ಕರ್ನಾಟಕ ರಾಜ್ಯಾದ್ಯಂತ ಸಮಾಜವಾದಿ ಪಾರ್ಟಿ ಬಲಿಷ್ಠ ಹಾಗೂ ಸದೃಢ ಸಂಘಟನೆ ರಾಜ್ಯಾಧ್ಯಕ್ಷ ಎನ್.ಮಂಜಪ್ಪ , ಸಂಕಲ್ಪ

ಎನ್.ಮಂಜಪ್ಪ ಸಮಾಜವಾದಿ ಪಾರ್ಟಿಯ ರಾಜ್ಯಾಧ್ಯಕ್ಷರನ್ನಾಗಿ ದಿನಾಂಕ : 10-07 2021 ರಂದು ನೇಮಕ ಆದೇಶ ಮಾಡಿರುವ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಖಿಲೇಶ್ ಯಾದವ್ ಹಾಗೂ ರಾಜ್ಯದ ಉಸ್ತುವಾರಿ ರಾಜೀವ್ ರೈ ಮತ್ತು ಕರ್ನಾಟಕ ರಾಜ್ಯದ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ನನ್ನ ಸ್ನೇಹಿತರು ಮತ್ತು ಹಿತೈಷಿಗಳಿಗೆ ಅಭಿನಂದನೆಗಳು .

ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಪ್ರವಾಸ ಮಾಡಿ ಪಕ್ಷವನ್ನು ಸದೃಢವಾಗಿ ಮತ್ತು ಬಲಿಷ್ಠವಾಗಿ ಸಂಘಟನೆಯನ್ನು ಕಟ್ಟುತ್ತೇನೆ .

ಸಮಾಜವಾದಿ ಸಮಾವೇಶ ಸೆಪ್ಟೆಂಬರ್ ತಿಂಗಳಿನಲ್ಲಿ ಆಯೋಜನೆ ಮಾಡಲಾಗುವುದು . ಈ ಸಮಾವೇಶಕ್ಕೆ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಖಿಲೇಶ್ ಯಾದವ್‌ರವರು ಪಾಲ್ಗೊಳ್ಳುತ್ತೇನೆಂದು ತಿಳಿಸಿರುತ್ತಾರೆ ಹಾಗೂ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರುಗಳು , ರಾಜ್ಯದ ನಾಯಕರುಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ .

ಈಗ ಪಕ್ಷದ ಎಲ್ಲಾ ಸಮಿತಿಗಳನ್ನು ರದ್ದುಪಡಿಸಲಾಗಿದೆ . ಆಗಸ್ಟ್ ಮೊದಲನೇ ವಾರದೊಳಗಾಗಿ ಎಲ್ಲಾ ನೂತನ ಪದಾಧಿಕಾರಿಗಳನ್ನು ಮತ್ತು ಎಲ್ಲಾ ಸಮಿತಿಗಳನ್ನು ರಚಿಸುತ್ತೇನೆ . ಈ ಮುಖಾಂತರವಾಗಿ ಪಕ್ಷದ ಬಲವರ್ಧನೆ ಮತ್ತು ಸದಸ್ಯತ್ವ ನೋಂದಣಿ ಹಾಗೂ ಈಗೀರುವ ಆಡಳಿತ ರೂಢ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯಗಳನ್ನು ಖಂಡಿಸುತ್ತ ಹೋರಾಟದ ಮೂಲಕ ಪಕ್ಷವನ್ನು ಸದೃಢವಾಗಿ ಕಟ್ಟುತ್ತೇನೆ . ಸಮಾಜವಾದಿ ಸಿದ್ಧಾಂತವನ್ನು ರಾಜ್ಯದ ಎಲ್ಲಾ ಜನರಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು .

ಈ ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ಕಾರ್ಯಕರ್ತರಾದ ಆಲಿಬಾಬ , ಲಕ್ಷ್ಮೀನಾರಾಯಣಗೌಡ , ಉದಯಶಂಕರ್ , ಎಸ್.ಜಿ.ಮಥ್ , ರಾಯಚೂರು , ಅಮೃತ್‌ರಾವ್ , ಗುಲ್ಬರ್ಗ , ಸತ್ಯನಾರಾಯಣ ಯಾದವ್ , ಯಾದಗಿರಿ , ಶಂಕರ್ ಯಾದವ್ , ಬೀದರ್ , ಶಿವರಾಮ್ , ಕೋಲಾರ , ಕೂನಿಕೆರೆ ರಾಮಣ್ಣ , ಚಿತ್ರದುರ್ಗ , ಗಿರೀಶ್ , ರಾಮನಗರ , ರವಿಹೆಗ್ಗಡೆ , ಶಿವಮೊಗ್ಗ ಇನ್ನು ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.