ಟಿಪ್ಪು ಸುಲ್ತಾನ್ ರವರ ಕುರಿತ ಕೆಲವು ವಿಷಯಗಳನ್ನು ತೆಗೆಯುತ್ತಿರುವ ‘ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ‘ ಯ ನಿಲುವನ್ನು ಖಂಡಿಸಿ ಪತ್ರಿಕಾ ಗೋಷ್ಠಿ

ಮೈಸೂರು ಹುಲಿ ಟಿಪ್ಪುಸುಲ್ತಾನ್ ರವರ ಹೆಸರಿನಲ್ಲಿ ಹೆಸರರಚುವ ಕೆಲಸವನ್ನು ಒಂದು ವರ್ಗ ನಿರಂತರವಾಗಿ ಮಾಡುತ್ತ ಬಂದಿದೆ . ಅದರ ಭಾಗವಾಗಿಯೇ ಇತಿಹಾಸಕಾರರಲ್ಲದ ಸೃಜ ಚರಿತ್ರೆಯನ್ನು ತಿರುಚುವ ಕಲ ವ್ಯಕ್ತಿಗಳು ಟಿಪ್ಪು ರವರಿಗೆ ಮೈಸೂರು ಹುಲಿ ಎಂಬ ಬಿರುದು ಕೊಟ್ಟವರಾರೆಂದು ಪ್ರಶ್ನಿಸುತ್ತಾರೆ , ಹಾಗೆ ಕೇಳುವ ಹಕ್ಕು ಇಲದ ಇಂತಹ ವ್ಯಕ್ತಿಗಳು ಪಠ್ಯಪುಸ್ತಕದಿಂದ ಟಿಪ್ಪುರನ್ನು ಮರೆಮಾಚುವ ಕೃತ್ಯದ ಜವಾಬ್ದಾರಿ ಹೊತ್ತುಕೊಂಡು ಕೆಲಸ ಮಾಡುತ್ತಿದ್ದಾರೆ ,

ಪ್ರಚಂಡ ಹೋರಾಟಗಾರರಾಗಿದ್ದ , ಜನಪರ ನವ ರಾಜ್ಯ ಆಡಳಿತ ವ್ಯವಸ್ಥೆಯನ್ನು ಈ ನಾಡಿಗೆ ಪರಿಚಯಿ ಸಿದ , ರೇಷ್ಮೆ ಕೃಷಿಯನ್ನು ಅಭಿವೃದ್ಧಿಗೊಳಿಸಿ ಕೋಟ್ಯಂತರ ರೈತರಿಗೆ ನೇರವಾದ , ರಾಕೆಟ್ ತಂತ್ರಜ್ಞಾನವನ್ನು ಮೊದಲಿಗೆ ಪರಿಚಯಿಸಿದ ಸ್ವಾಭಿಮಾನಿ , ಕನ್ನಡ ಪರ , ಭಾರತದ ಸ್ವತಂತ್ರ ಹೋರಾಟ ಗಾರ ಟಿಪ್ಪು ಸುಲ್ತಾನ್ ರನ್ನು ಮೈಸೂರಿನ ಹುಲಿಯೆಂದು ಮೈಸೂರಿನ ಮಹಾಜನತೆಯೇ ಕರೆದವರು .

ನಮ್ಮ ದೇಶವಾಳಿದ ಟಿಪ್ಪುವಿನ ಪರಮ ವೈರಿಗಳಾಗಿದ್ದ ಬ್ರಿಟೀಷರೇ ಒಪ್ಪಿಕೊಂಡು ಹಾಗಂತ ದಾಖಲಿಸಿದ್ದಾರೆ . ಸುಮಾರು ಭಾಷೆಗಳಲ್ಲಿ ಸಾವಿರಾರು ಪುಸ್ತಕಗಳಲ್ಲಿ ಇದನ್ನು ದಾಖಲಿಸಲಾಗಿದೆ . ಒಂದು ವರ್ಗ ಟಿಪ್ಪುರನ್ನು ಪಠ್ಯ ಪುಸ್ತಕದಿಂದ ಅಳಿಸಿದ ಮಾತ್ರಕ್ಕೆ ಚರಿತ್ರೆಯೇ ಬದಲಾಗಿ ಬಿಡುವುದಿಲ್ಲ ಟಿಪ್ಪು ಸುಲ್ತಾನ್ ಕನ್ನಡ ನಾಡಿಗೆ ಆ ಮೂಲಕ ಭಾರತಕ್ಕೆ ಕೊಟ್ಟ ಕೊಡುಗೆ- ಸಾಧನೆಗಳನ್ನು ಜನಗಳಿಗೆ ತಿಳಿಸುವ ಕೆಲಸವನ್ನು ಮಾಡುವಂಥವರು ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ .

ನೈಜ ಇತಿಹಾಸದ ಬುನಾದಿಯ ಮೇಲೆ ವೈಚಾರಿಕ ಸಮಾಜ ಕಟ್ಟುವ ಕಾರ್ಯಗಳಲ್ಲಿ ನಾವಲಾ ಕೈಜೋಡಿಸಿದ್ದೇವೆ . ಈ ಮೂಲಕ ಕರ್ನಾಟಕ ರಾಜ್ಯ ಸರ್ಕಾರದ ‘ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ‘ ಯ ಶಾಲಾ ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ರ ಕುರಿತಾದ ಕೆಲವು ಅಂಶಗಳನ್ನು ತೆಗೆಯುತ್ತಿರುವ ನಿಲುವನ್ನು ನಾವು ಖಂಡಿಸುತ್ತೇವೆ .

ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರು ಸಾಹಿಬ್ ಜಾದ ಸಯದ್ ಮನ್ಸೂರ್ ಅಲಿ ರವರು , ರಾಷ್ಟ್ರೀಯ ಅಧ್ಯಕ್ಷರು , ತಹರಿಕ್ -ಇ – ಖುದಾ ದಾದ್ ಹಾಗು ಟಿಪ್ಪುಸುಲ್ತಾನ್ ವಂಶಸ್ಥರು . ಸುಭಾಷ್ K R ರವರು , ವಕೀಲರು ಅನಂದ್ ಸಿದ್ಧಾರ್ಥ ಮಾಲೂರು ರವರು , ಯುವ ಮುಖಂಡರು ಫೈರೋಜ್ ಖಾನ್ ರವರು , ಅಧ್ಯಕ್ಷರು , ಜೈ ಜನ್ಮ ಭೂಮಿ ರಕ್ಷಣಾ ಪಡೆ , ಡಾ . ಖಾಸಿಂ ಸಾಬ್ ರವರು , ಸಂಚಾಲಕರು , ಯೂಥ್ ಬ್ಯುಸಿನೆಸ್ ಚೇಂಬರ್ , ಬೆಂಗಳೂರು . ವ್ಯವಸ್ಥಾಪಕರು : ತಹರಿಕ್ -ಇ – ಖುದಾ ದದ್ , ಸಂಘಟನ – ಕರ್ನಾಟಕ

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.