ಲಾರಿ ಮಾಲೀಕರು ಅನುಭವಿಸುತ್ತಿರುವ ತೊಂದರೆಗಳನ್ನು ದಿ : 30-04-2022ರ ಒಳಗೆ ಪರಿಹಾರ ನೀಡದಿದ್ದಲ್ಲಿ ದಿ : 01-05-2022ರಿಂದ ಸ್ಥಳೀಯ ಲಾರಿಗಳ ಸ್ಥಗಿತ

ಈ ಹಿಂದಿನ 2 ವರ್ಷಗಳ ಅವಧಿಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ಇಡೀ ರಾಷ್ಟ್ರ ಮತ್ತು ರಾಜ್ಯದಲ್ಲಿ ಆರ್ಥಿಕವಾಗಿ ಜನರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ . ಲಾರಿ ಮಾಲೀಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಂದು ಅಥವಾ ಎರಡು ವಾಹನಗಳನ್ನು ಹೊಂದಿರುವವರು ಹೆಚ್ಚಾಗಿ ಇರುತ್ತಾರೆ . ಈ ವಾಹನಗಳು ಸಹ ಮಾಸಿಕ ಕಂತಿನ ರೂಪದಲ್ಲಿ ( Hire Purchase ) ಸಾಲ ಪಡೆದು ನಡೆಸುತ್ತಿರುತ್ತಾರೆ . ಇವರು ಒಂದು ರೀತಿಯ ಸ್ವ ಉದ್ಯೋಗದಂತೆ ಜೀವನ ನಡೆಸುತ್ತಿದ್ದಾರೆ . ಆದರೆ ಸರ್ಕಾರದ ಕೆಲವು ನೀತಿಗಳಿಂದ ಲಾರಿಗಳನ್ನು ನಡೆಸಿ ಉದ್ದಿಮೆಯಲ್ಲಿ ಮುಂದುವರಿಯಲು ಮತ್ತು ಜೀವನ ಸಾಗಿಸಲು ಕಷ್ಟವಾಗಿರುತ್ತದೆ . ಸಾಮಾನ್ಯವಾಗಿ ಸರಕು ಸಾಗಾಣಿಕೆ ವಾಹನಗಳನ್ನು ನಾಲ್ಕು ವಿಧಾನಗಳಲ್ಲಿ ಬಳಸುತ್ತಿದ್ದಾರೆ . ಹೊಸ ವಾಹನವನ್ನು ರಾಷ್ಟ್ರೀಯ ಮಿತಿಯಲ್ಲಿ , ಸುಮಾರು ನಾಲೈದು ವರ್ಷಗಳ ನಂತರ ಅಂತರ ರಾಜ್ಯದಲ್ಲಿ , ತದನಂತರ ರಾಜ್ಯ ಮಟ್ಟದಲ್ಲಿ ಮತ್ತು ಕೊನೆಯದಾಗಿ ಹಳೆಯ ವಾಹನಗಳನ್ನು ನಗರ ಪಟ್ಟಣ ಪ್ರದೇಶಗಳಲ್ಲಿ 50 ಕಿ . ಮೀ ಒಳಗಿನ ಅಂತರದಲ್ಲಿ ಅಂದರೆ , ರೈಲ್ವೆ ಗೂಡ್ಸ್‌ಶೆಡ್ , ಎ.ಪಿ.ಎಂ.ಸಿ ಯಾರ್ಡ್ ಮತ್ತು ಕಟ್ಟಡ ಸಾಮಾಗ್ರಿಗಳನ್ನು ಸಾಗಿಸಲು ಉದ್ಯಮವನ್ನು ನಡೆಸುತ್ತಿದ್ದಾರೆ . ಇಂದಿನ ಸಂಚಾರ ದಟ್ಟಣೆಯಲ್ಲಿ ಈ 50 ಕಿ.ಮೀ. ಒಳಗಡೆ ಸಂಚರಿಸುವ ವಾಹನಗಳು ಒಂದೇ ಒಂದು ಟ್ರಿಪ್ ಮಾಡಲು ಸಾಧ್ಯವಾಗುತ್ತದೆ . ಈ ಹಳೇ ವಾಹನಗಳಿಗೆ ಸರ್ಕಾರ ಸಂಬಧಪಟ್ಟ ಫೀಸುಗಳನ್ನು 01-04-2022ರಿಂದ 16 ಪಟ್ಟು ಹೆಚ್ಚಳ ಮಾಡಿರುವುದು ಬಡ ಲಾರಿ ಮಾಲೀಕರ ಮೇಲೆ ಪ್ರಹಾರ ಮಾಡಿದಂತಾಗಿದೆ . ಇದರಿಂದ ನಾವುಗಳು , ಉದ್ದಿಮೆಯಲ್ಲಿ ಉಳಿಯುವುದೇ ಕಷ್ಟವಾಗಿರುತ್ತದೆ . ಈ ಹಳೆಯ ವಾಹನಗಳ ಫಿಟ್‌ನೆಸ್‌ ಸರ್ಟಿಫಿಕೇಟ್‌ನ್ನು ಅವಧಿ ಕಡಿಮೆ ಮಾಡಿ ಆಗಾಗ ಸೂಕ್ತ ರಿಪೇರಿ ಮಾಡಿಸಲು ಕಾನೂನಿನಲ್ಲಿ ಅವಕಾಶವಿದೆ . ಕೇಂದ್ರ ಸರ್ಕಾರ ಯಾರದೋ ಒತ್ತಡಕ್ಕೆ ಮಣಿದು ರಸ್ತೆ ಸರಕು ಸಾಗಾಣಿಕೆ ವಾಹನಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಇದ್ದ ನಿಯಮಗಳನ್ನು ಉಲ್ಲಂಘನೆ ಮಾಡಿದಾಗ ವಿಧಿಸುತ್ತಿದ್ದ ದಂಡವು ರೂ .100 ರಿಂದ ರೂ .500 ರವರೆಗೆ ಇದ್ದಿತು . ಈ ದಂಡಗಳನ್ನು ಕೇಂದ್ರ ಸರ್ಕಾರ ಕನಿಷ್ಟ ರೂ .5,000 / – ದಿಂದ ರೂ .25,000 / -ದವರೆಗೆ ಏರಿಸಿ ಈ ಲಾರಿ ಮಾಲೀಕರು ಈ ಉದ್ದಿಮೆಯನ್ನು ನಡೆಸಲು ಕಷ್ಟಕರವಾದ ಸನ್ನಿವೇಶವನ್ನು ಸೃಷ್ಟಿಮಾಡಿರುತ್ತಾರೆ . ಮೋಟಾರು ವಾಹನ ಇಲಾಖಾಧಿಕಾರಿಗಳು ಮೇಲ್ಕಂಡ ಹೆಚ್ಚಿಸಿದ ದಂಡದ ಮೊತ್ತಗಳನ್ನು ದುರುಪಯೋಗಪಡಿಸಿ ಕೊಂಡು ದಿನನಿತ್ಯ ಲಾರಿ ಮಾಲೀಕರನ್ನು ಸುಲಿಗೆ ಮಾಡುತ್ತಿದ್ದಾರೆ . ಈ ಪರಿಸ್ಥಿತಿ ಎಲ್ಲಿಗೆ ಮುಟ್ಟಿದೆ ಎಂದರೆ ನಾವು ನಮ್ಮ ಲಾರಿಗಳನ್ನು ಓಡಿಸಿದಷ್ಟು ಸಾಲಗಾರರಾಗುತ್ತಿದ್ದೇವೆ , ಸರ್ಕಾರಿ ಅಧಿಕಾರಿಗಳು ಮಾತ್ರ ಖುಷಿಯಿಂದ ಇದ್ದಾರೆ . ಡಿಸೇಲ್ ಮತ್ತು ಪೆಟ್ರೋಲ್ ದರಗಳನ್ನು ದಿನದ ಲೆಕ್ಕದಲ್ಲಿ ಏರಿಕೆ ಮಾಡುತ್ತಿದ್ದು , ಇದನ್ನು ಸರಿದೂಗಿಸಿಕೊಂಡು ಸರಕು ಸಾಗಾಣೆ ಉದ್ಯಮವನ್ನು ನಡೆಸಲು ಕಷ್ಟವಾಗಿರುತ್ತದೆ . ಮೇಲ್ಕಂಡ ಈ ಎಲ್ಲಾ ಕಾರಣಗಳಿಂದಾಗಿ ನಮಗೆ ಇತ್ತೀಚೆಗೆ ರಸ್ತೆಯಲ್ಲಿ ಸರಕು ಸಾಗಾಣಿಕೆ ಉದ್ಯಮವನ್ನು ನಡೆಸಲು ಕಷ್ಟವಾಗಿರುವುದರಿಂದ ಸರ್ಕಾರವು ಕೂಲಂಕುಶವಾಗಿ ಪರಿಶೀಲಿಸಿ ದಿನಾಂಕ : 30-04-2022 ರೊಳಗೆ ಪರಿಹಾರ ನೀಡಬೇಕು , ಇಲ್ಲವಾದಲ್ಲಿ ನಾವು ನಮ್ಮ ಸ್ಥಳಿಯ ಸರಕು ಸಾಗಾಣಿಕೆ ಕೆಲಸವನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಬಿ.ಚನ್ನಾರೆಡ್ಡಿ – ಗೌರವ ಅಧ್ಯಕ್ಷರು ಸಿ.ನವೀನ್ ರೆಡ್ಡಿ – ಅಧ್ಯಕ್ಷರು ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.