ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆಯ ಬೆಂಗಳೂರು ಘಟಕದ ಪೂರ್ವಾಧ್ಯಕ್ಷರುಗಳ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮ

ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆಯ ಬೆಂಗಳೂರು ಘಟಕವು , ಸಂಸ್ಥೆಯ ಪೂರ್ವಾಧ್ಯಕ್ಷರುಗಳ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾದ ಸಿಎಂಎ , ಶ್ರೀ ರಾಜು ಪಿ : ಅಯ್ಯರ್ ಅವರು ಬೆಂಗಳೂರು ಪ್ರೆಸ್ ಕ್ಲಬ್ ಆಶ್ರಯದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಸಂಸ್ಥೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದರು .

ದಿ ಇನ್ಸಿಟ್ಯೂಟ್ ಆಫ್ ಕಾಸ್ಟ್ ಅಕೌಂಟಿಂಟ್ಸ್ ಆಫ್ ಇಂಡಿಯಾ ( ಭಾರತೀಯ ವೆಚ್ಚ ಲೆಕ್ಕಿಗರ ಸಂಖ್ಯೆ ) ( ಮೊದಲು ದಿ ಇನ್ಸಿಟ್ಯೂಟ್ ಆಫ್ ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟೆಂಟ್ ಆಫ್ ಇಂಡಿಯಾ ವು ವೆಚ್ಚ ಮತ್ತು ನಿರ್ವಹಣಾ ಲೆಖ್ಯ ಶಾಸ್ತ್ರದ ನಿಯಂತ್ರಣಕ್ಕಾಗಿ ಸಂಸತ್ತಿನ ವಿಶೇಷ ಕಾಯಿದ ಕಾಸ್ ಅಂಡ್ ವರ್ಕ್ ಅಕೌಂಟೆಂಟ್ ಕಾಯಿದೆ ೧೯೪೯ ರ ಮೂಲಕ ಸ್ಥಾಪಿತವಾಯಿತು . ಈ ಸಂಸ್ಥೆಯು ಕೇಂದ್ರ ಸರ್ಕಾರದ ಕಂಪನಿ ವ್ಯವಹಾರ ಸಚಿವಾಲಯದ ಆಡಳಿತ ನಿಯಂತ್ರಣಕ್ಕೊಳಪಟ್ಟಿದೆ . ಸಂಸ್ಥೆಯು ಕೋಲ್ಕತಾದಲ್ಲಿ ತನ್ನ ಮುಖ್ಯ ಕಛೇರಿಯನ್ನು ಹೊಂದಿದ್ದು , ನವದೆಹಲಿ , ಕೊಲ್ಕತ್ತಾ , ಮುಂಬಯಿ ಮತ್ತು ಚೆನ್ನೈ ಗಳಲ್ಲಿ ಪ್ರಾಂತೀಯ ಮಂಡಳಿಯ ಕಛೇರಿಗಳನ್ನು ಹೊಂದಿದೆ . ಇದು ಸುಮಾರು ೫ ಲಕ್ಷ ವಿದ್ಯಾರ್ಥಿಗಳು ಮತ್ತು ೮ ಸಾವಿರ ಸದಸ್ಯರನ್ನು ಹೊಂದಿದ್ದು , ವಿಶ್ವದಲ್ಲಿ ಎರಡನೆಯ ಅತಿ ದೊಡ್ಡ ಮತ್ತು ಏಷಿಯಾದಲ್ಲಿ ಅತಿ ದೊಡ್ಡ ಸಂಸ್ಥೆಯಾಗಿದೆ . ಈ ಸಂಸ್ಮಯಿಂದ ಉತ್ತೀರ್ಣರಾದ ವೃತ್ತಿಪರ ವ್ಯಕ್ತಿಗಳು ವಿಶ್ವದಾದ್ಯಂತ ಸೇವೆಯನ್ನು ಸಲ್ಲಿಸುತ್ತಿದ್ದಾರ . ಸಂಸ್ಥೆಯು , ಅಂತಾರಾಷ್ಟ್ರೀಯ ಲೆಕ್ಕಲಿಗರ ಒಕ್ಕೂಟ ( IFAC ) , ಏಷಿಯಾ – ಪೆಸಿಫಿಕ್ ಲಕ್ಕಲಿಗರ ಒಕ್ಕೂಟ ( CAPA ) , ದಕ್ಷಿಣ ಏಷಿಯಾ ಲೆಕ್ಕಲಿಗರ ಒಕ್ಕೂಟಗಳ ಸ್ಥಾಪಕ ಸದಸ್ಯ . ಇದು ಬ್ರಿಟನ್ ನಲ್ಲಿರುವ ಅಂತಾರಾಷ್ಟ್ರೀಯ ಮೌಲ್ಯಮಾಪನ ಮಾನದಂಡಗಳ ಮಂಡಳಿ ( IVSC ) ಯ ಸದಸ್ಯ ಸಂಸ್ಥೆಯಾಗಿದ್ದು , ಅಂತಾರಾಷ್ಟ್ರೀಯ ಸಂಯೋಜಿತ ವರದಿ ಮಂಡ ಳಿ ( IIRC ) ಯಲ್ಲಿ ತನ್ನ ಪುತಿನಿಧಿಯನ್ನು ಹೊಂದಿದೆ . ಕೋವಿಡ್ -೧೯ ಸಾಂಕ್ರಾಮಿಕ ಸಮಯದಲ್ಲಿ ಉದ್ಯಮಗಳ ಉನ್ನತ ಮಂಡಳಿಯು ಉದ್ಯಮದ ರೂಪಿಸಲು ಉಸ್ತುವಾಚಾರಿ , ಮೌಲ್ಯಮಾಪನ ಮತ್ತು ನಿರಂತರತೆಯ ಯೋಜನೆಗಳನ್ನು ಸಹಾಯಕವಾಗುವ ” ಮಂಡಳಿಯ ವರದಿಯ ಪರಿಕಲ್ಪನೆಯ ವಿಧಾನಗಳ ಚೌಕಟ್ಟು = ಕೋವಿಡ್ -೧೯ ರ ಪೂರ್ವೋತ್ತರ ಸಾಂಸ್ಮಿಕ ಆಡಳಿತ ದೃಷ್ಟಿಕೋನ ” ಮತ್ತು ” ಕೋವಿಡ್ -೧೯ ಪೂರ್ವೋತ್ತರ ಮತ್ತು ಮುಚ್ಚುವಿಕೆ – ತಾಂತ್ರಿಕ ಮಾರ್ಗದರ್ಶಿ ಮತ್ತು ಉದ್ಯಮ ನಿರಂತರತೆಯ ಯೋಜನ ” ಎಂಬ ಎರಡು ಬಹುಮುಖ್ಯ ದಾಖಲೆಗಳನ್ನು ಅಭಿವೃದ್ಧಿಪಡಿಸಿದೆ . ಪುಸ್ತುತ , ಸಂಸ್ಥೆಯು ಪ್ರಧಾನಮಂತ್ರಿಯವರ ” ಆತ್ಮ ನಿರ್ಭರ ಯೋಜನೆ ” ಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ವೆಚ್ಚ ನಿರ್ವಹಣೆ , ನಿಯಂತ್ರಣ , ನಿರ್ಯಾತ ಮಾರುಕಟ್ಟೆ , ಉದ್ಯೋಗ ಸೃಷ್ಟಿ , ದೇಶೀಯ ಉತ್ಪಾದನೆ ಮುಂತಾದ ಕ್ಷೇತ್ರಗಳಲ್ಲಿ ಬೆಂಬಲನೀಡುತ್ತಿದೆ . ಸಂಸ್ಥೆಯು , ಉದ್ಯೋಗಿಗಳ ಕೌಶಲ್ಯಾಭಿವೃದ್ಧಿ , ವೆಚ್ಚ ನಿರ್ವಹಣೆ , ಉದ್ಯಮಗಳ ಯಶಸ್ಸಿಗೆ ಬೇಕಾದ ವ್ಯಸ್ಥೆಗಳನ್ನು ಅನೇಕ ಉದ್ಯಮ ಸಂಸ್ಥೆಗಳಲ್ಲಿ ಸ್ಥಾಪಿಸಿದ , ಸಂಸ್ಥೆಯ ಸದಸ್ಯರು ಕೃತಕ ಬುದ್ಧಿಮತ್ತೆ , ವಿಮರ್ಶಾ ಕೌಶಲ್ಯ , ಮುಂತಾದ ಮಾಹಿತಿ ತಂತ್ರಜ್ಞಾನ ಉಪಕರಣಗಳನ್ನು ಅನೇಕ ಉದ್ಯಮ ಸಂಸ್ಥೆಗಳಲ್ಲಿ ಅಭಿವೃದ್ಧಿಗೊಳಿಸಲು ನೆರವಾಗುತ್ತಿದ್ದಾರೆ . ಭಾರತವು ತನ್ನ ೭೫ ನಯ ವರ್ಷದ ಸ್ವಾತಂತ್ರದ ಅಮೃತವರ್ಷಾಚರಣೆಯ ಸಂಭ್ರಮದ

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯು , ದೇಶದ ವಿವಿಧೆಡೆ ಇರುವ ತನ್ನ ಘಟಕಗಳ ಮೂಲಕ ಹಲವು  ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಶ್ರೀ ರಾಜು ಅಯ್ಯರ್ ಅವರು ತಿಳಿಸಿದರು . ಅವರೊಡನೆ , ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಸಿಎಂಎ ವಿಜೇಂದರ್ ಶರ್ಮ , ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿಯ ಉಪಾಧ್ಯಕ್ಷರಾದ ಸಿಎಂಎ ವಿಶ್ವನಾಥ ಭಟ್ ಮತ್ತು ಸಂಸ್ಥೆಯ ಬೆಂಗಳೂರು ಘಟಕದ ಅಧ್ಯಕ್ಷರಾದ ಸಿಎಂಎ ಎಚ್ . ಏನ್ . ಕುಮಾರ್ ಅವರು ಉಪಸ್ಥಿತರಿದ್ದರು .

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.