ಭ್ರಷ್ಟರೇ , ಬಿಬಿಎಂಪಿ ಬಿಟ್ಟು ತೊಲಗಿ , ಬೆಂಗಳೂರು ಪ್ರೇಮಿಗಳೇ , ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ ; ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳಿಗೆ ಅಹ್ವಾನ.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಸ್ವಚ್ಛ , ಜನಪರ ಮತ್ತು ಪ್ರಾಮಾಣಿಕ ರಾಜಕಾರಣಕ್ಕಾಗಿ ಹೋರಾಡುತ್ತಿದ್ದು , ನಿರಂತರವಾಗಿ ಭ್ರಷ್ಟಾಚಾರ , ದುರಾಡಳಿತದ , ದೌರ್ಜನ್ಯ ಮತ್ತು ಅಕ್ರಮಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ . ಕೆ ಆರ್ ಎಸ್ ಪಕ್ಷದ ಹೋರಾಟಗಳನ್ನು ನೋಡಿ ಸಾಮಾನ್ಯ ಜನರು ನಮ್ಮ ಪಕ್ಷ ಸೇರುತ್ತಿದ್ದಾರೆ ಮತ್ತು ಪ್ರಾಮಾಣಿಕ ರಾಜಕಾರಣದಲ್ಲಿ ತೊಡಗಲು ಮುಂದಾಗಿದ್ದಾರೆ . ಕೆ ಆರ್ ಎಸ್ ಪಕ್ಷವು ರಾಜ್ಯಾದ್ಯಂತ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದು , ಸಾರ್ವಜನಿಕರಿಗೆ ಸರ್ಕಾರಿ ಕಛೇರಿಗಳಲ್ಲಿ ತಮ್ಮ ಕೆಲಸಗಳಿಗೆ ಅಲೆಯುವುದನ್ನು ಮತ್ತು ಲಂಚ ನೀಡುವುದನ್ನು ತಪ್ಪಿಸಲು ಜನಸ್ಪಂದನ ಅಭಿಯಾನದ ಮೂಲಕ ನೆರವಾಗುತ್ತಿದೆ . ಪಕ್ಷವು ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಮತೋಲಿತ ಬೆಳವಣಿಗೆಗೆ ಒತ್ತು ಕೊಡಲಿದ್ದು , ದೇಶದ ಆರ್ಥಿಕತೆಗೆ ನಗರ ಪ್ರದೇಶದ ಸುಸ್ಥಿರ , ಯೋಜಿತ ಮತ್ತು ಸಮಗ್ರ ಅಭಿವೃದ್ಧಿಯ ಅವಶ್ಯಕತೆ ಇದೆ . ಈ ವಿಚಾರಗಳು ತಿಳಿಯದ ಅಥವಾ ತಿಳಿದೂ ಅನುಷ್ಠಾನಗೊಳಿಸಲಾಗದ ಪರಿಸ್ಥಿತಿಯಲ್ಲಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಿದ್ದು , ಇಂದು ನಗರ ಪ್ರದೇಶಗಳು ನಿತ್ಯ ನರಕವಾಗಿವೆ . ಯೋಜಿತ ಅಭಿವೃದ್ಧಿ ಏನೆಂಬುದೇ ತಿಳಿಯದೆ , ವರ್ಷ ವರ್ಷವೂ ತಮಗೆ ಇಚ್ಚೆಬಂದ ಯೋಜನೆಗಳನ್ನು ರೂಪಿಸಿ ಹತ್ತಾರು ಸಾವಿರ ಕೋಟಿ ಸಾರ್ವಜನಿಕರ ಹಣವನ್ನು ರಾಜ್ಯಾದ್ಯಂತ ಪೋಲು ಮಾಡಿ ಲೂಟಿ ಮಾಡುತ್ತಿದ್ದಾರೆ . ಇದಕ್ಕೆಲ್ಲ ಕಡಿವಾಣ ಹಾಕಿ , ಪಾರದರ್ಶಕ ಮತ್ತು ಜನಪರ ಆಡಳಿತ ನೀಡಲು ಕೆ ಆರ್ ಎಸ್ ಪಕ್ಷ ಕೆಲಸ ಮಾಡುತ್ತಿದ್ದೆ . ಕೆ ಆರ್ ಎಸ್ ಪಕ್ಷವು ಮುಂಬರುವ ಬಿಬಿಎಂಪಿ ಚುನಾವಣೆಗಳಲ್ಲಿ ಸ್ಪರ್ಶಿಸಲಿದ್ದು , ಅದಕ್ಕಾಗಿ ತಯಾರಿ ಮಾಡುತ್ತಿದೆ . ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳು ಪ್ರತಿ ಬಾರಿಯೂ ಬಿಬಿಎಂಪಿ ಚುನಾವಣೆಯನ್ನು ಮುಂದೂಡಿ , ಸಂವಿಧಾನದ ಆಶಯಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿವೆ . ಬಿಬಿಎಂಪಿ ಚುನಾವಣೆ ಹತ್ತಿರ ಬಂದಾಗ ಮಾತ್ರ ಇವರುಗಳಿಗೆ ಬಿಬಿಎಂಪಿಯನ್ನು ವಿಸ್ತರಿಸುವ , ಅದಕ್ಕೆ ಸಂಬಂಧಿಸಿದ ಕಾಯ್ದೆ ಕಾನೂನುಗಳಿಗೆ ಬದಲಾವಣೆ ತರಬೇಕೆಂದು ತಿಳಿಯುತ್ತದೆ . ಈ ಮೂರೂ ಪಕ್ಷಗಳ ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಇಂದು ಬೆಂಗಳೂರು ಭ್ರಷ್ಟರ ಕಾಮಧೇನು ಮತ್ತು ಜನರ ನರಕವಾಗಿ ಪರಿಣಮಿಸಿದೆ . ಬೆಂಗಳೂರು ನಗರದ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯದ ಜೆಸಿಬಿ ಪಕ್ಷಗಳಿಂದ ಎಂದಿಗೂ ಸಾಧ್ಯವೇ ಇಲ್ಲ . ಅವರುಗಳಿಂದ ನಗರದ ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗುತ್ತದೆಯೆ ಹೊರತು ಮತ್ತೇನು ಆಗುವುದಿಲ್ಲ . ಬಿಬಿಎಂಪಿ , ಬಿಡಿಎ ಮತ್ತು ಜಲ ಮಂಡಳಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು , ಬೇಡದ ಕಾಮಗಾರಿಗಳಿಗೆ ಹಣ ವ್ಯಯಿಸಿ ಸಾರ್ವಜನಿಕರ ಹಣ ದೋಚುತ್ತಿದ್ದಾರೆ . ನೂರಾರು ಭ್ರಷ್ಟಾಚಾರದ ಪ್ರಕರಣಗಳು ದಾಖಲಾದರೂ ಕೂಡ ಯಾರ ಮೇಲೂ ಕೂಡ ಕ್ರಮ ಕೈಗೊಂಡಿಲ್ಲ . ಇಂತಹ ಕ್ರಮ ಭ್ರಷ್ಟರಿಗೆ ಮತ್ತಷ್ಟು ಬಲ ನೀಡುತ್ತಿದ್ದು , ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ . ಈ ನಿಟ್ಟಿನಲ್ಲಿ ಕೆ ಆರ್ ಎಸ್ ಪಕ್ಷವು ಜೆಸಿಬಿ ಪಕ್ಷಗಳಿಗೆ ಪರ್ಯಾಯವಾಗಿದ್ದು , ಜನರ ಸಹಭಾಗಿತ್ವದಲ್ಲಿ ಸ್ವಚ್ಛ , ಸುಂದರ , ಸದೃಢ , ಸಮೃದ್ಧ ಬೆಂಗಳೂರು ನಿರ್ಮಿಸಲು ನೀಲಿನಕ್ಷೆಯನ್ನು ಹೊಂದಿದೆ . ಪ್ರತಿನಿತ್ಯ ಪಕ್ಷದ ಕಾರ್ಯಕರ್ತರು ನೂರಾರು ಜನರ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ . ಮುಂಬರುವ ಬಿಬಿಎಂಪಿ ಚುನಾವಣೆಗಳಲ್ಲಿ ಈ ವಿಚಾರಗಳನ್ನು ಜನರ ಮುಂದಿಟ್ಟು ಜನರು ನೆಮ್ಮದಿಯಿಂದ ಬದುಕುವ ನಗರವನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ . ಪ್ರಾಮಾಣಿಕರು ಮತ್ತು ಜನಪರ ಕಾಳಜಿ ಉಳ್ಳವರು , ಅದರಲ್ಲೂ ಸ್ವತಂತ್ರವಾಗಿ ಯೋಚಿಸುವ ಮಹಿಳೆಯರು ರಾಜಕಾರಣದಲ್ಲಿ ತೊಡಗಿಸಿಕೊಳ್ಳುವುದು ಹಾಗು ಚುನಾವಣೆಗಳಲ್ಲಿ ಸ್ಪರ್ಧಿಸುವುದು ಅವಶ್ಯಕವಾಗಿದ್ದು , ಇಂತಹವರಿಗೆ ಕೆ ಆರ್ ಎಸ್ ಪಕ್ಷವು ಉತ್ತಮ ವೇದಿಕೆಯಾಗಿದೆ . ಈ ಹಿನ್ನೆಲೆಯಲ್ಲಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಕೆ.ಆರ್.ಎಸ್ . ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಲುವಾಗಿ ಸ್ಪರ್ಧಿಸಲು ಬಯಸುವ ಪ್ರಾಮಾಣಿಕ , ಜನಪರ ಕಾಳಜಿ ಇರುವ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ . ಬೆಂಗಳೂರಿನಂತಹ ಅಂತರಾಷ್ಟ್ರೀಯ ನಗರಕ್ಕೆ ಭ್ರಷ್ಟಾಚಾರಮುಕ್ತ ದಕ್ಷ ಆಡಳಿತ , ಉತ್ತಮ ಮೂಲಭೂತ ಸೌಕರ್ಯಗಳು , ನಾಗರಿಕ ಕೇಂದ್ರಿತ ಲಂಚಮುಕ್ತ ಸೇವೆಗಳು , ಸ್ವಚ್ಛ , ಸುಂದರ ಬೆಂಗಳೂರು ನಗರ , ಅತ್ಯುತ್ತಮ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಇತ್ಯಾದಿಗಳನ್ನು ನೀಡುವ ಗುರಿ ಇಟ್ಟುಕೊಂಡು ಬಿಬಿಎಂಪಿಯ ಎಲ್ಲಾ ವಾರ್ಡ್ ಗಳಲ್ಲಿ ಸ್ಪರ್ಧಿಸಲು ಸೂಕ್ತ ಮತ್ತು ಅರ್ಹ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಈ ಮೂಲಕ ಚಾಲನೆ ನೀಡಲಾಗುತ್ತಿದೆ . ಆಸಕ್ತರಿರುವ ಅಕಾಂಕ್ಷಿಗಳು ಕೆಳಗೆ ನೀಡಿರುವ ವೆಬ್ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು . ವೆಬ್ ಲಿಂಕ್ ಪಡೆಯಲು ಕೆಳಗೆ ನೀಡಿರುವ QR ಕೋಡ್ ನ್ನು ಯಾವುದೇ QR ಮಾಡಿ ಪಡೆದುಕೊಳ್ಳಬಹುದು . code app ಬಳಸಿ ಸ್ಕಾನ್ https://cybermatrix.in/bbmpelereg or 9611720802 ” BBMP “ಎಂದು ವಾಟ್ಸಾಪ್ ಮಾಡಬಹುದು

City Today News
9341997936