
ಅಂಧ ಹಾಗೂ ಅಂಗವಿಕಲರಿಗಾಗಿ ಹುಟ್ಟಿಕೊಂಡಿರುವ ಅಸಂಖ್ಯಾತ ಸಂಘ ಸಂಸ್ಥೆಗಳ ನಡುವೆ ಹುಟ್ಟಿಕೊಂಡಿರುವ ಕರ್ನಾಟಕ ಅಂಧರ ವಿಮೋಚನಾ ವೇದಿಕೆಯು ಅನೇಕ ಕಾರಣಗಳಿಂದ ತನ್ನ ಭಿನ್ನತೆಯನ್ನು ಕಾಯ್ದುಕೊಂಡು ಬಂದಿರುತ್ತದೆ . 2010 ರಲ್ಲಿ ಪ್ರಾರಂಭಗೊಂಡ ನಮ್ಮ ಸಂಘಟನೆಯು ಶಿಕ್ಷಣ , ತರಬೇತಿ ಇವೇ ಮೊದಲಾದ ಎಲ್ಲಾ ಸಂಘ ಸಂಸ್ಥೆಗಳ ಸಾಮಾನ್ಯ ಕಾರ್ಯಕ್ರಮಗಳು ಪುನರಾವರ್ತನಯ ಗೋಜಿಗೆ ಕೈಹಾಕದೇ ಇವುಗಳನ್ನು ಮೀರಿದ ವೈಚಾರಿಕ ಜಾಗೃತಿ , ಸಮುದಾಯ ಪ್ರಜ್ಞೆ , ಸಾಹಿತ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳು , ಸಾಮಾಜಿಕ ಸಮಾನತ ಇವೇ ಮೊದಲಾದ ಅಂಶಗಳನ್ನು ಕೇಂದ್ರಿಕರಿಸಿದಂತೆ ಕಾರ್ಯನಿರ್ವಹಿಸುತ್ತಾ ಬಂದಿರುತ್ತದೆ . ರಾಜ್ಯ ಮಟ್ಟದ ಅಂಧರ ಚಿಂತನಾಗೋಷ್ಠಿಗಳು , ಅಂಧ ಬರಹಗಾರರ ವಿಚಾರ ಸಂಕೀರ್ಣಗಳು , ಸಮನ್ವಯ ಕವಿಗೋಷ್ಠಿಗಳು , ಅಂಗವಿಕಲರ ಪ್ರಾತಿನಿಧಿಕ ಮಾಸ ಪತ್ರಿಕೆ , ದೃಷ್ಟಿ ವಿಶೇಷ ಚೇತನ ಲೇಖಕರ ಪುಸ್ತಕಗಳ ಪ್ರಕಾಸನ ಇಂತಹ ಹಲ ಕೆಲವು ಅಪರೂಪದ ಕ್ರೀಯಾಶೀಲ ಚಟುವಟಿಕೆಗಳಿಗೆ ಸಂಸ್ಥೆಯು ಸದಾ ತನ್ನನ್ನು ತೊಡಗಿಸಿಕೊಂಡು ಬಂದಿರುತ್ತದೆ . ವೇಧಿಕೆಯು ಅಂತಯೇ ಕರ್ನಾಟಕ ಅಂಧರ ವಿಮೋಚನಾ ದಿನಾಂಕ : 13.08.2021 ರಂದು ಕರ್ನಾಟಕದ ಮಟ್ಟಿಗೆ ಒಂದು ಕಾರ್ಯವನ್ನು ಕೈಗೊಂಡಿರುತ್ತದೆ . ಐತಿಹಾಸಿಕ ರಾಜ್ಯದ ಬಹುಶಃ ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅಂಧ ಬರಹಗಾರರ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ದತ್ತಿ ನಿಧಿಯನ್ನು ಆರಂಭಿಸಿದ್ದು , ಇದರ ಹೆಗ್ಗಳಿಕೆಯು ಸಂಪೂರ್ಣವಾಗಿ ಡಾ.ಹಚ್ . ವಿಶ್ವನಾಥ್ ಎಂಬ ಸಮಾಜ ಸೇವಕರಿಗೆ ಸಲ್ಲುತ್ತದೆ ಎಂದು ತಿಳಿಸಲು ಸಂಸ್ಥೆಯು ಹೆಮ್ಮಪಡುತ್ತದೆ .
ಪ್ರತಿಭಾವಂತ ಹಾಗೂ ಪುಭಾವಿಗಳ ನಡುವೆ ಸಿಕ್ಕಿ ಜರ್ಜರಿತಗೊಳ್ಳುತ್ತಿರುವ ಇಲ್ಲಿನ ಪ್ರಶಸ್ತಿಗಳು ಅಂಧ ಬರಹಗಾರರನ್ನು ತಲುಪುವುದು ಕಷ್ಟಸಾಧ್ಯವೆಂಬುದನ್ನು ಮನಗೊಂಡಿರುವ ಹಚ್ಕ . ವಿಶ್ವನಾಥ್ರವರು ಸಮುದಾಯದ ಬರಹಗಾರರನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಸದುದ್ದೇಶದಿಂದ ತಮ್ಮದೇ ಹೆಸರಿನಲ್ಲಿ ಈ ದತ್ತಿ ನಿಧಿಯನ್ನು ಆರಂಭಿಸಿರುತ್ತಾರೆ . ಡಾ . 2021 ರ ಜನವರಿ ಮಾಹೆಯಿಂದ ಪ್ರತಿವರ್ಷವು ಕೊಡಮಾಡುವ ಪ್ರಶಸ್ತಿಯು 10,000 / -ರೂ ಪ್ರಶಸ್ತಿ ಮೊತ್ತವನ್ನು ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದ . ಪಿಹಚ್ಡಿ ಪ್ರಬಂಧಗಳನ್ನು ಒಳಗೊಂಡಂತೆ ಅಂಧ ಬರಹಗಾರರ ಯಾವುದೇ ಪ್ರಕಾರದ ಕನ್ನಡದ ಕೃತಿಗಳಿಗೆ ಸಂದಾಯಗೊಳ್ಳಬಹುದಾದ ಮೊಟ್ಟಮೊದಲ ಹಾಗೂ ಏಕೈಕ ಪ್ರಶಸ್ತಿಯು ಇದಾಗಿರುತ್ತದೆ . ಇಂತಹ ಸಾರ್ಥಕ ಕಾರ್ಯಕ್ಕೆ ನಾಂದಿ ಹಾಡಿರುವ ಕರ್ನಾಟಕ ಅಂಧರ ವಿಮೋಚನಾ ವೇದಿಕೆಯು ಡಾ . ಹೆಚ್ . ವಿಶ್ವನಾಥ್ ಅವರನ್ನು ಮತ್ತು ಕನ್ನಡ ಸಾಹಿತ್ಯ ಪರಿಷತ್ತನ್ನು ತುಂಬು ಹೃದಯಯಿಂದ ಅಭಿನಂದಿಸುತ್ತದೆ .
-ಶ್ರೀ ಲಕ್ಷ್ಮೀನಾರಾಯಣ ನಾಗವಾರ , ಅಧ್ಯಕ್ಷರು , ಕರ್ನಾಟಕ ಅಂಧರ ವಿಮೋಚನಾ ವೇದಿಕೆ .
ಶ್ರೀ ಮುದಿಗೆರೆ ರಮೇಶ್ಕುಮಾರ್ , ರಾಜ್ಯ ಸಂಚಾಲಕರು , ಕರ್ನಾಟಕ ಅಂಧರ ವಿಮೋಚನಾ ವೇದಿಕ .
ಶ್ರೀ ಡಾ.ಹೆಚ್ . ವಿಶ್ವನಾಥ್ ,
ಶ್ರೀ ಕದಂಬ ಶ್ರೀನಿವಾಸ , ಸಂಘಟನಾ ಸಂಚಾಲಕರು , ಕರ್ನಾಟಕ ಅಂಧರ ವಿಮೋಚನಾ ವೇದಿಕೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು
City Today News
9341997936