ಪಿಪಿಇ ಕಿಟ್ ಖರೀದಿಯಲ್ಲಿ ಮತ್ತೊಂದು ಹಗರಣ

ಕೋವಿಡ್ -19 ಸಂದರ್ಭದಲ್ಲಿ ರಾಜ್ಯ ಸರ್ಕಾರದ ಅನೇಕ ಇಲಾಖೆಗಳಲ್ಲಿ ಖರೀದಿ ಪ್ರಕ್ರಿಯೆಯಲ್ಲಿ ನಿರಂತರವಾಗಿ ಭುಷ್ಯಾಚಾರ ನಡೆದಿರುತ್ತದೆ . ಕಳೆದ ವರ್ಷ ಮೊದಲನೆಯ ಸಂದರ್ಭದಲ್ಲಿ ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸಂಸ್ಥೆಯು ಪಿಪಿಇ ಕಿಟ್ , ಸ್ಯಾನಿಟೈಸರ್ , ಔಷಧಿ , ಉಪಕರಣ ಮತ್ತು ಇತರ ಪರಿಕರಗಳ ಖರೀದಿಯಲ್ಲಿ ನೂರಾರು ಕೋಟಿ ಹಗರಣ ನಡೆದಿರುವ ಬಗ್ಗೆ ಕೆ . ಆರ್ . ಎಸ್ . ಪಕ್ಷವು ಬಹಿರಂಗ ಮಾಡಿ ಎಸಿಬಿ ಹಾಗೂ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮತ್ತು ಕಾಗದಪತ್ರಗಳ ಸಮಿಗೆ ದೂರು ನೀಡಿತ್ತು . ನಮ್ಮ ಈ ದೂರಿನ ಆಧಾರದ ಮೇಲೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಂದಿನ ಅಧ್ಯಕ್ಷರಾಗಿದ್ದ ಎಚ್ . ಕೆ . ಪಾಟೀಲ್ ನೇತೃತ್ವದ ಸಮಿತಿಯು ವಿಚಾರಣೆ ಕೈಗೆತ್ತಿಕೊಂಡು , ತನ್ನ ವಿಚಾರಣಾ ವರದಿಯನ್ನು ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿದ .

ಕೋವಿಡ್ -19 ಸಂಬಂಧಿತ ಬಹುತೇಕ ಖರೀದಿ ಪ್ರಕ್ರಿಯೆಗಳಲ್ಲಿ ಅಕ್ರಮ ಮತ್ತು ಅವ್ಯವಹಾರ ನಡೆದಿರುವುದು ನಿರಂತರವಾಗಿ ಕಂಡುಬಂದಿದೆ . ಇವೆಲ್ಲದರ ಬಗ್ಗೆ ಸರ್ಕಾರ ಯಾವುದೇ ತನಿಖೆ ನಡಸದ ಅಕ್ರಮಗಳಲ್ಲಿ ಭಾಗಿಯಾಗಿರುವವರ ರಕ್ಷಣೆಗೆ ನಿಂತಿದೆ . ಇದರ ಮುಂದುವರಿದ ಭಾಗವೇ , ನಾವು ಇಂದು ಬಹಿರಂಗ ಮಾಡುತ್ತಿರುವ , ಮತ್ತೊಂದು ಖರೀದಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಯಲು ಕಾರಣವಾಗಿದೆ . ಇತ್ತೀಚಿಗೆ ಕೋವಿಡ್ -19 ಎರಡನೇ ಅತಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ( KSMSCL , ಹಿಂದ ಕರ್ನಾಟಕ ಡ್ರಗ್ಸ್ ಲಾಜಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿ ) ಕೊವಿಡ್ ವಾರಿಯರ್ ಗಳಿಗೆ ಎಂದು 12 ಲಕ್ಷ ಪಿಪಿಇ ಕಿಟ್ ಖರೀದಿಗಾಗಿ ದಿನಾಂಕ 26-4-2021 ರಂದು ದರಪಟ್ಟಿಯನ್ನು ( IFQ – Invitation For Quotation ) ಆಹ್ವಾನಿಸಿತ್ತು . ಅನೇಕ ಸರಬರಾಜುದಾರರು ಮತ್ತು ಕಂಪನಿಗಳು ತಮ್ಮ ದರಪಟ್ಟಿಯನ್ನು ಇದಕ್ಕೆ ಪ್ರತಿಯಾಗಿ ಸಲ್ಲಿಸಿದ್ದವು . ಇದರಲ್ಲಿ ಎಚ್ & ಜಡ್ ಅಪಾರ ( H & Z ) ಕಂಪನಿ ಒಂದು ಪಿಪಿಇ ಕಿಟ್ ಗೆ 498 ರೂಗಳ ದರಪಟ್ಟಿ ಸಲ್ಲಿಸಿ L1 ಸ್ನಾನದಲ್ಲಿರುತ್ತಾರೆ ಮತ್ತು ಯುಕ್ಕಾ ಫ್ಯಾಷನ್ 520 ರೂಗಳ ದರ ನೀಡಿ 4 ನೇ ಸ್ನಾನದಲ್ಲಿರುತ್ತಾರೆ . ಆದರೆ H & Z ಅಪಾರ ಸರಬರಾಜು ವೇಳಾಪಟ್ಟಿಯನ್ನು ನೀಡಿರುವುದಿಲ್ಲ , ಆದ್ದರಿಂದ , ನಿಯಮದ ಪುಕಾರ ಅವರನ್ನು ಖರೀದಿ ಪುಕ್ರಿಯೆಯಿಂದ ಹೊರಗಿಡಬೇಕಾಗಿರುತ್ತದೆ . ಮುಂದುವರಿದು , ದಿನಾಂಕ 14-06-2021 ರಂದು KSMSCL ಆನ್ಲೈನ್ ದರ ಸಂಧಾನ ಸಭೆ ಕರೆದು ತಮ್ಮ ದರಗಳನ್ನು ಪುನರ್ ವಿಮರ್ಶಿಸಲು ಕೇಳಿಕೊಳ್ಳುತ್ತಾರೆ . ತದನಂತರ ದಿನಾಂಕ 21-06-2021 ರಂದು KSMSCL ಎಲ್ಲಾ ಸರಬರಾಜುದಾರರಿಗೆ ಇ – ಮೇಲ್ ಮುಖಾಂತರ ಪಿಪಿಇ ಕಿಟ್‌ಗಳ ದರವನ್ನು 370 ರೂಪಾಯಿಗಳಿಗೆ ನಿಗದಿ ಮಾಡುತ್ತಾರೆ . ಇದಕ್ಕೆ ಪ್ರತಿಯಾಗಿ ನಾಲ್ಕನೇ ಸ್ನಾನದಲ್ಲಿದ್ದ ಯುಕ್ಕಾ ಫ್ಯಾಷನ್ ರವರು 22 06-2021ರಂದು 385 ( ರೂ 367+ ಜಿಎಸ್ ಟಿ ) ರೂಪಾಯಿಗಳಿಗೆ ಸರಬರಾಜು ಮಾಡುವುದಾಗಿ ಮತ್ತು H8Z ಅಪಾರೆಲ್ ನವರು 400 ರೂಗಳಿಗೆ ಸರಬರಾಜು ಮಾಡುವುದಾಗಿ ಇ – ಮೇಲ್ ಮುಖಾಂತರ ಅದೇ ದಿನ ತಿಳಿಸುತ್ತಾರೆ . ಅಂತಿಮವಾಗಿ KSMSCL ದಿನಾಂಕ 03-07-2021ರಂದು 4 ಲಕ್ಷ ಪಿಪಿಇ ಕಿಟ್ ಗಳ ಖರೀದಿಗೆ 16 ಕೋಟಿ ರೂಗಳ ಖರೀದಿ ಆದೇಶವನ್ನು ಹೊರಡಿಸುತ್ತಾರೆ . ಈ ಖರೀದಿ ಆದೇಶದ ಮೇಲೆ ಇಲ್ಲಿಯವರೆಗೂ H8Z ಅಪಾರೆಲ್ 2 ಲಕ್ಷ ಪಿಪಿಇ ಕಿಟ್ ಗಳನ್ನು ಸರಬರಾಜು ಮಾಡಿರುತ್ತಾರೆ . ಇವರು ಸರಬರಾಜು ಮಾಡಿರುವ ಪಿಪಿಇ ಕಿಟ್ ಗಳೂ ಕಳಪೆ ಗುಣಮಟ್ಟದ್ದಾಗಿದ್ದು ನಿಗದಿಪಡಿಸಿರುವ ಮಾನದಂಡದಿಂದ ಕೂಡಿರುವುದಿಲ್ಲ , ಮೊದಲನೇ ಖರೀದಿ ಆದೇಶದಿಂದ ಸರ್ಕಾರಕ್ಕೆ 60 ಲಕ್ಷ ರೂಪಾಯಿಗಳ ನಷ್ಟ ಉಂಟಾಗಿದ್ದು ಜೊತೆಗೆ ಕಳಪೆ ಗುಣಮಟ್ಟದ ಪಿಪಿಇ ಕಿಟ್ ಸರಬರಾಜಾಗಿದೆ . ಉಳಿದ 8 ಲಕ್ಷ ಪಿಪಿಇ ಕಿಟ್ ಗಳ ಸರಬರಾಜು ಆದೇಶ ನೀಡಿದರೆ , ಸರ್ಕಾರಕ್ಕೆ ಒಟ್ಟಾರೆ 1 ಕೋಟಿ 80 ಲಕ್ಷ ನಷ್ಟ ಉಂಟಾಗುತ್ತದೆ . ಈ ಅಕ್ರಮದಲ್ಲಿ KSMSGL ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ . ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ ನಿಗಮದ ವ್ಯವಸ್ಕಾಪಕ ನಿರ್ದೇಶಕರಿಂದ ಹಲವಾರು ಮಾಹಿತಿಗಳನ್ನು ಮರೆಮಾಚಿ ಖರೀದಿ ಪ್ರಕ್ರಿಯೆ ನಡೆಸಲಾಗಿದೆ . ಯಾವ ಕಾರಣಕ್ಕಾಗಿ ಯುಕ್ಕಾ ಫಾಶನ್ ರವರನ್ನು ಕೈಬಿಡಲಾಗಿದೆ ಎಂದು ಕಾರಣ ನೀಡದೆ H8Z ಅಪಾರಲ್ ಗೆ ಖರೀದಿ ಆದೇಶ ನೀಡಲಾಗಿದೆ ಎಂದು ತಿಳಿಸಿಲ್ಲ . KSMSCL ಅಧಿಕಾರಿಗಳು ದುಷ್ಟಕೂಟ ರಚಿಸಿಕೊಂಡು , ಸಂಪೂರ್ಣವಾಗಿ ಕಳಪೆ ಗುಣಮಟ್ಟದ ಪರಿಕರಗಳನ್ನು ಮತ್ತು ಔಷಧಿಗಳನ್ನು ಖರೀದಿ ಮಾಡುತ್ತಿದ್ದಾರೆ . ಕಳಪೆ ಗುಣಮಟ್ಟದಲ್ಲಿ ಖರೀದಿ ಯಾದ ಉಪಕರಣ ಮತ್ತು ಔಷಧಿಗಳಿಗೆ ಗುಣಮಟ್ಟ ಪರೀಕ್ಷೆಯ ಫಲಿತಾಂಶವನ್ನು ತಿದ್ದಿ ತಮಗೆ ಬೇಕಾದಂತಹ ವರದಿಯನ್ನು ನೀಡುತ್ತಿದ್ದಾರೆ . ಪ್ರಸ್ತುತ ಸರಬರಾಜಾಗಿರುವ ಪಿಪಿಇ ಕಿಟ್‌ಗಳು ಅತ್ಯಂತ ಕಳಪೆಯಾಗಿದ್ದು ಜಿಲ್ಲಾ ಗುಣಮಟ್ಟ ಪರಿವೀಕ್ಷಕರಿಗೆ ಉತ್ತಮ ಗುಣಮಟ್ಟ ಎಂದು ವರದಿ ನೀಡುವಂತೆ ಒತ್ತಡ ಮತ್ತು ಬೆದರಿಕೆ ಹಾಕಲಾಗುತ್ತಿದೆ . ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ KSMSCL ನಿರಂತರವಾಗಿ ಟೆಂಡರ್ ಪ್ರಕ್ರಿಯೆ ಕೈಬಿಟ್ಟು ಕೇವಲ ದರಪಟ್ಟಿ ಆಧಾರದ ಮೇಲೆ ಖರೀದಿ ನಡೆಸುತ್ತಿರುವುದು . ಅಲ್ಯಾವಧಿ ಟೆಂಡರ್ ( Short Term Tender ) ಕರೆಯಲು ಅವಕಾಶವಿದ್ದರೂ ಕೂಡ , ದರಪಟ್ಟಿಯ ಆಧಾರದ ಮೇಲೆ ಖರೀದಿ ಮಾಡಲಾಗುತ್ತಿದೆ . ಟೆಂಡರ್ ಕರೆದು ನೇರವಾಗಿ ಉತ್ಪಾದಕರಿಂದ ಖರೀದಿಸುವ ಎಲ್ಲಾ ಅವಕಾಶಗಳಿದ್ದರೂ ಕೂಡ ಮಧ್ಯವರ್ತಿಗಳಿಗೆ ಅವಕಾಶವಾಗುವಂತೆ ಖರೀದಿ ಪ್ರಕ್ರಿಯ ನಡೆಸಲಾಗುತ್ತಿದೆ . ಖರೀದಿ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಪಾರದರ್ಶಕತೆಯ ಕೊರತೆ ಇದ್ದು ಎಲ್ಲವನ್ನು ಗೋಪ್ಯವಾಗಿ ನಡೆಸಲಾಗುತ್ತಿದೆ . ತುರ್ತಾಗಿ ಅಗತ್ಯ ಎಂದು ದರಪಟ್ಟಿ ಕರಯುವ ನಿಗಮವು ಅಂತಿಮವಾಗಿ ಖರೀದಿ ಮಾಡಲು ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಆ ಕಾರಣಕ್ಕಾಗಿ ನೂರಾರು ಕೋಟಿ ಸಾರ್ವಜನಿಕ ಹಣ ನಷ್ಟ ಮಾಡುತ್ತಿದ್ದು , ಜೊತೆಗೆ ಕಳಪ ಗುಣಮಟ್ಟದ ಔಷಧಿ ಮತ್ತು ಪರಿಕರಗಳು ಖರೀದಿ ಮಾಡುತ್ತಿದೆ . ಮೊದಲನೇ ಅಲೆಯ ಸಂದರ್ಭದಲ್ಲಿ ಕೊವಿಡ್ -19 ನ ಪುಮುಖ ಚಿಕಿತ್ಸಾ ಕೇಂದ್ರ ಆಗಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಪಿಪಿಇ ಕಿಟ್ ಗಳ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು . ಆ ಸಂದರ್ಭದಲ್ಲಿ ದರ ಹೆಚ್ಚಾಗಲು ಮತ್ತು ಗುಣಮಟ್ಟದಲ್ಲಿ ರಾಜಿಯಾಗಲು ತುರ್ತು ಪರಿಸ್ಥಿತಿಯ ಕಾರಣ ನೀಡಲಾಗುತ್ತಿತ್ತು . ಇಷ್ಟೆಲ್ಲಾ ನಡೆದಿದ್ದರೂ ಕೂಡ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ . ಇದರಿಂದ ಸರ್ಕಾರದ ಉನ್ನತ ಹಂತದ ಅಧಿಕಾರಿಗಳು ಮತ್ತು ಮಂತ್ರಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂದು ಹೇಳಲು ಯಾವುದೇ ಸಂದೇಹವಿಲ್ಲ . ಟೆಂಡರ್ ಕರೆಯದೆ ಮತ್ತು ಖರೀದಿ ಆದೇಶವನ್ನು ತನ್ನ ವೆಬ್ ಸೈಟಿನಲ್ಲಿ ಹಾಕದಿರುವುದು , ಮಾಹಿತಿಯನ್ನು ಮುಚ್ಚಿಟ್ಟು ಅಕ್ರಮ ನಡೆಸಲು ಮಾಡಿಕೊಂಡಿರುವ ವ್ಯವಸ್ಥೆಯಾಗಿದೆ . ಎರಡು ತಿಂಗಳುಗಳ ಹಿಂದೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ KSMSCL ಸೇರಿದಂತೆ ಆರೋಗ್ಯ ಇಲಾಖೆಯಲ್ಲಿನ ಕೊವಿಡ್ ಸಂಬಂಧಿತ ಖರೀದಿ ಪ್ರಕ್ರಿಯೆ ಬಗೆ ಹತ್ತಾರು ಪ್ರಶ್ನೆಗಳನ್ನು , ಆರೋಗ್ಯ ಇಲಾಖೆ ಇದುವರೆಗೂ ಉತ್ತರ ನೀಡದೆ ಕಾಲಹರಣ ಮಾಡಿ ನುಣುಚಿಕೊಳ್ಳುವ ಕೆಲಸ ಮಾಡುತ್ತಿದೆ . ಈ ಹಿಂದೆ ನಾವು ನೀಡಿರುವ ದೂರಿನ ಆಧಾರದ ಮೇಲೆ ತನಿಖೆ ನಡೆಸಲು ಮುಂದಾದ ಸಂದರ್ಭದಲ್ಲಿ , ವಿಚಾರಣೆಗೆ ತಡೆಯೊಡ್ಡುವ ಉದ್ದೇಶದಿಂದ ಮಾನ್ಯ ವಿಧಾನಸಭಾ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೋವಿಡ್ – 19 ಕಾರಣ ನೀಡಿ ಎಲ್ಲಾ ವಿಧಾನಮಂಡಲದ ಸಮಿತಿಗಳು ಯಾವುದೇ ಪರಿಶೀಲನಾ ಭೇಟಿ ನೀಡಬಾರದೆಂದು ಆದೇಶಿಸಿ ತನಿಖೆ ನಡೆಯದಂತೆ ನೋಡಿಕೊಂಡಿದ್ದರು . ನಂತರ ಕೊವಿಡ್ ಹಾವಳಿ ಕಡಿಮೆಯಾದರೂ ಕೂಡ ಈ ಆದೇಶವನ್ನು ಅವರು ಹಿಂಪಡೆಯಲಿಲ್ಲ . ನಂತರ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ತನ್ನ ವಿಚಾರಣ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲು ಅನುಮತಿಗಾಗಿ ಮಾನ್ಯ ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿ ಹಲವಾರು ತಿಂಗಳುಗಳೇ ಕಳದರೂ ಇಲ್ಲಿಯವರೆಗೂ ಆ ವರದಿ ಸದನದಲ್ಲಿ ಮಂಡನೆಯಾಗಿಲ್ಲ . ಯಾಕಾಗಿ ಸದನದಲ್ಲಿ ಮಂಡನೆಯಾಗಿ ಇಲ್ಲ ಎಂದು ಮಾನ್ಯ ವಿಧಾನಸಭಾಧ್ಯಕ್ಷರು ತಿಳಿಸಬೇಕಾಗಿದೆ . ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಕೊವಿಡ್ ಸಂದರ್ಭದಲ್ಲಿನ ಖರೀದಿ ಸೇರಿದಂತೆ ಅನೇಕ ಅಕ್ರಮಗಳ ಕಾರಣಕ್ಕಾಗಿಯೇ ಪತನವಾಯಿತು ಎಂಬುದನ್ನು ನಾವು ಗಮನಿಸಬೇಕು . ಯಡಿಯೂರಪ್ಪನವರ ನೇತೃತ್ವದ ಸರ್ಕಾರವು ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಎಲ್ಲಾ ಪತ್ರಿಕೆಗಳಿಗೆ ಜಾಹೀರಾತು ನೀಡಿ ತಮ್ಮ ಸಾಧನೆಗಳನ್ನು ಹೇಳಿಕೊಂಡಿದ್ದರು . ಆದರೆ ಇದರಲ್ಲಿ ಔಷಧಿ ಖರೀದಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಜಾಹೀರಾತು ಯಾಕೆ ನೀಡಿಲ್ಲವೆಂದು ತಿಳಿದಿಲ್ಲ . ಸರ್ಕಾರವು ಎಲ್ಲಾ ಖರೀದಿ ಪ್ರಕ್ರಿಯೆಗಳನ್ನು ಪಾರದರ್ಶಕ ಮಾಡಬೇಕು , ಖರೀದಿ ಆದೇಶಗಳನ್ನು , ಆದೇಶ ಹೊರಡಿಸಿದ ತಕ್ಷಣ ವೆಬ್ ಸೈಟಿನಲ್ಲಿ ಪ್ರಕಟಿಸಬೇಕು , ಇಲ್ಲಿಯವರೆಗೆ KSMSIL ನಲ್ಲಿ ನಡೆದಿರುವ ಖರೀದಿಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಮತ್ತು ಹಾಲಿ ಹೈಕೋರ್ಟ್ ನ್ಯಾಯಾಧೀಶರ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಕೆ . ಆರ್ . ಎಸ್ . ಪಕ್ಷ ಆಗ್ರಹಿಸುತ್ತದೆ .

ದೀಪಕ್ ಸಿ . ಎನ್ .

ಪ್ರಧಾನ ಕಾರ್ಯದರ್ಶಿ

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.