” SAPTHAK ” ‘ಸಪ್ತಕ’ದ 15 ನೇ ವಾರ್ಷಿಕೋತ್ಸವ ಸಂಭ್ರಮ ಸತತ ಮೂರು ಭಾನುವಾರಗಳಂದು ಸಂಗೀತ ಮೆರವಣಿಗೆ

ಶುದ್ಧ ಶಾಸ್ತ್ರೀಯ ಸಂಗೀತ ಹಾಗೂ ಸಾಂಸ್ಕೃತಿಕ ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ನಗರದ ‘ ಸಪ್ತಕ ‘ ಸಂಸ್ಥೆಯು ತನ್ನ 15 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೆಲವು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ . ಸುಮಾರು ಒಂದೂವರೆ ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಕೊರೋನಾ ಕಾರಣದಿಂದಾಗಿ ಸ್ತಬ್ಧವಾಗಿದ್ದ ಸಮೂಹದಲ್ಲಿ ಕಲೆತು ಬೆರೆತು ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು ಇದೀಗ ಮರುಚಾಲನೆ ಪಡೆಯುತ್ತಿರುವುದು ಖುಷಿಯ ವಿಷಯವಾಗಿದೆ . ಇದೇ ಸಂದರ್ಭದಲ್ಲಿ , ಸತತವಾಗಿ ಮೂರು ಭಾನುವಾರಗಳಂದು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ .

ಇದೇ ಅಕ್ಟೋಬರ್ 31 , ನವೆಂಬರ್ 1 ಮತ್ತು ನವೆಂಬರ್ 14 ರಂದು ಇವುಗೆ ನಡೆಯಲಿವೆ . ಮೊದಲಿಗೆ , 31-10-2021ರ ಸಂಜೆ ನಡೆಯುವ ‘ ಸಂಗೀತ ಸಂಭ್ರಮ’ದಲ್ಲಿ ‘ ಸಪ್ತಕ’ದ ಸ್ಥಾಪಕರು ಹಾಗೂ ಸಾರಥಿಯೂ ಆದ ಜಿ.ಎಸ್.ಹೆಗಡೆ ಅವರು ಕೊರೋನಾ ಸಂಕಷ್ಟ ಕಾಲದಲ್ಲಿ ತಮ್ಮ ನೆನಪಿನ ಸುರುಳಿಯಿಂದ ಬಿಚ್ಚಿದ ಅಕ್ಷರ ಸರಮಾಲೆಯಾದ ‘ ಜೀವನ ಪಥ- ನೆನಪಿನ ರಥ ‘ ಪುಸ್ತಕ ಹೊರಬರುತ್ತಿದೆ . ಆ ದಿನ ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹೆಸರಾಂತ ಕಿರುತೆರೆ ನಿರ್ದೇಶಕರು ಹಾಗೂ ಲೇಖಕರಾದ ಟಿ.ಎನ್.ಸೀತಾರಾಂ ಅವರು ಈ ಪುಸ್ತಕದ ಲೋಕಾರ್ಪಣೆ ನೆರವೇರಿಸಲಿದ್ದಾರೆ . ಮಲ್ಲೇಶ್ವರಂ ಕ್ಷೇತ್ರದ ಶಾಸಕರು ಹಾಗೂ ಉನ್ನತ ಶಿಕ್ಷಣ ಮಂತ್ರಿಯವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು . ಶ್ರೀ ಮಹಾಬಲೇಶ್ವರ ಎಂ.ಎಸ್ . ಎಂ.ಡಿ & ಸಿ.ಇ.ಒ. ಕರ್ನಾಟಕ ಬ್ಯಾಂಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು . ಇದೇ ದಿನ , ಪಂಡಿತ ಪ್ರವೀಣ ಗೋಡಖಿಂಡಿ ಅವರ ಕೊಳಲು ಮತ್ತು ಪಂಡಿತ ಜಯತೀರ್ಥ ಮೇವುಂಡಿ ಅವರ ಗಾಯನದ ‘ ಜುಗಲ್‌ಬಂದಿಯೂ ನಡೆಯಲಿದೆ

ಎರಡನೆಯದಾಗಿ , 07-11-2021ರಂದು ಮಲ್ಲೇಶ್ವರದ ಹವ್ಯಕ ಸಭಾಭವನದಲ್ಲಿ ‘ ಸುಶ್ರಾವ್ಯ ಸಂಜೆ ನಡೆಯುತ್ತದೆ . ಮುಂಬೈನಲ್ಲಿರುವ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಹಿಂದೂಸ್ತಾನಿ ಗಾಯಕ ಧನಂಜಯ ಹೆಗಡೆ ಅವರು ಸಂಗೀತ ಕಾರ್ಯಕ್ರಮದಲ್ಲಿ ( ಸಂಜೆ 4 : 00 ಕ್ಕೆ ಆರಂಭ ) ಶೋತೃಗಳನ್ನು ರಂಜಿಸಲಿದ್ದಾರೆ . ವಿಧಾನಸಭಾಧ್ಯಕ್ಷರಾದ ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಈ ಕಾರ್ಯಕ್ರಮದಲ್ಲಿ ಬೆಳಗಾವಿಯ ಹಿರಿಯ ಪತ್ರಕರ್ತರಾದ ಲಕ್ಷ್ಮೀನಾರಾಯಣ ಶಂಭು ಶಾಸ್ತ್ರಿ ಮತ್ತು ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ಟ ಅವರನ್ನು ಸನ್ಮಾನಿಸಲಾಗುತ್ತದೆ . ಇದೇ ವೇಳೆ , ತಾಳ – ಮದ್ದಳೆ ಸುಧನ್ವ ಮೋಕ್ಷವನ್ನು ಕೂಡ ಆಯೋಜಿಸಲಾಗಿದೆ . ದಂತಳಿಗೆ ಅನಂತ ಹೆಗಡೆ ಅವರ ಭಾಗವತಿಕೆ , ನಂತ ಪದ್ಮನಾಭ ಪಾಠಕ್ , ಮಣೆ ಅವರ ಮದ್ದಳೆಯೊಂದಿಗೆ ಇನ್ನಿತರ ಪ್ರಸಿದ್ಧ ಯುವ ಅರ್ಥಧಾರಿಗಳು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ . ಮೂರನೆಯದಾಗಿ , 14-1-2021ರಂದು ಮಲ್ಲೇಶ್ವರದ ಕೆನರಾ ಯೂನಿಯನ್‌ನಲ್ಲಿ ನಡೆಯುವ ‘ ಸ್ವರ ಸಂಜೆ’ಯಲ್ಲಿ ಹಾನಬಿ ಕಾರ್ತಿಕ್ ಹೆಗಡೆ ಅವರ ಗಾಯನ ಮತ್ತು ಪಂ.ರವೀಂದ್ರ ಯಾವಗಲ್ ಹಾಗೂ ವಿದ್ವಾನ್ ಆನೂರ ಅನಂತಕೃಷ್ಣ ಶರ್ಮ ಅವರ ‘ ತಬಲಾ – ಮೃದಂಗ ಜುಗಲ್‌ಬಂದಿ ‘ ಇರುತ್ತದೆ . ಕಾರ್ಯಕ್ರಮದ ಭಾಗವಾಗಿ ಪಂ.ರವೀಂದ್ರ ಯಾವಗಲ್ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಶ್ರೀ ಎಸ್.ರಂಗಪ್ಪ ಅವರು ‘ ಸಪ್ತಕ’ದ ಪರವಾಗಿ ಸನ್ಮಾನಿಸಲಿದ್ದಾರೆ . ಈ ಮೂರೂ ಕಾರ್ಯಕ್ರಮಗಳಿಗೆ ಪ್ರವೇಶ ಉಚಿತವಾಗಿದ್ದು , ಯಾವುದೇ ಟಿಕೆಟ್ ಆಗಲೀ , ಪ್ರವೇಶ ಧನವಾಗಲೀ ಇರುವುದಿಲ್ಲ .

ಗಮನಿಸಿ : ಈ ಮೂರೂ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಆಹ್ವಾನ ಪತ್ರಿಕೆಗಳನ್ನು ಇದರೊಂದಿಗೆ ಲಗತ್ತಿಸಲಾಗಿದ್ದು , ಅದರಲ್ಲಿ ಇನ್ನಷ್ಟು ವಿವರಗಳಿವೆ . ಬೇರೆ ಏನಾದರೂ ಮಾಹಿತಿಗೆ ಸಂಪರ್ಕಿಸಿ : ಜಿ.ಎಸ್.ಹೆಗಡೆ , 70194 34922 ಅಥವಾ 95355 11888

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.