
KAS / PSI / FDA / SDA ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಯುವಕ ಯುವತಿಯರಿಗೆ 20 ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನ ಯೋಜನೆ
ಬೆಂಗಳೂರಿನ ವಿಜಯನಗರದಲ್ಲಿರುವ ನಮ್ಮ ಉಜ್ವಲ ಅಕಾಡೆಮಿ ಸಂಸ್ಥೆಯು ಕಳೆದ 5 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಾವಿರಾರು ಯುವಕ ಯುವತಿಯರನ್ನು ತರಬೇತಿಗೊಳಿಸುತ್ತಾ ಬಂದಿದೆ . ಈ 5 ವರ್ಷಗಳ ಅವಧಿಯಲ್ಲಿ ನಮ್ಮ ಸಂಸ್ಥೆಯ ಸುಮಾರು 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗ ಪಡೆದಿದ್ದಾರೆ . ಸಾಮಾಜಿಕ ಕಳಕಳಿಯಿಂದ ಪ್ರತಿವರ್ಷ 50 ಜನ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಿದ್ದೇವೆ . ಈ ಬಾರಿ ನಾವು ಅತಿ ಕಡಿಮೆ ಅವಧಿಯಲ್ಲಿ ಮಿಲಿಯನ್ ಚಂದಾದಾರರನ್ನು ಪಡೆದ ಮೊದಲ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಸಂಬಂಧಿಸಿದ ಯುಟ್ಯೂಬ್ ಚಾನಲ್ ಎನ್ನುವ ಹೆಗ್ಗಳಿಕೆ ಪಾತ್ರವಾದ ಸಾಧನ ಅಕಾಡೆಮಿ , ಶಿಕಾರಿಪುರ ಶಿವಮೊಗ್ಗ ಜಿಲ್ಲೆ ಇವರ ಜೊತೆ ಸೇರಿ KAS / FDA / SDA / PSI ಪರೀಕ್ಷೆಗೆ ತಯಾರಿ ನಡೆಸುವ ಆಸಕ್ತ ಅರ್ಹ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ 20 ಲಕ್ಷ ರೂಪಾಯಿ ಮೊತ್ತದ 120 ಜನ ವಿದ್ಯಾರ್ಥಿಗಳಿಗೆ ) ವಿದ್ಯಾರ್ಥಿ ವೇತನ ಯೋಜನೆ ಜಾರಿಗೆ ತರಲು ಮುಂದಾಗಿದ್ದೇವೆ . ಅರ್ಹ ಪ್ರತಿಭಾವಂತರನ್ನು 31/10/21 ರಂದು ಭಾನುವಾರ 11 ಗಂಟೆಯಿಂದ I ಗಂಟೆಯ ವರೆಗೆ ಆನ್‌ಲೈನ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ . ಆನ್‌ಲೈನ್ ಪರೀಕ್ಷೆಯು ಸಾಧನ ಅಕಾಡೆಮಿ ಮೊಬೈಲ್ ಆಪ್‌ನಲ್ಲಿ ನಡೆಯಲಿದೆ .
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ : ಉಜ್ವಲ ಅಕಾಡೆಮಿ , ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಹತ್ತಿರ , ಆರ್.ಪಿ.ಸಿ ಲೇ ಔಟ್ ಬೆಂಗಳೂರು , ಮೊ : 7795959079 , 8884334488
– ಮಂಜುನಾಥ ಕೆ.ಯು
ನಿರ್ದೇಶಕರು
City Today News
9341997936