ಇನ್ಫೋಸಿಸ್ ಫೌಂಡೇಷನ್’ನ ಒಂದು ಯೋಜನೆ ಈವರೆಗೆ ಸರಿಸುಮಾರು 32000 ನೇತ್ರ ಶಸ್ತ್ರ ಚಿಕಿತ್ಸೆಗಳನ್ನು ನೆರವೇರಿಸಲಾಗಿದೆ

ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಮತ್ತು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಯೋಜನೆಗಳು ಅದರಲ್ಲಿಯೂ ಮುಖ್ಯವಾಗಿ ಕುಷ್ಠರೋಗ ನಿರ್ಮೂಲನೆ , ಕ್ಷಯರೋಗ ನಿಯಂತ್ರಣ , ಹೆಚ್.ಐ.ವಿ. / ಏಡ್ಸ್ ನಿಯಂತ್ರಣ , ಅಂಧತ್ವ ನಿಯಂತ್ರಣ ಯೋಜನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುಮೋದಿಸಲ್ಪಟ್ಟಿದ್ದು ಕಳೆದ 30 ವರ್ಷಗಳಿಂದ ನಿರಂತರವಾಗಿ ಅತ್ಯಂತ ಹಿಂದುಳಿದ , ಬರಪೀಡಿತ ಹಾಗೂ ಉತ್ತಮ ಆರೋಗ್ಯ ಸೌಲಭ್ಯಗಳಿಂದ ವಂಚಿತವಾಗಿರುವ ಪಾವಗಡದಲ್ಲಿ ಸುವರ್ಣಾಕ್ಷರದಿಂದ ಬರೆದಿಡುವಂತಹ ಒಂದು ಅದ್ಭುತ ಕಾರ್ಯಕ್ರಮ ಇದೇ ಸೆಪ್ಟೆಂಬರ್ 4 , ಶನಿವಾರದಂದು ನೆರವೇರಆದೆ . ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಇನ್ಫೋಸಿಸ್ ಫೌಂಡೇಷನ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿರುವ ನೂತನ ಕಣ್ಣಿನ ಆಸ್ಪತ್ರೆಯ ಸಂಕೀರ್ಣದ ಉದ್ಘಾಟನೆ ವರ್ಚುವಲ್ ಮೂಲಕ ನೆರವೇರಲಿದೆ . ಘನತೆವೆತ್ತ ಉಪರಾಷ್ಟ್ರಪತಿಗಳಾದ ಶ್ರೀ ಎಂ.ವೆಂಕಯ್ಯನಾಯ್ಡು ರವರು ಈ ಕಾರ್ಯಕ್ರಮವನ್ನು ವೆಬನಾರ್ ಮೂಲಕ ನೆರವೇರಿಸಿಕೊಡಲಿದ್ದಾರೆ . ಕಾರ್ಯಕ್ರಮಕ್ಕೆ ದಿವ್ಯಸಾನ್ನಿಧ್ಯವನ್ನು ಶ್ರೀ ಶ್ರೀ ನಿರಂಜನ ಪ್ರಣವ ಸ್ವರೂಪಿ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಅಧ್ಯಕ್ಷರು , ಶ್ರೀ ಸಿದ್ದಗಂಗ ಸಂಸ್ಥಾನ , ತುಮಕೂರು ರವರು ವಹಿಸಿಕೊಳ್ಳಲಿದ್ದಾರೆ . ಇದೇ ಸಂದರ್ಭದಲ್ಲಿ ಮಾನ್ಯ ಕೇಂದ್ರ ಸರ್ಕಾರದ ರಾಜ್ಯ ಸಚಿವರಾದ ಶ್ರೀ ಎ.ನಾರಾಯಣ ಸ್ವಾಮಿ , ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರವರು ಹಾಗೂ ಕರ್ನಾಟಕ ರಾಜ್ಯ ಸಚಿವರುಗಳಾದ ಶ್ರೀ ಜೆ.ಸಿ.ಮಾಧುಸ್ವಾಮಿ , ಸಣ್ಣ ನೀರಾವರಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ , ಶ್ರೀ ಕೆ.ಸುಧಾಕರ್ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ , ಶ್ರೀ ಬಿ.ಸಿ.ನಾಗೇಶ್ , ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಸಕಾಲ ಇಲಾಖೆ , ಶ್ರೀ ಎಸ್.ಸುರೇಶ್ ಕುಮಾರ್ , ಮಾಜಿ ಸಚಿವರು ಹಾಗೂ ಹಾಲಿ ಶಾಸಕರು , ರಾಜಾಜಿನಗರ , ಬೆಂಗಳೂರು ಮತ್ತು ಶ್ರೀ ವೆಂಕಟರಮಣಪ್ಪ , ಮಾಜಿ ಸಚಿವರು ಹಾಗೂ ಹಾಲಿ ಶಾಸಕರು , ಪಾವಗಡ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ . ಈ ಕಾರ್ಯಕ್ರಮ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನೆರವೇರಲಿದೆ .

ಗ್ರಾಮಾಂತರ ಪ್ರದೇಶದಲ್ಲಿ ಬಹುಶಃ ದಕ್ಷಿಣ ಭಾರತದಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹಾಗೂ ಉಪಕರಣಗಳುಳ್ಳ ಕಣ್ಣಿನ ಆಸ್ಪತ್ರೆ ಎಂದಲ್ಲಿ ತಪ್ಪಾಗಲಾರದು . ಈಗಾಗಲೇ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಗಡಿ ಭಾಗವಾದ ಪಾವಗಡದಲ್ಲಿ ಕಳೆದ ಮೂರು ದಶಕಗಳಿಂದ ನಿರಂತರವಾಗಿ ಸೇವೆಯನ್ನು ನಡೆಸಿಕೊಂಡು ಬರುತ್ತಿರುವ ಈ ಸಂಸ್ಥೆಗೆ ಶ್ರೀಮತಿ ಸುಧಾಮೂರ್ತಿ , ಅಧ್ಯಕ್ಷರು . ಇನ್ಫೋಸಿಸ್ ಫೌಂಡೇಷನ್ ರವರು ಅಪಾರವಾದ ಸಹಕಾರ ನೀಡುತ್ತಾ ಈ ಗ್ರಾಮಾಂತರ ಭಾಗದ ಜನರಿಗೆ ಅತ್ಯಂತ ಉತ್ಕೃಷ್ಟ ಮಟ್ಟದ ಸೇವೆಯನ್ನು ಸಲ್ಲಿಸುವಂತೆ ಮಾಡಲು ಈ ನೂತನ ಸಂಕೀರ್ಣ ಇನ್ಫೋಸಿಸ್ ಪ್ರಾಯೋಜಕತ್ವದಲ್ಲಿ ತಲೆ ಎತ್ತಿ ನಿಂತಿದೆ . ಈ ಮಹತ್ಕಾರ್ಯಕ್ಕೆ ಅನೇಕ ಸಂಸ್ಥೆಗಳಾದ ಬಗಾರಿಯಾ ದತ್ತಿ ಸಂಸ್ಥೆ , ಭ್ರಂಡ್ ಫೌಂಡೇಷನ್ ಫಾರ್ ಇಂಡಿಯಾ , ಸರ್ ದೊರಾಜಿ ಟಾಟಾ ಟ್ರಸ್ಟ್ , ಕನ್ನಡ ಬಳಗ , ಯು.ಕೆ. , ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋಆಪರೇಟಿವ್ ಅಮಿಟೆಡ್ , ತುಮಕೂರು ಮುಂತಾದ ಸಂಘ ಸಂಸ್ಥೆಗಳು ಸಹಾಯ ಹಸ್ತವನ್ನು ನೀಡಿವೆ . ಒಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಧೈಯ ವಾಕ್ಯವಾದ ಜೀವನಲ್ಲಿ ಶಿವನನ್ನು ಕಂಡು ಸೇವೆ ಸಲ್ಲಿಸುವ ಅನುಷ್ಠಾನ ರೂಪವೇ ಈ ಸಂಸ್ಥೆಯಾಗಿದೆ ಎಂದಲ್ಲಿ ತಪ್ಪಾಗಲಾರದು . ಈ ಸಂಸ್ಥೆಗೆ ದಿವಂಗತ ಶ್ರೀ ಅನಂತಕುಮಾರ್ ( ಕೇಂದ್ರ ಸಚಿವರು ) ಅತ್ಯಂತ ರೀತಿಯಲ್ಲಿ ಸಹಕಾರ ನೀಡುತ್ತಿದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ . ಇದೇ ರೀತಿ ಈ ಸಂಸ್ಥೆಗೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ರವರು , ಅಧ್ಯಕ್ಷರು , ರಜತ ಮಹೋತ್ಸವದ ಸ್ವಾಗತ ಸಮಿತಿ ರವರು ಸರ್ವ ರೀತಿಯಲ್ಲಿ ಪ್ರೋತ್ಸಾಹ ಹಾಗೂ ಸಹಾಯ ಹಸ್ತವನ್ನು ನೀಡುತ್ತಿದ್ದಾರೆ .

ಸಂಸ್ಥೆಯು ಹಿರಿಯರಾದ ಮಹಾ ಪೋಷಕರುಗಳಾದ ನ್ಯಾಯಮೂರ್ತಿ ಶ್ರೀ ಎಂ.ಎನ್.ವೆಂಕಟಾಚಲಯ್ಯ ‘ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು , ಸರ್ವೋಚ್ಛ ನ್ಯಾಯಾಲಯ , ಭಾರತ ಸರ್ಕಾರ ಮತ್ತು ಶ್ರೀ ಶ್ರೀ ಧರ್ಮಾಧಿಕಾರಿಗಳು , ಶ್ರೀ ವೀರೇಂದ್ರ ಹೆಗ್ಗಡೆ , ಶ್ರೀ ಕ್ಷೇತ್ರ ಧರ್ಮಸ್ಥಳ , ನ್ಯಾಯಮೂರ್ತಿ ಶ್ರೀ ಎನ್.ಸಂತೋಷ್ ಹೆಗ್ಡೆ . ಮಾಜಿ ಲೋಕಾಯುಕ್ತರು , ಕರ್ನಾಟಕ ಸರ್ಕಾರ , ಶ್ರೀ ವಿ.ವಿ.ಭಾಸ್ಕರ್ , ನಿವೃತ್ತ ಡಿಜಿ – ಐಜಿಪಿ , ಕರ್ನಾಟಕ ಸರ್ಕಾರ ಮತ್ತು ಶ್ರೀ ವಿವೇಕ ರೆಡ್ಡಿ , ಪ್ರಸಿದ್ಧ ವಕೀಲರು , ಡಾ.ಕೆ.ಭುಜಂಗ ಶೆಟ್ಟಿ , ಅಧ್ಯಕ್ಷರು , ನಾರಾಯಣ ನೇತ್ರಾಲಯ , ಡಾ.ದೇವಿ ಪ್ರಸಾದ ಶೆಟ್ಟಿ , ಅಧ್ಯಕ್ಷರು , ನಾರಾಯಣ ಹೃದಯಾಲಯ , ಡಾ.ಮಹಾಬಲೇಶ್ವರ ಮಯ್ಯ , ಪ್ರಸಿದ್ಧ ತಜ್ಞರು , ಇವರುಗಳ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಸೇವಾ ಯೋಜನೆಗಳನ್ನು ನಡೆಸುತ್ತಾ ಬರುತ್ತಿರುವ ಸಂಸ್ಥೆ ಇದಾಗಿದೆ .

ನೂತನ ಸಂಕೀರ್ಣದ ವಿವರ : ‘ ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು 16-6-2002ರಂದು ಮಹಾಮಾತೆ ಶ್ರೀ ಶಾರದಾದೇವಿಯವರ 150 ನೇ ಜನ್ಮದಿನೋತ್ಸವದ ಶುಭಸಂದರ್ಭದಲ್ಲಿ ಶ್ರೀರಾಮಕೃಷ್ಣ ಮಠ ಮತ್ತು ಮಿಷನ್ನಿನ ಉಪಾಧ್ಯಕ್ಷರಾದ ಶ್ರೀಮತ್ ಸ್ವಾಮಿ ಗೌತಮಾನಂದಜೀ ಮಹಾರಾಜ್‌ರವರ ಅಮೃತಹಸ್ತದಿಂದ ಆರಂಭವಾಯಿತು . ಅಂದಿನಿಂದ ನಿರಂತರವಾಗಿ ಅಂಧತ್ವ ನಿವಾರಣಾ ಯೋಜನೆಯಡಿಯಲ್ಲಿ ಈವರೆಗೆ ಸುಮಾರು 3200 ಕ್ಕೂ ಮಿಗಿಲಾದ ನೇತ್ರ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಾಗಿದೆ . ಇದೇ ಸಂದರ್ಭದಲ್ಲಿ ಪ್ರಖ್ಯಾತ ನಾರಾಯಣ ನೇತ್ರಾಲಯದ ಸಹಕಾರದಿಂದ ಮಕ್ಕಳ ನೇತ್ರ ಶಸ್ತ್ರಚಿಕಿತ್ಸೆಯನ್ನೂ ಆರಂಭಿಸಲಾಯಿತು . ಅನಂತರ , ತಜ್ಞರ ಸಹಕಾರದೊಂದಿಗೆ ಆರು . ತಿಂಗಳ ಮಗುವಿನಿಂದ ಹಿಡಿದು ಹದಿನೈದು ವರ್ಷದ ಮಕ್ಕಳವರೆಗೆ ಅತ್ಯಂತ ಸೂಕ್ಷ್ಮವಾದ ಸುಮಾರು 146 ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ . ಇದೇ ಸಂದರ್ಭದಲ್ಲಿ , ನಮ್ಮ ಸಂಸ್ಥೆಯ ಆಶ್ರಯದಲ್ಲಿ , ಅನೇಕಾನೇಕ ವೈಜ್ಞಾನಿಕ ಸಂಶೋಧನಾ ಅಧ್ಯಯನಗಳನ್ನು ನಡೆಸಲಾಗಿದೆ . ಪ್ರಖ್ಯಾತ ನೇತ್ರತಜ್ಞರಾದ ಡಾ . ಭುಜಂಗ ಶೆಟ್ಟಿ , ಡಾ . ವಸುಧಾ , ಡಾ . ನರೇಶ್ , ಡಾ . ನರೇಂದ್ರ , ಡಾ . ಕೌಶಿಕ್ ಹೆಗಡೆ , ಡಾ . ಸುಭಾಶ್ ಚಂದ್ರ , ಡಾ . ಅಶ್ವಿನ್ ಮುಂತಾದವರ ಸಹಕಾರದಿಂದ ಅಂತರರಾಷ್ಟ್ರೀಯ ಮಟ್ಟದ ನೇತ್ರಕ್ಕೆ ಸಂಬಂಧಪಟ್ಟ ಸಂಶೋಧನಾ ಅಧ್ಯಯನಗಳನ್ನು ನಡೆಸಿರುವ ಕೀರ್ತಿ ಈ ಸಂಸ್ಥೆಗೆ ಸೇರಿದೆ . ಇದೇ ಸಂದರ್ಭದಲ್ಲಿ , ವಾಟಾ ಟ್ರಸ್ಟ್ ಮತ್ತು ಇನ್ಫೋಸಿಸ್ ಫೌಂಡೇಷನ್ ರವರ ಅಮೂಲ್ಯ ಸಹಕಾರದಿಂದ , 32148 ಮಕ್ಕಳನ್ನು ಒಳಗೊಂಡಂತೆ ( ಎರಡು ಹಂತಗಳಲ್ಲಿ ) ಅಂತರರಾಷ್ಟ್ರೀಯ ಮಟ್ಟದ ಅಧ್ಯಯನ ಒಂದನ್ನು ಕೈಗೆತ್ತಿಕೊಂಡು 2008 ರಿಂದ 2016 ವರೆಗೆ ನಿರಂತರವಾಗಿ ನಡೆಸಲಾಯಿತು . ಅಂತರರಾಷ್ಟ್ರೀಯ ಖ್ಯಾತಿಯ ಡಾ . ದೇವಿಪ್ರಸಾದ ಶೆಟ್ಟರವರ ಸಹಕಾರದಿಂದ ಜೆನೆಟಿಕ್ , ಮೆಟಾಬಾಲಿಕ್ ಮತ್ತು ಅತಿ ಸೂಕ್ಷ್ಮ ಪರೀಕ್ಷೆಗಳನ್ನು ಮತ್ತು ಪ್ರಯೋಗಗಳನ್ನು ನಾರಾಯಣ ಹೃದಯಾಲಯದ ಪ್ರಯೋಗಾಲಯದಲ್ಲಿ ನಡೆಸಲಾಯಿತು , ರಾಷ್ಟ್ರೀಯ ಅಂಕಿಅಂಶಗಳ ಸಂಶೋಧನಾ ಕೇಂದ್ರ , ನಾಗರಭಾವಿ , ಬೆಂಗಳೂರು ಇವರ ಅಮೂಲ್ಯ ಮಾರ್ಗದರ್ಶನದಲ್ಲಿ ಈ ಪ್ರತಿಷ್ಠಿತ ಅಧ್ಯಯನ ನಡೆದು , ಜಾಗತಿಕ ನೇತ್ರ ಸಂಶೋಧನಾ ನಿಯತಕಾಲಿಕದಲ್ಲಿ ಇದರ ಸಂಶೋಧನಾ ವರದಿ ಪ್ರಕಟಗೊಂಡಿತು , ನಮ್ಮ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರ ಹಾಗೂ ಸಂಶೋಧನಾ ಕೇಂದ್ರವು ರಾಜ್ಯ , ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ .

‘ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ‘ ಮತ್ತು ‘ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ’ದ ರಜತ ಮಹೋತ್ಸವದ ಸವಿನೆನಪಿಗಾಗಿ ಇನ್ಫೋಸಿಸ್ ಫೌಂಡೇಷನ್‌ನ ನೆರವಿನಿಂದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒಳಗೊಂಡ ಒಂದು ಸುಸಜ್ಜಿತ ಆಸ್ಪತ್ರೆಯ ಸಂಕೀರ್ಣವನ್ನು ಇದೀಗ ಉದ್ಘಾಟನೆಗೆ ಅಣಿಪಡಿಸಲಾಗಿದೆ . ಇಡೀ ದಕ್ಷಿಣ ಭಾರತದಲ್ಲಿಯೇ ಬಹುಶಃ ಇದು ಅತ್ಯಂತ ಸುಸಜ್ಜಿತವಾದ ಹಾಗೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಏಕೈಕ ಗ್ರಾಮಾಂತರ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ . ಇದಕ್ಕೆ ಪೂರಕವಾಗುವಂತೆ ಭಾರತದಲ್ಲಿಯೇ ವಿಖ್ಯಾತವಾದ ಮಿಂಟೋ ಕಣ್ಣಾಸ್ಪತ್ರ ಹಾಗೂ ಪ್ರಾದೇಶಿಕ ನೇತ್ರ ಚಿಕಿತ್ಸಾ ಸಂಸ್ಥೆ ತನ್ನ 125 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಈ ಕೇಂದ್ರವನ್ನು ತನ್ನ ಗ್ರಾಮೀಣ ನೇತ್ರ ಚಿಕಿತ್ಸಾ ಯೋಜನೆಯಡಿಯಲ್ಲಿ ಒಡಂಬಡಿಕೆ ಮಾಡಿಕೊಂಡಿರುವುದು ಹೆಮ್ಮೆಯ ವಿಚಾರವೇ ಸರಿ , ಆ ಪ್ರಕಾರ ನೇತ್ರತಜ್ಞರು ಹಾಗೂ ದೃಷ್ಟಿಮಾಪಕರು ಈ ಸಂಸ್ಥೆಗೆ ನಿಯೋಜಿಸಲ್ಪಟ್ಟಿರುತ್ತಾರೆ , ಹಾಗಾಗಿ ಇನ್ನೂ ಶ್ರೇಷ್ಠ ಮಟ್ಟದ ಸೇವೆಯನ್ನು ಸಲ್ಲಿಸುವ ವ್ಯವಸ್ಥೆ ಈ ಸಂಸ್ಥೆಗೆ ಒದಗಿ ಬಂದಿದೆ , ನೂತನ ಆಸ್ಪತ್ರ ಸಂಕೀರ್ಣ ಮತ್ತು ಹೊರ ರೋಗಿ ಕೇಂದ್ರದಲ್ಲಿ ಸುಮಾರು ಮೂರು ಕೋಟು ರೂ . ವೆಚ್ಚದಲ್ಲಿ ನಾನಾ ರೀತಿಯ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಸ್ಥಾಪಿಸಲಾಗಿದೆ . ಈ ಸಂಸ್ಥೆಯ ವತಿಯಿಂದ ರೋಗಿಗಳಿಗೂ ಅವರ ಸಹಾಯಕರಿಗೂ ಉಚಿತವಾಗಿ ಊಟೋಪಚಾರ , ಔಷಧಿ , ಶಸ್ತ್ರಚಿಕಿತ್ಸೆ ಹಾಗೂ ಸಾರಿಗೆ ಸೌಲಭ್ಯಗಳನ್ನು ಒದಗಿಸುತ್ತಿರುವುದೂ ಹೆಮ್ಮೆಯ ಸಂಗತಿಯಾಗಿದೆ .

ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಈ ಕೆಳಕಂಡ ಶಸ್ತ್ರಚಿಕಿತ್ಸೆಗಳನ್ನು ಉತ್ತಡ ಮಟ್ಟದಲ್ಲಿ ತಜ್ಞರುಗಳಿಂದ ನೆರವೇರಿಸಲಾಗುತ್ತದೆ . ಮಹಾನಗರಗಳಲ್ಲಿ ಮಾತ್ರ ದೊರೆಯುವ ಸೌಲಭ್ಯ ಇದೀಗ ಗ್ರಾಮಾಂತರ ಭಾಗವಾದ ಪಾವಗಡದಲ್ಲಿ ಲಭ್ಯ . ಉತ್ಕೃಷ್ಟವಾದ ಮತ್ತು ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ಶಸ್ತ್ರ ಚಿಕಿತ್ಸೆಗಳನ್ನು ರಿಯಾಯಿತಿ ದರದಲ್ಲಿ ನೆರವೇರಿಸಲಾಗುತ್ತದೆ .

1 ) ಫೇಕೋ ಎಮಲ್ಟಿಫಿಕೇಶನ್ ಸರ್ಜರಿ ( Phacoemulsification Surgery [ Laser No – Stitch Cataract Surgery with foldable IOL ) 2 ) ಸಣ್ಣ ಸೀಳುವಿಕೆಯ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ( Manual Smal Incision cataract surgery ) 3 ) ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್ 4 ) ಕಂಪ್ಯೂಟರೀಕೃತ ನೇತ್ರ ಪರೀಕ್ಷೆ 5 ) ಕಾರ್ನಿಯಲ್ ಸರ್ಜರಿ ( ಕೆರಾಟೋಪ್ಪಾಜಿ ) 6 ) ಗೊಕೋಮಾ ಕ್ಲಿನಿಕ್ : ಪೆರಿಮೆ ( Zelss HFA3 Visual field analyzer ) ಯಾಗ್ ಲೇಸರ್ 7 ) ಎ – ಚಿ ಸ್ವಾ ನ್ ಯು.ಎಫ್.ಜಿ. ( A – B – Scan USG ) 8 ) doiset gen dedo ( For Diabetic Retinopathy treatment ) 9 ) ಮಕ್ಕಳ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ( Paediatric Ophthalmology Clinic ) 10 ) ದೂರಸಂಪರ್ಕ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಸೌಲಭ್ಯ ( Tele Ophthalmology ) . 10 rigesede Baarted with NCT , GAT , Gonioscopy . HFA 12 ) OCT for Retina & Glaucoma Evaluation 13 ) ಲೆನ್ಲೋಮೀಟರಿನಿಂದ ದೃಷ್ಟಿದೋಷಗಳ ತಪಾಸಣೆ ಮತ್ತು ನಿಖರವಾದ ಕನ್ನಡಕಗಳ ನೀಡುವಿಕೆ ( Lensometer to Calculate Spectacle power ) 14 ) ಕಣ್ಣಿನ ಬಳಿ ಬರುವ ದುರ್ಮಾಂಸದ ಶಸ್ತ್ರ ಚಿಕಿತ್ಸೆ ( Pterygiurn Surgery ) ಕುಣಿಕೆ ಚೀಲದ ಶಸ್ತ್ರಚಿಕಿತ್ಸೆ – DCR & DCT Surgery 16 ) To start Cornea Clinic with availability of Pentacam and Specular Microscope for CR and Keratoplasty .

ಈ ಎಲ್ಲಾ ಸೇವೆಗಳನ್ನು ಅತ್ಯುತ್ತಮ ರೀತಿಯಲ್ಲಿ ರಿಯಾಯಿತಿ ದರದಲ್ಲಿ ಮಾಡಲಾಗುತ್ತದೆ . ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ( ಕ್ಯಾಟರಾಕ್ಸ್ ) ಸಂಪೂರ್ಣ ಉಚಿತವಾಗಿದ್ದು ಇದರ ಜೊತೆಯಲ್ಲಿ ಬೆಳಗಿನ ಉಪಹಾರ , ಮಧ್ಯಾಹ್ನ ಮತ್ತು ರಾತ್ರಿಯ ಭೋಜನ ಹಾಗೂ ಒಳರೋಗಿ ಸೇವೆಗಳು ಹಾಗೂ ಔಷಧಿ ಮತ್ತು ಕಪ್ಪು ಕನ್ನಡಕಗಳು ಸಂಪೂರ್ಣ ಉಚಿತವಾಗಿ ದೊರೆಯುತ್ತದೆ . ಉತೃಷ್ಟ ಮಟ್ಟದ ಲೆನ್ಸ್ ಬೇಕಿದ್ದಲ್ಲಿ ಆಸ್ಪತ್ರೆಯ ಕಛೇರಿಯಲ್ಲಿ ರಿಯಾಯಿತಿ ದರದಲ್ಲಿ ನೀಡಲು ಏರ್ಪಾಡು ಮಾಡಲಾಗುತ್ತದೆ . ಒಟ್ಟಿನಲ್ಲಿ ಅತ್ಯದ್ಭುತವಾದ ಹಾಗೂ ಸೂಕ್ಷ್ಮಾತಿಸೂಕ್ಷ್ಮವಾದ ಶಸ್ತ್ರಚಿಕಿತ್ಸೆಗಳನ್ನು ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಾಡುವಂತಹ ಉತೃಷ್ಟ ಮಟ್ಟದ ಸೇವೆಯನ್ನು ಅತ್ಯಂತ ಮೇಧಾವಿ , ಅನುಭವಿ ಹಾಗೂ ಸ್ವರ್ಣಪದಕ ಪುರಸ್ಕೃತರಾದ ಮತ್ತು ಉನ್ನತ ಶ್ರೇಣಿಯಲ್ಲಿ ವ್ಯಾಸಂಗ ಮಾಡಿದ ವೈದ್ಯರುಗಳ ತಂಡವೇ ಸೇವೆ ಸಲ್ಲಿಸುತ್ತಿದ್ದಾರೆ . ಬಹುಶಃ ತುಮಕೂರು ಜಿಲ್ಲೆಯಲ್ಲಿಯೇ ದೊರೆಯದಂತಹ ಉತೃಷ್ಟ ಮಟ್ಟದ ಉಪಕರಣಗಳು , ಶಸ್ತ್ರಚಿಕಿತ್ಸಾ ಕೊಠಡಿಗಳು ಮತ್ತೆಲ್ಲದಕ್ಕಿಂತ ಮಿಗಿಲಾಗಿ ಉತ್ತಮ ರೀತಿಯ ದಾಖಲೆಪತ್ರಗಳ ವ್ಯವಸ್ಥೆ ಮಾಡಲಾಗಿದೆ . ಸಾರ್ವಜನಿಕರು ‘ ಆಯುಷ್ಮಾನ್ ಭಾರತ ‘ ‘ ಆರೋಗ್ಯ ಕರ್ನಾಟಕ ‘ ಸೌಲಭ್ಯವನ್ನು ಹೊಂದಿರುವವರು ಈ ಸೇವೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ .

ಸ್ವಾಮಿ ಜಪಾನಂದ

ಆಧ್ಯಕ್ಷರು

City’Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.