
ಕರ್ನಾಟಕ ರಾಜ್ಯದ ಕೆ.ಎಫ್.ಸಿ.ಎಸ್.ಸಿ.ಯ ಎಲ್ಲಾ ಗೋಡನ್‌ಗಳಲ್ಲಿ 3000 ಕ್ಕೂ ಹೆಚ್ಚು ಕಾರ್ಮಿಕರು ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಕೆಲಸವನ್ನು 1973 ರಿಂದ ನಿರಂತರವಾಗಿ ನಿರ್ವಹಿಸುತ್ತಿದ್ದಾರೆ . ಈ ಕಾರ್ಮಿಕರಿಗೆ ಈ ಕೆಳಕಂಡ ಅರ್ಹ ಸವಲತ್ತುಗಳನ್ನು ನೀಡಲು ಆದೇಶಬದ್ದರು ಎಲ್ಲಾ ಜಿಲ್ಲೆಯ ಜೆ.ಎಫ್.ಸಿ.ಎಸ್.ಸಿ. ಹಾಗೂ ಆಹಾರ , ನಾಗಲೀಕ ಸರಬರಾಜು ಗ್ರಾಹಕರ ಇಲಾಖೆಯ ಅಧಿಕಾರಿಗಳು ನೀಡುತ್ತಿಲ್ಲ . ಈ ಕೆಳಕಂಡ ಬೇಡಿಕೆಗಳನ್ನು ಕೂಡಲೇ ಜಾರಿಗೊಳಿಸುವಂತೆ ಪ್ರತಿಭಟನೆ ನಡೆಸಲಾಗುವುದು .
* ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಕಾರ್ಮಿಕರಿಗೆ ಸಾಲಿಗೆ ಗುತ್ತಿಗೆದಾರರಾಗಲೀ ಅಥವಾ ಗೋಡನ್ ವ್ಯವಸ್ಥಾಪಕರಾಗಲೀ ವೇತನ ಚೀಟಿ , ಉದ್ಯೋಗ ಪತ್ರ , ಗುರುತಿನ ಚೀಟ , ಹಕ್ಕಿನ ರಜೆಗಳ ಸವಲತ್ತು ಕೂಡಲೇ ನೀಡಬೇಕು .
* ರಾಜ್ಯದ ಎಲ್ಲಾ ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಕಾರ್ಮಿಕರಿಗೆ ಭವಿಷ್ಯನಿಧಿ , ಇ.ಎಸ್.ಐ. ಕಟ್ಟಬೇಕಿರುವ ದಿನಾಂಕದಿಂದl ಕಟ್ಟಿಸಿ ಅದರ ಸಂಪೂರ್ಣ ಮಾಹಿತಿಯನ್ನು ನಮ್ಮ ಸಂಘಟನೆಗೆ ನೀಡಬೇಕು .
* ರಾಜ್ಯದ ಗೋಡನ್‌ಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ 2018 ರಲ್ಲಿ ರೂ.16- ಹೆಚ್ಚಳ ಮಾಡಿದ್ದಾರೆ . ಅಂದಿನಿಂದ ಬೆಲೆ ಏರಿಕೆ , ಜೀವನ ನಿರ್ವಹಿಸಲು ಕಷ್ಟಕರವಾಗಿರುವುದರಿಂದ ಇಂದು ಕಾರ್ಮಿಕರಿಗೆ ಲೋಡಿಂಗ್ ಅಂಡ್ ಅನ್‌ಲೋಡಿಂಗ್‌ಗೆ 16- ರೂ.ಗಳಿಂದ 25 ರೂ.ಗಳಿಗೆ ಹೆಚ್ಚಿಸಿ , ಅದೇ ರೀತಿ ಎಫ್.ಸಿ.ಐ.ನಿಂದ ಕೆ.ಎಫ್.ಸಿ.ಎಸ್.ಸಿ.ಗೆ ಬರುವ ಅನ್‌ಲೋಡಿಂಗ್ ದರವನ್ನು ರೂ .08 – 13 ರೂ.ಗೆ ಹೆಚ್ಚಳ ಮಾಡಬೇಕು .

* ಕಾರ್ಮಿಕ ಕಾಯಿದೆ ಪ್ರಕಾರ ಕಾರ್ಮಿಕರಿಗೆ ಕೆಲಸದ ವೇಳೆ , ನಿವೃತ್ತಿಯಾದ ಕಾರ್ಮಿಕರಿಗೆ ಗಾಚ್ಯುಟಿ ಮತ್ತು ನಿವೃತ್ತಿ ವೇತನ ನೀಡಬೇಕು .
* ಕಾರ್ಮಿಕರಿಗೆ ಕಾನೂನಿನ ಪ್ರಕಾರ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು .
* ಭಾರತದ ಆಹಾರ ನಿಗಮದಲ್ಲಿ ( ಎಫ್.ಸಿ.ಐ. ) ನೀಡುತ್ತಿರುವ ವೇತನದ ಪ್ರಕಾರ ಕೆ.ಎಚ್.ಸಿ.ಎಸ್.ಸಿ. , ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಕಾರ್ಮಿಕರಿಗೂ ಸವಲತ್ತು ನೀಡಬೇಕು .
* ಕಾರ್ಮಿಕನಿಗೆ ಅಪಘಾತ ಉಂಟಾದರೂ ಯಾವುದೇ ಪರಿಹಾರ ನೀಡುತ್ತಿಲ್ಲ ಇದನ್ನು ನೀಡಬೇಕು .
ಈ ಮೇಲ್ದಂಡ ಬೇಡಿಕೆಗಳ ಬಗ್ಗೆ ಒತ್ತಾಯಿಸಿ ನಡೆಸುವ ಹೋರಾಟದಲ್ಲಿ ಎಲ್ಲಾ ಕಾರ್ಮಿಕರು ಸಕ್ರೀಯವಾಗಿ ಭಾಗವಹಿಸಿ ತಮ್ಮ ತಮ್ಮ ಗೋಡನ್‌ಗಳ ಮುಂದೆ ಪ್ರತಿಭಟನೆ ನಡೆಸಬೇಕೆಂದು ಸಂಘದ ವತಿಯಿಂದ ಕಳಕಳಿಯ ಮನವಿ
-ಕರ್ನಾಟಕ ಫುಡ್ ಅಂಡ್ ಸಿವಿಲ್ ಸಪ್ಲೈ , ಕಾರ್ಪೊರೇಷನ್ ಲೋಡಿಂಗ್ ಅಂಡ್ ಅನ್‌ಲೋಡಿಂಗ್ ಲೇಬರ್ ಯೂನಿಯನ್
City Today News
9341997936