‘ಗೊರುಚ ಶರಣ ಪ್ರಶಸ್ತಿ ‘ ಮತ್ತು ‘ ಗೊರುಚ ಜಾನಪದ ಪ್ರಶಸ್ತಿ ‘ ಪ್ರದಾನ ಸಮಾರಂಭ

*ಗೊರುಚ ಪ್ರಶಸ್ತಿ ಪ್ರದಾನ*

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪ್ರತಿ ವರ್ಷ ನೀಡುತ್ತಿರುವ ‘ ಗೊರುಚ ಶರಣ ಪ್ರಶಸ್ತಿ ‘ ಮತ್ತು ‘ ಗೊರುಚ ಜಾನಪದ ಪ್ರಶಸ್ತಿ ‘ ಪ್ರದಾನ ಸಮಾರಂಭ ಇದೇ ದಿನಾಂಕ 01-08-2021ರಂದು ಮೈಸೂರಿನಲ್ಲಿ ನಡೆಯುತ್ತದೆ . ಪರಿಷತ್ತಿನ ಗೌರವಾಧ್ಯಕ್ಷರಾದ ಪೂಜ್ಯಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮತ್ತು ಪೂಜ್ಯ ಡಾ . ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಅರವಿಂದ ಲಿಂಬಾವಳಿ ಅವರು ಪ್ರಶಸ್ತಿ ಪ್ರದಾನ ಮಾಡುತ್ತಾರೆ . ಡಾ . ಗೊ.ರು. ಚನ್ನಬಸಪ್ಪ ಅವರು ಅಧ್ಯಕ್ಷತೆ ವಹಿಸುತ್ತಾರೆ . ‘ ಪ್ರಸಾದ ‘ ಪತ್ರಿಕೆಯ ಸಂಪಾದಕರಾದ ಪ್ರೊ . ಮಲೆಯೂರು ಗುರುಸ್ವಾಮಿ ಅವರು ಅಭಿನಂದನ ನುಡಿಗಳನ್ನಾಡುತ್ತಾರೆ .

ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳ ಪ್ರಶಸ್ತಿಗಳನ್ನು ಈಗ ಒಂದೇ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತಿದೆ . 2019 ರ ಸಾಲಿಗೆ ಡಾ . ಸಿ . ವೀರಣ್ಣ , ಡಾ . ಬಿ.ಎಸ್ . ಸ್ವಾಮಿ , ಪ್ರೊ . ಬಿ.ಆರ್ . ಪೋಲೀಸ ಪಾಟೀಲ ಮತ್ತು ಶ್ರೀ ಪಿ.ಡಿ , ವಾಲೀಕಾರ ಅವರೂ , 2020 ರ ಸಾಲಿಗೆ ಡಾ . ಬಸವರಾಜ ಸಾದರ , ಡಾ . ಎಚ್.ಟಿ. ಪೋತೆ , ಡಾ . ಬಸವರಾಜ ಸಬರದ ಮತ್ತು ಡಾ . ಕುರುವ ಬಸವರಾಜ್ ಅವರು ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ .

“ ಗೊರುಚ ಶರಣ ಪ್ರಶಸ್ತಿ ‘ ಮತ್ತು ‘ ಗೊರುಚ ಜಾನಪದ ಪ್ರಶಸ್ತಿ’ಗಳಿಗೆ ತಲಾ 25,000 / ರೂಪಾಯಿಗಳು ಮತ್ತು ಗ್ರಂಥ ಪ್ರಶಸ್ತಿಗೆ ತಲಾ 10,000 / -ರೂಪಾಯಿಗಳ ಗೌರವಧನದೊಂದಿಗೆ ಪ್ರಶಸ್ತಿ ಪಲಕ ನೀಡಲಾಗುತ್ತದೆ .

ಇದೇ ಸಂದರ್ಭದಲ್ಲಿ ಪ್ರಸಿದ್ಧ ಸಂವಹನಕಾರರಾದ ಶ್ರೀಮತಿ ಮಾಯಾಚಂದ್ರ ಅವರು ತಯಾರಿಸಿರುವ ‘ ಗೊರುಚ ದತ್ತಿ ನಿಧಿ ‘ ಕಿರು ಸಾಕ್ಷ್ಯಚಿತ್ರ ಪ್ರದರ್ಶನವಿದೆ .

ಪ್ರಶಸ್ತಿ ಪ್ರದಾನ ಸಮಾರಂಭವು ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆ.ಎಸ್.ಎಸ್ . ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ದಿನಾಂಕ 1.8.2021 ರ ಬೆಳಗ್ಗೆ 10.30 ಕ್ಕೆ ನಡೆಯುತ್ತದೆ .

ಎಸ್.ಬಿ.ಅಂಗಡಿ

ಪ್ರಧಾನ ಕಾರ್ಯದರ್ಶಿ

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.