ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳ ಪಕ್ಷಿನೋಟ

ರಾಜ್ಯ ಸರ್ಕಾರವು ಶ್ರೀ ಡಿ.ಎಸ್. ಅರುಣ್‍ರವರನ್ನು ರಾಜ್ಯ ಸಚಿವ ದರ್ಜೆಯ ಸ್ಥಾನಮಾನದೊಂದಿಗೆ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಿಸಿದ್ದು, ಇವರು ದಿನಾಂಕ: 04-10-2019 ರಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ.
ಸರ್ಕಾರದ ಆದೇಶ ಸಂಖ್ಯೆ: ಹಿಂವಕ 210 ಬಿಸಿಎ 2018, ಬೆಂಗಳೂರು ದಿನಾಂಕ: 21-09-2018ರನ್ವಯ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮವನ್ನು 2013ರ ಕಂಪನಿ ಕಾಯ್ದೆ ಅನ್ವಯ ದಿನಾಂಕ: 13-06-2019ರಂದು ನೋಂದಣಿ ಮಾಡಿಸುವ ಮೂಲಕ ಸ್ಥಾಪನೆ ಮಾಡಿದ್ದು, ಅಧ್ಯಕ್ಷರು ನಿಗಮವನ್ನು ಪ್ರಾರಂಭಿಕ ಹಂತದಿಂದ ಮುನ್ನಡೆಸಿರುತ್ತಾರೆ.
ನಿಗಮದಿಂದ ಸ್ವಯಂ ಉದ್ಯೋಗ ನೇರ ಸಾಲ ಹಾಗೂ ಅರಿವು ಶೈಕ್ಷಣಿಕ ಸಾಲ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿರುತ್ತದೆ. ನಿಗಮದ ವತಿಯಿಂದ ಪ್ರಥಮ ಬಾರಿಗೆ ಎಲ್ಲಾ ಯೋಜನೆಗಳ ಮಾಹಿತಿಯನ್ನು ವಿನೂತನವಾಗಿ ಕಿರುಚಿತ್ರದ ಮೂಲಕ ಹಾಗೂ ಎಲ್ಲಾ ರೀತಿಯ ಸಾಮಾಜಿಕ ಜಾಲತಾಣಗಳನ್ನು ಬಳಸಿ ವ್ಯಾಪಕ ಪ್ರಚಾರ ನೀಡಲಾಗಿರುತ್ತದೆ. ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಸ್ವೀಕರಿಸುವುದಲ್ಲದೇ ನಿಗಮದ ಎಲ್ಲಾ ಚಟುವಟಿಕೆಗಳನ್ನು ಸಂಪೂರ್ಣವಾಗಿ DIGITALIZATION ಮಾಡಲಾಗಿದೆ.
ಮಾನ್ಯ ಅಧ್ಯಕ್ಷರು ಹಾಗೂ ನಿಗಮದ ನಾಮ ನಿರ್ದೇಶಕರುಗಳ ಸಹಕಾರದಿಂದ ಕಳೆದ 02 ವರ್ಷಗಳಲ್ಲಿ ನಿಗಮಕ್ಕೆ ಬಿಡುಗಡೆಯಾಗಿರುವ ರೂ. 16.00 ಕೋಟಿಗಳ ಅನುದಾನದಲ್ಲಿ ರೂ. 15.50 ಕೋಟಿ ವೆಚ್ಚದಲ್ಲಿ 1565 ಫಲಾನುಭವಿಗಳಿಗೆ ಸಾಲ ನೀಡಿ ಶೇ.97 ರಷ್ಟು ಪ್ರಗತಿ ಸಾಧಿಸಿರುವುದು ಹೆಮ್ಮೆಯ ವಿಷಯವಾಗಿರುತ್ತದೆ.
ಅಧ್ಯಕ್ಷರ ಪ್ರವಾಸದ ಸಮಯದಲ್ಲಿ ಸಾಲ-ಸೌಲಭ್ಯಗಳನ್ನು ಪಡೆದಿರುವಂತಹ ಫಲಾನುಭವಿಗಳು ಸಾಲ ಮರುಪಾವತಿಸಲು ಪ್ರತಿ ತಿಂಗಳು ದೂರವಿರುವ ಜಿಲ್ಲಾ ಕಛೇರಿಗಳಿಗೆ ಪ್ರಯಾಣ ಮಾಡಲು ಸಮಯ ಹಾಗೂ ಆರ್ಥಿಕ ವೆಚ್ಚದ ಹೊರೆ ಬೀಳುತ್ತದೆ ಎಂದು ಅಳಲು ತೋಡಿಕೊಂಡಿರುವ ಮೇರೆಗೆ ನಿರ್ದೇಶಕ ಮಂಡಳಿ ಸಭೆಯಲ್ಲಿ ಆನ್‍ಲೈನ್ ಮೂಲಕ ಮರುಪಾವತಿ ಪಡೆಯಲು ತೀರ್ಮಾನಿಸಲಾಗಿರುತ್ತದೆ.
ಫಲಾನುಭವಿಗಳಿಂದ ಸಾಲ ಮರುಪಾವತಿ ಪಡೆಯಲು ಆನ್‍ಲೈನ್ ಮರುಪಾವತಿ ವಿಧಾನಗಳಾದಂತಹ PhonePe, Google Pay, Paytm etc., ಮೂಲಕ ಪಡೆಯುವ ನಿಟ್ಟಿನಲ್ಲಿ Razor Pay ಮತ್ತು ಕೇಂದ್ರ ಸರ್ಕಾರದ Pay Gov ಬಳಸಿ ಮರುಪಾವತಿಯನ್ನು ಸುಗಮವಾಗಿ ಪಾವತಿಸಲು ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಮೊಬೈಲ್ ಆ್ಯಪ್ ಅನ್ನು ನಿಗಮವು ಸಿದ್ದಪಡಿಸಿರುತ್ತದೆ. ಶೀಘ್ರದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಿಂದ ನಿಗಮದ ಮರುಪಾವತಿ ಮೊಬೈಲ್ ಆ್ಯಪ್ ಗೆ ಚಾಲನೆ ನೀಡಲು ಉದ್ದೇಶಿಸಲಾಗಿರುತ್ತದೆ.
ಪ್ರಸ್ತುತ ನಿಗಮದಲ್ಲಿ ಪ್ರಥಮ ಸಾಲಿನಲ್ಲಿಯೇ ರೂ. 1.00 ಕೋಟಿಯಷ್ಟು ಮರುಪಾವತಿ ಮೊತ್ತ ಸ್ವೀಕೃತವಾಗಿದ್ದು, ಶೇ. 75 ರಷ್ಟು ಮರುಪಾವತಿ ಆಗಿರುವುದು ನಿಗಮದ ಸಾಧನೆಯಾಗಿರುತ್ತದೆ. ಸಾಲ ಮರುಪಾವತಿಗಾಗಿ ಬಲ್ಕ್ ಎಸ್.ಎಂ.ಎಸ್, ಕಿರು ಚಿತ್ರಗಳು ಹಾಗೂ ವಾಯ್ಸ್ ಕಾಲ್ ಮೂಲಕ ಮಾನ್ಯ ಅಧ್ಯಕ್ಷರು ಫಲಾನುಭವಿಗಳಿಗೆ ಸಂದೇಶ ನೀಡಿರುತ್ತಾರೆ.
2021-22 ನೇ ಸಾಲಿನಲ್ಲಿ ನಿಗಮಕ್ಕೆ ಒದಗಿಸಿದ ರೂ. 500.00 ಲಕ್ಷಗಳ ಅನುದಾನ ಸೇರಿದಂತೆ ಸ್ವೀಕೃತಿಯಾಗಿರುವ ಮರುಪಾವತಿ / ಉಳಿಕೆ ಮೊತ್ತ ರೂ. 620.00 ಲಕ್ಷಗಳಿಗೆ ಕ್ರಿಯಾ ಯೋಜನೆ ಹಾಗೂ ಈ ಕೆಳಕಂಡ ನೂತನ ಯೋಜನೆಗಳ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ.

 1. ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ (ಫುಡ್ ಟ್ರಕ್)
 2. ವಾಸವಿ ಜಲಶಕ್ತಿ ಯೋಜನೆ (ಕೊಳವೆ ಬಾವಿ ಕೊರೆಯಲು ಸಾಲ)
 3. ಜ್ಞಾನಜ್ಯೋತಿ ಯೋಜನೆ (ಪದವಿ ಪೂರ್ವ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್)
 4. ಜೀವನರಕ್ಷಾ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ (45 ವರ್ಷ ಮೇಲ್ಪಟ್ಟವರಿಗೆ ಸಾಲ/ಸಹಾಯಧನ)
 5. ಕರೋನದಿಂದ ಮೃತಪಟ್ಟಂತಹ ಫಲಾನುಭವಿಗಳ ಸಾಲ ಮನ್ನಾ ಮಾಡಲು ಸರ್ಕಾರಕ್ಕೆ ಪ್ರಸ್ತಾಪಿಸಿದೆ.

2021-22 ನೇ ಸಾಲಿನಲ್ಲಿ ನಿಗಮದಿಂದ ಸರ್ಕಾರಕ್ಕೆ ಸಲ್ಲಿಸಲಾದ
ನೂತನ ಪ್ರಸ್ತಾವನೆಗಳ ವಿವರ

 1. ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ:
  ಆರ್ಯ ವೈಶ್ಯ ಸಮುದಾಯದವರು ಪಾರಂಪರಿಕವಾಗಿ ತಿಂಡಿ ತಿನಿಸುಗಳನ್ನು ತಯಾರಿ ಮಾಡುವುದರಲ್ಲಿ ನೈಪುಣ್ಯತೆ ಹೊಂದಿರುವುದರಿಂದ ಉತ್ತಮ ಗುಣಮಟ್ಟದ ಹಾಗೂ ಆರೋಗ್ಯಕರವಾದ ತಿನಿಸುಗಳನ್ನು ಆಹಾರ ವಾಹಿನಿಯಲ್ಲಿ ಪ್ರಾರಂಭಿಸಲು ನಿಗಮದಿಂದ ಪ್ರೋತ್ಸಾಹ ನೀಡುವ ಅವಶ್ಯಕತೆ ಇರುತ್ತದೆ. ಸದರಿ ಯೋಜನೆಯಡಿ 50 ಫಲಾನುಭವಿಗಳಿಗೆ ಬ್ಯಾಂಕ್‍ಗಳ ಸಹಯೋಗದಿಂದ ಘಟಕ ವೆಚ್ಚ ಒಂದಕ್ಕೆ ರೂ. 2.00 ಲಕ್ಷಗಳ ಸಹಾಯಧನವನ್ನು ನೀಡಲು ಸರ್ಕಾರಕ್ಕೆ ಪ್ರಸ್ತಾಪಿಸಿದೆ.
 2. ವಾಸವಿ ಜಲಶಕ್ತಿ ಯೋಜನೆ:
  ಆರ್ಯ ವೈಶ್ಯ ಸಮುದಾಯದಲ್ಲಿ ಇರುವ ಸಣ್ಣ ರೈತರಿಗೆ ಕೃಷಿ ಅಭಿವೃದ್ಧಿಗಾಗಿ ನೀರಾವರಿ ಸೌಲಭ್ಯವನ್ನು ಒದಗಿಸುವುದು ಸದರಿ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಈ ಯೋಜನೆಯಡಿಯಲ್ಲಿ ರೈತರು ಹೊಂದಿರುವ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಇಲ್ಲದಿದ್ದಲ್ಲಿ ಕೊಳವೆ ಬಾವಿ ಕೊರೆಯುವುದು, ಪಂಪ್‍ಸೆಟ್ ಅಳವಡಿಸುವುದು ಮತ್ತು ವಿದ್ಯುದ್ಧೀಕರಣವನ್ನು ಮಾಡಿಸಲು ಅತೀ ಕಡಿಮೆ ಬಡ್ಡಿ ದರ ಶೇ. 4 ರಂತೆ ಗರಿಷ್ಠ ರೂ. 2.00 ಲಕ್ಷ ಸಾಲ ಹಾಗೂ ವಿದ್ಯುದ್ಧೀಕರಣಕ್ಕೆ ರೂ. 50,000/- ಗಳ ಸಹಾಯಧನ ನೀಡಿ ಕೃಷಿಗೆ ಅನುವಾಗುವಂತೆ ನೆರವು ನೀಡಲು ಪ್ರಾರಂಭಿಕವಾಗಿ 30 ಫಲಾನುಭವಿಗಳಿಗೆ ಸಾಲ / ಸಹಾಯಧನ ನೀಡಲು ಸರ್ಕಾರಕ್ಕೆ ಪ್ರಸ್ತಾಪಿಸಿದೆ.
 3. ಜ್ಞಾನಜ್ಯೋತಿ ಯೋಜನೆ:
  ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದ ದ್ವಿತೀಯ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದಂತಹ ವಿದ್ಯಾರ್ಥಿಗಳಿಗೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಮೆರಿಟ್ ಆಧಾರದನ್ವಯ ಉಚಿತವಾಗಿ ಲ್ಯಾಪ್‍ಟಾಪ್ ಅನ್ನು ರೂ. 60,000/- ಮಿತಿಯೊಳಗೆ 100 ಫಲಾನುಭವಿಗಳಿಗೆ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.
 4. ಜೀವನರಕ್ಷಾ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ:
  ಈ ಯೋಜನೆಯಲ್ಲಿ 45 ವರ್ಷ ಮೇಲ್ಪಟ್ಟ ಆರ್ಯ ವೈಶ್ಯ ಸಮುದಾಯದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಕನಿಷ್ಠ ರೂ. 1,00,000/- ದಿಂದ ಗರಿಷ್ಠ ರೂ.2,00,000/-ಗಳ ಆರ್ಥಿಕ ನೆರವು ಹಾಗೂ ಈ ಮೊತ್ತದಲ್ಲಿ ಶೇ.10ರಷ್ಟು ಸಹಾಯಧನ ಹಾಗೂ ಉಳಿಕೆ ಮೊತ್ತವಾದ ಶೇ.90ರಷ್ಟು ಸಾಲವನ್ನು ವಾರ್ಷಿಕ ಶೇ.2ರ ಬಡ್ಡಿ ದರದಲ್ಲಿ ನೀಡಲು ಸರ್ಕಾರಕ್ಕೆ ಪ್ರಸ್ತಾಪಿಸಿದೆ.

ಹಾಜರಿದ್ದವರು:-

 1. ಶ್ರೀ ಡಿ.ಎಸ್. ಅರುಣ್, ಅಧ್ಯಕ್ಷರು
 2. ಶ್ರೀ ಎನ್. ಮಂಜೇಶ್, ನಿರ್ದೇಶಕರು
 3. ಶ್ರೀಮತಿ ಉಮಾ ಸಾಯಿರಾಂ, ನಿರ್ದೇಶಕರು
 4. ಶ್ರೀ ಜಡೆಮೂರ್ತಿ ಬೆನ್ನೂರು, ನಿರ್ದೇಶಕರು
 5. ಶ್ರೀ ಸಿ.ಆರ್. ನರಸಿಂಹಮೂರ್ತಿ, ನಿರ್ದೇಶಕರು
 6. ಶ್ರೀ ನಾಗೇಶ್ ಜಿ.ಪಿ., ನಿರ್ದೇಶಕರು
 7. ಶ್ರೀ ಹೆಚ್.ಜೆ. ಹನುಮಂತಯ್ಯ, ನಿರ್ದೇಶಕರು
 8. ಶ್ರೀಮತಿ ಕೆ. ದೀಪಶ್ರೀ, ಕೆ.ಜಿ.ಎಸ್. ವ್ಯವಸ್ಥಾಪಕ ನಿರ್ದೇಶಕರು
 9. ಶ್ರೀಮತಿ ವಿ. ನಾಗಮಣಿ, ಲೆಕ್ಕಾಧಿಕಾರಿಗಳು
 10. ಶ್ರೀ ಎಂ.ಜೆ. ಮಂಜುನಾಥ್, ಅಧ್ಯಕ್ಷರ ಆಪ್ತ ಸಹಾಯಕರು

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.