ಕರ್ನಾಟಕ ರಾಜ್ಯ ಎಡ ಬಲ ಸಮುದಾಯಗಳ ಸಮನ್ವಯ ಸಮಿತಿಯ ಧೈಯೋದ್ದೇಶಗಳು

ಕರ್ನಾಟಕ ರಾಜ್ಯ ಎಡ ಬಲ ಸಮುದಾಯಗಳ ಸಮನ್ವಯ ಸಮಿತಿ ( ರಾಜ್ಯ ಸಮಿತಿ ) ಯನ್ನು ನೂತನವಾಗಿ ರಚಿಸಿದ್ದು , ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಮಿತಿಯ ವತಿಯಿಂದ ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾ ಗೋಷ್ಠಿ .

ನಮ್ಮ ರಾಜ್ಯ ಸಮಿತಿಯ ಧೈಯೋದ್ದೇಶಗಳು ಈ ಕೆಳಕಂಡಂತೆ ಇರುತ್ತವೆ . 1 ) ಎರಡು ಸಮುದಾಯಗಳ ಒಗ್ಗೂಡುಸುವಿಕೆ . 2 ) ಎಡ – ಬಲ ಸಮುದಾಯಗಳ ಜನಾಂಗಕ್ಕೆ ಶವ – ಸಂಸ್ಕಾರ ಮಾಡಲು ಪ್ರತ್ಯೇಕ ಸ್ಮಶಾನಕ್ಕಾಗಿ ಭೂಮಿ ಇರುವುದಿಲ್ಲ . 3 ) ಸಂವಿಧಾನ ರಕ್ಷಣೆ ಮತ್ತು ಆಶಯಗಳ ಈಡೇರಿಕೆಗೆ ಒತ್ತಾಯ . 4 ) ಡಾ || ಬಾಬಾ ಸಾಹೇಬ್ ಬಿ.ಆರ್ . ಅಂಬೇಡ್ಕರ್ ರವರ ವಿಚಾರ ಧಾರೆಗಳನ್ನು ಪ್ರಚಾರ ಪಡಿಸುವುದು . 5 ) ಸಂವಿಧಾನದ ಆಶಯಗಳ ಪ್ರಕಾರ ನಿಜವಾದ ಅಸ್ಪೃಶ್ಯ ಜನಾಂಗ ಎಡ – ಬಲ ಸಮುದಾಯಗಳೇ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡುವುದು . 6 ) ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಎರಡು ಸಮುದಾಯಗಳ ಮೇಲೆ ನಿರಂತರ ದೌರ್ಜನ್ಯ , ಶೋಷಣೆ , ಜಾತಿ ನಿಂದನೆ , ಅಸ್ಪೃಶ್ಯತೆ , ಆಚರಣೆಗಳ ವಿರುದ್ಧ ಕಠಿಣ ಕಾನೂನು ಜರುಗಿಸುವಂತೆ ಒತ್ತಾಯಿಸುವುದು .

7 ) ಬುದ್ಧ , ಬಸವ , ಹಾಗೂ ಅಂಬೇಡ್ಕರವರ ಬೃಹತ್ ಮತ್ಥಳಿ ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆಗೆ ಒತ್ತಾಯ . 8 ) ರಾಜ್ಯದಲ್ಲಿ ಎರಡು ಸಮುದಾಯಗಳನ್ನು ಒಗ್ಗೂಡಿಸಿ ರಾಜಕೀಯ , ಶೈಕ್ಷಣಿಕ , ಸರ್ಕಾರಿ ನೌಕರರ ಮೇಲೆ ತಾರತಮ್ಯ ಎಸೆಗುತ್ತಿರುವುದರ ಬಗ್ಗೆ ಜಾಗೃತಿ ಮೂಡಿಸುವುದು . 9 ) ರಾಜ್ಯಾದ್ಯಂತ ಚುನಾವಣೆ ಬಗ್ಗೆ ಅರಿವು ಮೂಡಿಸಿ ಎರಡು ಸಮುದಾಯಗಳಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು . 10 ) ಸಂವಿಧಾನ ಹಕ್ಕುಗಳು , ಸಂರಕ್ಷಣೆ , ಕಾನೂನುಗಳ ಬಗ್ಗೆ ಜಿಲ್ಲಾ , ತಾಲ್ಲೂಕು ಮಟ್ಟಗಳಲ್ಲಿ ಶಿಬಿರ ಮತ್ತು ವಿಚಾರ ಸಂಕೀರ್ಣಗಳನ್ನು ಏರ್ಪಡಿಸುವುದು . 11 ) ರಾಜಕೀಯ ಕ್ಷೇತ್ರದಲ್ಲಿ ಎರಡು ಸಮುದಾಯಗಳಿಗೆ ಪ್ರಮುಖ ಹಾಗೂ ಉನ್ನತ ಹುದ್ದೆ ದೊರಕಿಸಿಕೊಡಲು ಹೋರಾಟ ನಡೆಸುವುದು . ಇನ್ನು ಮುಂದುವರೆದಂತೆ ಎಲ್ಲಾ ವರ್ಗದ ಶೋಷಿತ ಜನಾಂಗದ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುವುದು ನಮ್ಮ ಸಮಿತಿಯ ಧೈಯೋದ್ದೇಶವಾಗಿರುತ್ತದೆ .

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.