
ಸಂವಿಧಾನ ಸುರಕ್ಷಾ ಆಂದೋಲನ ಕರ್ನಾಟಕದ ವತಿಯಿಂದ ಪ್ರತಿರೋಧ ಸಮಾಲೋಚನಾ ಸಭೆಯು ಬೆಂಗಳೂರು ವಿಧಾನ ಸೌಧದ ಬಳಿಯ ಶಾಸಕರ ಭವನದಲ್ಲಿ ನಡೆಯಿತು.
ರಾಜ್ಯದಲ್ಲಿ ಹೆಚ್ಚುತ್ತಿರುವ ದಲಿತ, ಅಲ್ಪಸಂಖ್ಯಾತ ಹಾಗು ಹಿಂದುಳಿದ ವರ್ಗಗಳ ಮೇಲಿನ ನಿರಂತರ ದೌರ್ಜನ್ಯ, ದಬ್ಬಾಳಿಕೆಗಳು ಹಾಗು ಸಂವಿಧಾನ ವಿರೋಧಿ ಚಟುವಟಿಕೆಗಳ ವಿರುದ್ದ ಪ್ರತಿರೋಧ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಮಾಲೋಚನಾ ಸಭೆಯಲ್ಲಿ ರಾಜ್ಯದ ಹಲವಾರು ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ಸಂಘಟನೆಗಳ ರಾಜ್ಯ ಮುಖಂಡರುಗಳು, ಪ್ರಗತಿಪರ ಸ್ವಾಮೀಜಿಗಳು, ಧಾರ್ಮಿಕ ಗುರುಗಳು ಭಾಗವಹಿಸಿ ಮುಂದಿನ ಹೋರಾಟದ ಬಗ್ಗೆ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿಗಳಾಗಿ ಸಂವಿಧಾನ ಸುರಕ್ಷಾ ಆಂದೋಲನದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಬಿ. ಆರ್ ಅಂಬೇಡ್ಕರ್ ರವರ ಮೊಮ್ಮಗ ರಾಜ ರತ್ನ ಅಂಬೇಡ್ಕರ್ ರವರು ಆಗಮಿಸಿದ್ದರು. ಆ ನಂತರ ಮುಂದಿನ ಹೊರಟದ ರೂಪು ರೇಷೆಯ ಕುರಿತು ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ರಾಜ ರತ್ನ ಅಂಬೇಡ್ಕರ್ ದೇಶದಲ್ಲಿ ಸಂವಿಧಾನವನ್ನು ಬದಲಾಯಿಸುವ ಮತ್ತು ಸಂವಿಧಾನಕ್ಕೆ ವಿರುದ್ಧವಾದ ಕಾರ್ಯಗಳು ಹೆಚ್ಚಾಗಿ ನಡೆಯುತ್ತಿದೆ. ಇದರ ವಿರುದ್ಧ ಸಂವಿಧಾನ ರಕ್ಷಣೆಯ ಉದ್ದೇಶದಿಂದ ದೇಶಾದ್ಯಂತ ಸಂವಿಧಾನ ಸುರಕ್ಷಾ ಆಂದೋಲನ ನಡೆಯುತ್ತಿದೆ ಎಂದರು.
ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಿತ್ರದುರ್ಗ ಛಲವಾದಿ ಮಹಾಸಂಸ್ಥಾನದ ಶಿವಶರಣ ಬಸವ ನಾಗಿದೇವ ಸ್ವಾಮೀಜಿ, ಸಂವಿಧಾನದ ರಕ್ಷಣೆಗಾಗಿ ಮುಂದಿನ ಎಲ್ಲಾ ಹೋರಾಟದಲ್ಲಿ ಸಂವಿಧಾನ ಸುರಕ್ಷಾ ಆಂದೋಲನದೊಂದಿಗೆ ಒಟ್ಟು ಸೇರಿ ಕೆಲಸ ಮಾಡಲಿದ್ದೇವೆ ಎಂದರು. ನಂತರ ಮಾತನಾಡಿದ ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಇಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ ಇದೆಲ್ಲದರ ವಿರುದ್ಧ ಸಂವಿಧಾನಾತ್ಮಕ ಪ್ರತಿರೋಧ ನಡೆಸಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಎಸ್. ಡಿ. ಪಿ. ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಮಾತನಾಡಿ ಫ್ಯಾಷಿಸಂ ವಿರುದ್ಧ ಎಲ್ಲಾ ಸಂವಿಧಾನ ಪ್ರೀಯರು ಜೊತೆಯಾಗಿ ನಿಂತು ಸಂವಿಧಾನ ಸುರಕ್ಷಾ ಆಂದೋಲನದ ಮೂಲಕ ಪ್ರತಿರೋಧ ಹೋರಾಟ ನಡೆಸಲಿದ್ದೇವೆ ಎಂದರು. ಚಿಂತಕರಾದ ಧ್ವಾರಕ್ ನಾಥ್ ಸಂವಿಧಾನ ಸುರಕ್ಷಾ ಹೋರಾಟದಲ್ಲಿ ಜೊತೆ ಗೂಡಿ ಕೆಲಸದ ಅಗತ್ಯತೆ ಇದ್ದು, ಶಕ್ತವಾಗಿ ನಡೆಸಲಿದ್ದೇವೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ದಲಿತ ಹೋರಾಟ ಗಾರ ಹಾ. ರಾ ಮಹೇಶ್, ಪಿಎಫ್ಐ ರಾಜ್ಯಾಧ್ಯಕ್ಷ ಯಾಸೀರ್ ಹಸನ್, ಕರ್ನಾಟಕ ಕ್ರೈಸ್ತ ಸಂಘದ ಅಧ್ಯಕ್ಷ ಸ್ಟ್ಯಾ ನಿ ಪಿಂಟೋ, ದಲಿತ ಸಂಘಟನೆಗಳ ಒಕ್ಕೂಟಟದ ಅಧ್ಯಕ್ಷ ಮತ್ತು ಎಸ್. ಡಿ. ಪಿ. ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್, ಹೋರಾಟಗಾರ್ತಿ ಭೀಮ ಪುತ್ರಿ, ರಾ ಚಿಂತನ್, ದೀಪು ಗೌಡ್ರು, ಅಲ್ಫಾನ್ಸೋ ಫ್ರಾಂಕೋ, ಅಪ್ಸರ್ ಕೊಡ್ಲಿಪೇಟೆ, ದಲಿತ್ ಮೈನಾರಿಟೀಸ್ ಸೇನೆಯ ಎ.ಜೆ ಖಾನ್, ಯಮನಪ್ಪ ಗುಣದಾಳ ಸೇರಿದಂತೆ ಇನ್ನಿತರ ಹಲವಾರು ದಲಿತಪರ, ಪ್ರಗತಿ ಪರ ಹೋರಾಟಗಾರರು ಉಪಸ್ಥಿತರಿದ್ದರು. ಮತ್ತು ಪತ್ರಿಕಾ ಗೋಷ್ಠಿಯಲ್ಲಿ ಮುಂದಿನ ಸಂವಿಧಾನ ಸುರಕ್ಷಾ ಆಂದೋಲನದ ಕರ್ನಾಟಕ ರಾಜ್ಯ ಸಂಚಾಲಕ ಸಮಿತಿಯನ್ನು ಘೋಷಿಸಲಾಯಿತು.
City Today News
9341997936