ಅಮ್ ಆದ್ಮ ಪಾರ್ಟಿಯಿಂದ ಜುಲೈ 30 ರಂದು ಶಿಕ್ಷಣ ಸಮ್ಮೇಳನ “ಶಿಕ್ಷಣ ನಮ್ಮ ಹಕ್ಕು , ಶಿಕ್ಷಣ ನಿಮ್ಮ ಜವಾಬ್ದಾರಿ”

ಪತ್ರಿಕಾಗೋಷ್ಠಿ

ಕರ್ನಾಟಕ ರಾಜ್ಯದ ಶಿಕ್ಷಣ ವ್ಯವಸ್ಥೆ ಆಘಾತಕಾರಿ ಬಿಕ್ಕಟ್ಟನ್ನು ಎದುರಿಸುತ್ತಿದೆ . ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ . ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಅಸಮರ್ಪಕ ನಿರ್ಧಾರಗಳ ಫಲ ಇಂದು ಶಿಕ್ಷಣ ಕ್ಷೇತ್ರ ಅಧೋಗತಿಗೆ ಹೋಗಿದೆ . ಪಟ್ಟ ಉಳಿಸಿಕೊಳ್ಳಲು ಹೆಣಗಾಡುವ ಸರ್ಕಾರದಿಂದ ದೆಹಲಿ ಮಾದರಿಯ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಆಮ್ ಆದ್ಮ ಪಾರ್ಟಿಯ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಟೀಕಿಸಿದರು . ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಇವರು ಆಮ್ ಆದ್ಮ ಪಾರ್ಟಿ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಗಳ ಕಡೆಗೆ ಜನತೆಯ ಮತ್ತು ಸರ್ಕಾರದ ಗಮನ ಸೆಳೆದು ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ತರುವ ಕುರಿತು ಶಿಕ್ಷಣ ನಮ್ಮ ಹಕ್ಕು , ಶಿಕ್ಷಣ ನಿಮ್ಮ ಜವಾಬ್ದಾರಿ ” ಎಂಬ ಶಿಕ್ಷಣ ಸಮ್ಮೇಳನವನ್ನು ಹಮ್ಮಿ ಕೊಳ್ಳುತ್ತಿದೆ . ಇದೇ ಬರುವ ಜುಲೈ 30 ಶುಕ್ರವಾರ ಸಂಜೆ 6 ಗಂಟೆಗೆ ಶಿಕ್ಷಣ ತಜ್ಞೆ ಮತ್ತು ದೆಹಲಿ ಶಾಸಕಿ ಅತೀಶಿ ಮರ್ಲೇನ ಅವರಿಂದ ಚರ್ಚೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು . ಕ್ರಾಂತಿಕಾರಕ ರೀತಿಯಲ್ಲಿ ದೆಹಲಿಯ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತಂದ ಶಿಕ್ಷಣ ವಾಸ್ತುಶಿಲ್ಪ ಅತಿಶಿ ದೆಹಲಿ ಮಾದರಿಯ ಶಿಕ್ಷಣ ವ್ಯವಸ್ಥೆಯ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಮತ್ತು ಈ ಮಾದರಿಯನ್ನು ಕರ್ನಾಟಕದಲ್ಲಿ ಜಾರಿಗೆ ತರುವ ಬಗ್ಗೆ ಚರ್ಚಿಸಲಿದ್ದಾರೆ . ಚರ್ಚೆಯಲ್ಲಿ ನ್ಯಾಷನಲ್ ಲಾ ಸ್ಕೂಲ್ ನ ಪ್ರಾಧ್ಯಾಪಕ ಬಾಬು ಮ್ಯಾಥ್ಯ ಮತ್ತು ಆಮ್ ಆದ್ಮ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಭಾಗವಹಿಸಲಿದ್ದಾರೆ . ಈ ಸಮ್ಮೇಳನದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಶಿಕ್ಷಣ ವ್ಯವಸ್ಥೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ . ಅಪರಾಹ್ನ 3 ಗಂಟೆಗೆ ಬೆಂಗಳೂರಿನ 20 ಲೇವಲ್ ರಸ್ತೆಯ ರೋಟರಿ ಕ್ಲಬ್ ನಲ್ಲಿ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಕೆಎಎಂಎಸ್ ನ ಮುಖ್ಯಸ್ಥ ಶಶಿ ಕುಮಾರ್ , IT for Change on the Role of technology in school learning solutions ಮುಖ್ಯಸ್ಥ ಗುರು ಕಾಶಿನಾಥನ್ , ಅಕ್ಷರ ಫೌಂಡೇಶನ್ ನ ಗಣಿತ ಶಿಕ್ಷಕಿ ಪುಷ್ಪಾ ತಂತ್ರಿ , ಶಿಕ್ಷಕಿ ಉಷಾ ಮೋಹನ್ , ದಕ್ಷ ನ ಪ್ರೋಗ್ರಾಂ ಡೈರೆಕ್ಟರ್ ಸೂರ್ಯಪ್ರಕಾಶ್ ಬಿ ಎಸ್ ಕರ್ನಾಟಕದ ಶಿಕ್ಷಣ ವ್ಯವಸ್ಥೆಯ ಬಿಕ್ಕಟ್ಟಿಗೆ ಕಾರಣ ಮತ್ತು ಪರಿಹಾರ ” ಎಂಬ ವಿಷಯದ ಕುರಿತು ಚರ್ಚೆ ನಡೆಸಲಿದ್ದಾರೆ .

ದಿನಾಂಕ : ಶುಕ್ರವಾರ , 30 , 2021 ಸಮಯ : ಅಪರಾಹ್ನ 3 ಗಂಟೆಗೆ ಸ್ಥಳ : ರೋಟರಿ ಕ್ಲಬ್ , 20 ಲೇವಲ್ಲೇ ರಸ್ತೆ , ಬೆಂಗಳೂರು 560001

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.