ರಾಜ್ಯ ಸರ್ಕಾರ ಈ ನಮ್ಮ ಹಕ್ಕೊತ್ತಾಯಗಳನ್ನು ಒಂದು ತಿಂಗಗೋಳಗೆ ಈಡೇರಿಸಲಿಲ್ಲ ವಾದಲ್ಲಿ ರಾಜ್ಯದಾದ್ಯಂದ ಸ್ವಚ್ಚತಾ ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾ ಮುಷ್ಕರ ನಡೆಸಲು ತೀರ್ಮಾನಿಸಲಾಗುವುದು

ಬೆಂಗಳೂರು ಮಹಾನಗರಪಾಲಿಕೆ ಸೇರಿದಂತೆ ರಾಜ್ಯದ ವಿವಿಧ ನಗರಸ್ಥಳೀಯ ಸಂಸ್ಥೆಗಳಲ್ಲಿ ಅನೇಕ ವರ್ಷಗಳಿಂದ ಸ್ವಚ್ಛತೆ ಕೆಲಸ ಮಾಡುತ್ತಿರುವ ನೇರ ಪಾವತಿ ಪೌರಕಾರ್ಮಿಕರು , ಗುತ್ತಿಗೆ ಪೌರಕಾರ್ಮಿಕರು , ಕಸಾಗಿಸುವ ಲೋಡರ್ , ಕ್ಲೀನರ್ , ಕಸದ ವಾಹನ ಚಾಲಕರು ಮತ್ತು ಒಳಚರಂಡಿ ಸ್ವಚ್ಚತಗಾರರನ್ನು ಈತಕ್ಷಣ ಖಾಯಂ ನೇಮಕಾತಿ ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ದಿನಾಂಕ : 31.08.2021 ರಂದು ಮಹಾಸಂಘದ ವತಿಯಿಂದ ಪತ್ರಿಕಾಗೋಷ್ಟಿ ಮೂಲಕ ಈ ಕೆಲಗಿನ ಹಕ್ಕೊತ್ತಾಯಗಳನ್ನು ಸಲ್ಲಿಸಲಾಗುವುದು . ಹಾಗೂ ರಾಜ್ಯ ಸರ್ಕಾರ ಈ ನಮ್ಮ ಹಕ್ಕೊತ್ತಾಯಗಳನ್ನು ಒಂದು ತಿಂಗಗೋಳಗೆ ಈಡೇರಿಸಲಿಲ್ಲ ಅಂದರೆ ರಾಜ್ಯದಾದ್ಯಂದ ಸ್ವಚ್ಚತಾ ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾ ಮುಷ್ಕರ ನಡೆಸಲು ತೀರ್ಮಾನಿಸಲಾಗುವುದು ಎಂದು ಮಾಧ್ಯಮಗಳ ಮೂಲಕ ತಿಳಿಸುತ್ತಿದ್ದೇವೆ .

ಹಕ್ಕೊತ್ತಾಯಗಳು : 1. ಎಲ್ಲಾ ನೇರ ಪಾವತಿ ಪೌರಕಾರ್ಮಿಕರು ಮತ್ತು ಮೇಸ್ತ್ರಿಗಳು ಹಾಗೂ ಗುತ್ತಿಗೆ ಲೋಡರ್ , ಕ್ಲಿನರ್ , ಮತ್ತು ಕಸ ಸಾಗಿಸುವ ವಾಹನಗಳಾದ ಅಟೊ , ಮತ್ತು ಟಿಪ್ಪರ್ ಚಾಲಕರು , ಸಹಾಯಕರನ್ನು ಮತ್ತು ಒಳಚರಂಡಿ ( ಯುಜಿಡಿ ) ಸ್ವಚ್ಚತಾ ಕಾರ್ಮಿಕರನ್ನು ಕೂಡಲೆ ಖಾಯಂಗೊಳಿಸಬೇಕು 2 , ಬೃಹತ್ ಬೆಂಗಳೂರು ಮಹನಗರ ಪಾಲಿಕೆ ಯು ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕವಾದ ಖಾಸಗಿ ಕಂಪನಿ ರಚಿಸಿರುವುದು ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ಕಾರ್ಮಿಕರಾದ ಲೋಡರ್ , ಕ್ಲಿನರ್ , ಮತ್ತು ಕಸ ಸಾಗಿಸುವ ವಾಹನಗಳಾದ ಅಟೊ , ಮತ್ತು ಟಿಪ್ಪರ್ ಚಾಲಕರು , ಸಹಾಯಕರು ಇವರನ್ನು ಖಾಸಗಿ ಕಂಪನಿಯ ವ್ಯಾಪ್ತಿಗೆ ಸೇರಿಸಲು ಯೋಜನೆ ಸಿದ್ದಪಡಿಸಲಾಗಿದೆ , ಇದು ಕಾರ್ಮಿಕರ ವಿರೋಧಿ ದೋರಣೆಯಾಗಿದೆ , ಅದ್ದರಿಂದ ಪ್ರಸ್ತುತ ಘನ ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಕಾರ್ಮಿಕರನ್ನು ಬಿ ಬಿ ಎಂ ಪಿ ಯಲ್ಲಿಯೇ ಖಾಯಂ ಕಾರ್ಮಿಕರಾಗಿ ನೇಮಿಸಿಕೊಳ್ಳಬೇಕು ಮತ್ತು ಈ ಎಲ್ಲಾ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡಬೇಕು . 3. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ನೇರ ಪಾವತಿ ಪೌರಕಾರ್ಮಿಕರಲ್ಲಿ ಅನೇಕರು 60 ವರ್ಷ ಪೂರೈಸುತ್ತಿದ್ದಾರೆ , ಅವರನ್ನು ಯಾವುದೇ ಪರಿಹಾರ ನೀಡದೆ ಅನ್ಯಾಯವಾಗಿ ನಿವೃತ್ತಿಗೊಳಿಸುತ್ತಿದ್ದಾರೆ , ಅದ್ದರಿಂದ 60 ವರ್ಷ ಪೂರೈಸುತ್ತಿರುವ ಪೌರಕಾರ್ಮಿಕರು ಮತ್ತು ಮೇಸ್ತ್ರಿಗಳು ವಯಸ್ಸಾದ ಮೇಲೆ ಬೀದಿಪಾಲಾಗುತ್ತಿದ್ದಾರೆ , ಅದ್ದರಿಂದ ಅವರ ಅವಲಂಬಿತರಿಗೆ ಉದ್ಯೋಗ ನೀಡಬೇಕು . ಮತ್ತು ನಿವೃತ್ತಿ ಪರಿಹಾರವಾಗಿ ಪರಿಹಾರವಾಗಿ ತಲಾ ರೂ.10.ಲಕ್ಷ ಹಣ ನೀಡಿ ಗೌರವದಿಂದ ನಿವೃತ್ತಿಗೊಳಿಸಬೇಕು . 4 , ವಿಶ್ರಾಂತಿ ಗೃಹ , ಶೌಚ್ಚಾಲಯ , ಬೀಸಿನೀರು ಮತ್ತು ಸುರಕ್ಷಿತ ಸಲಕರಣೆ : ಬೆಂಗಳೂರು ಮಹಾನಗರ ಪಾಲಿಕೆ ಮತ್ತು ರಾಜ್ಯದ ನಗರಸ್ಥಳೀಯ ಸಂಸ್ಥೆಗಳಲ್ಲಿ 54,000 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರು ದುಡಿಯುತ್ತಿದ್ದಾರೆ , ಅವರಲ್ಲಿ ಶೇ .90 ಮಹಿಳೆಯಾರಿದ್ದಾರೆ . ಬೆಳಿಗ್ಗೆ 5.30 ಗಂಟೆಗೆ ತಮ್ಮ ಕೆಲಸ ಪ್ರಾರಂಬಿಸುತ್ತಾರೆ . ಈ ಕಾರ್ಮಿಕರು ಅತ್ಯವಶ್ಯಕವಾಗಿ ಬೇಕಾಗಿರುವ ಶೌಚಾಲಯ , ವಿಶ್ರಾಂತಿ ಕೊಠಡಿ , ಕುಡಿಯುವ ನೀರು , ಕೈಕಾಲು ಸ್ವಚ್ಛಮಾಡಿಕೊಳ್ಳಲು ಬಿಸಿನೀರಿನ ವ್ಯವಸ್ಥೆ ಮಾಡುವಂತೆ ಅನೇಕ ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ , ಅದರೆ ಇದೂವರೆವಿಗೂ ಈ ಕುರಿತು ಸೂಕ್ತ ಕ್ರಮ ಜರುಗಿಸಿಲ್ಲ , ಆದ್ದರಿಂದ ಈ ಕೂಡಲೇ ವ್ಯವಸ್ಥೆ ಮಾಡಬೇಕು ,

5. ಭವಿಷ್ಯ ನಿಧಿ ಮತ್ತು ಇ ಎಸ್ ಐ ಪಾವತಿಸದೆ ವಂಚಿಸಿರುವುದು : 2018 ರಿಂದ ಪೌರಕಾರ್ಮಿಕರು ಮತ್ತು ಮೇಸ್ತಿಗಳು ಬಿ ಬಿ ಎಂ ಪಿ ಹಾಗೂ ನಗರಸ್ಥಳೀಯ ಸಂಸ್ಥೆಗಳ ಅಡಿಯಲ್ಲಿ ನೇರವಾಗಿ ಮಾಸಿಕ ವೇತನ ಪಡೆಯುತ್ತಿದ್ದಾರೆ . 2018 ರಿಂದ ಇಲ್ಲಿಯವರೆಗೂ ಭವಿಷ್ಯ ನಿಧಿ ಮತ್ತು ಇ ಎಸ್ ಐ ವಂತಿಗೆಯನ್ನು ಕಾರ್ಮಿಕರಿಂದ ಕಡಿತ ಮಾಡುತ್ತಿದ್ದಾರೆ , ಆದರೆ ಕಾರ್ಮಿಕರ ಭವಿಶ್ಯ ನಿಧಿ ಖಾತೆಗೆ ನೇರವಾಗಿ ಪಾವತಿಸಿರುವ ಕುರಿತು ಸರಿಯಾದ ಮಾಹಿತಿ ಇಲ್ಲ . ಅದ್ದರಿಂದ ಈ ತಕ್ಷಣ ಎಲ್ಲಾ ಕಾರ್ಮಿಕರ ಖಾತೆಗಳಿಗೆ ನೇರವಾಗಿ ಜಮೆ ಮಾಡಬೇಕು . ಈ ಕುರಿತು ಸೂಕ್ತ ದಾಖಲಾತಿಗಳನ್ನು ಕಾರ್ಮಿಕರಿಗೆ ಒದಗಿಸಬೇಕು , 6. ಪೌರಕಾರ್ಮಿಕರು , ಮಸ್ತಿಗಳನ್ನು ಖಾಯಂ ನೇಮಕಾತಿ ಮಾಡಲು ರೂಪಿಸಿರುವ ವಯೋಮಿತಿ 45 ವರ್ಷಗಳು , ಈ ನಿಯಮದಿಂದ ಬಹುತೇಕ ಹಾಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಅನ್ಯಾಯವಾಗಲಿದೆ . ಅದ್ದರಿಂದ ಸದರಿ ಕಾರ್ಮಿಕರ ಖಾಯಂ ನೇಮಕಾತಿ ವಯಸ್ಸು ಕನಿಷ್ಠ 50 ವರ್ಷಗಳಿಗೆ ಹೆಚ್ಚಿಸಬೇಕು . 7. ಪೌರಕಾರ್ಮಿಕರು , ಮೇಸ್ತ್ರಿಗಳನ್ನು ಹಾಗೂ ಲೋಡರ್ ಮತ್ತು ಕಸದ ವಾಹನ ಚಾಲಕರು ಮತ್ತು ಯುಜಿಡಿ ಸ್ವಚ್ಚತಗಾರರು ಕೊರೋನಾ ಸೊಂಕು ವ್ಯಾಪಕವಾಗಿ ಹರಡುತ್ತಿದ್ದರು ತಮ್ಮ ಪ್ರಾಣಗಳನ್ನು ಲೆಕ್ಕಿಸದೆ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ . ಈ ಸಂದರ್ಭದಲ್ಲಿ ಅನೇಕರು ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ . ಅಂತವರಿಗೆ ಇದೂವರೆವಿಗೂ ಪರಿಹಾರ ದೊರೆತಿಲ್ಲ . ಆದ್ದರಿಂದ ಈ ತಕ್ಷಣವೇ ಪಿ . ಎಂ ಕೇರ್ ಫಂಡ್ ಅಥಾವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಿಂದ ತಲಾ ರೂ.30.ಲಕ್ಷ ಪರಿಹಾರ ನೀಡಬೇಕು ,

ಮುತ್ಯಾಲಪ್ಪ ,ಅದ್ಯಕ್ಷರು

ಬೆಂ . ನಗರಜಿಲ್ಲೆ

ಎನ್ ಪಿ ಶ್ರೀನಿವಾಸಲು , ಅಧ್ಯಕ್ಷರು , ಬೆಂ.ನಗರ ,

ಮುನಿರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ,

ನಾರಾಯಣ ( ಮೈಸೂರು ) ರಾಜ್ಯಾದ್ಯಕ್ಷರು

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.