
ನಿಕ್ಟೂನ್ಸ್- ಬೆಂಗಳೂರಿನಲ್ಲಿ ಮಕ್ಕಳೊಂದಿಗೆ ಹಾಡಿ ಕುಣಿದ ಚಿಕೂ ಔರ್ ಬಂಟಿ
ರಾಷ್ಟ್ರೀಯ, ಅಕ್ಟೋಬರ್ 21, 2021: ಯಾವ ಕುಟುಂಬದಲ್ಲಿ ಸೋದರರು ಪರಸ್ಪರ ಜಗಳವಾಡುವುದಿಲ್ಲ ಮತ್ತು ಪರಸ್ಪರ ಹೊಡೆದಾಟದ ವಿನೋದ ಇರುವುದಿಲ್ಲ? ಸೋದರರ ಸಿಹಿ ಮತ್ತು ಕಹಿಯ ಈ ಬಾಂಧವ್ಯವನ್ನು ಅನುಸರಿಸಲು ನಿಕಲೊಡಿಯೊನ್ ತನ್ನ ಅನಿಮೇಟೆಡ್ ಶೋ ಚಿಕೂ ಔರ್ ಬಂಟಿ ಪ್ರಾರಂಭಿಸಿದೆ. ಈ ಹೊಚ್ಚಹೊಸ ಸೋದರರು ಇಂದು ನಮ್ಮದೇ ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ಮಕ್ಕಳನ್ನು ಭೇಟಿ ಮಾಡಿ ಅವರೊಂದಿಗೆ ಆನಂದಿಸಿದರು. ಪುಟ್ಟ ಮಕ್ಕಳು ಅವರ ಜೀವಿತಾವಧಿಯ ವಿಶೇಷ ಅನುಭವವನ್ನು ಆನಂದಿಸಿದರು, ಚಿಕೂ ಔರ್ ಬಂಟಿಯೊಂದಿಗೆ ಜಗಳದ ಆಟ ಆಡಿದರು. ಈ ಇಬ್ಬರೂ ಸೋದರರು ಕಿರಿಯ ಅಭಿಮಾನಿಗಳನ್ನು ರಂಜಿಸಿದರು ಅಲ್ಲದೆ ಅವರು ಗೇಮ್ಸ್ ಆಡಿ ಟೈಟಲ್ ಟ್ರಾಕ್ನ ಟ್ಯೂನ್ ಗಳಿಗೆ ನೃತ್ಯ ಮಾಡಿದರು. ಚಿಕೂ ಔರ್ ಬಂಟಿ ನಂತರ ಪ್ರೆಸ್ ಕ್ಲಬ್ನಲ್ಲಿನ ಪತ್ರಕರ್ತರನ್ನು ವಿನೋದಮಯ ಚಟುವಟಿಕೆಗಳು ಮತ್ತು ಗೇಮ್ಸ್ ಮೂಲಕ ರಂಜಿಸಲು ಮುನ್ನಡೆದರು.

ಈ ಅದ್ಭುತ ಸಂಜೆಯು ಓರಿಯನ್ ಮಾಲ್ನಲ್ಲಿ ಮಕ್ಕಳೊಂದಿಗೆ ಟೂನ್ಸ್ ಸೇರಿ ಸಂಭ್ರಮಿಸುವುದರೊಂದಿಗೆ ಮತ್ತು ಡಿಐವೈ ಚಟುವಟಿಕೆಗಳಲ್ಲಿ ಭಾಗವಹಿಸುವುದರೊಂದಿಗೆ ಸಮಾರೋಪಗೊಂಡಿತು.
ಮಧ್ಯಮ ವರ್ಗದ ಮನೆಯಲ್ಲಿ ನಡೆಯುವ ಚಿಕೂ ಔರ್ ಬಂಟಿ ಪ್ರತಿ ಕುಟುಂಬದಲ್ಲೂ ನಡೆಯುವ ಸೋದರರ ನಡುವೆ ನಡೆಯುವ ಹಾಸ್ಯವನ್ನು ತರುತ್ತದೆ ಮತ್ತು ಇದು ಸರಿಸಾಟಿ ಇರದ ಹಾಸ್ಯ ಮತ್ತು ಘರ್ಷಣೆಯ ಸನ್ನಿವೇಶಗಳನ್ನು ತರಲಿದ್ದು ಅಕ್ಟೋಬರ್ 2021ರಲ್ಲಿ ಬೆಳಿಗ್ಗೆ 10ಕ್ಕೆ ನಿಕಲೊಡಿಯೊನ್ನಲ್ಲಿ ಮಾತ್ರ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದ ಸಂಗೀತದ ವಿಡಿಯೋಗೆ ಸಾಹಿತ್ಯವನ್ನು ಗುಲ್ಜಾರ್ ಬರೆದಿದ್ದಾರೆ.
ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ನಿಕಲೊಡಿಯೊನ್ ಸತತವಾಗಿ ಯುವ ವೀಕ್ಷಕರ ಗ್ರಹಿಕೆ ಮತ್ತು ವಿಸ್ತರಿಸುತ್ತಿರುವ ಆದ್ಯತೆಗಳಿಗೆ ಪೂರೈಸಲು ಆವಿಷ್ಕಾರವನ್ನು ವಿಸ್ತರಿಸಿದೆ. `ಚಿಕೂ ಔರ್ ಬಂಟಿ’ ತನ್ನ ಆಸಕ್ತಿದಾಯಕ ಕಂಟೆಂಟ್ನಿಂದ ಮತ್ತೊಂದು ಸೇರ್ಪಡೆಯಾಗಿದೆ ಮತ್ತು ಮಕ್ಕಳ ಹೃದಯಗಳು ಮತ್ತು ಮನಸ್ಸುಗಳನ್ನು ಖಂಡಿತ ಸೆರೆ ಹಿಡಿಯಲಿದೆ ಮತ್ತು ಅವರೊಂದಿಗೆ ಅಂತ್ಯವಿರದ ಬಾಂಧವ್ಯ ನಿರ್ಮಿಸಲಿದೆ.
City Today News
9341997936