು ತಕ್ಷಣದಿಂದಲೇ 50% ರಿಯಾಯಿತಿ ಕೊಡಬೆಕೆಂದು ಸಮಾಜವಾದಿ ಪಕ್ಷದ ಸಲಹೆ ನೀಡಿ ಜಾರಿ ಮಾಡಲು ಜನರ ಪರವಾಗಿ ದ್ವನಿಗೂಡಿಸುತ್ತಿದ್ದೇವೆ.
-ಶಿವರಾಮ್ ಕೆ.ವಿ.
ಮಹಾ ಪ್ರಧಾನ ಕಾರ್ಯದರ್ಶಿ
ಸಮಾಜವಾದಿ ಪಕ್ಷ.
City Today News
9341997936