
ಏಟ್ರಿಯಾ ವಿಶ್ವವಿದ್ಯಾಲಯ ಹಾಗೂ ಏಟ್ರಿಯಾ ತಾಂತ್ರಿಕ ಕಾಲೇಜು ವತಿಯಿಂದ 73ನೆ ಗಣರಾಜೋತ್ಸವ ಧ್ವಜಾರೋಹಣವನ್ನು ಹಿರಿಯ ಪತ್ರಕರ್ತ ಮೋಹನ ಕುಲಕರ್ಣಿ, ಪರಿವರ್ತನೆ ಸಮೂಹ ಮುಖ್ಯ ಅತಿಥಿಗಳಾಗಿ ಆಗಮಿಸಿ ನಡೆಸಿಕೊಟ್ಟರು.

ಈ ದಿನವನ್ನು ‘ ಸಮರ್ಪಣೆ ದಿನವಾಗಿ ‘ ಆಚರಿಸಿ ಪ್ರತಿ ನಾಗರಿಕರು ತಮ್ಮ ಇತಿ ಮಿತಿಯಲ್ಲಿ ಸಂಕಲ್ಪ ಮಾಡಿ ದೇಶದ ಶ್ರೇಯಸಿಗಾಗಿ ತಮ್ಮಂನ್ನು ತಾವು ಮನಸಾಕ್ಷಯಿಂದ ಸಮರ್ಪಿಸಿ ಬರುವ ಗಣತಂತ್ರ ದಿವಸ ನಿಮಗೆ ನೀವೇ ವರದಿ ಸಲ್ಲಿಸಿ ಕೊಳ್ಳಲು ಕರೆ ನೀಡಿದ್ರು.ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಎಂ. ಸ್. ರಾಜೇಂದ್ರ ಕುಮಾರ್, ಸಂವಿಧಾನದ ಇಣುಕ ನೋಟ ನೀಡ ಸಭೆಗೆ ಉಪಯುಕ್ತ ಮಾಹಿತಿ ಕೊಟ್ಟರು.
ಏಟ್ರಿಯಾ ವಿಶ್ವ ವಿದ್ಯಾಲಯದ ನಿರ್ದೇಶಕರು ಕೆ. ವಿ. ನಾರಾಯಣ ಸ್ವಾಮಿ ಸಂವಿಧಾನದ ನಾಗರಿಕರಿಗೆ ನೀಡಿದ ಸವಲತ್ತು ಹಾಗು ಜವಾಬ್ದಾರಿಯ ಸೂಕ್ಷ್ಮ ತೆಯನ್ನು ಸಾಮಾನ್ಯ ನಾಗರೀಕರಿಗೆ ಅರ್ಥವಾಗುವಂತೆ ತಿಳಿಸಿಕೊಟ್ಟರು. ಡಾ. ಐಶ್ವರ್ಯ ಮುಖ್ಯ ಅತಿಥಿಗಳ ಪರಿಚಯಿಸುತ್ತ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಂಡರು.

ವಂದನಾರ್ಪಣೆಯಲ್ಲಿ ಪ್ರಾಂಶುಪಾಲರು ಡಾ. ಟಿ. ನ. ಶ್ರೀನಿವಾಸ್ ಗಣರಾಜೋತ್ಸವ ಹಾಗೂ ಜನೆವರಿ 26 ರ ಮಹತ್ವ ತಿಳಿಸುತ್ತ, ಮುಖ್ಯ ಅತಿಥಿಗಳೂ ನೀಡಿದ ಸಲಹೆಗೆ ಮನ್ನಣೆ ನೀಡಿ ದೇಶ ಮತ್ತು ಏಟ್ರಿಯಾ ಸಂಸ್ಥೆ ಹಿತದ್ರಷ್ಠಿಯಲ್ಲಿ ಏರಡು ಬಹಿರಂಗ ಸಂಕಲ್ಪ ಎಲ್ಲರ ಪರವಾಗಿ ಕೈಗೊಂಡರು. ಸುಭದ್ರ ಹಾಗು ಸುಶೀಕ್ಷತ ದೇಶ ಕಟ್ಟುವದರಲ್ಲಿ ಶಿಕ್ಷಕ ರ ಪಾತ್ರದ ಮಹತ್ವದ ಮನವರಿಕೆ ಮಾಡಿಕೊಟ್ಟರು. ಒಟ್ಟಾರೆ ಗಣರಾಜ್ಯೋಸ್ತವ ಅರ್ಥಗರ್ಬಿತವಾಗಿ ಮೂಡಿ ಬಂತು.
City Today News
9341997936