
ಬೆಂಗಳೂರು ಪೂರ್ವ ತಾಲ್ಲೂಕು , ವರ್ತೂರು ಹೋಬಳಿ , ವರ್ತೂರು ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು , ವರ್ತೂರು ( ಕರ್ನಾಟಕ ಪಬ್ಲಿಕ್ ಶಾಲೆ ) ವರ್ತೂರು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ 1 ವರ್ಷ 3 ತಿಂಗಳಿನಿಂದ ಪ್ರಾಂಶುಪಾಲರಾಗಿ ಶಿಕ್ಷಣ ಕ್ಷೇತ್ರಕ್ಕೆ ಶ್ರೀ ಕೋದಂಡರಾಮಯ್ಯನವರು ತಮ್ಮದೇ ಆದ ಶೈಲಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ . ಹೀಗಿರುವಾಗಿ ಇವರು ಅಸ್ಪೃಷ್ಯತೆ ಜಾತಿಗೆ ಸೇರಿರುವ ಕಾರಣದಿಂದ ಸವರ್ಣೀಯ ಜಾತಿಯವರಾದ ಶ್ರೀ ಕೇಶವ್ ರೆಡ್ಡಿ , ಪ್ರಾಂಶುಪಾಲರು ಸರ್ಕಾರಿ ಪದವಿ ಪೂರ್ವ ಕಾಲೇಜು , ದೊಮ್ಮಸಂದ್ರ ಅನೇಕಲ್ ತಾಲ್ಲೂಕು , ಗುಂಜೂರು ಗ್ರಾಮದ ಜಿ.ಎ. ಮನೋಹರ ರೆಡ್ಡಿ , ಬಳಗೆರೆ ಗ್ರಾಮದ ರಾಜಾರೆಡ್ಡಿ , ತೂಬರಹಳ್ಳಿ ಗ್ರಾಮದ ಶಂಕರ್‌ರೆಡ್ಡಿ , ಸರ್ಕಾರಿ ಪದವಿಪೂರ್ವ ಕಾಲೇಜು ವರ್ತೂರು , ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಥಶಾಸ್ತ್ರ ಉಪನ್ಯಾಸಕರಾದ ಪದ್ಮಜ.ಟಿ.ಎಸ್ , ಭೌತಶಾಸ್ತ್ರ ಹೆಚ್ಚುವರಿ ಉಪನ್ಯಾಸಕರಾದ ಜಯರಾಮರೆಡ್ಡಿ , ಗಣಿತಶಾಸ್ತ್ರ ಉಪನ್ಯಾಸಕರಾದ ಹೆಚ್.ಎನ್.ಪ್ರಕಾಶ್ ಇವರುಗಳು ಪಟ್ಟಭದ್ರ ಹಿತಾಸಕ್ತಿಗಳಾಗಿದ್ದು ,

ತಮ್ಮ ರಾಜಕೀಯ ಪ್ರಭಾವದಿಂದ ಶ್ರೀ ಕೋದಂಡರಾಮಯ್ಯರವರನ್ನು ಉದ್ದೇಶಪೂರ್ವಕವಾಗಿ ಬೇರೆ ಕಡೆಗೆ ವರ್ಗಾವಣೆ ಮಾಡಿಸಿರುತ್ತಾರೆ , ಆದರೆ ಇವರು ಸದರಿ ವರ್ಗಾವಣೆ ಬಗ್ಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ ( ಕೆ.ಎ.ಟಿ ) ಯಲ್ಲಿ ತಡೆಯಾಜ್ಞೆಯನ್ನು ತಂದು ಸದರಿ ಕಾಲೇಜಿನಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ . ಆದ್ದರಿಂದ ಸದರಿ ಈ ಮೇಲೆ ತಿಳಿಸಿರುವ ವ್ಯಕ್ತಿಗಳು 59 ವರ್ಷ ವಯಸ್ಸಾಗಿರುವ ಡಯಾಬಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಶ್ರೀ ಕೋದಂಡರಾಮಯ್ಯ ರವರಿಗೆ ಜಾತಿ ನಿಂದನೆ ಮಾಡಿ , ಪ್ರಾಣ ಬೆದರಿಕೆ ಹಾಕಿ , ತಾವಾಗಿಯೇ ಬೇರೆ ಕಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಬೇಕೆಂದು ಬೆದರಿಕೆ ಹಾಕಿರುತ್ತಾರೆ . ಈ ವಿಚಾರವಾಗಿ ಶ್ರೀ ಕೋದಂಡರಾಮಯ್ಯ ರವರು ಸದರಿ ವ್ಯಕ್ತಿಗಳ ವಿರುದ್ಧ ಬೆಂಗಳೂರು ಪೂರ್ವ ವೈಟ್ ಫೀಲ್ಡ್ ಉಪ ಪೊಲೀಸ್ ಆಯುಕ್ತರವರಿಗೆ ದಿನಾಂಕ : 04.02.2022 ರಂದು ದೂರನ್ನು ನೀಡಿದ್ದು . ಸದರಿ ಆಯುಕ್ತರವರು ದಿನಾಂಕ : 17.02.2022 ರವರೆಗೆ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ , ಇದನ್ನು ಗಮನಿಸಿ ದಿನಾಂಕ : 17.02.2022 ರಂದು ಮೂಲನಿವಾಸಿ ಅಂಬೇಡ್ಕರ್ ಸಂಘದವರು ಸದರಿ ಉಪ ಪೊಲೀಸ್ ಆಯುಕ್ತರವರಿಗೆ ಕ್ರಮ ವಹಿಸದೆ ಇರುವ ಬಗ್ಗೆ ಹಾಗೂ ಇದರ ಬಗ್ಗೆ ಸಂಬಂಧಪಟ್ಟ ಸಹಾಯಕ ಪೊಲೀಸ್ ಆಯುಕ್ತರು ಮಾರತ್ತಹಳ್ಳಿ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ವರ್ತೂರು ಪೊಲೀಸ್ ಠಾಣೆ ಇವರುಗಳ ಗಮನಕ್ಕೆ ಬಂದಿದ್ದರೂ ಸಹ ಇಲ್ಲಿಯವರೆಗೂ ಇವರುಗಳೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲವಾದ್ದರಿಂದ ಸಂಘದ ಲೆಟೆರ್ ಹೆಡ್‌ನಲ್ಲಿ ಸಂಘಟನೆ ವತಿಯಿಂದ ಕ್ರಮ ವಹಿಸುವಂತೆ ಕೋರಿ ಮನವಿಯನ್ನು ಸಲ್ಲಿಸಿರುತ್ತಾರೆ . ಆದರೂ ಮನವಿಯನ್ನೂ ಸಹ ಇವರು ಕಡೆಗಣಿಸಿರುತ್ತಾರೆ . ಹಾಗೂ ಸದರಿ ಪೊಲೀಸ್ ಅಧಿಕಾರಿಗಳು ನ್ಯಾಯ ಮತ್ತು ಕಾನೂನನ್ನು ಗಾಳಿಗೆ ತೂರಿ ಅಸ್ಪೃಷ್ಯತೆ ಆಚರಣೆ ಮಾಡಿ , ಪ್ರಾಣ ಬೆದರಿಕೆ ಹಾಕಿರುವ ಆರೋಪಿಗಳಿಗೆ ಸಹಾಯ ಮಾಡಿ ರಾಜಿ ಸಂಧಾನ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ , ಆದರೆ ಶ್ರೀ ಕೋದಂಡರಾಮಯ್ಯ ರವರು ಇದಾವುದಕ್ಕೂ ಸ್ಪಂಧಿಸುತ್ತಿಲ್ಲ . ಆದ್ದರಿಂದ ಈ ಮೇಲ್ಕಂಡ ಮೂಲನಿವಾಸಿ ಅಂಬೇಡ್ಕರ್ ಸಂಘದ ವತಿಯಿಂದ ಈ ಮೇಲ್ಕಂಡ ಸಮಾಜಘಾತುಕ ವ್ಯಕ್ತಿಗಳು ಹಾಗೂ ಅವರಿಗೆ ಸಹಾಯ ಮಾಡುತ್ತಿರುವ ಹಾಗೂ ಸಾಮಾನ್ಯ ಜನತೆ / ನಾಗರೀಕರು ನ್ಯಾಯವನ್ನು ಕೋರಿ ಪೊಲೀಸ್ ಅಧಿಕಾರಿಗಳಿಗೆ ದೂರನ್ನು ಕೊಟ್ಟಾಗ ಸದರಿ ಅಧಿಕಾರಿಗಳು ದೂರನ್ನು ಸ್ವೀಕರಿಸಿ ಎಫ್.ಐ.ಆರ್ ದಾಖಲಿಸಿಕೊಡುವುದು ಕರ್ತವ್ಯವಾಗಿರುತ್ತದೆ . ಆದರೆ ಇವರು ಆ ರೀತಿ ಮಾಡದೆ ಸಿ.ಆರ್.ಪಿಸಿ 154 ಆಕ್ಟ್ನ ಉಲ್ಲಂಘನೆ ಮಾಡಿ ಬೇಜವಾಬ್ದಾರಿತನ ಹಾಗೂ ಕರ್ತವ್ಯಲೋಪವೆಸಗಿರುತ್ತಾರೆ.
City Today News
9341997936