
• ವಿದ್ಯಾರ್ಥಿಗಳ ಕಲಿಕೆಯ ಅನುಭವವನ್ನು ಹೆಚ್ಚಿಸುವ ಸುಧಾರಿತ 67 ಲೈವ್ ಇಂಟರಾಕ್ಟಿವ್ ಫೀಚರ್ಗಳು
• ಪ್ರಮುಖ ವಿಶೇಷತೆಗಳಲ್ಲಿ 3ಡಿ++, ಮಲ್ಟಿ ಟೀಚರ್ ಮಾಡೆಲ್, ಪೋರ್ಟಲ್, ಎಆರ್ ಫಿಲ್ಟರ್, ಡ್ರ್ಯಾಗ್/ಡ್ರಾಪ್, ಸ್ಟಾರ್ಸ್, ಬ್ಯಾಡ್ಜಸ್ ಅಂಡ್ ಧೋಲ್, ಆನ್ ಸ್ಟೇಜ್, ಇನ್ಸ್ಟಂಟ್ ಡೌಟ್ ಸಾಲ್ವಿಂಗ್, ಲೀಡರ್ಬೋರ್ಡ್, ರಿಪೋರ್ಟ್ ಕಾರ್ಡ್ ಮತ್ತು ಮೈಲ್ಸ್ಟೋನ್ಸ್
• ವೇವ್ 2.0 ಇತರೆ ಪ್ಲಾಟ್ಫಾರಂಗಳಿಗಿಂತ ಶೇ.40ರಷ್ಟು ಕಡಿಮೆ ಬ್ಯಾಂಡ್ವಿಡ್ತ್ ಬಳಸುತ್ತದೆ
• ಕಳೆದ ಒಂದು ವರ್ಷದಲ್ಲೇ 280 ಮಿಲಿಯನ್ ವಿದ್ಯಾರ್ಥಿಗಳು ವೇದಾಂತುಗೆ ಭೇಟಿ ನೀಡಿದ್ದಾರೆ ಮತ್ತು ಅದರ ಯೂಟ್ಯೂಬ್ ಚಾನೆಲ್ಗಳು 500 ಮಿಲಿಯನ್ ವೀಕ್ಷಣೆ ಕಂಡಿವೆ

ಭಾರತ, ಮಾರ್ಚ್ 31, 2022: ಲೈವ್ ಆನ್ಲೈನ್ ಕಲಿಕೆಯಲ್ಲಿ ಮುಂಚೂಣಿಯಲ್ಲಿರುವ ವೇದಾಂತು ವಿಶ್ವದ ಅತ್ಯಂತ ಸಂವಹನ ಹಾಗೂ ಪರಿಣಾಮಕಾರಿ ತರಗತಿ ವೇವ್ 2.0(W.ಂ.ಗಿ.ಇ 2.0) ತಮ್ಮ ಕಾರ್ಯಕ್ರಮ ವಿಟೋಪಿಯಾದಲ್ಲಿ ಬಿಡುಗಡೆ ಮಾಡಿದೆ. ಈ ಪೇಟೆಂಟ್ ಮಾಡಲಾದ ತಂತ್ರಜ್ಞಾನವು ಕಲಿಕೆಯ ಅನುಭವವನ್ನು ಮರು ರೂಪಿಸಲಿದೆ ಮತ್ತು ಸಾಧನೆಯ ಮಾನ್ಯತೆಯನ್ನು ಸಂಪೂರ್ಣ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ವೇವ್(ವೈಟ್ಬೋರ್ಡ್ ಆಡಿಯೊ ವಿಡಿಯೊ ಎನ್ವಿರಾನ್ಮೆಂಟ್) ಕಲಿಕಾ ಪ್ಲಾಟ್ಫಾರಂನ 2.0 ಆವೃತ್ತಿಯಾಗಿದ್ದು ಪ್ರತಿ ಮಗುವಿಗೂ ಸ್ಫೂರ್ತಿ ತುಂಬುವ ಹಾಗೂ ಗುಣಮಟ್ಟದ ಶಿಕ್ಷಣವನ್ನು ಲಭ್ಯವಿರುವಂತೆ ಮಾಡವ ಹಾಗೂ ಭಾರತದಲ್ಲಿ ಪರಿಣಾಮವನ್ನು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಸುವ ಗುರಿ ಹೊಂದಿದೆ.
ವೇವ್ನ ಶಕ್ತಿಯು ರಿಯಲ್ ಟೈಮ್ನಲ್ಲಿ ತನ್ನ ಎಐ/ಎಂಎಲ್ ಬಳಸಿ 100+ ನಿಯತಾಂಕಗಳನ್ನು ಅಳೆಯುವ ಮಹತ್ತರ ಸಾಮಥ್ರ್ಯದಲ್ಲಿದ್ದು ವಿದ್ಯಾರ್ಥಿಯ ಸಕ್ರಿಯತೆ, ಬೋಧನೆಯ ಪರಿಣಾಮಕಾರಿತ್ವ ಮತ್ತು ಕಲಿಕೆಯ ಫಲಿತಾಂಶಗಳನ್ನು ಉತ್ತೇಜಿಸುತ್ತದೆ. ಈ ಸಂಚಲನಾತ್ಮಕ ತಂತ್ರಜ್ಞಾನವು ಫೇಸ್ ರಿಕಗ್ನಿಷನ್, ಕಂಟೆಂಟ್, ವೈಟ್ಬೋರ್ಡ್ ಯುಸೇಜ್ ಅನಾಲಿಸಿಸ್, ವರ್ಬಲ್ ಇಂಟರಾಕ್ಷನ್ ಅನಾಲಿಸಿಸ್, ಡೌಟ್ ಅನಾಲಿಸಿಸ್, ಟೋನ್ ಮತ್ತು ಸೆಂಟಿಮೆಂಟ್ ಅನಾಲಿಸಿಸ್ ಮತ್ತಿತರವುಗಳ ಮೂಲಕ ನಿಖರ ಒಳನೋಟಗಳನ್ನು ನೀಡುತ್ತದೆ.
ತಂತ್ರಜ್ಞಾನ ಹಾಗೂ ವೈಯಕ್ತೀಕರಣವು ಊಹಿಸಲಾಗದ ಪ್ರಮಾಣದಲ್ಲಿ ಬಳಕೆಗೆ ಬಂದಿದ್ದರಿಂದ ಇಂದು ವಿದ್ಯಾರ್ಥಿಗಳು ವಿನೋದ, ಸಂವಹನಾತ್ಮಕ ಮತ್ತು ಪುರಸ್ಕಾರಯುತವಾದ ಅಧ್ಯಯನ ವಿಧಾನದೊಂದಿಗೆ ಸಕ್ರಿಯವಾಗಿದ್ದು ವೇವ್ 2.0 ಅತ್ಯುತ್ತಮವಾದ ವೈಯಕ್ತಿಕಗೊಳಿಸಿದ ಬೋಧನೆ, ಕಲಿಕೆ ಮತ್ತು ಗುರುತಿಸುವಿಕೆಯನ್ನು ಪ್ರತಿ ಮಗುವಿಗೂ ತಂದಿದ್ದು ಇದು 10 ಪಟ್ಟು ಹೆಚ್ಚು ಸಕ್ರಿಯ, ಪರಿಣಾಮಕಾರಿ, ಊಹಿಸಿಕೊಳ್ಳಬಲ್ಲದು ಮತ್ತು ಕೋಟ್ಯಂತರ ವಿದ್ಯಾರ್ಥಿಗಳ ಅತ್ಯಂತ ಅಲ್ಪ ವೆಚ್ಚದಲ್ಲಿ ಪರಿವರ್ತನೀಯ ಕಲಿಕೆಯ ಫಲಿತಾಂಶಗಳಿಗೆ ವಿನ್ಯಾಸಗೊಳಿಸಲಾಗಿದೆ. ಸುಧಾರಿತ ಎಐ/ಎಂಎಲ್ ತಂತ್ರಜ್ಞಾನದ ಅಳವಡಿಕೆಯಿಂದ ವೇದಾಂತು ಆನ್ಲೈನ್ ಶಿಕ್ಷಣ ಕಲೆಯ ಭವಿಷ್ಯಕ್ಕೆ ಮಾನದಂಡಗಳನ್ನು ನಿಗದಿಪಡಿಸಿದೆ. ಈ ಪ್ಲಾಟ್ಫಾರಂನ ಸಮಗ್ರ ಅನುಭವವು ಸಕ್ರಿಯ ವಿದ್ಯಾರ್ಥಿ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಹೆಚ್ಚು ವೇಗದ ಇಂಟರ್ನೆಟ್ ಪ್ರತಿಯೊಂದು ಕಡೆಯೂ ಇನ್ನೂ ತಲುಪದ ಭಾರತಕ್ಕೆ ನೈಜವಾಗಿ ವಿನ್ಯಾಸಗೊಳಿಸಲಾದ ವೇವ್ 2.0 ಉನ್ನತ ಗುಣಮಟ್ಟದ ಕಂಟೆಂಟ್ ನೀಡುತ್ತದೆ ಮತ್ತು ಇತರೆ ಪ್ಲಾಟ್ಫಾರಂಗಳಿಗಿಂತ ಶೇ.40ರಷ್ಟು ಕಡಿಮೆ ಬ್ಯಾಂಡ್ವಿಡ್ತ್ ಬಳಸುತ್ತದೆ.
ವೇದಾಂತು ಸಿಇಒ ಮತ್ತು ಸಹ-ಸಂಸ್ಥಾಪಕ ವಂಸಿ ಕೃಷ್ಣ, “ನಮ್ಮ ಪೇಟೆಂಟ್ ಮಾಡಲಾದ ತಂತ್ರಜ್ಞಾನದ ಮೂಲಕ ಅತ್ಯುತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲು ನಾವು ಬದ್ಧರಾಗಿದ್ದೇವೆ. ಪ್ರಾರಂಭದಿಂದಲೂ ವೇವ್ ಅನ್ನು 4000+ ಶಿಕ್ಷಕರು ಬಳಸುತ್ತಿದ್ದು 70 ಮಿಲಿಯನ್ ಗಂಟೆಗಳ ಕಾಲ 24 ಮಿಲಿಯನ್ ವಿದ್ಯಾರ್ಥಿಗಳಿಗೆ ಬೋಧಿಸಲು ಬಳಸಿದ್ದಾರೆ. ಮತ್ತು ಈ ವಿದ್ಯಾರ್ಥಿಗಳು 7300+ ನಗರಗಳು ಮತ್ತು ಪಟ್ಟಣಗಳಿಂದ ಬಂದಿದ್ದು ಅದು ಭಾರತದ ಒಟ್ಟು ನಗರಗಳು ಮತ್ತು ಪಟ್ಟಣಗಳ ಶೇ.92ರಷ್ಟು ಒಳಗೊಂಡಿದೆ. ವೇವ್ 2.0 ಮೂಲಕ ನಾವು ಕುತೂಹಲ ಹುಟ್ಟಿಸುವ ಮತ್ತು ಇಡೀ ಕಲಿಕೆಯ ಪ್ರಕ್ರಿಯೆಯನ್ನು ಹೆಚ್ಚು ತಲ್ಲೀನಗೊಳಿಸುವಂತೆ ಮಾಡುವ ಉದ್ದೇಶ ಹೊಂದಿದ್ದೇವೆ. ಶಿಕ್ಷಣದ ಗಡಿಗಳನ್ನು ಮೀರುವ ಕೊಡುಗೆ ಆವಿಷ್ಕರಿಸಲು ಮತ್ತು ಭಾರತದಲ್ಲಿ ಶಿಕ್ಷಣ ಕ್ಷೇತ್ರವು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲು ಉತ್ಸುಕರಾಗಿದ್ದೇವೆ. ಭೌಗೋಳಿಕ ಗಡಿಗಳು ಏನೇ ಇರಲಿ, ನಾವು ದೇಶಾದ್ಯಂತ ಮಕ್ಕಳಿಗೆ ಪರಿಣಾಮ ಸೃಷ್ಟಿಸುವ ಗುರಿ ಹೊಂದಿದ್ದೇವೆ” ಎಂದರು.
ಇಂದು ವೇವ್ 5 ಪೇಟೆಂಟ್ಗಳಿಗೆ ಅರ್ಜಿ ಸಲ್ಲಿಸಿದೆ ಮತ್ತು 1 ಪೇಟೆಂಟ್ಗೆ ಯ.ಎಸ್.ನಲ್ಲಿ ಈಗಾಗಲೇ ಅನುಮೋದನೆ ದೊರೆತಿದೆ.

ವೇವ್ 2.0 ತನ್ನಲ್ಲಿ 67 ಲೈವ್ ಇಂಟರಾಕ್ಟಿವ್ ಫೀಚರ್ಗಳನ್ನು ಒಳಗೊಂಡಿದ್ದು ಅದು ವಿದ್ಯಾರ್ಥಿಗಳನ್ನು ಹೆಚ್ಚಿನ ಸಂವಹನಗಳು ಉತ್ತೇಜಿಸುವ ಮೂಲಕ ಅವರ ನೈಜ ಸಾಮಥ್ರ್ಯ ಅನಾವರಣಗೊಳಿಸಲು ಮತ್ತು ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು ಸನ್ನದ್ಧರಾಗಿಸುತ್ತದೆ. ಈ ಹೊಸ ಆವೃತ್ತಿಯ ಪ್ರಮುಖಾಂಶಗಳಲ್ಲಿ-
1.ಎ ಪೋರ್ಟಲ್- ವಿದ್ಯಾರ್ಥಿಗಳಿಗೆ ಬರೆಯಲು ಮತ್ತು ಅವರ ತಿಳಿವಳಿಕೆಗೆ ತಕ್ಕಂತೆ ನಿರೂಪಿಸಲು ಡಿಜಿಟಲ್ ನೋಟ್ಬುಕ್. ಶಿಕ್ಷಕರು ವಿದ್ಯಾರ್ಥಿಗಳಿಗೆ 1:1 ಮೌಲ್ಯಮಾಪನ ಮತ್ತು ನೆರವು ನೀಡಬಹುದು ಮತ್ತು ನೋಟ್ಬುಕ್ ಅನ್ನು ಲೈವ್ ತರಗತಿಯಲ್ಲಿ ಹಂಚಿಕೊಳ್ಳಬಹುದು.
2. ಸಂಕೀರ್ಣತೆ ನಿವಾರಿಸಲು 3ಡಿ++ ಮಾಡೆಲ್ಗಳು – ಇದು ಸಂಕೀರ್ಣ ರೇಖಾಚಿತ್ರಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಮಾಡುತ್ತದೆ. ವಿದ್ಯಾರ್ಥಿಗಳು 3ಡಿ ಜಗತ್ತನ್ನು ಪ್ರವೇಶಿಸಬಹುದು, ಅತ್ಯಂತ ಸಣ್ಣ ವಿವರಗಳನ್ನೂ ಝೂಮ್ ಮಾಡಿ ನೋಡಬಹುದು ಮತ್ತು 3ಡಿ ಮಾಡೆಲ್ ತಿರುಗಿಸಬಹುದು.
3.ಮಲ್ಟಿ ಟೀಚರ್ ಮಾಡೆಲ್- ದೊಡ್ಡ ತರಗತಿಗಳನ್ನು ಗುಣಮಟ್ಟದಲ್ಲಿ ರಾಜಿಯಾಗದೆ ತಂಡಗಳಾಗಿ ನಿರ್ವಹಿಸಲು ತಡೆರಹಿತವಾಗಿ ಸೌಲಭ್ಯ ನೀಡುತ್ತದೆ. ಮಾಸ್ಟರ್ ಟೀಚರ್ಗಳು ಬೋಧನೆಗೆ ಗಮನ ನೀಡಿದರೆ ಕ್ಲಾಸ್ ಟೀಚರ್ ಎನಿಸಿದ ಎರಡನೆಯ ಶಿಕ್ಷಕರು ಏಕಕಾಲಕ್ಕೆ ವಿದ್ಯಾರ್ಥಿಗಳ ಅನುಮಾನಗಳನ್ನು ರಿಯಲ್-ಟೈಮ್ನಲ್ಲಿ ಪರಿಹರಿಸಬಹುದು. ಇದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಕಲ್ಪನೆಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳಲು ಮಾರ್ಗದರ್ಶನ ನೀಡಲು ಅವಕಾಶ ನೀಡುತ್ತದೆ.
4. ಮೈಲಿಗಲ್ಲು, ರಿಪೋರ್ಟ್ ಕಾರ್ಡ್ ಮತ್ತು ಲೀಡರ್ಬೋರ್ಡ್ – ಇದು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಸಾಧನೆ ತೋರಲು ಉತ್ತೇಜಿಸುತ್ತದೆ. ಶಿಕ್ಷಕರು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಅಂಕಿ ಅಂಶಗಳನ್ನು ಅರ್ಥ ಮಾಡಿಕೊಳ್ಳಲು ಅವರ ಕ್ವಿಜ್ó ಪ್ರಯತ್ನಗಳ ಮೂಲಕ ಮೈಲಿಗಲ್ಲಿನ ಘಟನೆಗಳ ರಿಪೋರ್ಟ್ ಕಾರ್ಡ್ ಪಡೆಯಬಹುದು. `ಲೀಡರ್ಬೋರ್ಡ್’ ವಿದ್ಯಾರ್ಥಿಗಳಿಗೆ ಟಾಪ್ 15 ಪಟ್ಟಿಯಲ್ಲಿ ರ್ಯಾಂಕ್ ನೀಡುತ್ತದೆ ಅದು ಅವರು ಚಟುವಟಿಕೆಯಲ್ಲಿ ಭಾಗವಹಿಸುವ ಮತ್ತು ಸರಿಯಾದ ಉತ್ತರಗಳನ್ನು ಪಡೆಯುವುದನ್ನು ಆಧರಿಸಿರುತ್ತದೆ.

5.ಸ್ಟಾರ್ಸ್, ಬ್ಯಾಡ್ಜಸ್ ಮತ್ತು ಢೋಲ್ ಇನ್ಸ್ಟಂಟ್ಲಿ – ತಕ್ಷಣದ ತೃಪ್ತಿ ವಿದ್ಯಾರ್ಥಿಯ ಮನೋಬಲ ಹೆಚ್ಚಿಸುತ್ತದೆ. ಈ ವಿಶೇಷತೆಯು ಅದನ್ನು ಸ್ಟಾರ್ಗಳು ಮತ್ತು ಢೋಲುಗಳನ್ನು ತಕ್ಷಣವೇ ಸುರಿಸುವ ಮೂಲಕ ವಿನೋದಮಯ ಅನುಭವ ಸೃಷ್ಟಿಸುತ್ತದೆ, ರಿವಾರ್ಡ್ ಕ್ಲಾಸ್ರೂಮ್ ಪರ್ಫಾರ್ಮೆನ್ಸ್ ಮತ್ತು ವರ್ತನೆ ಮತ್ತು ಅನಿಮೇಷನ್ ಹಾಗೂ ಸೌಂಡ್ ಎಫೆಕ್ಟ್ಗಳಿಂದ ಜನ್ಮದಿನಗಳ ಸಂಭ್ರಮಾಚರಣೆ ಹೊಂದಿದೆ.
6.ಎಆರ್ ಫಿಲ್ಟರ್ಗಳು – ಕಲಿಕೆಯನ್ನು ಮನರಂಜನೆ ಮತ್ತು ಶೈಕ್ಷಣಿಕವಾಗಿಸಲು ಶಿಕ್ಷಕರು ಕಿರಿಯ ವಿದ್ಯಾರ್ಥಿಗಳಿಗೆ ಬೋಧಿಸುವಾಗ ಅವರ ಗಮನ ಭಂಗವಾಗದಿರಲು ಫಿಲ್ಟರ್ಗಳನ್ನು ಬಳಸಬಹುದು.

7. ಆನ್ ಸ್ಟೇಜ್ ಅಪ್ರಿಸಿಯೇಷನ್ – ಪ್ರೇರಣೆ ಮತ್ತು ಪ್ರಶಂಸೆಯು ಕೇಂದ್ರವಾಗಿರುವ `ಆನ್ ಸ್ಟೇಜ್’ ಶಿಕ್ಷಕರಿಗೆ ಭೌತಿಕ ತರಗತಿಯಲ್ಲಿ ಏನು ಮಾಡುತ್ತಾರೋ ಅದನ್ನೇ ಮಾಡಲು ಅವಕಾಶ ನೀಡುತ್ತದೆ, ಅದು ವಿದ್ಯಾರ್ಥಿಗಳನ್ನು ಕಪ್ಪು ಹಲಗೆಯ ಮುಂದರೆ ತರುತ್ತದೆ ಹಾಗೂ ಅವರನ್ನು ಗುರುತಿಸಲು ಮತ್ತು ಪುರಸ್ಕರಿಸಲು ಅವಕಾಶ ನೀಡುತ್ತದೆ.
8.ಟ್ಯಾಗ್, ಡ್ರ್ಯಾಗ್, ಡ್ರಾಪ್ – ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವೆ ಸ್ಪರ್ಶ ಆಧರಿತ ಸಂವಹನವನ್ನು ಟ್ಯಾಗ್ ಅಂಡ್ ಡ್ರ್ಯಾಗ್/ಡ್ರಾಪ್ ಫೀಚರ್ನಿಂದ ಸರಳಗೊಳಿಸಬಹುದು. ವಸ್ತುಗಳನ್ನು ವೈಟ್ಬೋರ್ಡ್ ಸುತ್ತಲೂ ವಸ್ತುಗಳನ್ನು ಚಲಿಸಬಹುದು ಮತ್ತು ಹೊಂದಿಸಬಹುದು ಮತ್ತು ವಾಸ್ತವ ಚಿತ್ರಗಳನ್ನು ಕ್ಲಿಕ್ ಮಾಡುವ ಮೂಲಕ ಉತ್ತರಗಳನ್ನು ಆಯ್ಕೆ ಮಾಡಬಹುದು.

9.ತಕ್ಷಣ ಅನುಮಾನ ಪರಿಹಾರ-ರೆಕಾರ್ಡೆಡ್ ವಿಡಿಯೋ ಮತ್ತು ಲೈವ್ ರಿಯಲ್ – ಟೈಮ್ ತರಗತಿಗೆ ಅತ್ಯಂತ ಹೆಚ್ಚು ವ್ಯತ್ಯಾಸವೆಂದರೆ ವಿದ್ಯಾರ್ಥಿಯ ಸಂವಹನ ನಡೆಸಬಲ್ಲ ಹಾಗೂ ಅನುಮಾನಗಳನ್ನು ಕೇಳಬಲ್ಲ ಸಾಮಥ್ರ್ಯ. ವೇವ್ 2.0 `ಇನ್ಸ್ಟಂಟ್ ಡೌಟ್ ಸಾಲ್ವಿಂಗ್’ ಹೊಂದಿದ್ದು ಲೈವ್ ತರಗತಿಯಲ್ಲಿ ಹಲವು ಟೀಚರ್ ಅಸಿಸ್ಟೆಂಟ್ಸ್(ಟಿಎಗಳು) ವಿದ್ಯಾರ್ಥಿಗಳ ಅನುಮಾನಗಳನ್ನು ಪರಿಹರಿಸುವಲ್ಲಿ ಬೆಂಬಲಿಸುತ್ತಾರೆ. ಅವರ ತಂಡದ ಕೆಲಸ ಕನಸು ನನಸಾಗಿಸುತ್ತದೆ.
ವಿದ್ಯಾರ್ಥಿಗಳಿಗೆ ದೇಶದ ಮೂಲೆ ಮೂಲೆಗಳಿಂದ ಅತ್ಯುತ್ತಮ ಗುಣಮಟ್ಟದ ಶಿಕ್ಷಕರ ಲಭ್ಯತೆ ನೀಡುತ್ತದೆ ಮತ್ತು ಅವರು ಉನ್ನತ ಗುಣಮಟ್ಟದ ವೈಯಕ್ತಿಕಗೊಳಿಸಿದ ಕಂಟೆಂಟ್ ಮೂಲಕ ಅವರ ಕಲಿಕೆಯನ್ನು ರಿಯಲ್-ಟೈಮ್ ತರಗತಿಯ ನಂತರದ ವಿವರವಾದ ಒಳನೋಟಗಳನ್ನ ಪ್ರತಿ ತರಗತಿಗೆ ಅವರ ತೊಡಗಿಕೊಳ್ಳುವಿಕೆಯ ಫೀಡ್ಬ್ಯಾಕ್ನೊಂದಿಗೆ ಪಡೆಯುತ್ತಾರೆ. ದೊಡ್ಡ ಗುಂಪಿನ ತರಗತಿಗಳಿಗೆ ಈ ಪ್ಲಾಟ್ಫಾರಂ 2000 ವಿದ್ಯಾರ್ಥಿಗಳನ್ನು ಒಳಗೊಳ್ಳಬಹುದು ಮತ್ತು ವೆಬಿನಾರ್ ಗಳಿಗೆ 10000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಳ್ಳುತ್ತದೆ.
City Today News
9341997936