
ಒಳ ಚರಂಡಿ ವಿಭಾಗದಲ್ಲಿ ಸ್ವಚ್ಚತಾ ಕೆಲಸವನ್ನು ನಿರ್ವಹಿಸುತ್ತಿರುವ ಒಳಚರಂಡಿ ಸಹಾಯಕರು ಕರ್ನಾಟಕ ರಾಜ್ಯಾದ್ಯಂತ ತಮ್ಮ ಜೀವದ ಅಂಗು ತೊರೆದು ಮ್ಯಾನ್ ಹೋಲ್‌ಗಳಲ್ಲಿ ಕೆಲಸ ನಿರ್ವಹಿಸುವಾಗ ಸಾವನ್ನಪ್ಪಿರುತ್ತಾರೆ . ಪ್ರತಿನಿತ್ಯ ಮಲ – ಮೂತ್ರ ಶುಚಿತ್ವ ಮಾಡುತ್ತಿದ್ದು , ಈ ಕೆಲಸವು ತುಂಬಾ ಕಷ್ಟಕರವಾದ ಕೆಲಸವಾಗಿರುತ್ತದೆ . ಆರೋಗ್ಯ ಹಾಳಾಗಿ ಕೈಬೆರಳುಗಳು ತುಂಡಾಗಿ ಅನೇಕ ಕಾರ್ಮಿಕರುಗಳಿಗೆ ವಾಸಿಯಾಗದಂತಹ ಚರ್ಮರೋಗವು ಬಂದಿರುತ್ತದೆ . ಕರ್ನಾಟಕ ರಾಜ್ಯ 10 ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಒಳ ಚರಂಡಿ ಕಾರ್ಮಿಕರು 1 ವರ್ಷದಲ್ಲಿ ಸುಮಾರು 5-6 ಜನ ಮರಣ ಹೊಂದುತ್ತಿರುತ್ತಾರೆ . ಆದರೆ ಸರ್ಕಾರವು ನಮ್ಮ ಕೆಲಸವನ್ನು ಯು.ಜಿ.ಡಿ. ಹೆಲ್ಸರ್‌ಗಳೆಂದು ಪರಿಗಣಿಸಿರುವುದರಿಂದ ಖಾಯಂ ಪೌರಕಾರ್ಮಿಕರು ಹಾಗೂ ಗುತ್ತಿಗೆ ಪೌರ ಕಾರ್ಮಿಕರಿಗೆ ಸಿಗುತ್ತಿರುವ ಹಲವು ಸೌಲಭ್ಯಗಳಿಂದ ನಾವು ವಂಚಿತರಾಗುತ್ತಿದ್ದೇವೆ .
ರಾಜ್ಯ ಸರ್ಕಾರವು ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ , ಮಹಾನಗರ ಪಾಲಿಕೆಗಳ ವತಿಯಿಂದ ಹಾಲಿ ಕೆಲಸ ನಿರ್ವಹಿಸುತ್ತಿರುವ ಒಳಚರಂಡಿ ಕಾರ್ಮಿಕರುಗಳನ್ನು ಖಾಯಂಗೊಳಿಸಬೇಕೆಂದು ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಮೇಯರ್ ನಾರಾಯಣ ರವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಪ್ರಮುಖ ಬೇಡಿಕೆ : 1 ) ಕರ್ನಾಟಕ ರಾಜ್ಯ 10 ಮಹಾನಗರಪಾಲಿಕೆಗಳಲ್ಲಿ ಹಾಲಿ ಕೆಲಸ ನಿರ್ವಹಿಸುತ್ತಿರುವ ಒಳಚರಂಡಿ ಸಹಾಯಕರುಗಳನ್ನು ಖಾಯಂ ಮಾಡಬೇಕು .
ಮಾರ, ಪಳನಿ, ಕುಮಾರಸ್ವಾಮಿ, ಶ್ರೀನಿವಾಸ, ರಾಜು ಆರ್ . ಗಣೇಶ್ ಎಸ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ತಿತಿಯಿದ್ದರು.
City Today News
9341997936