ಬೆಂಗಳೂರು ರನ್ನರ್ಸ್ ಜಾತ್ರೆ- ಸಮುದಾಯ ಓಟದ ವಿನೂತನ ಪ್ರಯೋಗ

ಬೆಂಗಳೂರು ನಗರದಲ್ಲಿ ಪ್ರಾರಂಭವಾಗಿರುವ ವಿನೂತನ ಹೆಸರಿನ ಸಮುದಾಯ ಓಟಕ್ಕೆ ಹಬ್ಬದ ಸಂಭ್ರಮ. ಬೆಂಗಳೂರು ರನ್ನರ್ಸ್ ಜಾತ್ರೆಯ ಉದ್ಘಾಟನೆ ಮಾರ್ಚ್18, 2022 ರಂದು ನಡೆಯಿತು. ಹೆಸರೇ ಸೂಚಿಸುವಂತೆ ಜಾತ್ರೆಯ ಸಂಭ್ರಮವಿರುವ ಈ ಓಟದ ಸಮಾರಂಭಕ್ಕೆ ಬೆಂಗಳೂರಿನ ಎಲ್ಲ ಬಡಾವಣೆಗಳಿಂದ ಓಟದ ಪ್ರೇಮಿಗಳನ್ನು ಆಕರ್ಷಿಸುವ ಉದ್ದೇಶವಿದೆ. ಮೊದಲ ಹಂತದ ಉದ್ಘಾಟನಾ ಸಮಾರಂಭ ಕಬ್ಬನ್ ಪಾರ್ಕಿನ ಸೆಂಚುರಿ ಕ್ಲಬ್ಬಿನಲ್ಲಿ ಜರುಗಿತು. ‌ ‌‌‌‌‌

ಈ ಸಮಾರಂಭದಲ್ಲಿ ಒಲಂಪಿಕ್ ಈಜು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಅರ್ಜುನ ಪ್ರಶಸ್ತಿ ವಿಜೇತ ನಿಶಾ ಮಿಲ್ಲೆಟ್ ಹಾಗೂ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಅರ್ಜುನ- ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾಲತಿ ಹೊಳ್ಳ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಾಜರಿದ್ದ ಮಾಜಿ ಪೊಲೀಸ್ ಕಮೀಷನರ್ ಶ್ರೀ ಭಾಸ್ಕರ ರಾವ್,ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಶ್ರೀ ಸತೀಶ ರೆಡ್ಡಿ ,ಎಂಎಲ್ಸಿ ಗೋಪಿನಾಥ ರೆಡ್ಡಿಯವರು ಬೆಂಗಳೂರು ರನ್ನರ್ಸ್ ಜಾತ್ರೆಯ ಪೋಷಕರಾಗಿರುತ್ತಾರೆ.

ಈ ಸಂದರ್ಭದಲ್ಲಿ ನಗರದ ವಿವಿಧ ಬಡಾವಣೆಗಳ ರನ್ನಿಂಗ್ ಕ್ಲಬ್ಗಳ ತರಬೇತುದಾರರು,ಓಟದ ಪ್ರೇಮಿಗಳು ,HSR ಲೇ ಔಟಿನ RWA ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ತಮ್ಮ ಓಟದ ಪ್ರೀತಿ ವ್ಯಕ್ತಪಡಿಸಿದರು. ಇವರೆಲ್ಲ ಮುಂದಿನ ದಿನಗಳಲ್ಲಿ ಈ event ನ್ನು ಬೆಳೆಸಿ ಮುಂದೆ ಕೊಂಡೊಯ್ಯುವಲಗಲಿ ಮುಖ್ಯ ಪಾತ್ರ ವಹಿಸಲಿದ್ದಾರೆ.

ಪ್ರತಿ ವರ್ಷ ಜೂನ್ ತಿಂಗಳ ಮೊದಲ ಭಾನುವಾರದಂದು ಈ ರನ್ನರ್ಸ್ ಜಾತ್ರೆಯನ್ನು ನಡೆಸಲು ನಿರ್ಧರಿಸಲಾಗಿದ್ದು ಈ ವರ್ಷ ಜೂನ್ 5,2022_ರಂದು ಆಯೋಜಿಸಲಾಗುವುದು. ಈಗಾಗಲೇ ದಿನಾ ಓಡುವ ಹವ್ಯಾಸ ಹೊಂದಿರುವವರ ಜೊತೆಗೆ ಹೊಸಬರು ,ವಯಸ್ಸಾದವರು ,ಮಕ್ಕಳನ್ನು ಕೂಡ ಈ ಫಿಟ್ನೆಸ್ ಓಟಕ್ಕೆ ಆಕರ್ಷಿಸುವುದು ಮುಖ್ಯ ಉದ್ದೇಶವಾಗಿದೆ. ಈವೆಂಟನ್ನು 5 ವಿಭಾಗಗಳಲ್ಲಿ 10 kms ಎಕ್ಸ್ ಪ್ರೆಸ್ ,10 ಕಿಮೀ ಓಪನ್ ; 5 ಕಿಮೀ ಎಕ್ಸ್ ಪ್ರೆಸ್ ,5 ಕಿಮೀ ಓಪನ್ ಹಾಗೂ ಮಕ್ಕಳಿಗೆ ವಿಶೇಷವಾಗಿ 3 ಕಿಮೀ ಓಟದ ವಿಭಾಗಗಳನ್ನು ನಡೆಸಲಾಗುವುದು. ಗೃಹಿಣಿ ಯರು, ಹಿರಿಯ ನಾಗರಿಕರು, ಮಕ್ಕಳು ,ಉದ್ಯೋಗಿಗಳು,ತರುಣರು ಹೀಗೆ ಸಮಾಜದ ಬೇರೆ ಬೇರೆ ಸ್ತರದವರನ್ನು ಆಕರ್ಷಿಸುವ ಉದ್ದೇಶವಿರುವ ಈ ರನ್ನರ್ಸ್ ಜಾತ್ರೆಗೆ 1500 ಜನ ಭಾಗವಹಿಸಬಹುದೆಂಬ ಅಂದಾಜು ಇದೆ. ಈ ಓಟದ ಮೊದಲ ಹಂತವನ್ನು ನಗರದ ಸ್ವಚ್ಛ – ಜನಪ್ರಿಯ ಬಡಾವಣೆ H SR ಲೇ ಔಟ್ ನಲ್ಲಿ ನಡೆಸಲಾಗುವುದು

ಪ್ರತಿ ಸ್ಪರ್ಧಿಯ ಟೈಮಿಂಗನ್ನು RFID ಎಂಬ ವಿಶೇಷ ತಂತ್ರಜ್ಞಾನದ ಮೂಲಕ ಗಮನಿಸಲಾಗುವುದು ಹಾಗೂ ಸ್ಪರ್ಧೆ ಪೂರೈಸುವ ಪ್ರತಿ ಸ್ಪರ್ಧಿಗೂ ಪದಕಗಳನ್ನು ನೀಡಲಾಗುವುದು. ಐದು ವಿಭಾಗಗಳಲ್ಲಿ ವಿಭಿನ್ನ ವಯೋಮಾನದವರಿಗೆ ಬೇರೆ ವೇದಿಕೆ, ಪ್ರಶಸ್ತಿಗಳಿರುತ್ತವೆ. -2-

ಈ ರನ್ನರ್ಸ್ ಜಾತ್ರೆಯ ಹಿಂದಿರುವವರು ಉದ್ಯೋಗದ ಜೊತೆಗೆ ಓಟದ ಪ್ರೇಮಿಗಳಾಗಿದ್ದು ಬೆಂಗಳೂರಿನ ಎಲ್ಲ ಭಾಗಗಳ ರನ್ನಿಂಗ್ ಪ್ರೇಮಿಗಳನ್ನು ಈ ನೆಪದಲ್ಲಿ ಒಂದೆಡೆ ಸೇರಿಸಿ ಫಿಟ್ನೆಸ್ ಉದ್ದೇಶವನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶ ಹೊಂದಿದ್ದಾರೆ. ಇವರಲ್ಲಿ ಅನೇಕರು 50 ಕಿಮೀ ಗಳ ultra run- Beyond 42.195 ನ ಎರಡೂ ಆವೃತ್ತಿಗಳಲ್ಲಿ ಭಾಗವಹಿಸಿದ್ದಾರೆ.ಕಳೆದ ಅಕ್ಟೋಬರ್ 2021 ರಲ್ಲಿ ಯಶಸ್ವಿಯಾದ ಎರಡನೇ ಹಂತದ ಈ ಓಟದಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು , ಪ್ರಾಯೋಜಕರು, ಸ್ವಯಂ ಸೇವಕರ ಅತ್ಯುತ್ತಮ ಪ್ರತಿಕ್ರಿಯೆ ಯಿಂದಾಗಿಯೆ ಈ ನೂತನ ಜಾತ್ರೆಯ ಪರಿಕಲ್ಪನೆ ಆರಂಭವಾಯಿತು.ಬೆಂಗಳೂರು ರನ್ನರ್ಸ್ ಜಾತ್ರೆ ಆರಂಭಿಸಿರುವ ಬೆಂಗಳೂರು ಸ್ಪೋರ್ಟ್ಸ್ ಫೌಂಡೇಷನ್ ಓಟದ ಪ್ರೇಮಿಗಳೇ ಒಂದಾಗಿ ಸ್ಥಾಪಿಸಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯ ಉದ್ದೇಶಗಳು ಹೀಗಿವೆ:ನಗರದಾದ್ಯಂತ ಜನರನ್ನು ಓಡುವತ್ತ ಆಕರ್ಷಿಸಿ ,ಫಿಟ್ನೆಸ್ ಕಡೆ ಸೆಳೆಯುವುದಾಗಿದೆ. ಈ ಹವ್ಯಾಸಕ್ಕೆ ಯಾವುದೇ ರೀತಿಯ ಖರ್ಚು ತಗುಲದಿರುವುದರಿಂದ ಯಾರು ಬೇಕಾದರೂ ಭಾಗವಹಿಸಬಹುದು. 2. ಉತ್ಸಾಹಿ ಹಾಗೂ ಪ್ರತಿಭಾವಂತ ಓಟಗಾರರನ್ನು ಗುರುತಿಸಿ ,ತರಬೇತಿ ನೀಡಿ ,ಅವರನ್ನು ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವಂತೆ ಮಾಡುವುದು.

ನಗರದಾದ್ಯಂತ ಜನರನ್ನು ಓಡುವತ್ತ ಆಕರ್ಷಿಸಿ ,ಫಿಟ್ನೆಸ್ ಕಡೆ ಸೆಳೆಯುವುದಾಗಿದೆ. ಈ ಹವ್ಯಾಸಕ್ಕೆ ಯಾವುದೇ ರೀತಿಯ ಖರ್ಚು ತಗುಲದಿರುವುದರಿಂದ ಯಾರು ಬೇಕಾದರೂ ಭಾಗವಹಿಸಬಹುದು. 2. ಉತ್ಸಾಹಿ ಹಾಗೂ ಪ್ರತಿಭಾವಂತ ಓಟಗಾರರನ್ನು ಗುರುತಿಸಿ ,ತರಬೇತಿ ನೀಡಿ ,ಅವರನ್ನು ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವಂತೆ ಮಾಡುವುದು.

ಬೆಂಗಳೂರು ಸ್ಪೋರ್ಟ್ಸ್ ಫೌಂಡೇಷನ್ ನ ಕೆಲವು ಸದಸ್ಯರು ಈ ಜಾತ್ರೆಯ ಪರಿಕಲ್ಪನೆ ಕುರಿತು ಹೀಗೆ ಹೇಳುತ್ತಾರೆ.

” ಈಗಾಗಲೇ ಓಟದ ನಕ್ಷೆಯಲ್ಲಿ ಸ್ಥಾನ ಗಳಿಸಿರುವ ಬೆಂಗಳೂರಿನಲ್ಲಿ ರನ್ನರ್ಸ್ ಜಾತ್ರೆಯ ಮೂಲಕ ಫಿಟ್ನೆಸ್ ನ್ನು ಜನಪ್ರಿಯಗೊಳಿಸಬೇಕಿದೆ.” – ವಿಜಯ್ ಎ .ಎಂ ,ಟ್ತಸ್ಟಿ ಬಿ ಎಸ್ ಎಫ್
” ವಯಸ್ಸು ,ಲಿಂಗಭೇದ ,ಉದ್ಯೋಗಗಳನ್ನು ಮೀರಿ ಓಡುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನಶೈಲಿಯಾಗುವಂತೆ ಮಾಡುವುದಾಗಿದೆ.”

  • ದರ್ಶನ್ ಜೈನ್ ,ಸದಸ್ಯರು ಬಿಎಸ್ಎಫ್
    ” ಇದರಲ್ಲಿ ಸ್ಥಳೀಯ ಮಟ್ಟದ ಶಾಲೆ, ಕಾಲೇಜು,ಆಸ್ಪತ್ರೆ,ಫಿಟ್ನೆಸ್ ಕೇಂದ್ರ ಇತ್ಯಾದಿಗಳ ಜನರೇ ಭಾಗವಹಿಸುವುದರಿಂದ ಪರಸ್ಪರ ಆತ್ಮೀಯತೆ ಇರುತ್ತದೆ. ಅವರೆಲ್ಲ ಪ್ರತಿ ವರ್ಷ ಬರುವ ಊರ ಜಾತ್ರೆಯಂತೆ ಈ ರನ್ನರ್ಸ್ ಜಾತ್ರೆಗೆ ಹಂಬಲಿಸುವಂತೆ ಮಾಡುವುದೇ ನಮ್ಮ ಗುರಿಯಾಗಿದೆ.” – ಕವಿತಾ ನಾಯರ್ ,ಟ್ರಸ್ಟೀ ಬಿಎಸ್ಎಫ್
    ಬೆಂಗಳೂರಿನ ಅದ್ಭುತ ಹವಾಮಾನದಿಂದಾಗಿ ಇಲ್ಲಿ ಫಿಟ್ನೆಸ್ ಗಾಗಿ ಓಡುವುದನ್ನೇ ಸ್ವೀಕರಿಸುವುದು ಸುಲಭ. ಈಗ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ರನ್ನಿಂಗ್ ಜನಪ್ರಿಯವಾಗಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಓಟಗಾರರು ಕೂಡ ಇಲ್ಲಿದ್ದಾರೆ. ರನ್ನಿಂಗ್ ಮೂಲಕ ‘ ಫಿಟ್ ಬೆಂಗಳೂರು’ ಪರಿಕಲ್ಪನೆಯನ್ನು ಜನಪ್ರಿಯಗೊಳಿಸುವುದು‌ ನಮ್ಮ ಉದ್ದೇಶ. ಹಾಗಾಗಿಯೇ ಈ event ಆರಂಭಿಸಿದ್ದೇವೆ ಎನ್ನುತ್ತಾರೆ ಬಿಎಸ್ಎಫ್ ಟ್ರಸ್ಟೀ ಶ್ರೀಧರ ರೆಡ್ಡಿ.
  • ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ನಿಂದಾಗಿ ಜನರು ಯಾವುದೇ ರೀತಿಯ ದೈಹಿಕ ಚಟುವಟಿಕೆಗಳ ಲ್ಲಿ ಭಾಗವಹಿಸಲಾಗಿಲ್ಲ. ಇದರ ಪರಿಣಾಮ ಅವರ ದೈಹಿಕ- ಮಾನಸಿಕ ಆರೋಗ್ಯದ ಮೇಲಾಗಿದೆ. ಇದನ್ನು ಸರಿದೂಗಿಸುವತ್ತ ರನ್ನರ್ಸ್ ಜಾತ್ರೆ ಸಹಾಯ ಮಾಡಲಿದೆ.
  • ಬಿಗ್ ಎಫ್ ಎಂ ಕನ್ನಡ ರೇಡಿಯೋ ಚಾನಲ್ ನೊಂದಿಗೆ ಸಹಭಾಗಿತ್ವ ಹೊಂದಿರುವ ಈವೆಂಟ್ ಗೆ ಶೆರಟಾನ್ ಗ್ರಾಂಡ್ ಹೊಟೆಲ್, Black Tulip flowers international ,Home brew ಸಂಸ್ಥೆಗಳು ಕೂಡ ಪ್ರಾಯೋಜಕತ್ವ ನೀಡುತ್ತಿವೆ. ಪ್ರಶಸ್ತಿಗೆ ಆರ್ಥಿಕ ಸಹಾಯ, ಪ್ರತಿಭಾಶಾಲಿ ಓಟಗಾರ ರಿಗೆ ಸಹಾಯ, ಫಂಡ್ ರೈಸಿಂಗ್ ಕುರಿತಂತೆ ಇನ್ನೂ ಕೆಲವು ಸಂಸ್ಥೆಗಳೊಂದಿಗೆ ಮಾತುಕತೆ ನಡೆದಿದೆ. ಬೆಂಗಳೂರು ರನ್ನರ್ಸ ಜಾತ್ರೆಯಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡು ,ಹೆಚ್ಚು ಜನರು ಪ್ರತಿ ವರ್ಷವೂ ಭಾಗವಹಿಸುವಂತೆ ಮಾಡುವುದೇ ಮುಖ್ಯ ಉದ್ದೇಶವಾಗಿದೆ.

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.