
20 ವರ್ಷಗಳ ಹೋರಾಟದ ಫಲವಾಗಿ ಕಳೆದ 8 ವರ್ಷಗಳ ಹಿಂದೆ ರಾಜ್ಯ ಸರ್ಕಾರವು ವಿಶ್ವಕರ್ಮ ಸಮಾಜದಲ್ಲಿನ ಪಂಚ ಕಸುಬುಗಳನ್ನು ಮಾಡುವ ಬಡವರ ಅಭಿವೃದ್ಧಿಗಾಗಿ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿರುವುದು ತಮ್ಮೆಲ್ಲರಿಗೂ ತಿಳಿದಿರುವ ವಿಷಯವಾಗಿದೆ . ಪ್ರಸ್ತುತ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಬಾಬು ಪತ್ತಾರ ರವರು ಬೇಲಿ ಎದ್ದು ಹೊಲ ಮಲ್ದಂತೆ ಅಲ್ಪ ಅನುದಾನವಿರುವ ಅಭಿವೃದ್ಧಿ ನಿಗಮದ ಹಣವನ್ನು ವಿಧ – ವಿಧವಾಗಿ ಲೂಟಿ ಹೊಡೆಯತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ .

ಬಾಬು ಪತ್ತಾರ ರವರು ವಿಶ್ವಕರ್ಮ ಅಭಿವೃದ್ಧಿ ನಿಗಮದಲ್ಲಿರುವ ಅಧಿಕಾರಿಗಳ ಮೇಲೆ ಒತ್ತಡ ಹೇರಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಆಪ್ತ ಶಾಖೆಗೆ ಆಪ್ತ ಕಾರ್ಯದರ್ಶಿಯಾಗಿ ಚಂದ್ರಶೇಖರ ಎಂಬುವವರನ್ನು ದಿ : 30-06-2021 ರಂದು ಮತ್ತು ದಲಾಯತ್ತಾಗಿ ಉಮಾ ಎಂಬುವವರನ್ನು ನೇಮಿಸಿಕೊಳ್ಳಲು ದಿ : 19-07 2021 ರಂದು ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಇಬ್ಬರನ್ನು ಸಹ 25-11-2020ರ ದಿನಾಂಕಕ್ಕೆ ಅನ್ವಯವಾಗುವಂತೆ ನೇಮಕ ಮಾಡಿಕೊಳ್ಳಲು ಆದೇಶ ಮಾಡಿರುತ್ತಾರೆ . ಈ ಆದೇಶಕ್ಕೆ ತಕ್ಕಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆಪ್ತ ಕಾರ್ಯದರ್ಶಿ ಚಂದ್ರಶೇಖರ್ ರವರಿಗೆ ತಿಂಗಳ ರೂ . 21,000 / – ದಂತೆ ಎ : 23-07-202 ನೇ ರಂದು 1,93,000 / ಹಣವನ್ನು ಸಂಬಳವಾಗಿ ಅಕ್ರಮವಾಗಿ ನೀಡಿರುತ್ತಾರೆ , ಹಾಗೂ ದಲಾಯತ್ ಉಮಾ ಎಂಬುವವರಿಗೆ ಬ : 13-08-2021ಕ್ಕೆ ರೂ 1.13,800 / -ಗಳನ್ನು ಒಂದೇ ಸಲ ಅಕ್ರಮವಾಗಿ ಇಬ್ಬರಿಗೂ ನೀಡಿರುತ್ತಾರೆ . ಈ ಇಬ್ಬರಿಗೂ ಈ ಹಣವು ಬ್ಯಾಂಕ್ ಖಾತೆಗೆ ಹೋಗಿರುತ್ತದೆ . ಆದರೆ ಆಪ್ತ ಕಾರ್ಯದರ್ಶಿ ಚಂದ್ರಶೇಖರ್ ಎಂಬುವವರು ತಿಂಗಳಿನಿಂದ ಕೆಲಸಕ್ಕೆ ಹಾಜರಾಗಿರುವುದು ಜಗತ್ ಜಾಹಿರಾದ ವಿಚಾರ ಚಂದ್ರಶೇಖರ್ ರವರು ಬಾಬು ಪತ್ತಾರ ರವರ ವಕೀಲ ವೃತ್ತಿಯ ಸಹಪಾಟ ಆಗಿದ್ದು , ಈ ಹಣವು ಬಾಬು ಪತ್ತಾರ ರವರಿಗೆ ಕಿಕ್‌ಬ್ಯಾಕ್ ಹೋಗಿರುವುದಂತು ಖಚಿತವಾಗಿ ಕಂಡುಬಂದಿರುತ್ತದೆ . ಹಾಗೇ ದಲಾಯತ್ ಹುದ್ದೆಯ ಉಮಾ ರವರ ಬಗ್ಗೆ ಸ್ವತಃ ವ್ಯವಸ್ಥಾಪಕ ನಿರ್ದೇಶಕರಿಗೂ ಸಹ ಯಾವುದೇ ಮಾಹಿತಿ ಇರುವುದಿಲ್ಲ . ಉಮಾ ರವರ ಹಣವು ಸಹ ಬಾಬು ಪತ್ತಾರ ರವರಿಗೆ ಕಿಕ್ ಬ್ಯಾಕ್ ಆಗಿರುವಂತಹದ್ದು , ಖಚಿತವಾಗಿ ಕಂಡುಬಂದಿರುತ್ತದೆ , ಈ ವಿಚಾರವಾಗಿ ನಾವು ಮಾಹಿತಿ ಕಲೆ ಹಾಕಲು ಮಾಹಿತಿ ಹಕ್ಕಿನಡಿ ಕಛೇರಿಗೆ ಅರ್ಜಿ ನೀಡಿದಾಗ ಈ ಬ್ರಷ್ಟಾಚಾರವನ್ನು ಮುಚ್ಚಿಹಾಕಿಕೊಳ್ಳಲು ಸತತ ಮೂರು ತಿಂಗಳಿನಿಂದ ಸೂಕ್ತ ದಾಖಲೆಗಳನ್ನು ಕೊಡದೆ ಅಲೆದಾಡಿಸಿದ್ದಾರೆ . ವ್ಯವಸ್ಥಾಪಕ ನಿರ್ದೇಶಕರು ದಿ : 30/10/2021 ರಂದು ಆಪ್ತ ಶಾಖೆಯ ಸಿಬ್ಬಂದಿಗೆ ಸಂಬಂಧಪಟ್ಟ ಹಾಜರಾತಿಯು ನಮ್ಮ ಬಳಿ ಇರುವುದುದಿಲ್ಲ . ಆಪ್ತ ಶಾಖೆಯಿಂದ ತರಿಸಿಕೊಂಡು ತಮಗೆ ನೀಡುತ್ತೇವೆಂಬ ಹಿಂಬರಹವನ್ನು ನೀಡುತ್ತಾರೆ . ಆದರೆ ಬಾಬು ಪತ್ತಾರ ರವರು ಪ್ರತಿ ತಿಂಗಳ ಅಂತ್ಯದ ದಿನಾಂಕದಲ್ಲಿ ನವೆಂಬರ್ ತಿಂಗಳಿನಿಂದ ಇಲ್ಲಿಯವರೆಗೂ ಸಹ ಆಪ್ತ ಶಾಖೆಯ ಸಿಬ್ಬಂದಿಗಳ ಹಾಜರಾತಿಯನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಿರುವ ಮಾಹಿತಿಯನ್ನು ಇದೇ ವ್ಯವಸ್ಥಾಪಕ ನಿರ್ದೇಶಕರು ದಿ : 15/12/2021 ರಂದು ನಮಗೆ ನೀಡಿರುತ್ತಾರೆ . ಆದರೆ ಈ ನಯವಂಚಕ ಬಾಬು ಪತ್ತಾರ ನನಗೆ ಮಾಹಿತಿಯನ್ನು ನೀಡುವ ಸಲುವಾಗಿಯೇ ಸಿದ್ಧ ಪಡಿಸಿದ ಟಿಪ್ಪಣಿಯಲ್ಲಿ ಕಛೇರಿಯಿಂದ ಪ್ರತಿ ಪತ್ರಗಳಿಗೆ ನಮೂದಿಸುವ ನಂಬರ್‌ಗಳನ್ನು ( ಜಾವಕ ) ನಮೂದಿಸಿರುವುದಿಲ್ಲ . ನಿಗಮದ ಹಣವನ್ನು ಲೂಟಿ ಹೊಡೆಯಲು ಬಾಬು ಪತ್ತಾರ ರೂಪಿಸಿರುವ ಸಂಚಿಗೆ ಇದಕ್ಕಿಂತ ನಿದರ್ಶನ ಬೇಕಿಲ್ಲ .
ಒಂದುವೇಳೆ ಆಪ್ತ ಶಾಖೆಗೆ ಸಿಬ್ಬಂದಿಗಳು ಹಾಜರಗಿದ್ದರೆ , ದೈಹಿಕವಾಗಿ ಹಾಜರಾತಿಗೆ ಸಹಿ ಮಾಡಿರುವ ಪ್ರತಿ ಲಭ್ಯವಿರುತ್ತಿತ್ತು . ಅದರ ಆಧಾರದ ಮೇಲೆ ವ್ಯವಸ್ಥಾಪಕ ನಿರ್ದೇಶಕರು ಸಿಬ್ಬಂದಿಗಳಿಗೆ ವೇತನವನ್ನು ನೀಡಬೇಕಿತ್ತು . ಇದಾವುದನ್ನು ಮಾಡದೇ ಕಾನೂನನ್ನು ಗಾಳಿಗೆ ತೂರಿ ಬಾಬು ಪತ್ತಾರ ರವರು ಅಧಿಕಾರವನ್ನು ದುರುಪಯೋಗಿಸಿಕೊಂಡು ಅಲ್ಪ ಹಣವಿರುವ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಲೂಟಿ ಹೊಡೆಯುವುದರಲ್ಲಿ ನಿರತರಾಗಿದ್ದಾರೆ . ಇನ್ನು ಇವರ ಪ್ರಯಾಣ ಭತ್ಯೆಗೆ ಸಂಬಂಧಪಟ್ಟಂತೆ ಹೇಳುವುದಾದರೆ ಕಛೇರಿಯವರು ನೀಡಿರುವ ದಾಖಲೆಗಳ ಪ್ರಕಾರ ಮೇ , ಜೂನ್ , ಜುಲೈ ತಿಂಗಳಿನಲ್ಲಿ ಯಾವುದೇ ಪ್ರವಾಸ ಮಾಡಿರುವ ಮಾಹಿತಿ ಇರುವುದಿಲ್ಲ . ಆದರೂ ಸಹ ಬಾಬು ಪತ್ತಾರ ರವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಈ ಮೂರು ತಿಂಗಳಿನಲ್ಲಿ ರೂ . 72,239 – ರೂ ಹಣವನ್ನು ಡಿಸೇಲ್ ಬಿಲ್ ರೂಪದಲ್ಲಿ ಕಿಕ್‌ಬ್ಯಾಕ್ ಪಡೆದಿರುವುದು ನಿಗಮದ ಹಣವನ್ನು ಲೂಟಿ ಹೊಡೆದಿರುವುದು ಸಾಭಿತಾಗಿದೆ .
ಮುಂದುವರೆದು ದಿ : 11 / 01 / 2021 ರಂದು ಇವರ ಕಛೇರಿಗೆ ಒಂದು ಲೆನೋವೊ ಕಂಪನಿ ಕಂಪ್ಯೂಟರ್‌ನ್ನು ಖರೀಧಿ ಮಾಡಿರುವುದಾಗಿ ರೂ . 80,063 / – ಗಳ ನಕಲಿ ಬಿಲ್ಲೆಗಳನ್ನು ನೀಡಿ ಈ ಹಣವನ್ನು ಸಹ ಬಾಬು ಪತ್ತಾರ ರವರು ಲೂಟಿ ಮಾಡಿರುವುದು ದಾಖಲೆಗಳ ಸಮೇತ ಸಾಭಿತಾಗಿದೆ . ಕಬ್ಬನ್ ಪೇಟೆಯ ವಕೀಲರ ಕಛೇರಿಗಳಿರುವ ಕಟ್ಟಡದ ಸಂಕೀರ್ಣದಲ್ಲಿದ್ದ ಸ್ನೇಹ ಎಂಟರ್‌ಪ್ರೈಸಸ್ ಎಂಬ ಪುಸ್ತಕ ಪೇಪರ್‌ಗಳನ್ನು ಮಾರುವ ಕಂಪ್ಯೂಟರ್‌ಗಳಿಗೆ ಅವರ ಉದ್ಯಮಕ್ಕೂ ಸಂಬಂಧವಿಲ್ಲದ ಸ್ನೇಹ ಎಂಟರ್‌ಪ್ರೈಸಸ್‌ಗೆ ರೂ . 80,063 / – ಗಳ ಹಣವನ್ನು ಕೂಡಿಸಿ ಇದನ್ನು ಸಹ ಕಿಕ್‌ಪ್ಯಾಕ್ ಮಾಡಿದ್ದಾರೆ . ತೆರಿಗೆ ಕಛೇರಿಯಲ್ಲಿ ವಿಚಾರಿಸಿದಾಗ ಸ್ನೇಹ ‘ ಎಂಟರ್‌ಪ್ರೈಸಸ್‌ನಿಂದ ಯಾವುದೇ ಕಂಪ್ಯೂಟರ್ ಮಾರಾಟ ಮಾಡಿರುವ ಜಿಎಸ್‌ಟಿ ತೆರಿಗೆ ಇನ್‌ವಾಯ್ಸಗಳು ಲಭ್ಯವಿರುವುದಿಲ್ಲವಾಗಿ ತಿಳಿಸಿದ್ದು , ಈ ಹಣವು ಸಹ ಬಾಬು ಪತ್ತಾರ ರವರ ಅಕ್ರಮಕ್ಕೆ ನಿದರ್ಶನವಾಗಿದೆ . ರೋಚಕತೆ ಎಂದರೆ ಅವರು ಖರೀದಿ ಮಾಡಿರುವುದಾಗಿ ನೀಡುವ ಕಂಪ್ಯೂಟರ್‌ನ ಬಿಲ್ಲಿನಲ್ಲಿರುವ ಕಂಪ್ಯೂಟರ್‌ಗೆ ಇಂದಿನ ದರ ಕೇವಲ ರೂ . 54,100 / – ಆಗಿರುತ್ತದೆ . ಜನವರಿ ತಿಂಗಳಿನಲ್ಲಿ ಈ ಬೆಲೆಯು ಇನ್ನೂ ಕಡಿಮೆ ಇತ್ತೆಂದು ಹಲವಾರು ಕಂಪ್ಯೂಟರ್ ಅಂಗಡಿ ಮಾಲಿಕರು ತಿಳಿಸಿರುತ್ತಾರೆ . ನಿಗಮದ ಕಛೇರಿಗೆ ಇನ್ನೂ ಎರಡು ಕಂಪ್ಯೂಟರ್‌ಗಳನ್ನು ಖರೀದಿ ಮಾಡಿರುವುದಾಗಿ ಮಾಹಿತಿ ಇದ್ದು , ಅದರಲ್ಲೂ ಸಹ ಭ್ರಷ್ಟಾಚಾರ ನಡೆದಿರುವ ಮಾಹಿತಿ ಇದ್ದು , ಅದು ಸಹ ತನಿಖೆಯಾಗಬೇಕಾಗಿದೆ . ಇನ್ನೂ ಕಛೇರಿಯ ನವೀಕರಣ ಕಾಮಗಾರಿಯೂ ನಡೆಯುತ್ತಿದ್ದು , ಅದರಲ್ಲಿಯೂ ಸಹ ಬಾಬು ಪತ್ತಾರ ರವರು ಕಿಕ್ ಬ್ಯಾಕ್ ಪಡೆದಿರುವ ಬಗ್ಗೆ ದೂರುಗಳಿದ್ದು , ಅದನ್ನು ಸಹ ತನಿಖೆಗೊಳಪಡಿಸಬೇಕಾಗಿದೆ . ವಿಶ್ವಕರ್ಮ ಅಭಿವೃದ್ಧಿ ನಿಗಮದ ಮೂಲಕ ವಿಶ್ವಕರ್ಮರನ್ನು ಅಭಿವೃದ್ಧಿ ಮಾಡುತ್ತೇನೆಂದು ಗೋಮುಖ ವ್ಯಾಘ್ರನಂತೆ ನಟಿಸುತ್ತಿರುವ ಇಂತಹ ವ್ಯಕ್ತಿಯು ಇನ್ನಷ್ಟು ದಿನ ಅಧ್ಯಕ್ಷರ ಹುದ್ದೆಯಲ್ಲಿ ಮುಂದುವರೆದರೇ ಇನ್ನಷ್ಟು ಅಕ್ರಮ ವ್ಯವಹಾರಗಳನ್ನು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ . ಕಡಿಮೆ ಅನುದಾನವಿರುವ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಈ ವ್ಯಕ್ತಿ ಸಂಪೂರ್ಣ ನಾಶ ಮಾಡುವ ಮೊದಲು ಸರ್ಕಾರ ಎಚ್ಚೆತ್ತುಕೊಂಡು ತಕ್ಷಣ ವಜಾ ಮಾಡಿ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ರಕ್ಷಿಸಬೇಕೆಂದು ಈ ಮೂಲಕ ಮಾನ್ಯ ಮುಖ್ಯಮಂತ್ರಿಗಳನ್ನು ಸಮಾಜದ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ . ಇತನನ್ನು ಸರ್ಕಾರವು ಮುಂದುವರೆಸಿದ್ದ ಆದಲ್ಲಿ ಸೋಮವಾರದಿಂದಲೇ ನಿಗಮದ ಕಛೇರಿ ಮುಂದೆ ಧರಣಿ ಸತ್ಯಗ್ರಹವನ್ನು ನಡೆಸಲಾಗುವುದು ಎಂದು ತಮ್ಮ ಮೂಲಕ ಸರ್ಕಾರಕ್ಕೆ ಒತ್ತಾಯಪೂರ್ವಕ ಎಚ್ಚರಿಕೆ ನೀಡುತ್ತಿದ್ದೇವೆ .
– ಶ್ರೀನಿವಾಸ ಎಸ್. ಮಳವಳ್ಳಿ
City Today News
9341997936