
ಬೆಂಗಳೂರು : ಬೆಂಗಳೂರಿನ ಮಾಜಿ ಪ್ರೊಫೆಸರ್ , ಮತ್ತು ಸಂಗೀತ ಶಿಕ್ಷಕರಾದ ಉಮೇಶ್ ಗೋಪಿನಾಥ ಚಾದವ ಅವರು ಪುಣ್ಯಾಮಾ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರು , ಕಾರ್ಗಿಲ್ ಯುದ್ಧ ಹಾಗೂ ಉರಿ ದಾಳಿ ಮತ್ತು ಮುಂಬೈ ಭಯೋತ್ಪಾದಕ ದಾಳಿಯಲ್ಲಿ ವೀರಮರಣ ಹೊಂದಿದ ಯೋಧರ ಮನೆಗಳಿಗೆ ಭೇಟಿ ನೀಡಿ ಹುತಾತ್ಮರಾದ ಸಮಾಧಿಯ ಒಂದು ಹಿಡಿ ಮಣ್ಣನ್ನು ಸಂಗ್ರಹಿಸಿದ್ದಾರೆ .
2019 ರಿಂದ ಏಕಾಂಗಿಯಾಗಿ ತಮ್ಮ ಕಾರ್ ಮೂಲಕ ದೇಶದ ಉದ್ದಗಲಕ್ಕೂ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ 1 ಲಕ್ಷ 15 ಸಾವಿರ ಕಿಮೀ ಯೋಧರ ಕುಟುಂಬದ ಸ್ಥಿತಿಗತಿ ಹಾಗೂ ಒಂದು ಹಿಡಿ ಮಣ್ಣು ಮತ್ತು ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿದ್ದಾರೆ .
ಸಂಗ್ರಹಿಸಿದ ಮಣ್ಣನ್ನು ದೆಹಲಿಯಲ್ಲಿ ಸ್ಮಾರಕ ನಿರ್ಮಾಣ ಮಾಡಲು ನಿರ್ಧರಿಸಿದ್ದು , ಮಿಲಿಟರಿಯ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಯೋಧರ ಕುಟುಂಬದ ಸ್ಥಿತಿಗತಿಗಳ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು .
City Today News
9341997936