ಶ್ರೀ ಬನಶಂಕರಿ ದೇವಿ ಸನ್ನಿಧಾನದಲ್ಲಿ 23 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ

” ಶ್ರೀ ಬನಶಂಕರಿ ದೇವಿ ಸನ್ನಿಧಾನದಲ್ಲಿ ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ” ಆಶ್ರಯದಲ್ಲಿ 23 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು 55 ವರ್ಷವ ಸರ ಏರ್ಪಡಿಸಿದ್ದು , ದಿನಾಂಕ : 27 / 03 / 2022 ನೇ ಭಾನುವಾರದಂದು ನಡೆಸಲು ವೇದಿಕೆಯು ತೀರ್ಮಾನಿಸಿದೆ .

ಕಳೆದ ಇಪ್ಪತ್ತೆರಡು ( 22 ) ವರ್ಷಗಳ ಕಾಲ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅರ್ಥಪೂರ್ಣ ರೀತಿಯಲ್ಲಿ ವೇದಿಕೆಯು ಆಚರಿಸಿಕೊಂಡು ಬಂದಿದ್ದು , ಈ ಬಾರಿಯು ಸಹ ಅದೇ ರೀತಿ ಸಾಮೂಹಿಕ ವಿವಾಹವನ್ನು ನಡೆಸಲು ವೇದಿಕೆಯು ಉತ್ಸುಕವಾಗಿದೆ . ಕಳೆದ ಇಪ್ಪತ್ತೆರಡು ವರ್ಷಗಳಲ್ಲಿ ಸರಿ ಸುಮಾರು 1231 ಕ್ಕೂ ಹೆಚ್ಚು ಜೋಡಿಗಳು ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದಾರೆ .

ಬಡವರು , ಹಿಂದುಳಿದ ವರ್ಗಗಳ ಜನರಿಗೆ ವಿವಾಹವು ಇತ್ತೀಚಿನ ದಿನಗಳಲ್ಲಿ ದುಬಾರಿಯಾಗುತ್ತಿರುವುದನ್ನು ವೇದಿಕೆಯ ಮನಗಂಡು ಶ್ರೀ ಬನಶಂಕರಿ ಅಮ್ಮನವರ ಆಶೀರ್ವಾದ ಪಡೆದು , ಅಂತಹ ವರ್ಗದ ಜನರಿಗೆ ಸರಳ ಹಾಗೂ ಉಚಿತವಾಗಿ ವಿವಾಹ ನಡೆಸುವ ಸಂಬಂಧಕ್ಕಾಗಿ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಯಿತು .

1999 ರಲ್ಲಿ ವೇದಿಕೆಯು ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಿತು . ಆರಂಭದ ವರ್ಷದಲ್ಲಿ 41 ಜೋಡಿಗಳು , ವೈವಾಹಿಕ ಜೀವನಕ್ಕೆ ಪ್ರವೇಶಿಸಿದವು . ಇದರಿಂದ ಪ್ರೇರಣೆಗೊಂಡ ವೇದಿಕೆಯು ಇಂತಹ ಧಾರ್ಮಿಕ , ಸಾಮಾಜಿಕ ಕಾಳಜಿ ಪರ ಕಾರ್ಯಕ್ರಮವನ್ನು ಪ್ರತೀ ವರ್ಷವು ಸಹ ಮುಂದುವರೆಸುವ ಸಂಕಲ್ಪ ಮಾಡಿ ಆದರ ಪರಿಣಾಮ ಇದೀಗ ಇಪ್ಪತ್ತ ಮೂರನೆ ( 23 ) ” ವರ್ಷಕ್ಕೆ ಕಾಲಿರಿಸಲು ಕಾರಣವಾಯಿತು .

ಜಾತಿ , ಮತ , ಭೇಧ ಎಲ್ಲಾ ಸಂಗತಿಗಳನ್ನು ದೂರ ಇರಿಸಿ ಎಲ್ಲಾ ವರ್ಗದ ಜನರನ್ನು ಒಂದೇ ಮದುವೆ ಮಂಟಪದಲ್ಲಿ ಕಲೆ ಹಾಕಿ ಸಾಮೂಹಿಕ ವಿವಾಹ ಮಾಡಲಾಗುತ್ತಿದೆ . ಎಂದಿನಂತೆ ಮಠಾಧೀಶರ ಆಶೀರ್ವಾದ , ಹಿರಿಯ ರಾಜಕಾರಣಿಗಳ ಮಾರ್ಗದರ್ಶನ ಹಾಗೂ ಸೇವಾ ಮನೋಭಾವವುಳ್ಳ ವ್ಯಕ್ತಿಗಳ , ಸಂಸ್ಥೆಗಳ ಸಹಕಾರದೊಂದಿಗೆ ಈ ಬಾರಿ ಹೆಚ್ಚಿನ ಜೋಡಿಗಳ ವಿವಾಹ ಮಹೋತ್ಸವದ ಗುರಿ ಹೊಂದಲಾಗಿದೆ .

ದಿನಾಂಕ- 27 / 03 / 2022 ನೇ ಭಾನುವಾರ ಬೆಳಗ್ಗೆ 07-40 ರಿಂದ 09-14ರ ಮೇಷ ಲಗ್ನದಲ್ಲಿ ಶ್ರೀ ಬನಶಂಕರಿ ದೇವಸ್ಥಾನ , ಕನಕಮರ , ಮುಖ್ಯರಸ್ತೆ , ಬನಶಂಕರಿ , ಬೆಂಗಳೂರು , ಇಲ್ಲಿ ಇರುವ ದೇವಾಲಯದ ಪ್ರಾಂಗಣದಲ್ಲಿ ಉಚಿತ ವಿವಾಹ ಮಹೋತ್ಸವವನ್ನು ಏರ್ಪಡಿಸಲಾಗಿದೆ . ಬೆಂಗಳೂರು ನಗರ , ಬೆಂಗಳೂರು ಗ್ರಾಮೀಣ ಹಾಗೂ ರಾಜ್ಯದ ವಿವಿಧ ಪ್ರದೇಶಗಳಲ್ಲಿ ವಾಸವಿರುವ ಇಚ್ಛೆಯುಳ್ಳ ವಧು – ವರರ ಬಂಧು , ತಂದೆ – ತಾಯಿಯರು ಮತ್ತು ಪೋಷಕರುಗಳು ದಿನಾಂಕ 20/03/2022 ರೊಳಗೆ ತಮ್ಮ ವಿವಾಹವಾಗಲಿರುವ ವಧು – ವರರ ಹೆಸರುಗಳನ್ನು ನೋಂದಾಯಿಸ ತಕ್ಕದ್ದು , ಆಸಕ್ತ ಪೋಷಕರು ಹಾಗೂ ತಂದೆ – ತಾಯಿಯರು ಹೆಚ್ಚಿನ ಮಾಹಿತಿಗಾಗಿ 080-26712988 , 7019073889 ದೂರವಾಣಿ : ಸಂಖ್ಯೆಗಳನ್ನು ಸಂಪರ್ಕಿಸುವುದು ,

ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಧು – ವರರಿಗೆ ಹಿಂದೂ ಸಂಪ್ರದಾಯದಂತೆ ಸಮವಸ್ತ್ರ ಬಾಸಿಂಗ , ಕಂಕಣದಾರ , ಹೂವಿನ ಹಾರ , ಮಾಂಗಲ್ಯ , ಕಾಲುಂಗರ , ಪೇಟೆ ಮತ್ತು ವಧು – ವರರ ಬಂಧು ಬಳಗದವರಿಗೆ , ಅಥಿತಿಗಳಿಗೆ ಹಾಗೂ ಸ್ಥಳೀಯರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಎ . ಹೆಚ್ . ಬಸವರಾಜು, ಅಧ್ಯಕ್ಷರು ತಿಳಿಸಿದರು

– ಎ . ಹೆಚ್ . ಬಸವರಾಜು, ಅಧ್ಯಕ್ಷರು , ಬನಶಂಕರಿದೇವಾಲಯ ಅಭಿವೃದ್ಧಿ ಸಮಿತಿ. ಮಾಜಿ ವಿರೋಧಪಕ್ಷದ ನಾಯಕರು , ಬಿಬಿಎಂಪಿ ,

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.