“ರುಪ್ಸಾ ಮೂಲಕ ಸರ್ಕಾರಕ್ಕೆ ಎಚ್ಚರಿಕೆ” ಬೇಡಿಕೆಗಳನ್ನು ಕೂಡಲೇ ಸರ್ಕಾರ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ

ಪತ್ರಿಕಾ ಗೋಷ್ಠಿ

ಕೋವಿಡ್ ಸಂಕಷ್ಟದಿಂದ ಕಳೆದ 20 ತಿಂಗಳಿಂದ ಶಾಲಾ ಕಾಲೇಜುಗಳು ಮುಚ್ಚಿರುವುದು ತಮಗೆ ತಿಳಿದಿರುವ ವಿಚಾರ . ಇದರಿಂದ ಲಕ್ಷಾಂತರ ಮಕ್ಕಳ ಭವಿಷ್ಯ ಬೀದಿ ಪಾಲಾಗಿದೆ . ಸರ್ಕಾರ ಪ್ರಯತ್ನಿಸಿದ ಶಿಕ್ಷಣದ ಪರ್ಯಾಯ ಮಾರ್ಗಗಳಲ್ಲವೂ ವಿಫಲವಾಗಿರುವುದು ತಮಗೆ ತಿಳಿದಿದೆ . ಹೆಚ್ಚಿನದಾಗಿ ಹಳ್ಳಿಗಳಿಂದ ಕೂಡಿರುವ ನಮ್ಮಂತಹ ದೇಶದಲ್ಲಿ ಭೌತಿಕ ಶಿಕ್ಷಣ ಹೊರತು ಪಡಿಸಿ ಅನ್ಯಮಾರ್ಗಗಳಿಂದ ಯಶಸ್ವಿಗೊಳಿಸುವುದು ಕಷ್ಟ ಸಾಧ್ಯ . ಈಗಾಗಲೇ ಸರ್ಕಾರದ ವರದಿ ಪ್ರಕಾರ ಕಳೆದ ಸಾಲಿನಿಂದ ಬಾಲ್ಯ ವಿವಾಹ , ಬಾಲಕಾರ್ಮಿಕ ಪದ್ಧತಿಗಳು ಹೆಚ್ಚಾಗಿವೆ ಮತ್ತು ಅನೇಕ ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ .

ಈಗಾಗಲೇ ರಾಜ್ಯದ ಡಾ | ದೇವಿಶೆಟ್ಟಿ ವರದಿ , ಐಸಿಎಮ್‌ಆರ್ ( ICMR DELHI ) ಇವರುಗಳು ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳನ್ನು ಕೂಡಲೇ ಪ್ರಾರಂಭಿಸಲು ಶಿಫಾರಸ್ಸು ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ ಹಾಗೂ ಸರ್ಕಾರವೇ ನಿಯೋಜಿಸಿದ ಟಾಸ್ಕ್ ಫೋರ್ಸ್ ಸಮಿತಿ ಕೂಡ ಶಾಲೆಗಳನ್ನು ಆರಂಭಿಸಲು ಹಸಿರು ನಿಶಾನೆ ತೋರುವ ಸಂಪೂರ್ಣ ಸಾಧ್ಯತೆ ಇದೆ ಎಂದು ಭಾವಿಸಿದ್ದೇವೆ .

ಆದ್ದರಿಂದ ರುಪ್ಸಾ ಕರ್ನಾಟಕ ಮಾಧ್ಯಮಗಳ ಮೂಲಕ ಸರ್ಕಾರಕ್ಕೆ ಮತ್ತು ಶಿಕ್ಷಣ ಸಚಿವರಿಗೆ ಎಚ್ಚರಿಕೆ ನೀಡುತ್ತಿದ್ದು ಈ ತಿಂಗಳ 30 ರ ಒಳಗೆ ಶಾಲೆಗಳನ್ನು ಆರಂಭಿಸಲು ಆದೇಶ ಹೊರಡಿಸದಿದ್ದರೆ , ರುಪ್ಪಾ ಕರ್ನಾಟಕ ದಿನಾಂಕ : 01-08-2021 ರಿಂದ ರಾಜ್ಯದ ಎಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳ ಕಾರ್ಯಾರಂಭಕ್ಕೆ ಕರೆ ನೀಡುವುದು ಅನಿವಾರ್ಯವಾಗುತ್ತದೆ ಎಂದು ಸಂಘ ಎಚ್ಚರಿಕೆ ನೀಡುತ್ತಿದೆ .

1 ) 2019-20 , , 2020-21ಸಾಲಿನ ಆರ್.ಟಿ.ಇ ಹಣ ಬಿಡುಗಡೆಗೊಳಿಸಬೇಕು . ಕಾರಣ ಈಗಾಗಲೇ ಶಾಲೆಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿವೆ .

2 ) ನೈಜ ಬೆಳವಣಿಗೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಣೆ ಮಾಡಿ ಕೋವಿಡ್ ಸಂಕಷ್ಟದಿಂದ ಶಾಲೆಗಳು ಬಳಲುತ್ತಿವೆ . ಆದ್ದರಿಂದ ಯಾವುದೇ ಶುಲ್ಕವಿಲ್ಲದೇ ಕನಿಷ್ಟ ದಾಖಲಾಗಳೊಂದಿಗೆ ಶಾಲೆಗಳಿಗೆ ನೈಜ ಬೆಳವಣಿಗೆಗೆ ಮಾನ್ಯತೆ ಪತ್ರ ನೀಡಬೇಕು . 2020-21 ಸಾಲಿನ ಸ್ವಾಭಾವಿಕ ಬೆಳವಣಿಗೆ ಅಡಿಯಲ್ಲಿ 6 ರಿಂದ 8 ಹಾಗೂ 9 ಮತ್ತು 10 ನೇ ಉನ್ನತೀಕರಿಸಲು ಅರ್ಜಿ ಸಲ್ಲಿಸಿದ ಶಾಲೆಗಳ ವಿದ್ಯಾರ್ಥಿಗಳನ್ನು ಅದೇ ಶಾಲೆಯಲ್ಲಿ ಮುಂದುವರಿಸಲು ಅವಕಾಶ ಕೊಡುವುದು .

3 ) ಈಗಾಗಲೇ ಸರ್ಕಾರವೇ ಹೇಳಿಕೆ ನೀಡಿರುವಂತೆ ಕನ್ನಡ ಮಾದ್ಯಮ ಶಾಲೆಗಳಿಗೆ 1995 ರಿಂದ 2000 ರವರೆಗೆ ಪ್ರಾರಂಭವಾದ ಶಾಲೆಗಳಗೆ ಕ್ರಮಕೈಗೊಂಡು ಅನುದಾನಕ್ಕೆ ಒಳಪಡಿಸಿ ಹಾಗೂ 2010 ರವರೆಗೆ ವಿಸ್ತರಿಸಿ ಉಳಿದ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು

ಈ ಎಲ್ಲಾ ಬೇಡಿಕೆಗಳನ್ನು ಕೂಡಲೇ ಸರ್ಕಾರ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಧ್ಯಮಗಳ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುತ್ತಿದೆ .

ಡಾ : ಹಾಲನೂರ್.ಎಸ್.ಲೇಪಾಕ್ಸ್ ಅಧ್ಯಕ್ಷರು – ರುಪ್ಸಾ ಕರ್ನಾಟಕ .

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.