ಗೃಹಇಲಾಖೆ ದಿನೇಶ ಗೌಡ ಎಂಬಾತನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಮತ್ತು ಅವನ ಮೇಲೆ ಸಿ.ಓ.ಡಿ ಅಥವಾ ಸಿ.ಐ.ಡಿ ತನಿಖೆಗೆ ಒಪ್ಪಿಸಿ – ಬೃಂದಾವನ ಪ್ರಾಪರ್ಟೀಸ್ ನಿಂದ ವಂಚನೆಗೊಳಗಾದ ಜನ ಸಾಮಾನ್ಯರು

ದಿನೇಶ ಗೌಡ ಎಂಬಾತನಿಂದ ವಂಚನೆಗೆ ಒಳಗಾದ ಜನರು ನೀಡುತ್ತಿರುವ ವಿಷಯದ ಬಗ್ಗೆ ರಾಜಾಜಿನಗರ , 3 ನೇ ಬ್ಲಾಕ್ , 12 ನೇ ಮೈನ್ , 2 ನೇ ಮಹಡಿ # ನಂ . 7.44 ರಲ್ಲಿ ” ಬೃಂದಾವನ ಪ್ರಾಪರ್ಟೀಸ್ ‘ ದಿನೇಶ ಗೌಡ ಎಂಬುವವರು ಸೈಟುಗಳನ್ನು ನೀಡುವುದಾಗಿ ಬಿ.ಟಿವಿ , ಪಬ್ಲಿಕ್ ಟಿವಿಯಲ್ಲಿ ಜಾಹಿರಾತು ನೀಡಿ ಅದರಂತೆ ಮಲ್ಲೇಶ್ವರಂ ಗೌಂಡಿನಲ್ಲಿ ಎಕ್ಸಿಬಿಷನ್‌ನಲ್ಲಿ ನಡೆಸಿರುತ್ತಾರೆ . ಅವಾಗ ಅಲ್ಲಿ ದಿನೇಶರವರನ್ನು ಭೇಟಿ ಮಾಡಿದಾಗ 30 x 40 ಸೈಟನ್ನು 5,00,000 / – , 7,50,000 / – , 8,00,000 / – ಹೀಗೆ ಹೇಳಿ ಜನಗಳಿಂದ ಹಣ ಪಡೆದು ಬಂದಿರುತ್ತಾರೆ . ಇನ್ನೂ ಕೆಲವರು ಸುಮಾರು 4 ರಿಂದ 5 ವರ್ಷದಿಂದ ತಿಂಗಳಿಗೊಮ್ಮೆ ಇ.ಎಮ್.ಐ ಪಾವತಿಸುತ್ತಾ ತಿಂದಿದ್ದಾರೆ . ಅವರೆಲ್ಲರಿಗೂ ಕಳೆದ ತಿಂಗಳು ಅಂದರೆ ಜುಲೈ ತಿಂಗಳಿನಲ್ಲಿ ಸೈಟನ್ನು ರಿಜಿಸ್ಟ್ರೇಷನ್ ಮಾಡಿಕೊಡುವೆ ಎಂದು ಹೇಳಿದ್ದಾರೆ . ಯಾವಾಗ ಕಳೆದ ತಿಂಗಳು ಸೈಟನ್ನೂ ರಿಜಿಸ್ಟ್ರೇಷನ್ ಮಾಡಿಸಿ ಕೊಳ್ಳಲು ಬಂದಾಗ ವಂಚನೆ ಬೆಳಕಿಗೆ ಬಂದಿರುತ್ತದೆ . ಅವಾಗ ನೊಂದ ಜನರು ಪ್ರತಿಭಟನೆಗೆ ಇಳಿಯುತ್ತಾರೆ . ಎಲ್ಲರೂ ಪೋಲಿಸ್ ಠಾಣೆ ಎದುರು ಜಮಾಯಿಸುತ್ತಾರೆ . ಆದರೆ ಇದರ ಮಧ್ಯೆ ದಿನೇಶ ಗೌಡ ತಲೆಮರಿಸಿಕೊಂಡು ಓಡಿ ಹೋಗಿರುತ್ತಾನೆ . ಇದಾದ ನಂತರ ಟಿವಿಯಲ್ಲಿ ಈ ವಂಚನೆ ಬೆಳಕಿಗೆ ಬಂದಾಗ ಎಲ್ಲಾ ವಂಚನೆಗೆ ಒಳಗಾದ ಜನರು ಪೋಲಿಸ್ ಠಾಣೆ ಎದುರು ಬಂದು ತಮ್ಮ ಅಳಲನ್ನೂ ತೋಡಿಕೊಳ್ಳುತ್ತಾರೆ . ಅವಾಗ ಡಿ.ಸಿ.ಪಿ ಯವರು ( ಯಶವಂತಪುರ ) ಬಂದು ನೊಂದ ಜನರಿಗೆ ಸಾಂತ್ವನವನ್ನೂ ಹೇಳಿ ಅವರ ಮೇಲೆ ಕ್ರಮ ಜರುಗಿಸಿ ನಿಮಗೆ ನ್ಯಾಯ ಮತ್ತು ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದರು . ಆದರೆ ಇದುವರೆಗೂ ಅದರ ಬಗ್ಗೆ ಮಾಹಿತಿ ಇಲ್ಲ . ಇದೀಗ ಪೋಲಿಸ್ ಇಲಾಖೆ ಕೇಳುವ ಪ್ರಕಾರ 2800 ಮಂದಿ ಕೇಸನ್ನು ದಾಖಲಿಸಿದ್ದಾರೆ . ಸುಮಾರು 78 , ಕೋಟಿಯಿಂದ 80 ಕೋಟಿವರೆಗೂ ವಂಚನೆಗೆ ಒಳಗಾಗಿದ್ದೇವೆ ಎಂದು ತಿಳಿದು ಬಂದಿದೆ . ಆದುದರಿಂದ ದಯವಿಟ್ಟು ಈ ಕೇಸನ್ನು ಬಹುಕೋಟಿ ಹಗರಣವೆಂದು ಪರಿಗಣಿಸಿ ಗೃಹಇಲಾಖೆ ಈ ವರದಿ ಮುಟ್ಟಿಸಿ ದಿನೇಶ ಗೌಡ ಎಂಬಾತನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಮತ್ತು ಅವನ ಮೇಲೆ ಸಿ.ಓ.ಡಿ ಅಥವಾ ಸಿ.ಐ.ಡಿ ತನಿಖೆಗೆ ಒಪ್ಪಿಸಿ ,ದಿನೇಶ ಗೌಡ ಎಂಬಾತ ಸೈಟನ್ನು ಕೊಡುವುದಾಗಿ – 1 , ನೆಲಮಂಗಲ 2. ಹೆಸರಘಟ್ಟ 3. ಯಂಚಿಗಾನಹಳ್ಳಿ . 4 , ತಾವರೆಕೆರೆ 5 ಕನಕಪುರ ಇಷ್ಟು ಜಾಗದಲ್ಲಿ ಸೈಟನ್ನು ತೋರಿಸಿ ಮತ್ತು ಒಂದು ಸೈಟು 4 ಜನರಿಗೆ ಹಂಚಿ ವಂಚನೆ ಮಾಡಿರುತ್ತಾನೆ.

ವೆಂಕಟ್ ರೆಡ್ಡಿ
ಅಧ್ಯಕ್ಷರು,
ಕರ್ನಾಟಕ ಜನಪರ ಸಮಾನ ವೇದಿಕೆ

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.