ಎಸ್‌ಸಿ / ಎಸ್‌ಟಗಳಿಗೆ ನಿವೇಶನ ಸಿಗಬಾರದೆಂಬ ದಲಿತ ವಿರೋಧಿ ದೋರಣೆಯನ್ನು ವಿರೋಧಿಸಿ ಬೆಂಗಳೂರಿನ ಮೌರ್ಯ ವೃತ್ತದಲ್ಲಿ,25/8/2021 ರಂದು ದರಣಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2013-14 ನೇ ಸಾಲಿನ ತನಕ ವೆಚ್ಚ ಮಾಡದೆ ಕೋಟ್ಯಾಂತರ ರೂ ಬಾಕಿ ಉಳಿದಿದ್ದ ಎಸ್‌ಸಿಪಿ / ಟಿಎಸ್‌ಪಿ ಮೀಸಲು ಹಣದಲ್ಲಿ ವಸತಿ ರಹಿತ ಬಡವರಿಗೆ ನಿವೇಶನ ಹಂಚಿಕೆ ಮಾಡುವ ಯೋಜನೆ ಹಮ್ಮಿಕೊಂಡಿತ್ತು . ಈ ಯೋಜನೆಗಾಗಿ ವಸತಿ ರಹಿತ ಬಡಕುಟುಂಬದ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದವರು ಅರ್ಜಿ ಸಲ್ಲಿಸಿದ್ದರು . ಈ ಯೋಜನೆಯ ಅನ್ವಯ ಅರ್ಜಿ ಸಲ್ಲಿಸಿದ್ದ ಬಡವರ ಪೈಕಿ ಬಿಬಿಎಂಪಿ ರೆವಿನ್ನೂ ಅಧಿಕಾರಿಗಳು ಸ್ಥಳ ಮಹಜರ್ ಮಾಡಿ ಮಾಡಿ ಅಂತಿಮವಾಗಿ 111೦ ಜನ ವಸತಿ ರಹಿತರನ್ನು ಅರ್ಹರೆಂದು ಗುರುತಿಸಲಾಯಿತು . ನಂತರದಲ್ಲಿ ಬಿಬಿಎಂಪಿ ಅಧಿಕಾರಿಗಳು ಈ ವಸತಿರಹಿತ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಸೂಕ್ತ ಜಮೀನನ್ನು ಕಾಯ್ದಿರಿಸಿ ಬಿಬಿಎಂಪಿಗೆ ಹಸ್ತಾಂತರ ಮಾಡುವಂತೆ ಹಲವಾರು ಪತ್ರಗಳನ್ನು ಬರೆದು 5 ವರ್ಷಗಳ ಅವಧಿಯ ನಂತರ 2014-15 ರಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ಲಕ್ಷಿ ಪುರದಲ್ಲಿ ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕಿನ ಅಗರ ಗ್ರಾಮದಲ್ಲಿ ಒಟ್ಟು 29 ಎಕರೆ 07 ಗುಂಟೆ ಜಮೀನನ್ನು ಈ ಉದ್ದೇಶಕ್ಕಾಗಿ ಗುರ್ತಿಸಿ ಬಿಬಿಎಂಪಿಗೆ ವರ್ಗಾವಣೆ ಮಾಡಲು ಕಡತ ಸಿದ್ಧಗೊಳಿಸಿ ಸರ್ಕಾರದ ಒಪ್ಪಿಗೆಗೆ ಕಳುಹಿಸಲಾಯಿತು . ರಾಜ್ಯ ಸಚಿವ ಸಂಪುಟದ ಒಪ್ಪಿಗೆ : ಎಸ್‌ಸಿಪಿ / ಟಿಎಸ್‌ಪಿ ಅನುದಾನದಲ್ಲಿ ಬಿಬಿಎಂಪಿ ವ್ಯಾಪ್ತಿಯ ವಸತಿ ರಹಿತ ಬಡ ಎಸ್ಸಿ ಮತ್ತು ಎಸ್ಟಿಗಳಿಗೆ ನಿವೇಶನ ಹಂಚಿಕೆ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು , ಸರ್ಕಾರದ ಆದೇಶ ಸಂ : ಆರ್.ಡಿ. 375 ಎಲ್.ಜಿ.ಬಿ 2014 , ಬೆಂಗಳೂರು ದಿನಾಂಕ : 27.03.2015 ರಲ್ಲಿ ಆದೇಶ ಹೊರಡಿಸಿತು . ಇನ್ನೇನು ವಸತಿರಹಿತ ಬಡ ಎಸ್‌ಸಿ / ಎಸ್‌ಟಿಗಳಿಗೆ ಒಂದು ಸೂರು ಕಟ್ಟಿಕೊಳ್ಳುವ ಅವಕಾಶ ಸಿಗುತ್ತಿದ್ದಂತೆ ಇದಕ್ಕೆ ಕೆಲವು ದಲಿತ ವಿರೋಧಿಗಳು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದನ್ನು ಕಾರ್ಯರೂಪಕ್ಕೆ ತರದೆ ವಂಚನೆ ಮಾಡುವ ಉದ್ದೇಶದಿಂದ ದಲಿತ ವಿರೋಧಿ ಶಾಸಕರಾದ ಎಸ್.ಆರ್ . ವಿಶ್ವನಾಥ್ ಮತ್ತು ಸರ್ಕಾರದ ಸಚಿವರಾದ ವಿ . ಸೋಮಣ್ಣ ಅಡ್ಡಿಪಡಿಸುತ್ತಿದ್ದಾರೆ . ಬಿಬಿಎಂಪಿ ವಶಕ್ಕೆ ವರ್ಗಾವಣೆ ಆಗಿರುವ ಜಮೀನನ್ನು ತಮ್ಮ ಯೋಜನೆಗೆ ಬಳಸಿಕೊಂಡು ಮನೆ ಕಟ್ಟಿಸಿ ಕೋಟ್ಯಾಂತರ ರೂಪಾಯಿಗಳಿಗೆ ಮಾರಾಟ ಮಾಡಲು ಮುಂದಾಗಿದ್ದಾರೆಂದು ನಮ್ಮ ರಾಜ್ಯ ಸಮಿತಿ ಗಮನಕ್ಕೆ ತಿಳಿದುಬಂದಿದೆ .

ಹೀಗಾಗಿ ಕಳೆದ 13 ವರ್ಷಗಳಿಂದ ಹೋರಾಟ ಮಾಡಿ ಸರ್ಕಾರದ ಸಚಿವ ಸಂಪುಟದ ಒಪ್ಪಿಗೆ ಪಡೆದಿದ್ದರೂ ಅಂತಿಮವಾಗಿ ಎಸ್‌ಸಿ / ಎಸ್‌ಟಗಳಿಗೆ ನಿವೇಶನ ಸಿಗಬಾರದೆಂಬ ಧ್ವಲ್ಪತೃವಿರೋಧಿ ದೋರಣೆಯನ್ನು ವಿರೋಧಿಸಿ ಬೆಂಗಳೂರಿನ ಮೌರ್ಯ ವೃತ್ತದಲ್ಲಿ,25/8/2021 ರಂದು ದರಣಿ ನಡೆಸಲಾಗುವುದು . 2 ನೇ ಹಂತದಲ್ಲಿ ದಅತ ವಿರೋಧಿಗಳಾದ ವಸತಿ ಸಚಿವ ಶ್ರೀ . ವಿ.ಸೋಮಣ್ಣ ಮತ್ತು ಎಸ್.ಆರ್.ವಿಶ್ವನಾಥ್ ಅವರ ಮನೆ / ಗೃಹ ಕಛೇರಿ ಎದುರು ಎಸ್‌ಸಿ / ಎಸ್‌ಟಿ ವಸತಿ ರಹಿತರು ಮತ್ತು ಅವರ ಕುಟುಂಬಗಳು ಧರಣಿ ನಡೆಸಿ ನ್ಯಾಯ ಪಡೆಯಲು ಹೋರಾಟ ನಡೆಸಲಾಗುವುದು.

-ಮಾರಸಂದ್ರ ಮುನಿಯಪ್ಪ ಸಂಯೋಜಕರು – ಕರ್ನಾಟಕ ಉಸ್ತುವಾರಿ

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.