
2017 ಹಾಗೂ 2018 ರಲ್ಲಿ ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೀಗೇಕುಪ್ಪೆ ಗ್ರಾಮಪಂಚಾಯಿತಿಗೆ ಎರಡು ಕೋಟಿ ರೂಪಾಯಿ ಅನುದಾನ ಮಂಜೂರಾಗಿರುತ್ತದೆ , ಕ್ರಿಯಾಯೋಜನೆ ತಯಾರಾಗಿ ಐದು ವರ್ಷ ಕಳೆದರೂ ಕೂಡ ಶೇಕಡ 50 ರಷ್ಟು ಕೆಲಸಗಳು ಪೂರ್ಣಗೊಂಡಿಲ್ಲ , ಕೆ ಆರ್ ಐ ಡಿ ಎಲ್ ಸಂಸ್ಥೆ ಈ ಕಾಮಗಾರಿ ಗುತ್ತಿಗೆ ಪಡೆದಿದ್ದು ಕೆಲ ಸ್ಥಳೀಯ ರಾಜಕೀಯ ಪುಡಾರಿಗಳನ್ನು ಬಳಸಿಕೊಂಡು ಯೋಜನೆ ಅನುಷ್ಠಾನಗೊಳಿಸುತ್ತಿದೆ ಇದರಲ್ಲಿ ಕೆಲವೊಂದು ಸಿಮೆಂಟ್ ಕಾಂಕ್ರೀಟ್ ಹಾಗೂ ಚರಂಡಿ ಕೆಲಸ ಹೊರತುಪಡಿಸಿದರೆ ಬೇರೆ ಯಾವುದೇ ಕಾಮಗಾರಿ ಆಗಿಲ್ಲ ಹಾಗೂ ನರೇಗಾ ಯೋಜನೆಯಲ್ಲಿ ಪೂರ್ಣಗೊಂಡಿರುವ ಕಾಮಗಾರಿಗೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿಯು ಸೇರಿಸಿ ಅಕ್ರಮವಾಗಿ ನಕಲು ಬಿಲ್ ಮಾಡಲಾಗಿದೆ , ಕೆ ಆರ್ ಐ ಡಿ ಎಲ್ ಸಂಸ್ಥೆ ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಗೆ ಹೇಳಿದೆ , ಇದಕ್ಕೆ ಉದಾಹರಣೆ
1. ಸೀಗೇಕುಪ್ಪೆ ಜನತಾ ಕಾಲೋನಿಯಲ್ಲಿನ ನಂಜುಂಡಯ್ಯನವರ ಮನೆಯಿಂದ ಕರಿಯಪ್ಪನವರ ಮನೆಯವರೆಗೂ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವುದಾಗಿ ಸುಳ್ಳು ಹೇಳಿ ಬಿಲ್ ಪಡೆಯಲಾಗಿದೆ ,
2. ಸೀಗೆಕುಪ್ಪೆಯಲ್ಲಿ ಕಾಂತರಾಜು ರವರ ಮನೆಯಿಂದ ಪಟೇಲ್ ನಾರಾಯಣಪ್ಪನವರ ಮನೆಯವರಿಗೂ ಚರಂಡಿ ನಿರ್ಮಾಣ ಪೂರ್ಣಗೊಳಿಸಿರುವುದಾಗಿ ಸುಳ್ಳು ಹೇಳಿ ಬಿಲ್ ಪಡೆಯಲಾಗಿದೆ , ಆದರೆ ಅಲ್ಲಿ ಕೆಲಸವೇ ಅಗಿಲ್ಲ .

3. ಸೀಗೆಕುಪ್ಪೆಯಲ್ಲಿ ಚಿಕ್ಕಕೆಂಪಯ್ಯನವರ ಮನೆಯತ್ತಿರ ಸಿಮೆಂಟ್ ರಸ್ತೆ ಪೂರ್ಣಗೊಂಡಿರುವುದಾಗಿ ಹೇಳಲಾಗಿದೆ ಅದು ಕೂಡ ನಕಲಿ ,
4. ಚಕ್ರಬಾವಿ ಗ್ರಾಮಕ್ಕೆ ಸೇರಿದ ಚಿಕ್ಕಯ್ಯಸ್ವಾಮಿ ದೇವಸ್ಥಾನದ ಅತ್ತಿರ ಸೌಚಾಲಯ ನಿರ್ಮಿಸಿದ್ದು , ಇದಕ್ಕೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 5 ಲಕ್ಷ ಬಿಲ್ ಪಡೆಯಲಾಗಿದೆ , ಹಾಗೂ 14 ನೇ ಹಣಕಾಸಿನ ಯೋಜನೆ ಅಡಿಯಲ್ಲಿ 99,120 ರೂಗಳನ್ನು ಮತ್ತೆ ಬಿಲ್ ಮಾಡಲಾಗಿದೆ .
5. ಅರಳುಕುಪ್ಪೆ ಗ್ರಾಮದಲ್ಲಿ ರಂಗಸ್ವಾಮಯ್ಯರವರ ಮನೆಯಿಂದ ವೆಂಕಟರಾಮಯ್ಯನವರ ಮನೆಯವರಿಗೆ ಹಾಗೂ ನಂಜುಂಡಯ್ಯನವರು ಮನೆಯಿಂದ ಗುರುಬಸವಯ್ಯನವರು ಮನೆಯವರೆಗೂ ಕಾಂಕ್ರೀಟ್ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಮಾಡಿರುವುದು ಕಳಪೆ ಕಾಮಗಾರಿಯಾಗಿದೆ .
6. ಅರಳುಕುಪ್ಪೆ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿ 6 ಲಕ್ಷ ರೂಪಾಯಿ ಹಣ ಬಿಡುಗಡೆ ಆಗಿದೆ ಆದರೆ ಕಾಮಗಾರಿ ಆರಂಭವೇ ಆಗಿಲ್ಲ .
7. ಅರಳುಕುಪ್ಪೆ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಪ್ರಾರಂಭಿಸ ಬೇಕಿದೆ ಎಂದು ತಿಳಿಸಿ 4 ಲಕ್ಷ ರೂಪಾಯಿ ಹಣ ಬಿಡುಗಡೆ ಆಗಿದೆ ಆದರೆ ಕಾಮಗಾರಿ ಆರಂಭವೇ ಆಗಿಲ್ಲ
8. ಸೀಗೇಕುಪ್ಪೆ ಗ್ರಾಮಕ್ಕೆ ಸೇರಿದ ಶ್ರೀ ಬಸವಣ್ಣ ದೇವಸ್ಥಾನದ ಜೀರ್ಣೋದ್ಧಾರಕ್ಕೆ 6 ಲಕ್ಷ ಕಾಮಾಗಾರಿ ನಡೆಯದೇ ಹಣ ಬಿಡುಗಡೆಯಾಗಿದೆ .
9. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಯಂತ್ರೋಪಕರಣಗಳನ್ನು ಬಳಸಿ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಒಳಚರಂಡಿ ಮತ್ತು ಕೆರೆಕಟ್ಟೆಗಳ ನಿರ್ಮಾಣ ಮಾಡಲಾಗಿದೆ .
10 , 14 ನೇ ಹಣಕಾಸು ಆಯೋಗದಲ್ಲಿ ದುರ್ಬಳಕೆಯಾಗಿದೆ .
11. ಸೀಗೇಕುಪ್ಪೆ ಗ್ರಾಮ ಪಂಚಾಯಿತಿಯ ರಾಮನಗರ ಜಿಲ್ಲೆಯ ಗಡಿಯಂಚಿನ ಭಾಗವಾಗಿರುವುದರಿಂದ ಯಾವುದೇ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ ಎಂದು ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಗುಡ್ಡೇಗೌಡರು ಪತ್ರಿಕಾ ಗೋಷ್ಠಿಯಲ್ಲಿ ನುಡಿದರು.
City Today News
9341997936