ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಆಚರಣೆ

ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವವನ್ನು ಇದೆ ದಿನಾಂಕ 14.03.2022 ರಿಂದ ದಿನಾಂಕ 14.03.2023 ರವರೆಗೆ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಎಂದು ಆಚರಿಸಲು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಪ್ರತಿಷ್ಠಾನ ( ರಿ ) ಹಾಗೂ

ಶಾಂತವೇರಿ ಗೋಪಾಲಗೌಡ ಶತಮಾನೋತ್ಸವ ಆಚರಣೆ ಸಮಿತಿಯ ಅಧ್ಯಕ್ಷರು ಹಾಗೂ ಮಾನ್ಯ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರರವರು ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಕೋರಿರುತ್ತಾರೆ .

ಈ ಬಗ್ಗೆ ಸಕಾರದ ವತಿಯಿಂದ ಶತಮಾನೋತ್ಸವ ಆಚರಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ . ಆದರೆ ಈ ಮಧ್ಯೆ ಸಮಯಾವಕಾಶ ಕಡಿಮೆಯಿರುವುದರಿಂದ ದಿನಾಂಕ 14.03.2022 ಅವರ ಜನ್ಮ ದಿನಾಂಕ ಹಾಗೂ 99 ನೇ ವರ್ಷವಾಗಿರುವ ಕಾರಣ ಶತಮಾನೋತ್ಸವ ಉದ್ಘಾಟನಾ ಸಮಾರಂಭವನ್ನು ಶಾಂತವೇರಿ ಗೋಪಾಲಗೌಡ ವೃತ್ತ , ಅಂಬೇಡ್ಕರ್ ವೀದಿ , ವಿಧಾನ ಸೌಧ ಎದುರು ದಿನಾಂಕ 14.03.2022 ರ ಸೋಮವಾರದಂದು ಬೆಳಿಗ್ಗೆ 10.00 ಗಂಟೆಗೆ ಆಚರಿಸಲು ತೀರ್ಮಾನಿಸಿ , ಮಾನ್ಯ ಮುಖ್ಯಮಂತ್ರಿಗಳನ್ನು , ಶತಮಾನೋತ್ಸವ ಆಚರಣೆಯ ಸಮಿತಿಯ ಅಧ್ಯಕ್ಷರು ಮತ್ತು ಮಾನ್ಯ ಗೃಹ ಸಚಿವರು ಹಾಗೂ ಮಾನ್ಯ ಇಂಧನ , ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಕೋರಿಕೊಂಡಿರುತ್ತೇವೆ . ಇವರೆಲ್ಲರೂ ಭಾಗಿಯಾಗುತ್ತಾರೆ ಎಂಬುದನ್ನು ಹಾಗೂ ಆ ದಿನದಂದು ಶಾಂತವೇರಿ ಗೋಪಾಲಗೌಡರ ಅಭಿಮಾನಿ ಬಳಗದವರು , ಎಲ್ಲಾ ಹಿತೈಷಿಗಳು ಮತ್ತು ಮಲೆನಾಡು ಭಾಗದ ಎಲ್ಲಾ ಸಂಘ ಸಮಿತಿಯವರು , ಮತ್ತು ಬಂಧು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು , ಈ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿಕೊಳ್ಳುತ್ತಿದ್ದೇವೆ .

ರಾಮಮನೋಹರ್‌ ಶಾಂತವೇರಿ

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.