
ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರಕಾರವು ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ತರಾತುರಿಯಲ್ಲಿ ಜಾರಿ ಮಾಡಲು ಹೊರಟಿರುವ ಮತಾಂತರ ನಿಷೇಧ ವಿಧೇಯಕವು ಸಂವಿಧಾನ ವಿರೋಧಿ ಸರ್ವಾಧಿಕಾರಿ ಮತ್ತು ಅಪ್ರಜಾಸತ್ತಾತ್ಮಕ ನಿಲುವನ್ನು ಹೊಂದಿದ್ದು , ಧರ್ಮದ ಹೆಸರಲ್ಲಿ ಮುಗ್ಧ ಅಮಾಯಕರನ್ನು ಹಿಂಸಿಸುವ ಮತ್ತು ಅವರ ಮೇಲಿನ ದೈಹಿಕ ಹಾಗು ಮಾನಸಿಕ ದಾಳಿಗಳಿಗೆ ಪ್ರಚೋದಿಸುವ ಭಯೋತ್ಪಾದಕ ಕೃತ್ಯವಾಗಿದೆ . ಈ ಕಾಯ್ದೆ ನಮ್ಮ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದ ಕಾಯಿದೆಯಾಗಿದೆ .
ಈ ವಿಧೇಯಕವು ಸಂವಿಧಾನದ 25 ರಿಂದ 28 ರವರೆಗಿನ ಪರಿಚ್ಛೇದಗಳು ಸೂಚಿಸುತ್ತಿರುವ ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ . ಮಾತ್ರವಲ್ಲ ಇದು ಧಾರ್ಮಿಕ ಅಲ್ಪಸಂಖ್ಯಾತ ವರ್ಗದವರನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿಯೂ , ಆತಂಕ ಹಾಗು ಭಯದ ವಾತಾವರಣದಲ್ಲಿ ಸಿಕ್ಕಿಸುವ ಪಡ್ಯಂತ್ರವಾಗಿದೆ .
ಹುಬ್ಬಳ್ಳಿ , ಕೊಡಗು , ಹಾಸನ , ಮಂಡ್ಯ ಹಾಗು ರಾಜ್ಯದ ಹಲವು ಕಡೆಗಳಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಅಡ್ಡಿ ಸೇರಿದಂತೆ 2021 ರ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಸುಮಾರು 30 ಕ್ರಿಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿಗಳು ನಡೆದಿದ್ದು , ಈಗ ಜಾರಿಗೊಳಿಸಲು ತಡ್ಯಂತ್ರ ರೂಪಿಸಿರುವ ಮತಾಂತರ ನಿಷೇಧ ವಿಧೇಯಕವು ಇಂತಹದ್ದೇ ಮತ್ತು ಇದಕ್ಕಿಂತಲೂ ಕ್ರೂರವಾದ ದಾಳಿಗಳಿಗೆ ಇನ್ನಷ್ಟು ಪುಷ್ಟಿ ನೀಡಲು ಕಾರಣವಾಗುತ್ತದೆ , ಅಲ್ಲದೇ ಇಂತಹ ದಾಳಿಗಳಿಗೆ ಹಿಂದುತ್ವದ ಕೋಮುವಾದಿ ಗೂಂಡಾಗಳು ಕಾರಣರಾದರೂ , ಇಲ್ಲಿನ ಭ್ರಷ್ಟಗೊಂಡಿರುವ ಪೋಲಿಸ್ ವ್ಯವಸ್ಥೆ ಮಾತ್ರ ಈರಖಗಳನ್ನು ಕ್ರೈಸ್ತ ಬಾಂಧವರ ಮೇಲೆ ದಾಖಲು ಮಾಡುತ್ತಿವೆ . ಕಾನೂನಿನ ಇಕ್ಕಳಗಳಿಗೆ ಮುಸಲ್ಮಾನರನ್ನೂ ಸಿಕ್ಕಿಸಲಾಗುತ್ತಿದೆ . 2021 ರಲ್ಲಿ ಮತಾಂತರ ಮಾಡಿರುವ ಆರೋಪದಡಿಯಲ್ಲಿ 13 ಕ್ರೈಸ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಲಾಗಿದೆ . ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ‘ ಎಂಬ ಸರ್ಕಾದೇತರ ಸಂಸ್ಥೆಯು ಅಧ್ಯಯನ ನಡೆಸಿದೆ .
ದಲಿತರನ್ನು ಮತಾಂತರ ಮಾಡಿದರೆ 3 ರಿಂದ 10 Sadr ಕಠಿಣ ಶಿಕ್ಷೆ ಘೋಷಿಸಿರುವ ಸರಕಾರವು ದಲಿತರ ಏಳಿಗೆಗೆ ಯಾವ ಕಾರ್ಯಯೋಜನೆಗಳನ್ನು ಮಾಡಿದೆ ಎಂಬುವುದನ್ನು ನೋಡಿದರೆ ಸರಕಾರದ ಪ್ರಯತ್ನ ಶೂನ್ಯವಾಗಿದೆ . ದಲಿತರ ಮೇಲೆ ನಿರಂತರ ದಾಳಿಗಳು , ಜಾತಿನಿಂದನೆ , ಬಹಿಷ್ಕಾರಗಳು ನಡೆಯುತ್ತಿದ್ದರೂ ಇದನ್ನು ತಡೆಯುವ ಗೋಜಿಗೆ ಹೋಗದ ಈ ಭಯೋತ್ಪಾದಕ ಸರ್ಕಾರ ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು , ಸಂವಿಧಾನ ವಿರೋಧಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದೆ .
ಈ ಕಾಯಿದೆಯ ಮೂಲಕ ಬಿಜೆಪಿಯು ತನ್ನ ಹಿಂದುತ್ವ ಅಜೆಂಡಾವನನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿದರೆ , ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಲ್ಪಸಂಖ್ಯಾತ ಮತ ಬ್ಯಾಂಕ್ ಅನ್ನು ಹಿಡಿದಿಟ್ಟುಕೊಳ್ಳಲು ಮಾತ್ರ ಇದರ ವಿರುದ್ಧ ನಾಮಕಾವಸ್ಥೆ ವಾಗ್ವಾದ ನಡೆಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ .
ಸರಕಾರವು ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯದಲ್ಲಿ ಬೆಲೆ ಏರಿಕೆ , ಕೃಷಿ ಬಿಕ್ಕಟ್ಟು , ಕೋಡ್ ಸಂಕಷ್ಟದಂತಹ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವುದರ ಸಕರಾತ್ಮಕ ಚರ್ಚೆ ಮಾಡುವುದರ ಬದಲು ಜನ ಸಾಮಾನ್ಯರ ಬದುಕಿಗೆ ಯಾವ ರೀತಿಯಲ್ಲೂ ಸಂಬಂಧವೇ ಪಡೆದ ಮತಾಂತರ ನಿಷೇಧ ಮಸೂದೆಯ ಕುರಿತಾದ ಚರ್ಚೆ , ಸುಗ್ರೀವಾಜ್ಞೆಗಳು ಸರಕಾರದ ಭೌದ್ಧಿಕ ದಿವಾಳಿತನಕ್ಕೆ ಮತ್ತು ಅವೈಜ್ಞಾನಿಕ ನಿಲುವುಗಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬೆಂಗಳೂರು ಪತ್ರಿಕಾ ಗೋಷ್ಠಿಯಲ್ಲಿ ಅಂದರು.
ಪತ್ರಿಕಾ ಗೋಷ್ಠಿಯಲ್ಲಿ ಅಬ್ದುಲ್ ಮಜೀದ್ ಮೈಸೂರು – ರಾಜ್ಯಾಧ್ಯಕ್ಷರು, BR ಭಾಸ್ಕರ್ ಪ್ರಸಾದ್ – ರಾಜ್ಯಪ್ರಧಾನ ಕಾರ್ಯದರ್ಶಿ, ರಮೇಶ್ ಕುಮಾರ್ – ಬೆಂಗಳೂರು ಜಿಲ್ಲಾ ಉಪಾಧ್ಯಕ್ಷರು, ಅಫ್ಸರ್ ಕೊಡ್ಲಿಪೇಟೆ
– ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಗವಹಿಸಿದರು.
City Today News
9341997936