
ಮೈಸೂರು , ಮಂಡ್ಯ , ಚಾಮರಾಜನಗರ , ಕೊಡಗು , ದಕ್ಷಿಣ ಕನ್ನಡ , ಉಡುಪಿ , ಮಂಗಳೂರು , ರಾಮನಗರ , ಬೆಂಗಳೂರು , ಬೆಂಗಳೂರು ಗ್ರಾಮಾಂತರ , ತುಮಕೂರು , ಹಾಸನ , ಚಿತ್ರದುರ್ಗ , ಚಿಕ್ಕಮಗಳೂರು , ಶಿವಮೊಗ್ಗ , ಕೋಲಾರ , ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ , ಕಾರವಾರ ಈ ಜಿಲ್ಲೆಗಳನ್ನೊಳಗೊಂಡಂತೆ ಮೈಸೂರು ರಾಜ್ಯ / ದಕ್ಷಿಣ ಕರ್ನಾಟಕ ರಾಜ್ಯ ರಚನೆಗೆ ಒತ್ತಾಯ .
ಪ್ರಸ್ತುತ ಭಾರತದ ಜನಸಂಖ್ಯೆ 121 ಕೋಟಿ ಎಂದು ಅಂದಾಜಿಸಿದ್ದು , ಅಂತಯೇ ಕರ್ನಾಟಕದ ಜನಸಂಖ್ಯೆ 6.11 ( 6 , ಕೋಟ 11 ಲಕ್ಷ ) , ಈ ವಿವರ 2011 ಸೆನ್ಸಸ್ ಪ್ರಕಾರ ( ಜನಗಣತಿ ) ದೊರಕಿದೆ . ಭಾರತದಲ್ಲಿ ಅನೇಕ ರಾಜ್ಯಗಳಿವೆ , ತಮಿಳುನಾಡಿನಲ್ಲಿ ಪುದುಚೆರಿ ಒಂದು ಸಣ್ಣ ಪ್ರದೇಶ , ಮಹಾರಾಷ್ಟ್ರದ ಡಿಯೂ – ದಾಮನ್ ಮತ್ತು ಅದಕ್ಕೆ ಸೇರಿದ ಗೋವಾ ರಾಜ್ಯಗಳಿವೆ . ಮಧ್ಯಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಿದೆ . ಉತ್ತರ ಪ್ರದೇಶದಲ್ಲಿ ಸಹ ಜನಸಂಖ್ಯೆ ಪ್ರಮಾಣ ಅಧಿಕವಾಗಿದೆ , ಹರಿಯಾಣ , ಹಿಮಾಚಲ ಪ್ರದೇಶ , ಉತ್ತರಾಂಚಲ , ಮಣಿಪುರ , ತ್ರಿಪುರ ಮುಂತಾದ ರಾಜ್ಯಗಳೂ ಸಹ ಚಿಕ್ಕ ರಾಜ್ಯಗಳು .
ಜನಸಂಖ್ಯೆ ಪ್ರಕಾರ ಆಡಳಿತದ ದೃಷ್ಟಿಯಿಂದ ಸುಮಾರು 3 ಕೋಟಿಗೆ ಅನ್ವಯವಾಗುವಂತೆ ರಾಜ್ಯವನ್ನು ಸ್ಥಾಪನೆ ಮಾಡುವುದು ಸಮಂಜಸ
ಉದಾಹರಣೆ : ಅಮೇರಿಕಾದಲ್ಲಿ 50 ಸಂಸ್ಥಾನಗಳಿವೆ ಎಂದು ಅಂದಾಜಿಸಲಾಗಿದೆ . ಸ್ವಲ್ಪ ಹೆಚ್ಚು ಕಡಿಮೆ ಜನಸಂಖ್ಯೆ ಪ್ರಮಾಣ ಒಂದೇ ಆಗಿರುತ್ತದೆ . ಈ ಯೋಜನೆಯನ್ನೇ ಮುಂದಿಟ್ಟುಕೊಂಡು ನಮ್ಮ ದೇಶದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಜನಸಂಖ್ಯಾ ಪ್ರಮಾಣ ಒಂದೇ ಪ್ರಮಾಣ ಇರುವಂತೆ ಮಾಡುವುದು ಎಲ್ಲಾ ದೃಷ್ಟಿಯಿಂದಲೂ ಸರಿ ಎನಿಸುತ್ತದೆ .
ಇಲ್ಲಿ ಭಾಷೆ ಒಂದನ್ನೇ ಮುಖ್ಯ ಗುರಿಯನ್ನಾಗಿ ಇಟ್ಟುಕೊಂಡು ಪ್ರಾಂತ ರಚನೆ ಸಲ್ಲದು , ದೇಶದ ಒಗ್ಗಟ್ಟು ಬಹಳ ಮುಖ್ಯ . ಆಡಳಿತವನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯ ಮತ್ತು ಭಾಷಾ ಗೊಂದಲವೂ ತಪ್ಪುತ್ತದೆ . ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸಿ ನಮ್ಮ ದೇಶದಲ್ಲಿ ಆಡಳಿತಕ್ಕೆ ಅನುಕೂಲವಾಗುವಂತೆ ರಾಜ್ಯಗಳನ್ನು ರಚಿಸುವುದಿ ಸೂಕ್ತ . ಈ ಹಿನ್ನೆಲೆಯಲ್ಲಿ ಆಂಧ್ರ ರಾಜ್ಯದವರು ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟು ತಮ್ಮ ತೀವ್ರ ಹೋರಾಟ ಮುಂದುವರಿಸಿದ ಫಲವಾಗಿ ಆಂಧ್ರಪ್ರದೇಶ ರಾಜ್ಯವನ್ನು ವಿಭಜಿಸಿ ತೆಲಂಗಾಣ ಹೊಸ ರಾಜ್ಯ ಸ್ಥಾಪನೆ ಮಾಡಿರುವುದು ರಾಜ್ಯದ ಸಮಗ್ರ ಸಮತೋಲನ ಹಾಗೂ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಸಮಂಜಸ ಎನ್ನುವುದರಲ್ಲಿ ಎರಡು ಮಾತಿಲ್ಲ . ಈಗಾಗಲೇ ಉತ್ತರಪ್ರದೇಶ ಸಹ ನಾಲ್ಕು ವಿಭಾಗಗಳಾಗಿ ವಿಂಗಡಿಸಲು ನಿರ್ಣಯಿಸುತ್ತಿರುವುದನ್ನು ಗಮನಿಸಬಹುದಾಗಿದೆ . ತೆಲಂಗಾಣ ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಒತ್ತಾಯಿಸುತ್ತಿರುವವರ ಬೇಡಿಕೆ ಈಡೇರಿಸಿರುವುದು ನ್ಯಾಯ ಸಮ್ಮತವಾದುದು . ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ತೀರ್ಮಾನ ಕೈಗೊಂಡಿರುವುದು ದೇಶದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ನಿರ್ಧಾರ . ಇದೇ ರೀತಿ ಕರ್ನಾಟಕ ರಾಜ್ಯದಲ್ಲಿ ವಿಭಜನೆಯ ಕೂಗು ಉತ್ತರ ಕರ್ನಾಟಕದ ಜನನಾಯಕರಿಂದ ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ .
ಕರ್ನಾಟಕ ಅತಿದೊಡ್ಡ ರಾಜ್ಯವಾದ್ದರಿಂದ ಎಲ್ಲಾ ಪ್ರಾಂತಗಳ ಅಭಿವೃದ್ಧಿ , ಸರ್ವಾಂಗೀಣ ಹಾಗೂ ನಾಡಿನ ಸಮತೋಲನ ಆಡಳಿತ ದೃಷ್ಟಿಯಿಂದಸ ಏಕೀಕೃತ ಕರ್ನಾಟಕದಲ್ಲಿ 2 ಪ್ರತ್ಯೇಕ ರಾಜ್ಯಗಳನ್ನಾಗಿ ರಚಿಸತಕ್ಕದ್ದು ಸೂಕ್ತ . ಉಳಿದ ಕರ್ನಾಟಕ ಪ್ರದೇಶಗಳ ಅಭಿವೃದ್ಧಿಗೆ ಪ್ರತ್ಯೇಕ ಸಮಗ್ರ ಯೋಜನೆ ರೂಪಿಸಲು ಸಾಧ್ಯ . ಇದರಿಂದ ಮೇಲಿನ ಜಿಲ್ಲೆಗಳನ್ನು ಹೊರತುಪಡಿಸಿ , ಉಳಿದ 14 ದೊಡ್ಡ ಜಿಲ್ಲೆಗಳನ್ನೊಳಗೊಂಡ ಮತ್ತೊಂದು ರಾಜ್ಯ ರಚಿಸುವುದು ಸೂಕ್ತ . ಈ ದಿಶೆಯಲ್ಲಿ ಸರ್ಕಾರ , ಜನಪ್ತಿನಿಧಿಗಳು , ಪ್ರಜ್ಞಾವಂತರು , ಸಾಹಿತಿಗಳೆಲ್ಲರೂ ಚಿಂತಿಸಲು ಇದು ಸಕಾಲ , ಈ ಹಿನ್ನೆಲೆಯಲ್ಲಿ ಹೊಸ ಮೈಸೂರು ರಾಜ್ಯ ರಚನೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ .
– ಮರಿಮಲ್ಲಯ್ಯ
ರಾಜ್ಯಾಧ್ಯಕ್ಷರು , ಹೋರಾಟ ಸಮಿತಿ , ಮೈಸೂರು ರಾಜ್ಯ ರಚನೆ ಒತ್ತಾಯ ವೇದಿಕೆ
City Today News
9341997936