ನ್ಯಾ: ಎ ಜೆ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು

ನ್ಯಾ , ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರಕ್ಕೆ ಶಿಫಾರಸು ಮಾಡಿಸಲು ನಡೆಯುತ್ತಿರುವ ಷಡ್ಯಂತ್ರಗಳನ್ನು ವಿರೋಧಿಸಿ ನಿಮ್ಮ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಚಿಂತನಾ ಸಮಾವೇಶದ ತೀರ್ಮಾನಗಳು :

1 , ಭೋವಿ , ಬಂಜಾರ , ಚಲವಾದಿ , ಕೊರಚ , ಕೊರಮ , ಅಲೆಮಾರಿ ಸಮುದಾಯಗಳಿಗೆ ಕಂಟಕವಾಗಿರುವ ನ್ಯಾ : ಎ ಜೆ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು . ಈ ವರದಿಯನ್ನು ಸಾರ್ವಜನಿಕ ಚರ್ಚೆಗಾಗಿ ಬಿಡುಗಡೆ ಮಾಡಬೇಕು . ಸೋರಿಕೆಯಾಗಿರುವ ಈ ವರದಿ ಅಂಶಗಳನ್ನು ಗಮನಿಸಿದಾಗ ಇದಕ್ಕೆ ಪಾವಿತ್ರತೆ ಇಲ್ಲ ಅನಿಸುತ್ತಿದೆ . ಆಯೋಗ ತನ್ನ ಉದ್ದೇಶಕ್ಕೆ ವಿರುದ್ಯದ ಶಿಪಾರಸ್ಸುಗಳನ್ನು ಮಾಡಿದ . ಅಸಂವಿಧಾನಿಕ ಅಂಶಗಳು ಮತ್ತು ಅವಾಸ್ತವಿಕ ಅಂಕಿಅಂಶಗಳು ಈ ವರದಿಯಲ್ಲಿವೆ . ಹೀಗಾಗಿ ಈ ವರದಿ ಈಗ ಅಪ್ರಸ್ತುತ . ಇದು ಸ್ವೀಕಾರಕ್ಕೆ ಯೋಗವಲ್ಲ .

II . ಪರಿಶಿಷ್ಟ ಜಾತಿಗಳ ಸಹೋದರ ಸಮುದಾಯಗಳ ಮಧ್ಯ ದೃಷ , ಪ್ರಚೋದನ ಬಿತ್ತಲು ಹೊರಟಿರುವ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಮತ್ತು ರಾಜ್ಯ ಸಚಿವ ಗೋವಿಂದ ಕಾರಜೋಳರನ್ನು ಸಚಿವ ಸಂಪುಟದಿಂದ ಕೈಬಿಡಬೇಕು .

III . ಹೋರಾಟಗಳ ಹೆಸರಿನಲ್ಲಿ ಬಂಜಾರರ ಕುಲಗುರು ಶ್ರೀ ಸೇವಾಲಾಲ್ ಮತ್ತು ಸಚಿವ ಪ್ರಭು ಚೌಹಾಣ್ ಅವರನ್ನು ಅವಹೇಳನ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕು .

IV . ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ದಿ : 24.9.2021 ರಂದು ರಾಜ್ಯವ್ಯಾಪಿ ಜಿಲ್ಲಾಧಿಕಾರಿ , ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಮನವಿ ಸಲ್ಲಿಕೆ ಕಾರ್ಯಕ್ರಮ ನಡೆಯಲಿದೆ .

ರಾಘವೇಂದ್ರ ನಾಯ್ಕ , ಕಾರ್ಯಾಧ್ಯಕ್ಷರು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ( ರಿ ) ..

ಡಾ ರವಿ ಮಾಕಳಿ , ಅಧ್ಯಕ್ಷರು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕೂಟ ( 5 )

ಜಯದೇವ ನಾಯ್ಕ್ – ಗೌರವ ಅಧ್ಯಕ್ಷರು ಬಂಜಾರರ ಹಕ್ಕು ಹೋರಾಟ ಸಮಿತಿ

ಕಿರಣ್ ಕುಮಾರ್ ಕೂತ್ರಗರ ರಾಜ್ಯ ಜಂಟಿ ಕಾರ್ಯದರ್ಶಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ ( ರಿ ) ( ಕೊರಮ , ಕೊರಚ , ಕೊರವ ಸಮುದಾಯಗಳ ಒಕ್ಕೂಟ ) .

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.