
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ಟ್ರಸ್ಟಿನ ರಾಜ್ಯಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಬಸವಪ್ರಭು ಸ್ವಾಮೀಜಿಗಳ ನೇತೃತ್ವದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಕೆಳಕಂಡ ಬೇಡಿಕೆಗಳನ್ನು
1. ಶ್ರೀ ಹೆಚ್ . ಕಾಂತರಾಜ ರವರ ಆಯೋಗದ ನೇತೃತ್ವದಲ್ಲಿ ನಡೆದಿರುವ ಸಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆಯ ವರದಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲು ” ಧರಣಿ ಸತ್ಯಾಗ್ರಹ ” ಹಮ್ಮಿಕೊಳ್ಳಲಾಗಿದೆ .
2. 2A ಮೀಸಲಾತಿ ಪಟ್ಟಿಗೆ ಯಾವುದೇ ಆರ್ಥಿಕವಾಗಿ , ಸಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆದ ಪ್ರಭಲ ಜಾತಿಗಳನ್ನು ಸೇರಿಸಬಾರದೆಂದು ಸರ್ಕಾರಕ್ಕೆ ಒತ್ತಾ ಮಾಡುವುದು . 3.
ಹಿಂದುಳಿದ ಜಾತಿಗಳಿಗೆ ಜಾತಿಗೊಂದು ಅಭಿವೃದ್ಧಿ ನಿಗಮ ರಚನೆ ಮಾಡಬೇಕೆಂದು ಒತ್ತಾಯಿಸುವುದು .

ಕರ್ನಾಟಕ ಸರ್ಕಾರ ಈಡೇರಿಸುವಂತೆ ಹಾಗೂ ಯಾವುದೇ ಕಾರಣಕ್ಕೂ ಆರ್ಥಿಕವಾಗಿ , ಸಾಮಾಜಿಕವಾಗಿ , ಶೈಕ್ಷಣಿಕವಾಗಿ , ರಾಜಕೀಯವಾಗಿ , ಆಧ್ಯಾತ್ಮಿಕವಾಗಿ ಸದೃಢ ಹೊಂದಿರುವ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ -2 ಕ್ಕೆ ಸೇರಿಸಬಾರದೆಂದು ಸಮಸ್ತ 197 ಹಿಂದುಳಿದ ಜಾತಿಗಳ ಪರವಾಗಿ ಸರ್ಕಾರಕ್ಕೆ ನಮ್ಮ ಟ್ರಸ್ಟ್ ಮೂಲಕ ಒತ್ತಾಯಿಸಲಾಗುತ್ತದೆ . ಒಂದು ವೇಳೆ ಇದನ್ನು ಹಗುರವಾಗಿ ಸರಕಾರ ತೆಗೆದುಕೊಂಡಲ್ಲಿ ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಶಕ್ತಿ ಏನೆಂದು ಈ ಸರಕಾರಕ್ಕೆ ತೋರಿಸಬೇಕಾಗುತ್ತದೆ ಎಂದು ಪತ್ರಿಕಾಗೋಷ್ಠಿಯ ಮೂಲಕ ಸರ್ಕಾರಕ್ಕೆ ಎಚ್ಚತಿಸುತ್ತಿದ್ದೇವೆ . ಹಿಂದುಳಿದ ವರ್ಗಗಳ ಸಮುದಾಯದ ಬೇಡಿಕೆಗಳನ್ನು ಸರಕಾರ ತಕ್ಷಣ ಜಾರಿಗೆ ತರದೇ ಹೋದಲ್ಲಿ ಕರ್ನಾಟಕ ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಹಿಂದುಗಳಿದ ವರ್ಗಗಳ ಅಭಿವೃದ್ಧಿ ಟ್ರಸ್ಟ್ನ ವತಿಯಿಂದ ಹಿಂದುಳಿದ ವರ್ಗಗಳ ಸಮುದಾಯವನ್ನು ಒಗ್ಗೂಡಿಸಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸುತ್ತಿದ್ದೇವೆ .
– ಶ್ರೀ ಬಸವ ಪ್ರಭು ಸ್ವಾಮಿಜಿ – ಅಧ್ಯಕ್ಷರು
ಸೈದಪ್ಪ ಕೆ . ಗುತ್ತೇದಾರ್ – ಪ್ರಧಾನ ಕಾರ್ಯದರ್ಶಿ
City Today News
9341997936