
ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ . ತಮಿಳುನಾಡಿನವರು ಪ್ರತಿ ಸಾರಿಯೂ ನಮ್ಮ ನೀರನ್ನು ಕಬಳಿಸಲು ಸರ್ವ ಪ್ರಯತ್ನಪಡುತ್ತಿದ್ದಾರೆ . ನಿರ್ವಹಣಾ ಪ್ರಾಧಿಕಾರ ನಮಗೆ ಬೇಕಿರಲಿಲ್ಲ . ಕೇಂದ್ರದ ಒತ್ತಡದಿಂದ ನಿರ್ವಹಣಾ . ಪ್ರಾಧಿಕಾರ ರಚನೆಯಾಯಿತು . ನಿರ್ವಹಣಾ ಪ್ರಾಧಿಕಾರವನ್ನು ವಿರೋಧಿಸಲು ಕರ್ನಾಟಕ ಸರ್ಕಾರ ಸಂಪೂರ್ಣ ವಿಫಲವಾಯಿತು . ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡಲು ಸಾಧ್ಯವಿಲ್ಲವೆಂದು ವಾಟಾಳ್ ಹೇಳಿದರು .
“ ಮೇಕೆದಾಟು ” : – ಮೇಕೆದಾಟು ಯೋಜನೆಗೆ ತಮಿಳುನಾಡು ತೀವ್ರವಾಗಿ ವಿರೋಧಿಸುತ್ತಿರುವುದು ಖಂಡನೀಯ . ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆ ಮೇಕೆದಾಟು ಯೋಜನೆ ಆರಂಭಿಸಬಾರದೆಂದು ಹೇಳಿ ತಮಿಳುನಾಡು ತನ್ನ ಸಣ್ಣತನವನ್ನು ತೋರುತ್ತಿದ್ದಾರೆ . ಈಗ ತಮಿಳುನಾಡಿಗೆ ಕೇರಳ , ಪುದುಚೇರಿ ಬೆಂಬಲ ನೀಡುತ್ತಿರುವುದು ಸರಿಯಲ್ಲ . ಮೇಕೆದಾಟು ಕುಡಿಯುವ ನೀರಿನ ಯೋಜನೆ , ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ಅಡ್ಡಿಪಡಿಸಬಾರದು . ತಮಿಳುನಾಡು ಧೋರಣೆಯನ್ನು ಮೊದಲಿನಿಂದಲೂ ನಾವು ವಿರೋಧ ಮಾಡುತ್ತಾ ಬಂದಿದ್ದೇವೆ . ಕರ್ನಾಟಕ ಸರ್ಕಾರ ತನ್ನ ದಿಟ್ಟ ನಿಲುವನ್ನು ಪ್ರದರ್ಶಿಸಬೇಕೆಂದು ವಾಟಾಳ್ ನಾಗರಾಜ್ ತಿಳಿಸಿದರು .
ಹಿಂದಿ ಭಾಷೆ ವಿರುದ್ಧ ನಿರಂತರ ಚಳವಳಿ ನಡೆಸಲು ತೀರ್ಮಾನಿಸಿದ್ದೇವೆ . ಯಾವುದೇ ಕಾರಣಕ್ಕೂ ಹಿಂದಿ ಭಾಷೆ ಕರ್ನಾಟಕದಲ್ಲಿ ಬೇಡ , ಕನ್ನಡವೇ ಸಾರ್ವಭೌಮ , ಕನ್ನಡವೇ ರಾಷ್ಟ್ರ ಭಾಷೆ . ಯಾವುದೇ ಕೇಂದ್ರ ಕಾರ್ಯಾಲಯಗಳಲ್ಲಿ ಕರ್ನಾಟಕದಲ್ಲಿ ಹಿಂದಿ ಬೇಡ . ಬ್ಯಾಂಕುಗಳಲ್ಲಿ ವ್ಯವಹಾರ ಕನ್ನಡದಲ್ಲೇ ಇರಬೇಕು . ಬ್ಯಾಂಕಿನ ಅಧಿಕಾರಿಗಳು ಕನ್ನಡದವರೇ ಇರಬೇಕು . ಬ್ಯಾಂಕಿನ ಚೆಕ್ಕುಗಳು ಕನ್ನಡದಲ್ಲೇ ಇರಬೇಕು . ನಾವು ಈ ಬಗ್ಗೆ ತೀವ್ರವಾಗಿ ಹೋರಾಟ ಮಾಡಲು ನಿರ್ಧರಿಸಿದ್ದೇವೆಂದು ವಾಟಾಳ್ ನಾಗರಾಜ್ ತಿಳಿಸಿದರು .
ಕೇಂದ್ರ ಸರ್ಕಾರ ತೆರೆಮರೆಯಲ್ಲಿ ಹಿಂದಿ ಹೇರಲು ಹೊರಟಿದ್ದಾರೆ . ಈಗಂತೂ ಕೇಂದ್ರ ಸರ್ಕಾರ ಸಂಪೂರ್ಣ ಹಿಂದಿ ಮಯವಾಗಿದೆ . ಈ ಬಗ್ಗೆ ನಮ್ಮ ಕರ್ನಾಟಕದ ಲೋಕಸಭಾ ಸದಸ್ಯರು ಲೋಕಸಭೆಯಲ್ಲಿ ಭದ್ರವಾಗಿ ಮಾತನಾಡಬೇಕು . ನಮ್ಮ ಲೋಕಸಭಾ ಸದಸ್ಯರುಗಳು ಯಾವುದೇ ಸಮಸ್ಯೆಗಳು ಬಂದರೂ ಲೋಕಸಭೆಯಲ್ಲಿ ಮಾತನಾಡಲೇ ಇಲ್ಲ . ಕರ್ನಾಟಕದ ಸಮಸ್ಯೆಗಳು ಅಪಾರ ಇದೆ . ಹಿಂದಿ ಭಾಷೆ ಕರ್ನಾಟಕಕ್ಕೆ ಬೇಡ ಎಂಬ ಘೋಷಣೆಯನ್ನು ಲೋಕಸಭೆಯಲ್ಲಿ ನಮ್ಮ ಲೋಕಸಭಾ ಸದಸ್ಯರುಗಳು ಒಕ್ಕೊರಲಿನಿಂದ ಧ್ವನಿ ಎತ್ತ ಬೇಕು . ಕರ್ನಾಟಕದ ಗಡಿ ಭಾಗದಲ್ಲಿ ಬರಿ ಹಿಂದಿ ನಾಮಫಲಕ ಇದೆ . ಕನ್ನಡ ಇಲ್ಲವೇ ಇಲ್ಲ . ತಮಿಳುನಾಡು – ಕರ್ನಾಟಕ ಗಡಿ ಭಾಗವಾದ ಅತ್ತಿಬೆಲೆ ಹತ್ತಿರ ಸಂಪೂರ್ಣ ಹಿಂದಿ ನಾಮಫಲಕ ಇದೆ . ಇದನ್ನು ಕೂಡಲೇ ತೆಗೆಯಬೇಕು . ಇನ್ನು 15 ದಿವಸಗಳೊಳಗಾಗಿ ತೆಗೆಯದಿದ್ದರೆ ನಾವೇ ತೆಗೆಯುತ್ತೇವೆಂದು ವಾಟಾಳ್ ಎಚ್ಚರಿಸಿದರು .
City Today News
9341997936