ಆರ್ಯ ಈಡಿಗ ಸಮಾಜದ ಹಲವಾರು ಬೇಡಿಕೆಗಳಿಗೆ ರಾಜ್ಯ ಸರ್ಕಾರಕ್ಕೆ ಒತ್ತಾಯ

ಕರ್ನಾಟಕ ರಾಜ್ಯದಲ್ಲಿ 26 ಒಳಪಂಗಡ ಸೇರಿ ಸುಮಾರು 80 ಲಕ್ಷ ಇರುವ ಈಡಿಗ ಸಮಾಜ , ಈಗಿನ ಆಡಳಿತ ಸರ್ಕಾರದಲ್ಲಿ 7 ಜನ ಶಾಸಕರು ಅದರಲ್ಲಿ 2 ಪ್ರಭಾವಿ ಸಚಿವರು ಕೂಡ ಆಗಿರುತ್ತಾರೆ , ಆದರೆ ಈ ಸಮಾಜಕ್ಕೆ ಸಂವಿಧಾನಾತ್ಮಕವಾಗಿ ಹಕ್ಕುಗಳು ಈ ಸಮಾಜಕ್ಕೆ ಸಿಗಲಿಲ್ಲ .

1 , ಈ ಸಮಾಜದ ಅಭಿವೃದ್ಧಿಗಾಗಿ ಅಭಿವೃದ್ಧಿ ನಿಗಮವನ್ನು ಇಲ್ಲಿವರೆಗೂ ಮಾಡಲಿಲ್ಲ .

2. ನಮ್ಮ ಸಮಾಜದ ಕುಲ ಕಸಬನ್ನು ಸರ್ಕಾರ ನಿಲ್ಲಿಸಿದ ಮೇಲೆ ಯಾವುದು ಪರ್ಯಾಯ ವ್ಯವಸ್ಥೆಯನ್ನು ಮಾಡಲಿಲ್ಲ . ಆದರಿಂದ ಸಮಾಜ ಸಾಕಷ್ಟು ಬಡತನಕ್ಕೆ ಒಳಪಟ್ಟಿರುತ್ತಾರೆ . ನಮ್ಮ ಓದಿದ ಯುವಕರಿಗೆ ಮತ್ತು ಯುವತಿಯರಿಗೆ ಉದ್ಯೋಗ ಒದಗಲಿಲ್ಲ .

3. ಆರ್ಯ ಈಡಿಗ ಅಭಿವೃದ್ಧಿ ನಿಗಮವನ್ನು ಘೋಷಣೆ ಮಾಡುವುದಕ್ಕಾಗಿ ಮಾಜಿ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಯಡಿಯೂರಪ್ಪರವನ್ನು ಸಮಾಜದ ಪರಮ ಪೂಜ್ಯರು , ಹಿರಿಯ ಮುಖಂಡರಾದ ಮಾಜಿ ಸಚಿವರಾದ ಶ್ರೀ ಮಾಲಿಕಯ್ಯ ಗುತ್ತೇದಾರ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಚ್.ಆರ್ ಶ್ರೀನಾಥ್ ಧಣಿಗಳು 5 ಬಾರಿ ಬೇಟಿಯಾಗಿ ಅಭಿವೃದ್ಧಿ ನಿಗಮವನ್ನು ಘೋಷಣೆ ಮಾಡಿ ಎಂದು ಮನವಿ ಮಾಡಿದರು . ಮತ್ತು ಹಾಲಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿರವರನ್ನು ಹಲವಾರು ಬಾರಿ ಭೇಟಿಯಾಗಿ ಮನವಿ ಸಲ್ಲಿಸಿದರು ಸಹ ಸಮಾಜಕ್ಕೆ ಅಭಿವೃದ್ಧಿ ನಿಗಮವನ್ನು ಘೋಷಣೆ ಮಾಡಲಿಲ್ಲ . ಸಮಾಜಕ್ಕೆ ನ್ಯಾಯವನ್ನು ಒದಗಿಸಲಿಲ್ಲ .

ಸರ್ಕಾಕ್ಕೆ ಸಮಾಜದ ಬೇಡಿಕೆಗಳು

1. ಕೂಡಲೆ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಘೋಷಣೆ ಮಾಡಬೇಕು .

2. ಕುಲ ಕಸಬನ್ನು ಸರ್ಕಾರ ನಿಲ್ಲಿಸಿದ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು .

3 , ಈಚಲು ಮರ , ತಾಳಿ ಗಿಡ , ತೆಂಗಿನ ಮರ ಇರುವ ಪ್ರದೇಶಗಳಾದ ರಾಯಚೂರು , ಸಿಂದನೂರು , ಕೊಪ್ಪಳ , ಯಾದಗಿರಿ , ಮಸ್ಕಿ ಈ ಭಾಗದಲ್ಲಿ ಸೇಂದಿ ಇಳಿಸುವುದಕ್ಕೆ ಅನುಮತಿಯನ್ನು ನೀಡಬೇಕು .

4. ರಾಜ್ಯಾವಂತ 10 ಸಾವಿರ ಮನೆಯನ್ನು ನಮ್ಮ ಸಮಾಜದವರಿಗೆ ಮನೆ ಮತ್ತು ನಿವೇಷಣ ಮಾಡಬೇಕು . 5. ಒುಖವ ಸಂಸ್ಥೆಯಲ್ಲಿ ನಮ್ಮ ಯುವಕರಿಗೆ 50 % ಮೀಸಲಾತಿ ನೀಡಬೇಕು .

6. ಕರ್ನಾಟಕ ರಾಜ್ಯದಲ್ಲಿ ಈಚಲು ವನ , ಸೇಂದಿ ವನ ಮತ್ತು ಈಚಲು ಪ್ರದೇಶಗಳನ್ನು ಪಾಣಿಯಲ್ಲಿರುವ ಪ್ರದೇಶಗಳನ್ನು ಮರಳಿ ನಮ್ಮ ಸಮಾಜಕ್ಕೆ ನೀಡಿ ನಮ್ಮ ಬಡವರ ಜನಕ್ಕೆ ಕೃಷಿಯನ್ನು ಮಾಡಿ ಬದುಕುವುದಕ್ಕೆ ಅವಕಾಶವನ್ನು ನೀಡಬೇಕು .

ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಆರ್ಯ ಈಡಿಗ ರಾಷ್ಟ್ರೀಯ ಮಂಡಳಿಯ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ .

– ಶ್ರೀ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿ, ಶ್ರೀ ಶರಣ ಬಸವೇಶ್ವರ ಮಠ, ಅರೆಮಲ್ಲಾಪುರು ರಾಣಿಬೆನ್ನೂರು ತಾಲೂಕು, ಆರ್ಯ ಈಡಿಗ ರಾಷ್ಟ್ರೀಯ ಮಹಾ ಮಂಡಳಿ ಅಧ್ಯಷ್ಟರು

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.