ಡಾ.ಜಿ. ಪರಮೇಶ್ವರ ಅವರ ಕುರಿತ ಪ್ರೊ.ಮಾದೇವ್ ಭರಣಿ ಸಂಪಾದಿತ “ ಸವ್ಯಸಾಚಿ ” ಗೌರವ ಗ್ರಂಥ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭ

ತುಮಕೂರಿನ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟ , ಸಿದ್ದಾರ್ಥ ನಗರ , ತುಮಕೂರು ವತಿಯಿಂದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಮಾಜಿ ಉಪಮುಖ್ಯಮಂತ್ರಿ ಮತ್ತು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಡಾ.ಜಿ. ಪರಮೇಶ್ವರ ಅವರ ಕುರಿತ ಪ್ರೊ.ಮಾದೇವ್ ಭರಣಿ ಸಂಪಾದಿತ “ ಸವ್ಯಸಾಚಿ ” ಗೌರವ ಗ್ರಂಥ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭವನ್ನು ದಿನಾಂಕ 10 ನೇ ಏಪ್ರಿಲ್ , 2022 ಭಾನುವಾರದಂದು ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣ , ಅಗಳಕೋಟೆ , ತುಮಕೂರಿನಲ್ಲಿ ಬೆಳಿಗ್ಗೆ 10.30 ಕ್ಕೆ ಆಯೋಜಿಸಲಾಗಿದೆ .

ಕಾರ್ಯಕ್ರಮವನ್ನು ಡಾ . ಕೆ . ಸಿರಿ ಸುಮೇಧಾ ಥೇರಾ , ಅಧ್ಯಕ್ಷರು , ಇಂಡೋ ಶ್ರೀಲಂಕಾ ಇಂಟರ್ ನ್ಯಾಷನಲ್ ಬುದ್ದಿಸ್ಟ್ ಅಸೋಸಿಯೇಷನ್ , ಹೈಸ್ಟ್ ಜಂಬೂದ್ವೀಪ , ಶ್ರೀಲಂಕಾ ಬುದ್ಧಿಸ್ಟ್ ಟೆಂಪಲ್ , ಸಮಥ್ , ವಾರಣಾಸಿ , ಭಾರತ ಇವರು ಉದ್ಘಾಟಿಸಲಿದ್ದಾರೆ . ಪದ್ಮಶ್ರೀ ಡಾ . ಚಂದ್ರಶೇಖರ ಕಂಬಾರ , ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ , ನಾಟಕಕಾರ , ಕಾದಂಬರಿಕಾರರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು , ನವದೆಹಲಿ ಅವರು ‘ ಸವ್ಯಸಾಚಿ ‘ ಗೌರವ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ . ಶ್ರೀ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು , ಅಧ್ಯಕ್ಷರು , ರಾಮಕೃಷ್ಣ ವಿವೇಕಾನಂದ ಆಶ್ರಮ , ತುಮಕೂರು ಹಾಗೂ ಹಳೆಯ ವಿದ್ಯಾರ್ಥಿ , ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ , ತುಮಕೂರು , ದಿಕೂಚಿ ಭಾಷಣ ನಡೆಸಿಕೊಡಲಿದ್ದಾರೆ . ನಾಡೋಜ ಡಾ . ಬರಗೂರು ರಾಮಚಂದ್ರಪ್ಪ , ಸಂಸ್ಕೃತಿ ಚಿಂತಕರು , ಸಿನಿಮಾ ನಿರ್ದೇಶಕರು ಹಾಗೂ ಪ್ರಸಿದ್ಧ ಬಂಡಾಯ ಸಾಹಿತಿಗಳು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ . ಶ್ರೀ ಮಾರುತಿ ಡಿ . ಮಾಲೆ , ಅಧ್ಯಕ್ಷರು , ಶ್ರೀಮತಿ ಕನ್ನಿಕಾ ಪರಮೇಶ್ವರಿ , ಆಡಳಿತ ಮಂಡಳಿ ಸದಸ್ಯರು , ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ , ತುಮಕೂರು ಇವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ . ಸುಗಮ ಸಂಗೀತ : ಖ್ಯಾತ ಗಾಯಕಿ , ಸಂಗೀತಾ ಕಟ್ಟಿ ಮತ್ತು ಬಳಗದಿಂದ ಏಪ್ರಿಲ್ 10 , 2022 ಭಾನುವಾರ ಬೆಳಿಗ್ಗೆ : 8.30 ರಿಂದ 10.30 ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ . ಸ್ವರ ಮಾಧುರ್ಯ ಗೀತಗಾಯನ ವೈಭವ : ‘ ಶಿಕ್ಷಣ ಭೀಷ್ಮ ‘ ಡಾ . ಹೆಚ್.ಎಂ. ಗಂಗಾಧರಯ್ಯರವರ ಕುರಿತು ಡಾ . ಲಕ್ಷ್ಮಣದಾಸ್ , ಹರಿಕಥಾ ವಿದ್ವಾನ್ , ಕೇಂದ್ರ ಸಂಗೀತ ನಾಟಕ ಅಕಾಡೆಮಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಜನಕಥಾ ಕೀರ್ತನವನ್ನು ಏನೇ ಏಪ್ರಿಲ್ 2022 ರ ಸಂಜೆ 6.30 ರಿಂದ 10.30 ರವರೆಗೆ ನಡೆಸಿಕೊಡಲಿದ್ದಾರೆ . ಇದೇ ಸಂದರ್ಭದಲ್ಲಿ ಪ್ರಸಿದ್ಧ ಗಾಯಕ ಕೆಂಕೆರೆ ಮಲ್ಲಿಕಾರ್ಜುನ ಅವರಿಂದ ಜಾನಪದ ಝೇಂಕಾರ ( ತುಮಕೂರು ಜಿಲ್ಲೆಯ 101 ಜಾನಪದ ಗಾಯಕ ವೃಂದದೊಂದಿಗೆ ) ನಡೆಯಲಿದೆ .

ಪತ್ರಿಕಾ ಗೋಷ್ಠಿಯಲ್ಲಿ ಡಾ. ಎಂ.ಜೆಡ್ , ಕುರಿಯನ್ ( ಅಧ್ಯಕ್ಷರು ) ಡಾ.ಕೆ.ಎಸ್.ಕುಮಾರ್ ( ಪ್ರಾಂಶುಪಾಲರು ) ಪ್ರೊ . ಮಾದೇವ್ ಭರಣಿ ಲೇಖಕರು ಉಪಸ್ತಿತರಿದ್ದರು

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.