
ಮಾರ್ಚ್ 30, ಬೆಂಗಳೂರು : ಮಣ್ಣು ಉಳಿಸಿ ಅಭಿಯಾನವನ್ನು ಬೆಂಬಲಿಸಲು ಭಾರತದ ಮರ್ಚೆಂಟ್ ನೇವಿ ಸೈಲರ್, ಸಾಗರ್ ಅವರು ಸೈಕಲ್ ನಲ್ಲಿ ಯಾತ್ರೆ ನಡೆಸಿ 3 ರಾಜ್ಯಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಪ್ರಾರಂಭಮಾಡಿದ್ದಾರೆ.

ಕೊಯಿಮತ್ತೊರಿನ ಆದಿಯೋಗಿ ಇಂದ ಆರಂಭಿಸಿರುವ ಸಾಗರ್, ಇಂದು ( ಮಾರ್ಚ್ 30) ಬೆಳಿಗ್ಗೆ, ಬೆಂಗಳೂರಿನ ಸೆಂಟ್ರಲ್ ಗ್ರಂಥಾಲಯ – ಕಬ್ಬನ್ ಪಾರ್ಕ್ ಗೆ ತಲುಪಿ ಸ್ಥಳೀಯ ಸ್ವಯಂಸೇವಕರು ಹಾಗು ಮಣ್ಣು ಉಳಿಸಿ ಅಭಿಯಾನದ ಬೆಂಬಲಿಗರನ್ನು ಭೇಟಿ ಮಾಡಿದರು.

ಕರ್ನಾಟಕ, ತಮಿಳು ನಾಡು ಮತ್ತು ಮಹಾರಾಷ್ಟ್ರದ 17 ನಗರಗಳಲ್ಲಿ ಶಾಲಾ-ಕಾಲೇಜುಗಳು ಮತ್ತು ಕಾರ್ಪೊರೇಟ್ ಕಂಪನಿಗಳಲ್ಲಿ ಮಣ್ಣು ಉಳಿಸುವುದರ ಬಗ್ಗೆ ಜಾಗೃತಿ ಮೂಡಿಸುವ ಸೇಷನ್ಗಳನ್ನು ಹಮ್ಮಿಕೊಳ್ಳುತೇನೆ ಎಂದು ತಿಳಿಸಿದ್ದಾರೆ. ಶಾಲಾ ಮಕ್ಕಳಿಗೆ ತಾವುಗಳು ಪ್ರಧಾನ ಮಂತ್ರಿಗಳನ್ನು ಉದ್ದೇಶಿಸಿ ಪತ್ರವನ್ನು ಬರೆಯುವಂತೆ ಪ್ರೇರೇಪಣೆ ನೀಡುವುದಾಗಿ ಹೇಳಿದರು.
City Today News
9341997936