
ಪಿರಾದುದಾರರಾದ ತಾಯಿ ಮಲ್ಲೇಶ್ವರಂನ ಮನೆಯೊಂದರಲ್ಲಿ ವಾಸವಾಗಿದ್ದು , ಯಾರೋ ಅಪರಿಚಿತ ವ್ಯಕ್ತಿ ತನ್ನ ತಾಯಿಯ ಮನೆಗೆ ನುಗ್ಗಿ ತನ್ನ ತಾಯಿಯ ಕುತ್ತಿಗೆ ಭಾಗಕ್ಕೆ ಯಾವುದೋ ಆಯುಧದಿಂದ ಹೊಡೆದು ರಕ್ತಗಾಯ ಪಡಿಸಿ , ತನ್ನ ತಾಯಿಯ ಕೊರಳಲ್ಲಿದ್ದ ಸುಮಾರು 50 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದು , ಸದರಿ ಆಸಾಮಿಯನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ .

ಈ ಪ್ರಕರಣದಲ್ಲಿ ತನಿಖೆ ಕೈಗೊಂಡ ಮಲ್ಲೇಶ್ವರಂ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ಲಭ್ಯವಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಹಾಗೂ ಸ್ಥಳೀಯರು ನೀಡಿದ ಮಾಹಿತಿ ಸಂಗ್ರಹಿಸಲಾಗಿ ಮನೆ ಮುಂದಿನ ಮರಗಳಲ್ಲಿ ತೆಂಗಿನಕಾಯಿ ಕೀಳುವ ವ್ಯಕ್ತಿಯಾಗಿರುತ್ತಾನೆಂದು ದೊರೆತ ಸುಳಿವಿನ ಮೇರೆಗೆ ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ ಆರೋಪಿಯ ವಶದಿಂದ ಸುಮಾರು 2 ಲಕ್ಷ ರೂ . ಬೆಲೆ ಬಾಳುವ 50 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಕಬ್ಬಿಣ ಮಚ್ಚನ್ನು ವಶಪಡಿಸಿಕೊಳ್ಳುವಲ್ಲಿ ಮಲ್ಲೇಶ್ವರಂ ಪೊಲೀಸರು ಯಶಸ್ವಿಯಾಗಿರುತ್ತಾರೆ . ತಮಿಳುನಾಡಿನ ಕೃಷ್ಣಗಿರಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಯು ಮೂಲತಃ ಜಿಲ್ಲೆಯವನಾಗಿದ್ದು , ಈತನು ಮಲ್ಲೇಶ್ವರಂನ ಬಿಲ್ಡಿಂಗ್ ಒಂದರ ಪಾರ್ಕಿಂಗ್ ಸ್ಥಳದಲ್ಲಿ ವಾಸವಿದ್ದು , ಮನೆಯ ಮುಂದೆ ಇರುವ ತೆಂಗಿನ ಮರಗಳಲ್ಲಿ ತೆಂಗಿನ ಕಾಯಿ ಕಿತ್ತುಕೊಡುವ ಕೆಲಸ ಮಾಡಿಕೊಂಡಿದ್ದು , ವಾರಕ್ಕೊಮ್ಮೆ ತನ್ನ ಸ್ವಂತ ಊರಿಗೆ ಹೋಗಿ ಬರುತ್ತಿದ್ದನು . ಪಿರಾದಿಯ ತಾಯಿ ಆರೋಪಿಗೆ ಆಗಾಗ ತಮ್ಮ ಮನೆಯ ಮುಂದೆ ಇರುವ ತೆಂಗಿನ ಮರದಲ್ಲಿ ಕಾಯಿಯನ್ನು ಕಿತ್ತುಕೊಡುವಂತೆ ಹೇಳುತ್ತಿದ್ದರು . ಅದೇ ತರಹ ಈ ಸಲ ತೆಂಗಿನ ಕಾಯಿಯನ್ನು ಕಿತ್ತುಕೊಡುವಂತೆ ಕರೆದಾಗ ಆರೋಪಿಯು ಅಜ್ಜಿ ಒಬ್ಬರೇ ಇರುವುದನ್ನು ಗಮನಿಸಿಕೊಂಡು ಈ ಕೃತ್ಯವೆಸಗಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ . ಆರೋಪಿಯ ಬಂಧನದಿಂದ ಮಲ್ಲೇಶ್ವರಂ ಪೊಲೀಸ್ ಠಾಣೆ -1 ಸುಲಿಗೆ ಪ್ರಕರಣ ಪತ್ತೆಯಾಗಿರುತ್ತದೆ . ಈ ಪ್ರಕರಣದಲ್ಲಿ ಶ್ರೀ ಕೆ.ಎಸ್ . ವೆಂಕಟೇಶ್ ಾಯ್ಡು , ಎಸಿಪಿ , ಮಲ್ಲೇಶ್ವರಂ ಉಪ ವಿಭಾಗದ ರವರ ಮಾರ್ಗದರ್ಶನದಲ್ಲಿ ಶ್ರೀ ಚಂದ್ರಶೇಖರ್ ಎಂ . , ಪೊಲೀಸ್ ಇನ್ಸ್ಪೆಕ್ಟರ್ , ಮಲ್ಲೇಶ್ವರಂ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳಾದ ಶ್ರೀ ವಿನೋದ ಜಿರಗಾಳೆ ಮತ್ತು ಗೀತಾ ತಟ್ಟಿ ಹಾಗೂ ಸಿಬ್ಬಂದಿಯವರಾದ ಶ್ರೀ ಮೆಹಬೂಬ್ ಸಾಬ್ ಹೆಚ್ 8903 , ಶ್ರೀ ಸುಭಾಷ್ ಪಿಸಿ 17566 , ಶ್ರೀ ಅಮರೇಶ್ ಪಿಸಿ 17565 , ಶ್ರೀ ಪ್ರಶಾಂತ್ ಪಿಸಿ 18605 , ಶ್ರೀ ಅನಂತಕುಮಾರ ಪಿಸಿ 18615 ರವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ .
City Today News
9341997936