1 ರಿಂದ 8 ನೇ ತರಗತಿಯವರಿಗೆ ಶಾಲೆಗಳನ್ನು ಪ್ರಾರಂಭಿಸುವುದರ ಜೊತೆಗೆ ಖಾಸಗಿ ಶಾಲೆಗಳ ವಿವಿಧ ಬೇಡಿಕೆಗಳನ್ನು ಈಡೇರಿಲು ಆಗ್ರಹ

1 , ಕ್ರಿಯಾಶೀಲ ಮುಖ್ಯಮಂತ್ರಿ ಗಳು ಮತ್ತು ವಿಶೇಷ ಆಲೋಚನೆ ಇರುವ ಶಿಕ್ಷಣ ಮಂತ್ರಿಗಳು ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಾಸದೊಂದಿಗೆ , ದಿನಾಂಕ 30-08-2021 ರಂದು ಬೆಳಗ್ಗೆ 11 ಗಂಟೆಗೆ ಸನ್ಮಾನ್ಯ ಶಿಕ್ಷಣ ಸಚಿವರು ತಾಂತ್ರಿಕ ಸಲಹಾ ಸಮಿತಿಯ ಸಭೆಯನ್ನು ಅನೇಕ ತಜ್ಞರ ಸಲಹೆಯಂತೆ ಮತ್ತು ಈಗಾಗಲೇ 9 ರಿಂದ 12 ನೇ ತರಗತಿಯವರಿಗೆ ಶಾಲೆಗಳು ಕಳೆದ ಒಂದು ವಾರದಿಂದ ನಡೆಯುತ್ತಿದ್ದು , ಯಾವುದೇ ಅನಾಹುತಗಳಾಗಲಿ ಅಥವಾ ಮತ್ತಿತರ ಕೋವಿಡ್ ಸಮಸ್ಯೆಗಳಾಗಲಿ ಕಂಡುಬಂದಿಲ್ಲ . ಅದ್ದರಿಂದ ಕೂಡಲೇ 1 ರಿಂದ 8 ನೇ ತರಗತಿಯವರಿಗೂ ಶಾಲೆಗಳು ನಡೆಸಲು ಅನುಮತಿ ನೀಡಬೇಕಾಗಿ ರುಪ್ಪ ಕರ್ನಾಟಕ ಆಗ್ರಹಿಸುತ್ತದೆ . 2. ಕೋವಿಡ್ ನಿಂದ ಆರ್ಥಿಕವಾಗಿ ಖಾಸಗಿ ಶಾಲೆಗಳು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿರುವುದು ತಮಗೆ ತಿಳಿದಿರುವ ವಿಚಾರ . ಸರ್ಕಾರಕ್ಕೆ ಮತ್ತು ಇಲಾಖೆಗೆ ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿದ್ದರು ಶಾಲೆಗಳಿಗೆ 2020-21ನೇ ಸಾಲಿನ ಆರ್.ಟಿ.ಈ.ಹಣ ಬಿಡುಗಡೆ ಮಾಡಿರುವುದಿಲ್ಲ ಅದರಿಂದ ಕೂಡಲೇ ಹಣ ಬಿಡುಗಡೆ ಮಾಡಬೇಕಾಗಿ ವಿನಂತಿ .

3 . ಇಂದಿನ ಶಿಕ್ಷಣ ಸಚಿವರು ಕೊಟ್ಟ ಭರವಸೆಯಂತೆ 2000 ವರೆಗೆ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಲು ಒಪ್ಪಿದ್ದರು ಆದ್ದರಿಂದ ಅದನ್ನು ಅನುಷ್ಠಾನಗೊಳಿಸಲು ಈ ಮೂಲಕ ಒತ್ತಾಯಿಸುತ್ತಿದ್ದೇವೆ 4 ರಾಜ್ಯದ ಅನೇಕ ಬಿ.ಇ.ಓಗಳು ಖಾಸಗಿ ಶಾಲೆಗಳ ಟಿ.ಸಿ.ಯನ್ನು ಅನಧಿಕೃತವಾಗಿ ನಿಡುತ್ತಿದ್ದು , ತತ್ತಕ್ಷಣ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು . ಖಾಸಗಿ ಶಾಲಾ ವಿಚಾರದಲ್ಲಿ ಇಲಾಖೆಯ ಅಸ್ತಕ್ಷೇಪ ಹೆಚ್ಚಾಗಿದ್ದು ಕೂಡಲೇ ಖಾಸಗಿ ಶಾಲಾ ಸಂಘಟನೆಗಳ ಮುಖ್ಯಸ್ಥರನ್ನು ಒಳಗಂಡಂತೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು . 5. ಶಿಕ್ಷಕರ ದಿನಚಾರಣೆ ಅಂಗವಾಗಿ ರಾಜ್ಯ ಉತ್ತಮ ಶಿಕ್ಷಕರ ಪ್ರಶಸ್ತಿ ಯನ್ನು ಖಾಸಗಿ ಶಾಲೆಗಳಿಗೂ ವಿಸ್ತರಿಸಬೇಕು . 6. ಸರ್ಕಾರ ಘೋಷಿಸಿದಂತೆ ಶಿಕ್ಷಕರ ಪ್ಯಾಕೇಜ್ ಐದು ಸಾವಿರ ರೂಗಳನ್ನು ಕೇವಲ 172000 ಬಿಡುಗಡೆ ಶಿಕ್ಷಕರಿಗೆ ಬಿಡುಗಡೆ ಮಾಡುತ್ತಿದೆ ಉಳಿದ ಸಾವಿರಾರು ಶಿಕ್ಷಕರ ಹಣ ಯಾವಾಗ ಪಾವತಿ ಮಾಡುವುದು ತಕ್ಷಣ ಕ್ರಮ ಕೈಗೊಳ್ಳಿ .

ಡಾಕ್ಟರ್ ಹಾಲನೂರು ಲೇಪಾಕ್ಷ ಅಧ್ಯಕ್ಷರು Rupsa ಕರ್ನಾಟಕ

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.